ಬುಧವಾರ, ಜನವರಿ 10, 2007

ಬಸ್ಸಿನ ಬೆನ್ನೇರಿ .....


ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಬ್ಲಾಗನ್ನು ಪುನರುಜ್ಜೀವನ/ಜೀರ್ಣೋದ್ಧಾರ ಮಾಡೋಣ ಅನ್ಸ್ತಾ ಇದೆ.
ಆದ್ರೆ ವಿಷಯಗಳ ಕೊರೆತು ಬಂದೆರಗಿಬಿಟ್ಟಿದೆ ನಂಗೆ!!! ಆದ್ರ್‍ಊ ಏನಾದ್ರು ಬರ್‍ಯೋಣ.....

ಬೆಂಗಳೂರು ಬಸ್ಸಿನಲ್ಲಿ ಪ್ರಯಾಣ ಮಾಡೋದು ಅಂದ್ರೆ ಒಂದು ವಿಶಿಷ್ಟ ಅನುಭವ.. ಕೆಲವು ಬಾರಿ ನಿಮ್ಮ ತಲೆಯಲ್ಲಿ ಎಷ್ಟೇ ದುಗುಡ ಇದ್ರೂ ಅದ್ನ ಮರೆಸೋ ಅಂತ ಪ್ರಸಂಗಗಳು ಬಹಳ ನಡೀತ ಇರುತ್ತವೆ.. ಇಂತಹವುಗಳಲ್ಲಿ ಬಹಳಷ್ಟು, ಸಣ್ಣ ವಿಷಯಗಳಿಗೆ ಅಲ್ಲಿ ನಡೆಯುವ ಬೈದಾಟ, ಕಿತ್ತಾಟ ಗಳು... ಬಸ್ಸಿನಲ್ಲಿ ಓಡಾಡಿ ಜಗಳ ಆಡಿ ಮನಸ್ಸು ಕೆಡ್ಸ್ಕೋಳ್ಳೋವ್ರು ಒಂದು ರೀತಿ ಆದ್ರೆ ಅದನ್ನ ಬರೀ ನೋಡಿ ಆನಂದ ಪಡೊವ್ರು ಇನ್ನೊಂದು ರೀತಿ ಜನ... ಇನ್ನೊಂದು ಜಾತಿ ಜನ ಇದಾರೆ... ಅವ್ರು ಆ ಜಗಳದಲ್ಲಿ ತಮ್ಮನ್ನೂ ತೊಡಗಿಸಿಕೊಂಡು ( ಸಾಮಾನ್ಯವಾಗಿ ಯಾರು ಬಲಿಷ್ಟವಾಗಿರ್‍ತಾನೋ ಅವನ ಪಕ್ಷಕ್ಕೆ ಸೇರ್‍ಕೋಂಡ್ ಬಿಡ್ತಾರೆ) ಮಜಾ ಮಾಡ್ತಾರೆ... ಇವರಿಂದಾ ಆ ಪ್ರಸಂಗಕ್ಕೆ ಒಂದು ತರಾ ರಂಗು ಬರುತ್ತೆ...

