ಭಾನುವಾರ, ಅಕ್ಟೋಬರ್ 13, 2013

ಗಿರಿರಾಜರ ಜಟ್ಟ

ಗಿರಿರಾಜರ
ಜಟ್ಟ
ಯುವ ನಿರ್ದೇಶಕ ಗಿರಿರಾಜ್ ಅವರ ನಿರ್ದೇಶನ "ಜಟ್ಟ" ಚಲನಚಿತ್ರದಲ್ಲಿ, ನಿರ್ದೇಶಕರು ಹಲವು ರಾಜಕೀಯ ವಾದಗಳ-ಇಸಮ್ ಗಳ ಬಗೆಗೆ ಬೌದ್ಧಿಕ ಕಸರತ್ತು ನಡೆಸಿ, ಎಲ್ಲದಕ್ಕೂ ಮೀರಿದ್ದು ಪ್ರೀತಿ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಒಪ್ಪಿತ ಮತ್ತು ಬಹಿಷ್ಕೃತ ಸಂಸ್ಕೃತಿ-ಮೌಲ್ಯಗಳ ಘರ್ಷಣೆಯನ್ನೂ ಹಿಡಿಯಲು ಪ್ರಯತ್ನಿಸಿದ್ದಾರೆ.

ಜಟ್ಟ (ಕಿಶೋರ್) ಅರಣ್ಯ ಸಂರಕ್ಷಕ - ಗಾರ್ಡ್. ಕಾಡಿನ ಬಗ್ಗೆ ಅಪಾರ ಜ್ಞಾನ ಉಳ್ಳವನು. ಬುಡಕಟ್ಟಿನವನು. ಒರಟ. ಇವನ ಹೆಂಡತಿ ಕಾಡು ಸುತ್ತಲು ಬಂದಿದ್ದ ಬೆಂಗಳೂರು ಯುವಕನ ಜೊತೆಗೆ ಓಡಿ ಹೋಗಿರುತ್ತಾಳೆ. ಹಿಂದೂ ಸಂಸ್ಕೃತಿಯ ಸಂರಕ್ಷಕ ಎಂದು ಹೇಳಿಕೊಳ್ಳುವ ಒಬ್ಬ ಗುರುವಿನ (ಬಿ ಸುರೇಶ್) ಮೊರೆ ಹೋಗಿ - ಅವನ ಭೋಧನೆಗಳಿಗೆ ಬಲಿಯಾಗಿ ಜಟ್ಟ ಪಾಶ್ಚ್ಯಾತ್ಯ ಉಡುಗೆ ತೊಡುಗೆಗಳ ಬಗ್ಗೆ ಅಸಹ್ಯ ಬೆಳೆಸಿಕೊಳ್ಳುತ್ತಾನೆ. ಈ ಸಮಯದಲ್ಲೇ ಫೆಮಿನಿಶ್ಟ್ - ಅಂಬೇಡ್ಕರ್ ಅವರನ್ನು ಅಪಾರವಾಗಿ ಓದಿಕೊಂಡಿರುವ ಹುಡುಗಿ ಸಾಗರಿಕ (ಸುಕೃತ ವಾಗ್ಲೆ) ಕುಡಿದು- ಡ್ರಗ್ ಸೇವನೆ ಮಾಡಿ ಗಾಡಿ ಚಾಲನೆ ಮಾಡುವಾಗ ಆಕ್ಸಿಡೆಂಟ್ ಮಾಡಿಕೊಳ್ಳುತ್ತಾಳೆ. ಜಟ್ಟ ಅವಳನ್ನು ತನ್ನ ಸೆಕ್ಲೂಡೆಡ್ ಮನೆಯಲ್ಲಿ ಕಬ್ಬಿಣದ ಸರಪಳಿಯಿಂದ ಬಂಧಿಸಿ ಇಡುತ್ತಾನೆ. ಭೀಮ್ ಕುಮಾರ್ (ಪ್ರೇಮ್ ಕುಮಾರ್) ಅರಣ್ಯಾಧಿಕಾರಿ. ದಕ್ಷ. ಕಾಡಿನ ಬಗ್ಗೆ ಅಪಾರ ಪ್ರೀತಿ ಉಳ್ಳವನು. ಇನ್ನೊಬ್ಬ ಪೋಲೀಸ್ ಅಧಿಕಾರಿ ಹೇಳುವಂತೆ ಕಮ್ಯುನಿಸ್ಟ್. ಅವರೇ ಹೇಳಿಕೊಳ್ಳುವಂತೆ ಸಂವಿಧಾನವನ್ನು ಧರ್ಮಗ್ರಂಥವೆಂದು