ಮಂಗಳವಾರ, ನವೆಂಬರ್ 10, 2009

ಮುತ್ತಯ್ಯ ಭಾಗವತರ ಕೀರ್ತನೆಗಳ ಪುಸ್ತಕ ಬಿಡುಗಡೆ, ಪುಸ್ತಕ ಪರಿಚಯ

ಶಾರದಾ ಸಂಗೀತ ಶಾಲೆ ಮತ್ತು ಪ್ರಿಸಮ್ ಬುಕ್ಸ್ ಪ್ರೈ ಲಿ ವತಿಯಿಂದ, ವಿದುಷಿ ಸುಧಾ ವಿ ಮೂರ್ತಿ ಯವರು ಸಂಗ್ರಹಿಸಿರುವ ಮುತ್ತಯ್ಯ ಭಾಗವತರ "ಶಿವಾಷ್ಟೋತ್ತರ ಮತ್ತು ನವಗ್ರಹ ಕೀರ್ತನೆಗಳು" ಪುಸ್ತಕ ಶನಿವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಯಿತು. ಇದರ ಜೊತೆಗೆ ಮುತ್ತಯ್ಯ ಭಾಗವಾತರ ಕೀರ್ತನೆಗಳ ಎರಡು ಸಿಡಿ ಗಳು ಕೂಡ ಬಿಡುಗಡೆಯಾದವು.


bidugade


ವೇದಿಕೆ ಮೇಲೆ ನೆರೆದಿದ್ದ ಗಣ್ಯರು,

*ಡಾ| ರಂಗನಾಥ್ : ಸಂಸ್ಕೃತ ಪಂಡಿತರು, ಪುಸ್ತಕದ ಶಿವಾಷ್ಟೋತ್ತರದ ಸಂಸ್ಕೃತ ಶ್ಲೋಕಗಳಿಗೆ ಕನ್ನಡ ವಿವರಣೆಯನ್ನು ನೀಡಿದ್ದಾರೆ. ವಿಶ್ವದ ಪ್ರಮುಖರು ಸಂಗೀತದ ಮಹತ್ವದ ಬಗ್ಗೆ ಉಲ್ಲೇಖಿಸಿರುವ ಮಾತುಗಳನ್ನು ನೆನೆದರು.

*ಕೆರೋಡಿ ಅಮರನಾಥ್: ಅಧ್ಯಕ್ಷತೆಯನ್ನು ವಹಿಸಿದ್ದರು. ತಮ್ಮ ಸಣ್ಣ ಅಧ್ಯಕ್ಷೀಯ ಭಾಷಣದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಗೀತ ಗ್ರಂಥಗಳು ರಚನೆಯಾಗಬೇಕಾದ ಅವಶ್ಯಕತೆಯಿದೆ ಎಂದರು.

*ವಿದ್ವಾನ್ ಎಸ್. ಕೃಷ್ಣಮೂರ್ತಿ : ಅತಿಥಿಗಳು, ತಮ್ಮ ಭಾಷಣದಲ್ಲಿ, ತಮ್ಮ ತಾತನವರಾದ ಮೈಸೂರು ವಾಸುದೇವಾಚಾರ್ಯ ಮತ್ತು ಮುತ್ತಯ್ಯ ಭಾಗವತರ ಒಡನಾಟದ ಕೆಲವು ರೋಚಕ ಘಟನೆಗಳನ್ನು ತಿಳಿಸಿದರು. ಮುತ್ತಯ್ಯ ಭಾಗವತರು ಮತ್ತು ತಮ್ಮ ತಾತನವರು ಒಮ್ಮೆ ಕಾಂಬೋಧಿ ರಾಗವನ್ನು ಒಟ್ಟಿಗೆ ಹಾಡಿದ ಬಗೆಯನ್ನು ಮೆಲುಕು ಹಾಕಿದರು. ತಮ್ಮ ತಾತನವರು ಶಂಕರಾಭರಣದಲ್ಲಿ ರಚಿಸಿದ್ದ ಹರಿಭಜನೆ ಎಂಬ ಕೀರ್ತನೆಯನ್ನು ತಾತನವರಲ್ಲೇ ಒಂದು ವಾರವೆಲ್ಲಾ ಕೇಳಿ, ಮುತ್ತಯ ಭಾಗವತರು ಶಂಕರಾಭರಣದಲ್ಲಿ ಸಹಜ ಗುಣ ರಾಮ ಕೀರ್ತನೆಯನ್ನು ರಚಿಸಿದ್ದು, ಅದನ್ನು ಕೇಳಿ ತಮ್ಮ ತಾತನವರ ಕಣ್ಣಲ್ಲಿ ನೀರು ಹರಿದು ತಲೆದೂಗಿದ ಘಟನೆ, ಒಮ್ಮೆ ಮುತ್ತಯ್ಯ ಭಾಗವತರ ವರ್ಣಚಿತ್ರ ಬರೆದುದ್ದಕ್ಕೆ ಕೃಷ್ಣಮೂರ್ತಿಯವರಿಗೆ ೩೦ ರೂಗಳ ಬಹುಮಾನವನ್ನು ಮುತ್ತಯ್ಯಭಾಗವತರು ನೀಡಿದ ಘಟನೆಯನ್ನೂ ನೆನೆಸಿಕೊಂಡರು.
ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