ಹೇಗೆ ಮದುವೆ ಸಮಾರಂಭಗಳಲ್ಲಿ ಬಿಟ್ಟಿ ಊಟ ಕಂಠ ಪೂರ್ತಿ ತಿಂದಾಗ, ಮೇಲೆ ಗಂಟಲು,ಕೆಳಗೆ ಗುದನಾಳದ ವರೆಗೂ ತುಂಬಿ ಹೋಗಿರುತ್ತೋ ಹಾಗೆ ಬಿ ಎಮ್ ಟಿ ಸಿ ವಾಹವೆಲ್ಲಾ ತುಂಬಿ ತುಳುಕಿ ಮುಂದೆ ಮತ್ತು ಹಿಂದಿನ ಬಸ್ ಕಿಂಡಿಗಳಲ್ಲಿ ಜನ ನೇತಾಡ್ತಾ, ಜೋಕಾಲಿ ಆಡ್ತಾ ಇದ್ರು.. ಒಬ್ಬ ಫ಼ುಟ್ ಬೋರ್‍ದ್ಡ್ ಹೋಡೀತ ಇದ್ದ ಯುವಕನ್ನ ನಿರ್ವಾಹಕ ಕೊಲ್ಲುವಂತೆ ಕಣ್ಣಿನಿಂದಲೆ ದುರುಗುಟ್ಟಿ ನೋಡಿದ... ಹಿಂದಿನ ಬಸ್ ಬಾಗಿಲಿನ ಒಂದು ಕಂಬಕ್ಕೆ ಜೋತು ಬಿದ್ದು ಯಾವುದೋ ಹುಡುಗಿಯ ನೆನಪಿನಲ್ಲಿದ್ದ ಆ ಪಡ್ಡೆ ಯುವಕನಿಗೆ ಇವ ದುರುಗುಟ್ಟಿದ್ದು ಯಾವ್ದೋ ಹುಡಿಗಿ ಕಣ್ಣು ಹೊಡೆದ ಹಾಗೆ ಕಾಣಿಸಿರ್‍ಬೇಕು.. ಅವ ತನ್ನ ಪಾಡಿಗೆ ತಾನು ಬಾಯಲ್ಲಿ ಪಾನ್ ಪರಾಗೋ / ಗಮ್ಮೋ ಅಗೆಯುತ್ತಿದ್ದನ್ನ ನೋಡಿ ನಿರ್ವಾಹಕನಿಗೆ ಇನ್ನೂ ರೇಗಿ ಆ ಹುಡ್ಗನ್ನ ಹೀಗೆಂದು ಛೇಡಿಸ್ದ...
ಬಹುಶಹಃ ಒಬ್ಬನಿಗೆ ಬೈದ್ರೆ ಬೇರೆಯವರೆಲ್ಲ ಅರಿತುಕೊಂಡು ಮೇಲೆ ಬರೋ ಅಂತಾ ಮಾನವಂತರು ಅಂದ್ಕೊಂಡಿದ್ದಾ ಅನ್ಸುತ್ತೆ...

ನಿರ್ವಾಹಕ : ಏನ್ ಗುರು ಏನ್ ಕಾಲ್ಗೆ ಫ಼ೆವಿಕಾಲ್ ಏನಾದ್ರು ಮೆತ್ಕೊಂಡಿದ್ಯ?? ಮೇಲ್ ಬತ್ತಾನೆ ಇಲ್ಲಾ... ಅತ್ವ ಹುಟ್ಟಿದ್ದೇ ಈ ಪುಟ್ ಬೋರ್‍ಡ್ ಮೇಲಾ??

ಆ ಯುವಕನಿಗೆ ಒಂದು ತರಾ ಮುಜುಗರ/ಬೇಸರ/ಮಾನಭಂಗ ಎಲ್ಲಾ ಒಟ್ಗೆ ಆಗಿ ಸ್ವಲ್ಪ ಕೋಪಾ ಬಂದ್ರೂ ಸಹನೆಯಿಂದ ತನ್ನ ಮಾತಿನ ವರಶೆ ತೋರ್‍ಸೇ ಬಿಡೋಣ ಅಂತ ನಿರ್ವಾಹಕರಿಗೆ ಹೀಗೆಂದ...

ಯುವಕ : ಓಹೋಹೊ ಕಂಡಕ್ಟ್ರ್‍ಎ ಹೌದ್ ಹೌದು.. ದಿನಾ ನಿನ್ ಪುಟ್ ಬೋರ್‍ಡ್ ಮೇಲೆ ಅದೆಷ್ಟು ಜನ ನಿಂತು ಓಡಾಡ್ತಾರೋ.. ಅವ್ರೆಲ್ಲಾ ನಿನ್ ಪುಟ್ ಬೋರ್‍ಡ್ ಮೇಲೇ ಹುಟ್ಟಿರೋದು... (ಹೀಗೆಂದ ತಕ್ಷಣ ಅಕ್ಕ ಪಕ್ಕ ಇದ್ದೋರ್ಗೆಲ್ಲಾ ಸ್ವಲ್ಪ ಮುಜುಗರ ಆದ್ರೂ ಅವ ನಿರ್ವಾಹಕರಿಗೆ ಬೈತಾ ಇರೋದು ಅಂತ ನೆನಪಿಸಿಕೊಂಡು ಗೊಣಗ್ತಾ ಇದ್ರು...)

ಯುವಕ ಮುಂದುವರೆಸಿದ... ಗುರೂ.. ಬಿ ಎಮ್ ಟಿ ಸಿ ಅಂತ ಬೋರ್‍ಡ್ ಕಿತ್ತಾಕಿಸ್ಬಿಡು.... ಹೊಸದಾಗಿ ಬರ್ಸ್ಕೋ... ಸಂಚಾರಿ ಹೆರಿಗೆ ಆಸ್ಪತ್ರೆ ಅಂತ.... ನಿನ್ ಶರ್‍ಟ್ ಮೇಲೆ ನಿರ್ವಾಹಕ ರಮೇಶ್ ಅಂತ ಬೋರ್‍ಡ್ ಐತೆಲ್ಲಾ ಅದ್ನೂ ತೆಗ್ಸಿ ಹೆರಿಗೆ ತಙ್ ಅಂತ ಬರ್ಸ್ಕೋಂಡ್ ಬಿಡು.. ಒಳ್ಳೆ ಕಮಾಯಿ ಐತೆ...( ಇಷ್ಟೆ ಸಾಕಾಗಿತ್ತೇನೋ.. ಆದ್ರೆ ಬಿಸಿ ರಕ್ತದ ಹುಡ್ಗ ಬಿಡ್ಲಿಲ್ಲಾ... ಒಂದೇ ಸಮ ಉಸಿರು ಬಿಡ್ದೆ ಹೇಳ್ತಾನೆ ಇದ್ದ... ನಿರ್ವಾಹಕ ಬೈಯ್ಯೋಕ್ಕೆ ಹೋದ್ರೂ ಆ ಯುವಕನ ಏರಿದ ಧ್ವನಿಯಲ್ಲಿ ತನ್ನದು ಕ್ಷೀಣ ಅನ್ನೋದ್ನ ತಿಳ್ಕೊಂಡು.. ಅವ ನಿಲ್ಲ್ಸಿದ್ ಮೇಲೆ ತಾನು ಏನೇನ್ ಬೈಬೇಕು ಅಂತ ಮನಸ್ಸಿನಲ್ಲೆ ಯೋಚಿಸತೊಡಗಿದ.. ಆದ್ರೆ ಆ ಯುವಕ ನಿಲ್ಸೋ ಹಾಗೆ ಇರ್‍ಲಿಲ್ಲಾ..)

ಈ ಚಾಕ್ರಿ ಹಿಡಿದ್ ಮೇಲಾದ್ರು ಮುಂದೆ ಹೆಂಗ್ಸ್ರು ಮಕ್ಳೂ ಮೇಲೆ ಬೀಳೋದ್ ಬಿಟ್ಟು ನಿಯತ್ನಿಂದ ಹೆರ್ಗೆ ಮಾಡು.... (ಹೀಗೆಂದ ತಕ್ಷಣ ನಿರ್ವಾಹಕರಿಗೆ.. ಯಾಕಯ್ಯ ನಿಮ್ಮೆಂಗುಸ್ರು ಮುಂದೆ ಇದಾಳೇನಪ್ಪಾ ಅಂತ ಕೇಳ್ಬೇಕೂ ಅಂದ್ಕೊಂಡ್ರೂ ಸುಮ್ನೆ ಆದ್ರು) ಯುವಕ ಮುಂದುವರೆದು ಕೇಳೇ ಬಿಟ್ಟಾ...ನಿಮ್ ಹೆಂಗುಸ್ರೂಗು ಇಲ್ಲೇನಾ ಹೆರ್‍ಗೆ ಆಗಿದ್ದು??...

ಇಲ್ಲಿವರ್‍ಗೂ ಸುಮ್ನೆ ಇದ್ದ ನಿರ್ವಾಹಕನಿಗೆ ಒಮ್ಮೆಲೇ ತನ್ನ ಹೆಂಡತಿ ಬಗ್ಗೆ ಆಡಿದ ಅನುಚಿತ ಮಾತುಗಳಿಂದ ಚೇಳು ಕಡಿದವನಂತನಾಗಿ...