ನಂಬಿರುವವನು. ಕಾಡು ವಿನಾಶ ಅದಕ್ಕೆ ಜಟ್ಟ ಮತ್ತು ಅವನ ಅರಣ್ಯಾಧಿಕಾರಿಯ ಹೋರಾಟ, ಸಾಗರಿಕ ಮತ್ತು ಜಟ್ಟನ ಮಧ್ಯೆ ಘರ್ಷಣೆ, ಸಾಗರಿಕಳ ನಾಪತ್ತೆಯು ಪಾರೆಶ್ಟ್ ಅಧಿಕಾರಿಯ ಕೆಲಸಕ್ಕೆ ಕುತ್ತು ತರುವುದು, ಭೀಮ್ ಕುಮಾರ್ ಜಟ್ಟನ ಕೆಲವನ್ನು ಪರ್ಮನೆಂಟ್ ಮಾಡಲು ಶ್ರಮಿಸುವುದು- ಆದರೆ ಜಟ್ಟ ತನ್ನ ಒರಟುತನದಿಂದ ಅದನ್ನು ಹಾಳು ಮಾಡಿಕೊಳ್ಳುವುದು, ಅದಕ್ಕೆ ಅವನ ಜಾತಿ ಅಡ್ಡಬರುವುದು, ಜಟ್ಟನ ಹೆಂಡತಿ ಹಿಂದಿರುಗಿ ಓಡಿ ಬರುವುದು ಹೀಗೆ ವಿಭಿನ್ನ ಸ್ತರಗಳಲ್ಲಿ ಚಲನಚಿತ್ರ ಹಲವು ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.

ಚಲಚಿತ್ರದ ಹಲವು ಹಂತಗಳಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಒಪ್ಪಿತ ಸಮಾಜದ "ಗಂಡಸ್ತನ"ದ್ದು. ಜಟ್ಟನ ಹೆಂಡತಿ ಓಡಿಹೋಗುವದಕ್ಕೆ ಜಟ್ಟ ಗಂಡಸೇ ಅಲ್ಲ ಎಂದು ಸಾಗರಿಕ ದೂರುವುದು. ಜಟ್ಟನ ಹೆಂಡತಿ ವಾಪಸ್ ಓಡಿ ಬಂದಾಗ, ಅವಳನ್ನು ಓಡಿಸಿಕೊಂಡು ಹೋದವನು ಗಂಡಸೇ ಅಲ್ಲ ಎನ್ನುವ ಪ್ರಶ್ನೆ. - ಗಂಡಸ್ತನಕ್ಕೂ, ಲೈಂಗಿಕತೆಗೂ, ಪ್ರೀತಿಗೂ ಅತಿಯಾದ ಸಂಬಂಧವಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಜಟ್ಟ ಮತ್ತು ಅರಣ್ಯಾಧಿಕಾರಿ ಭೀಮ್ ಕುಮಾರ್ ಅವರ ನಡುವಿನ ಅವ್ಯಕ್ತ ಪ್ರೇಮವನ್ನು ಹಿಡಿದಿಡುವ ಮೂಲಕ ನಿರ್ದೇಶಕರು ತೋರಿಸುತ್ತಾರೆ. ಭೀಮ್ ಕುಮಾರ್ ಅವರ ಹೆಂಡತಿ ಅವರನ್ನು ಬಿಟ್ಟು ಓಡಿ ಹೋಗಿರುವುದನ್ನು ಜಟ್ಟ ಅವರ ಫೋನ್ ಸಂಭಾಷಣೆಗಳಲ್ಲಿ ಗುರುತಿಸಿ ಇನ್ನೊಬ್ಬ ಅರಣ್ಯಾಧಿಕಾರಿಯಿಂದ ಆಗಾಗ ತಿಳಿದುಕೊಳ್ಳುತ್ತಿರುತ್ತಾನೆ. ಜಟ್ಟ ತನ್ನ ಅರಣ್ಯಾದಿಕಾರಿಗೋಸ್ಕರ ತನ್ನ ಒರಟುತನವನ್ನು ತ್ಯಜಿಸಲು, ಅರಣ್ಯಾಧಿಕಾರಿಕಾರಿ ಜಟ್ಟನ ಕೆಲಸ ಪರ್ಮನೆಂಟ್ ಮಾಡಲು ತನ್ನ ಪ್ರಮೊಷನ್ ತ್ಯಜಿಸಲು ಮುಂದಾಗುತ್ತಾರೆ. ಸಿನೆಮಾ ತಾನು ಹೇಳಲು ಬಯಸಿರುವ ವಿಷಯಕ್ಕೆ ಇಷ್ಟವಾದರೂ ಅದನ್ನು ಹೇಳುವ ರೀತಿಗೆ ವ್ಯತಿರಿಕ್ತವಾಗುತ್ತದೆ. ಅರಣ್ಯಾಧಿಕಾರಿ ಮತ್ತು ಜಟ್ಟನ ನಡುವಿನ ಪ್ರೇಮವನ್ನು ಅಷ್ಟು ಸಟಲ್ ಆಗಿ ಸೂಕ್ಷ್ಮವಾಗಿ ತೋರಿಸುವ ನಿರ್ದೇಶಕರು ಉಳಿದಲ್ಲಿ ಸಿಕ್ಕಾಪಟ್ಟೆ ಲೌಡ್ ಎನ್ನಿಸಿಬಿಡುತ್ತಾರೆ. ನಿರ್ದೇಶಕರು ಅನಗತ್ಯವಾಗಿ ಹತ್ತು ಹಲವು ವಿಷಯಗಳನ್ನು ತುರುಕಿ ಯಾವುದನ್ನೂ ತಾತ್ತ್ವಿಕವಾಗಿ ಗಹನ ಚರ್ಚೆಗೆ ಒಳಪಡಿಸದೆ Name-dropping ಮಾಡುತ್ತಾ ಹೋಗುತ್ತಾರೆ. ಎಲ್ಲ ರಾಜಕೀಯ ವಾದ-ನಿಲುವು-ಇಸಮ್ಗಳಿಗಿಂತ ಪ್ರೀತಿ ಮುಖ್ಯ ಎಂಬ ಆಷಯವೇನೋ ಒಳ್ಳೆಯದು,ಆದರೆ ಯಾವುದೆ ಒಂದು ರಾಜಕೀಯ ನಿಲುವು-ವಾದವನ್ನು ಸೋಲಿಸಬೇಕಾದರೆ, ಆ ವಾದವನ್ನೂ ಮತ್ತು ಅದರ ವಿರುದ್ಧ ವಾದವನ್ನೂ ಒಂದೇ Intellectual ಸ್ತರದಲ್ಲಿ ಕಟ್ಟಿಕೊಡಬೇಕೆ.(Judgment at Nuremberg ಸಿನೆಮಾವನ್ನು ನಾವು ಗಮನಿಸಬಹುದು. ಅಲ್ಲಿ ಪ್ಯಾಸಿಸಮ್ ಅನ್ನು ಪೋಷಿಸಿದ ಜಡ್ಗ್ಜಳಿಗೆ ಶಿಕ್ಷೆಯಾದರೂ ಅವರ ಪರವಾಗಿ ಕಟ್ಟಿಕೊಡುವ ವಾದವೂ ಅಷ್ಟೇ ಪ್ರಮುಖ). ಅರಣ್ಯಾಧಿಕಾರಿ ಬೆಂಗಳೂರು ಹುಡುಗನನ್ನು capitalist pig ಎಂದಾಕ್ಷಣವಾಗಲೀ, ಒಬ್ಬ ಪೋಲೀಸ್ ಅಧಿಕಾರಿ ಅರಣ್ಯಾಧಿಕಾರಿಗೆ ಕಮ್ಮ್ಯುನಿಸ್ಟ್ ಎಂದಾಕ್ಷಣ ಅವುಗಳ (ಅ)ಯೋಗ್ಯತೆ ಎಲ್ಲರಿಗೂ ತಿಳಿಯಬೇಕಿಲ್ಲ. ಪೆಮಿನಿಸ್ಟ್ ಪಾತ್ರವನ್ನೂ ಅಷ್ಟೇ ಕೆಟ್ಟ ರೀತಿಯಲ್ಲಿ ಚರ್ಚಿಸಿದ್ದಾರೆ. ಪೆಮಿನಿಸ್ಟ್ ಪಾತ್ರದಲ್ಲಿ ಅವಳು ಹೇಳುವ ಅಂಬೇಡ್ಕರ್ ಪಾಠ ಕೂಡ ಮುಸುಕಾಗಿದೆ. ಎಲ್ಲ ಕಾಡುಪ್ರಾಣಿಗಳಲ್ಲೂ ಹೆಣ್ಣು ಪ್ರಾಣಿಗಳಷ್ಟೇ ಭೇಟೆಯಾಡುವುದು ಎಂದು ಅವಳು ಕೊಡುವ ಬೋಧನೆ ಪ್ಯಾಕ್ಚುಯಲ್ ಆಗಿ ಎಷ್ಟು ತಪ್ಪಿದೆಯೋ, ಎಲ್ಲವನ್ನೂ ಒಂದೇ ಸಿನೆಮಾದಲ್ಲಿ ಚರ್ಚಿಸಬೇಕು ಎಂಬ ನಿರ್ದೇಶಕನ ಆತುರತೆಯನ್ನು ಕೂಡ ಎತ್ತಿ ತೋರಿಸುತ್ತದೆ. ಸಂಭಾಷಣೆಯನ್ನು ಅತಿಯಾಗಿಸುವುದು, ಕ್ರೌಯ್ರವನ್ನು ವೈಭವೀಕರಿಸುವುದು ಮತ್ತು ಆತುರವಾಗಿ, ಗಹನತೆಯಿಲ್ಲದ ವಿಷಯಗಳನ್ನು ತೋರಿಸುವ ಅಪಾಯವೆಂದರೆ ಜನರಿಗೆ ದಕ್ಕುವುದು ಬರೀ ಆ ಕ್ರೌರ್ಯ- ಆ ಭಾಷೆ - ಆ ಕಿರುಚಾಟ ಅಷ್ಟೇ ಹೊರತು ವಿಷಯವಲ್ಲ. ವಿಷಯಗಳನ್ನು ಒಡೆದು ಚರ್ಚಿಸಿ ಇನ್ನೂ ಸಿಂಪಲ್ ಮಾಡಿ (ಸಿಂಪಲ್ ಅಂದರೆ ದಡ್ಡತನ ಎಂದಲ್ಲ) ಒಂದೆರಡು issue ಗಳನ್ನು ಸಂಭಾಳಿಸಿ ಕ್ಲಾಸಿಕ್ ಎನ್ನಿಸಿಕೊಳ್ಳುವ ಸಿನಿಮಾ ಕೃತಿಯಾಗಬಲ್ಲದ್ದನ್ನು ಹಾಳು ಮಾಡಿರುವುದು ಆ ಆತುರತೆ ಮತ್ತು ಎಲ್ಲವನ್ನು ಚರ್ಚಿಸಿಬಿಡುತ್ತೇನೆಂಬ ತೀವ್ರತೆ. ತೀವ್ರ ಹಿಂದೂ ಮತೀಯವಾದಿ ಪಾತ್ರದಲ್ಲಿ ಬಿ ಸುರೇಶ್ ಸೋತಿದ್ದಾರೆ. ತಾವು ಸಶಕ್ತವಾಗಿ ಮಾಡಬೇಕಾಗಿದ್ದ ಪಾತ್ರವನ್ನೇ ಅವರು ಲೇವಡಿ ಮಾಡಿರುವಂತಿದೆ. ಅರಣ್ಯಾಧಿಕಾರಿಯ ಪಾತ್ರದಲ್ಲಿ ಪ್ರೇಮ್ ಕುಮಾರ್ ಮತ್ತು ಜಟ್ಟನ ಪಾತ್ರದಲ್ಲಿ ಕಿಶೋರ್ ಹೊರತುಪಡಿಸಿದರೆ, ಉಳಿದವರ ನಟನೆ ಅಷ್ಟಕ್ಕಷ್ಟೆ.. ಅತ್ಯುತ್ತಮ ಸಿನೆಮಾ ತಂತ್ರಜ್ಞ ಗಿರಿರಾಜ್, ಕಿರಣ್ ಅವರಿಂದ ಚಿತ್ರೀಕರಣವನ್ನಾಗಲೀ, ಆಶ್ಲೆ-ಅಭಿಲಾಷ್ ಅವರಿಂದ ಸಂಗೀತವನ್ನಾಗಲೀ ದುಡಿಸಿಕೊಂಡಿರುವ ರೀತಿ ಅನನ್ಯ. ಚಲನ ಚಿತ್ರದ ಕಥೆಗೆ ಪ್ರೇರಕವಾಗಿರುವ ಮಾದಿ ತಾಯಿಯ ಕಥೆಯನ್ನು, ಯಕ್ಷಗಾನ ರೂಪಕದ ಮೂಲಕವೋ-ಬಯಲಾಟದ ಮೂಲಕವೋ- ಹಾಡಿನ ಮೂಲಕವೋ ಹೇಳಿದ್ದರೆ ಪರಿಣಾಮಕಾರಿಯಾಗಿರುತ್ತಿತ್ತು.