ಇಬ್ಬರೂ ಕಾದಾಟಕ್ಕೆ ನಿಂತರು...ಮಾತಿನ ಎಲ್ಲೆ ಇಬ್ಬರಲ್ಲೂ ಮೀರ್‍ತು...
ಅಪ್ಪ ಅಮ್ಮನ ಹೆಂಡತಿ ಜಾತಿ ಮಕ್ಕಳ ಬಗ್ಗೆ ಲೀಲಾ ಜಾಲವಾಗಿ ಬೈದಾಡಿದ್ರು... ಫ಼ುಟ್ ಬೋರ್ಡ್ನಲ್ಲಿದ್ದ ಹಲವು ಜಾಣ ಪ್ರಯಾಣಿಕರು ಜಾಗ ಮಾಡಿಕೊಂಡು ಒಳಗೆ ಬಂದ್ರು.... ಇನ್ನುಳಿದ ಭಂಢ ಫ಼ುಟ್ ಬೋರ್‍ಡ್ ಪ್ರಯಾಣಿಕರು ಯುವಕನ ಜೊತೆಗೂ, ಕೆಲವು ಪ್ರಯಾಣಿಕರೂ ನಿರ್ವಾಹಕನ ಕಡೆಗೂ ಸೇರಿ ಮಾತಿನ ಆರ್ಭಟಗಳು ಜಾಸ್ತಿ ಆಗಿ... ಬರೀ ಅಪ್ಪ/ಅಮ್ಮನ ಬೈಗುಳಗಳಷ್ಟೇ ಸ್ಪಷ್ಟವಾಗಿ ಕೇಳ್ಸ್ತಾ ಇದ್ದೊ... ಇಬ್ಬರೂ ಕೈ ಮಿಲಾಯಿಸುವ ಮಟ್ಟಕ್ಕೆ ಹೋದ್ರೂ.. ತಮ್ಮ ತಮ್ಮ ಪರವಾಗಿ ನಿಂತ ಪ್ರಯಾಣಿಕರ ಶ್ರೀರಕ್ಷೆಯಿಂದ ಬರೀ ಮಾತುಗಳ ಕಾದಾಟಕ್ಕೆ ನಿಯಮಿತಗೊಂಡಿತ್ತು...

ನಾನಂತೂ ಒಂದು ಜಾಗದಲ್ಲಿ ಕೂತು ನೋಡುತ್ತಿದ್ದವನಿಗೆ ನಾನು ಇಳಿಯಬೇಕಾಗಿದ್ದ ನಿಲ್ದಾಣಕ್ಕೆ ಆಗಲೆ ತಲುಪಿರುವ ಅರಿವೇ ಇರಲಿಲ್ಲ... ಬಸ್ ನಿಂತಾಗ.. ಇಂತಹ ಒಳ್ಳೆಯ, ಉಚಿತ ಮನರಂಜನೆ ಬಿಟ್ಟು ಹೋಗ್ಬೇಕೆಲ್ಲಾ ಅಂತ ಮನಸ್ಸಿಲ್ಲದ ಮನಸ್ಸಿನಿಂದ, ಕಾದಾಟದ ನಡುವೆ ಜಾಗ ಮಾಡಿ ಇಳಿದೆ... ಮನೆಯವರೆಗೂ ಈ ಜಗಳವನ್ನೆ ಮತ್ತೆ ಮೆಲುಕು ಹಾಕುತ್ತಾ ನಡೆದೆ....

5 ಕಾಮೆಂಟ್‌ಗಳು:

  1. dhanyavaadagaLu.. nanna bLog na nODOde biTTidde.. eega matte baryOkke shuru maaDiddeeni..

    ಪ್ರತ್ಯುತ್ತರಅಳಿಸಿ
  2. nimma anubhava kooDa chennaagide... bassugaLadde omdu prapaMchaa... iMtha vartanegaLannu nODidaaga nagO haage aadroo, namma vartane bagge namage asahyakara bhaavane mooDuttade...

    ಪ್ರತ್ಯುತ್ತರಅಳಿಸಿ
  3. nijakku namma jana buddi kaliyolla, oLLeya vishayavannu mundittideeri tiliyorige olle tiluvalikenu kooda ide nimma lekhaniyalli......

    baravanige munduvari...nilladirali..

    dhanyavadagalu

    ಪ್ರತ್ಯುತ್ತರಅಳಿಸಿ
  4. ಪ್ರಭುರಾಜ್,
    ಪ್ರತಿಕ್ರಿಯಿಸಿದ್ದಕ್ಕೆ ಮತ್ತು ನಿಮ್ಮ ಎಚ್ಚರಿಕೆಯ ಮಾತುಗಳಿಗೆ ಧನ್ಯವಾದಗಳು

    ಮನಸು,
    ಪ್ರತಿಕ್ರಿಯಿಸಿದ್ದಕ್ಕೆ, ಪ್ರೋತ್ಸಾಹಕ್ಕೆ, ಬುದ್ಧಿವಾದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