ಇನ್ನುಳಿದಂತೆ, ಗಿರಿರಾಜ್ ಅವರ ಇತ್ತೀಚಿನ ಸಂದರ್ಶನಗಳನ್ನು ಗಮನಿಸಿದರೆ, ಅವರ ಮೇಲೆ ಶಿವರಾಮ ಕಾರಂತರ ಪ್ರಭಾವ ಬಹಳಷ್ಟಿದೆ. ಕಾರಂತರೂ ಕೂಡ ಯವುದೇ ಇಸಮ್ ಗೆ ಜೋತು ಬಿದ್ದವರಲ್ಲ. ತಾವು ಕಟ್ಟಾ ನಾಸ್ತಿಕರಾದರೂ, ನಾಸ್ತಿಕತೆ ಆಸ್ತಿಕತೆಗಿಂತ ಒಬ್ಬ ಹೇಗೆ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದು ಮುಖ್ಯ ಎನ್ನುತ್ತಿದ್ದವರು. ಇದರ ಪ್ರಭಾವ ಗಿರಿರಾಜರ ಈ ಸಿನೆಮಾದಲ್ಲಿ ಕಾಣಬಹುದು. ಹಾಗೆಯೇ ಮೂಕಜ್ಜಿಯ ಕನಸುಗಳು ಕಾದಂಬರಿ ಎಷ್ಟೇ ಪ್ರೋಗ್ರೆಸ್ಸಿವ್ ಆಗಿದ್ದರೂ, ಕೊನೆಗೆ ಸಲಿಂಗಕಾಮದ ವಿಷಯಕ್ಕೆ ಬಂದಾಗ ಕಾರಂತರ ಕಾದಂಬರಿ ಸಂಪ್ರದಾಯವನ್ನು ಮೀರುವುದಿಲ್ಲ. ಈ ಚಲನಚಿತ್ರದಲ್ಲೂ ಕೂಡ ಗಿರಿರಾಜರು ಕೂಡ ಈ ವಿಷಯದಲ್ಲಿ ಸಂಪ್ರದಾಯವನ್ನು ಮುರಿಯಲು ಹಿಂಜರಿದಿದ್ದಾರೆ. ಅರಣ್ಯಾಧಿಕಾರಿ ಭೀಮ್ ಕುಮಾರ್ ಮತ್ತು ಜಟ್ಟರ ನಡುವಿನ ಪ್ರೇಮವನ್ನು ಅವ್ಯಕ್ತವಾಗಿಯೇ ಉಳಿಸುತ್ತಾರೆ. ಅರಣ್ಯಾಧಿಕಾರಿಯ ಕುಟುಂಬವನ್ನು forcefully ಒಂದು ಮಾಡುತ್ತಾರೆ.

ಶನಿವಾರ, ಜುಲೈ 27, 2013

The Ship of Theseus

Director Anand Gandhi has delivered a Classical stunner in his first feature length film. The Ship of Theseus attains its critical superiority, for its intricate way of binding the problems of Identity of various types like Religion, Belief, Lifestyle, Disability to the Social-Ethical problem of Organ donation using classic philosophical problem of “Ship of Theseus”. [The Original philosophical problem being: As the story occurs in Plutarch's Lives (Life of Theseus), A Ship by which Theseus a Semi- Mythical Hero of ancient Athens who is said to have accomplished a rescue mission, was on public display in Athens. One day all the old parts of the ships are replaced-repaired by new ones. Is the new repaired ship still the same one? In Hobbe's De Corpore the question is extended as, If all the old parts discarded combined into a ship, Is the restored ship same as the original one? ] But its superiority comes from the fact that even with its Intellectual juggling, art of film-making never takes a back seat, whether its Acting, Cinematography, or for that matter entertaining dialogues for those who least care for its philosophical inquiry. Even though the film has three stories embedded into it the seamless switching between the stories in something commendable.
The first story is that of a visually disabled photographer, who takes pictures by sensing sounds around her. She is aided by high technology computer-camera as well as by her Boy-friend, which helps her to edit and convert them into an art form. The acting, cinematography, sequences are so natural that unless one watches it, we are disabled to imagine [For the first time when i listened to the story, At least I thought it should be some emotional drama not worthwhile to watch]. Her imagination works to her ability to get good art form, which also sometimes get her into an argument with her Boy friend, who fights over things like Black&White Vs color, over superiority of pictures, nonetheless it keeps her contended. The whole course of her life changes when she is transplanted with new eyes. Tears rolls down automatically unintended. Crossing the roads now becomes difficult in contrast to her previous life when she could have easily crossed highway, with just following the sounds. Taking photographs is not giving her joy anymore. Those visuals in one of the frame in the cinema in which she stands crippled revolving in a circle, not able to take pictures, keeps haunting the viewer. Her boy-friend who used to argue for many things slowly starts giving-in on all the matters. The second story revolves around a Jain ascetic Maitreya, who is fighting a case against Pharmaceutical companies for using the animals for the testing of their medicine. He constitutes a plethora of identities: he is an atheist, an ascetic, animal rights activist. The core of the Jain philosophy is so beautifully captured in a Bhajan sung by Maitreya. He is personally contested by a young lawyer named Charvaka who likes to argue with Maitreya on all the philosophical matters. The ascetic is diagnosed with liver cirrhosis and needs a transplantation which involves taking drugs of the same companies which he is fighting and for the same reason he refuses the transplantation. Charvaka and many of his other friends try to convince him with many philosophical arguments to quote a simple one 'torturing one's body is as bad as torturing animals' . Finally he gives in. And whether he was convinced by those arguments or he gave in for the sake of life, over being an immortal after death is left to the viewer's discretion. Again the stunning visuals, philosophical-social contradictions in each frame makes viewers stick to their chairs without a wink. The third story is that of a stock broker from a revolutionist leftist family( with views contrasting those of his own) , who is obsessed with money, and is in a hospital for a kidney transplantation. Later he finds out that there is a big kidney racket and doubts that his transplanted kidney could be a stolen one from a labourer. He gets agitated. His next course of actions benefit the labourer to get an handsome amount. The scene in which the labourer compensated with the money acts very happy, could have been avoided. Probably the last story is much louder than first two and the first one is the best in which the silence speaks in most parts of the story.

The movie ends with all those who underwent transplants coming together,and they get know that all the organs were donated by the same person. Together they watch a cave exploration video, shot by the head of the NGO which had organized these transplants. Is the director trying to depict Plato's 'allegory of cave' problem makes students of philosophy pondering, and may be, it draws them to watch the movie again.

ಗುರುವಾರ, ಮಾರ್ಚ್ 07, 2013

ಆಕೃತಿ ಅಂಗಳದಲ್ಲಿ ಶಿವರಾತ್ರಿಯಂದು ಪುಸ್ತಕಮನೆ ಪುರಾಣ

[Description] ಆಕೃತಿ ಅಂಗಳದಲ್ಲಿ ಮಾರ್ಚ್ 10 2013, ಬೆಳಗ್ಗೆ 11 ಘಂಟೆಗೆ, ಹಿರಿಯ ಸಾಹಿತಿ, ಪತ್ರಕರ್ತ, ಪರ್ಯಾಯ ಸಂಸ್ಕೃತಿ ಚಿಂತಕ, ಪುಸ್ತಕ ಮನೆ ಖ್ಯಾತಿಯ ಶ್ರೀ ಹರಿಹರಪ್ರಿಯ ಅವರು "ಪುಸ್ತಕಮನೆ: ಸಮಾಜ, ಸರಕಾರ, ಮಾಧ್ಯಮ" ಕುರಿತಾಗಿ ಭಾಷಣ ಮಾಡಿ, ಸಂವಾದಕ್ಕೆ ತೆರೆದುಕೊಳ್ಳಲಿದ್ದಾರೆ. ಯೋಗ್ಯ ಪುಸ್ತಕ ಸಂಗ್ರಹ ಎಂಬುದೇನು? ಅದರ ಅವಶ್ಯಕತೆ - ಉಪಯುಕ್ತತೆ? ಹಿಂದಿನ ಖ್ಯಾತ ಪುಸ್ತಕ ಸಂಗ್ರಹಕಾರರು; ಪುಸ್ತಕಮನೆ ಕಟ್ಟಿ ಬೆಳೆಸಲು ತಾವು ಪಟ್ಟ ಶ್ರಮ; ಅದು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿ, ಸಮಾಜ ಸೇವೆ; ಅದರ ಕಷ್ಟದ ದಿನಗಳು; ತಾವು ಐದು ವರ್ಷ ನಿರಂತರವಾಗಿ ನಡೆಸಿದ ಪುಸ್ತಕ ಪ್ರದರ್ಶನ; ಐದು ವರ್ಷ ತಾವೇ ಕಟ್ಟಿ ಬೆಳೆಸಿದ ಪುಸ್ತಕಮನೆ ಪತ್ರಿಕೆಯ ಶ್ರಮ - ಸಾರ್ಥಕ್ಯ; ಪುಸ್ತಕಮನೆಯಲ್ಲಿ ಸರಕಾರದ ಪಾತ್ರ; ತಮ್ಮ ನಿರೀಕ್ಷೆಗಳು; ಪುಸ್ತಕಮನೆಯ ಮುಂದಿನ ನೋಟ; ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಕೇಳುಗರ ಸಂವಾದಕ್ಕೆ ಮುಕ್ತವಾಗಿ ಭಾಗವಹಿಸಿ, ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. 10 ಮಾರ್ಚ್ 2013, ಭಾನುವಾರ ಬೆಳಗ್ಗೆ 11 ಕ್ಕೆ ಸ್ಥಳ: ಆಕೃತಿ ಪುಸ್ತಕ ಮಳಿಗೆ ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್, ರಾಜಾಜಿನಗರ, ಬೆಂಗಳೂರು- 10 ಗುರುತು: ಭಾಷ್ಯಂ ಸರ್ಕಲ್, ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9886694580 ಎಲ್ಲರಿಗೂ ಆದರದ ಸ್ವಾಗತ ಪುಸ್ತಕಮನೆ ಹರಿಹರಪ್ರಿಯ : ಬಹುಮುಖ ಪ್ರತಿಭೆ ಹರಿಹರಪ್ರಿಯ ಅವರು ಬಾಲ್ಯದಲ್ಲೇ ಸಾಹಿತ್ಯ ಕೃಷಿಗೆ ಇಳಿದವರು. ಕನ್ನಡ ಮತ್ತು ತೆಲುಗು ಭಾಷಾ ಪ್ರವೀಣರಾದ ಹರಿಹರಪ್ರಿಯ ಅವರು ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಗುರುತಿಸಿಕೊಂಡವರು. ಇವರು ಸಂಪಾದನೆ ಮಾಡಿದ 'ಇವರು ಕುವೆಂಪು', 'ಕುವೆಂಪು ಪತ್ರಗಳು', 'ಕುವೆಂಪು ಒಲವು ನಿಲುವು' ಕನ್ನಡ ಸಾಹಿತ್ಯದ ಬಹುಮುಖ್ಯ ಕೃತಿಗಳು. ಪುಸ್ತಕ ಸಂಗ್ರಹದ ಗೀಳು ಹತ್ತಿಸಿಕೊಂಡ ಹರಿಹರಪ್ರಿಯ ಅವರು, ತಮ್ಮ ಸಂಗ್ರಹದಲ್ಲಿ ಕನ್ನಡ, ಇಂಗ್ಲಿಶ್, ತೆಲುಗು ಭಾಷೆಗಳ ಪುಸ್ತಕಗಳು ಮತ್ತು ಪತ್ರಿಕೆಗಳನ್ನೊಳಗೊಂಡು ಸುಮಾರು ಒಂದೂವರೆ ಲಕ್ಷಕ್ಕೂ ಮಿಗಿಲಾದ ಪುಸ್ತಕ - ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಇವರ ಗ್ರಂಥ ಭಂಡಾರ ಅತಿ ಪುರಾತನ, ಅಪರೂಪದ ಪುಸ್ತಕ - ಪತ್ರಿಕೆಗಳೂ ಅಲ್ಲದೆ, ಇತ್ತೀಚಿನ ಯುವ ಲೇಖಕರ ಪುಸ್ತಕಗಳನ್ನೂ ಒಳಗೊಂಡಿದೆ. ಅಲ್ಲದೆ ನಿರಂತರ ಐದು ವರ್ಷ ವಿವಿಧ ಸಾಹಿತಿಗಳ ಪುಸ್ತಕ ಪ್ರದರ್ಶನ ನಡೆಸಿ, ಸಾಹಿತ್ಯ ಪರಿಚಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐದು ವರ್ಷ ತಾವೇ ಸಂಪಾದಿಸಿ ಹೊರಡಿಸಿದ ಪುಸ್ತಕಮನೆ ಎಂಬ ಪತ್ರಿಕೆ ಕೂಡ ಕನ್ನಡದ ಸಾಹಿತ್ಯ ಲೋಕಕ್ಕೆ ಅತಿ ದೊಡ್ಡ ಕೊಡುಗೆ. ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಹರಿಹರಪ್ರಿಯ ಅವರು ಸಂಗೀತ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳ ಬಗ್ಗೆ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಪಂಗಡಗಳನ್ನು ಕಟ್ಟಿಕೊಂಡು ಹೊಗಳಿಕೊಳ್ಳುವುದನ್ನು ಒಪ್ಪದ ಹರಿಹರಪ್ರಿಯ ಅವರು, ವಿಮರ್ಶೆ-ಖಂಡನಾ ಶೈಲಿಯಲ್ಲಿ ಉಪನ್ಯಾಸಗಳನ್ನು ನೀಡಿ ಹರಿತ ಭಾಷಣಕಾರರೆಂದು ಗುರುತಿಸಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ ಬಹುಮಾನ, ವರ್ಧಮಾನ ಉದಯೋನ್ಮುಖ ಶ್ರೇಷ್ಠ ಸಾಹಿತಿ ಪ್ರಶ ಸ್ತಿ, ಕಾವ್ಯಾನಂದ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಹರಿಹರಪ್ರಿಯ ನಿರಂತರ ಸಾಹಿತ್ಯಜೀವಿ. ಪುಸ್ತಕಮನೆ ಮತ್ತು ಹರಿಹರಪ್ರಿಯ ಕೇವಲ ಮನೆ ಮತ್ತು ವ್ಯಕ್ತಿಯಾಗಿ ಉಳಿಯದೆ, ಕನ್ನಡ ಸಾಹಿತ್ಯ ಲೋಕದ ಅನರ್ಘ್ಯಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. For those ONLY who cannot read Kannada: Noted Writer, Thinker, Bibliophile Shri Harihara Priya will be interacting with the audience at Aakruti Books, Rajajinagar Bangalore on March 10th Sunday at 11 AM. Hariharapriya will speak about importance of Book Collection, Important Bibliophiles till day, About the institution "pustaka mane" which he built over several years, about the book exhibition of various individual authors which he organized over several years, about the Magazine "pustakamane" which he edited and ran for Five years, about the contribution of Pustakmane to the culture and society, Government’s and Media's role in Pustakamane, His expectations and on the future of Puatskamane. Pustakamane Hariharapriya: Multifaceted Hariharapriya started his literature career at an early age. Being an expert in both Kannada and Telugu Language, he has authored books in different Genre. The books edited by Hariharapriya "ivaru kuvempu", "kuvempu patragaLu", kuvempu olavu niluvu" are few of the notable woks of Kannada literature. A compulsive bibliophile, at present he has over 1.5 lakh Books and Magazines, in Kannada, Telugu and English Languages in his collection. This includes books of various genre, prints varying from rarest to the books of latest young writers. He edited and ran a magazine called "pustakamane" for 5 years and continuously exhibited the books of various authors for over 5 years to spread the literature and culture among the youth. A critic in Literature, Music and Art, he is a staunch opposite to group cultural politics and self praising-promotion among the groups and he is known for his fiery speeches. Recipient of Kannada Rajyotsava prashsti, Kempegowda prashasti, he has won numerous awards and Calling him one of the gem in Kannada culture and Literature is not an exaggeration.