ಬುಧವಾರ, ಮೇ 21, 2014
ಗಿರಿಯವರ ಗತಿ, ಸ್ಥಿತಿ ---- ಜಿ.ಎನ್. ರಂಗನಾಥರಾವ್
ಇತ್ತೀಚೆಗಷ್ಟೇ ಆಕೃತಿ ಪುಸ್ತಕ ಬಿಡುಗಡೆ ಮಾಡಿದ ಗಿರಿ ಅವರ ಸಮಗ್ರ ಕೃತಿ 'ಗತಿ ಸ್ಥಿತಿ ಮತ್ತೆಲ್ಲ' ಪುಸ್ತಕವನ್ನು ಗಮನಿಸಿರಬೇಕಷ್ಟೆ. ಅದರ ವಿಮರ್ಶೆಗೆ ಒಂದು ಸ್ಪರ್ಧೆಯನ್ನು ಚುಕ್ಕುಬುಕ್ಕು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಹೊಸ ವಿಮರ್ಶೆ ಬರೆದು 3000 ರೂ ಗೆಲ್ಲಿರಿ!
ಇದಕ್ಕೆ ಪೂರಕವಾಗಿ ೧೯೭ ರಲ್ಲಿ ಮಾನ್ಯ ಶ್ರೀ ಜಿ ಎನ್ ರಂಗನಾಥ ರಾವ್ ಅವರು ಸಾಕ್ಷಿ ಸಾಹಿತ್ಯ ಮಾಸಿಕಕ್ಕೆ ಬರೆದ ಈ ಓದು ನಿಮಗಾಗಿ..
________________________________________________________________________________
ಗಿರಿಯವರ ಗತಿ, ಸ್ಥಿತಿ
ಜಿ.ಎನ್. ರಂಗನಾಥರಾವ್
ಒಂದು ಮುಂಜಾನೆ ಹಠಾತ್ತನೆ ಪ್ರತ್ಯಕ್ಷವಾಗುವ ಪ್ರಿಯಮಿತ್ರನಂತೆ ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಬಿಡುವ ಕಾದಂಬರಿಗಳು ಕನ್ನಡದಲ್ಲಿ ಆಗೊಂದು ಈಗೊಂದು ಕಾಣಿಸಿಕೊಳ್ಳುತ್ತಿವೆ. ಗಿರಿಯವರ ‘ಗತಿ, ಸ್ಥಿತಿ’ ಈ ಪಂಕ್ತಿಗೆ ಸೇರುವ ಕಾದಂಬರಿ. ಒಂದೇ ಪಟ್ಟಿನಲ್ಲಿ ಓದಿಸಿಕೊಂಡು ನಮ್ಮನ್ನು ತನ್ನಲ್ಲಿ ಒಳಗು ಮಾಡಿಕೊಳ್ಳುವ ಈ ಕಾದಂಬರಿ ನಾಯಕನ ಅಪರಿಚಿತ ಲೋಕದಲ್ಲಿ ಓದುಗರನ್ನೂ ಮುಳುಗಿಸಿ ಬಿಡುತ್ತದೆ. ನಾಯಕನ ತಿರುವುಗಳಲ್ಲೆಲ್ಲ ನಮ್ಮನ್ನೂ ಸುತ್ತಿಸಿ ಕಕ್ಕಾಬಿಕ್ಕಿ ಸ್ಥಿತಿಗೆ ನೂಕಿಬಿಡುತ್ತದೆ. ಗಿರಿಯವರ ಕೈಯಲ್ಲಿ ಭಾಷೆ ಬೆರಗುಗೊಳಿಸುವ ಸಾಧನವಾಗಿದೆ. ಹೀಗೇಕೆ- ಇದೇನು?- ಎಂದು ತಲೆತುರಿಸಿಕೊಳ್ಳುವಷ್ಟರಲ್ಲಿ ಸೂಕ್ಷ್ಮಾತಿಸೂಕ್ಷ್ಮಗಳನ್ನು ಸೆರೆಹಿಡಿಯುವ ಗಿರಿಯವರ documentary ಭಾಷೆ ನಮ್ಮ ಕಣ್ಮುಂದೆ ಮತ್ತೊಂದು ಚಿತ್ರವನ್ನೇ ಬಿಚ್ಚಿರುತ್ತದೆ. ಹೀಗೆ ಒಂದೊಂದನ್ನೂ ವಿವರಿಸುತ್ತ ನಮ್ಮನ್ನು ಸಂಪೂರ್ಣವಾಗಿ ಸೆಳೆದುಕೊಳ್ಳುವ ‘ಆತ’ ಒಂದು ಕಡೆ ನಿಲ್ಲದೇ ಓಡುವುದು, ನಮ್ಮನ್ನೂ ತನ್ನೊಂದಿಗೆ ಎಳೆದುಕೊಂಡು ಹೋಗುವುದು, ಎಲ್ಲಿ ಹೋದರೂ ಬಿಸಿಲು, ಬೆವರು ಸೆಖೆ ಗುಡ್ಡ-ಬೆಟ್ಟ, ಕೋಟೆಕೊತ್ತಲ- ಇವುಗಳೆದುರು ‘ಆತ’ ಅಸಹಾಯಕನಾಗಿ ಚಡಪಡಿಸುವುದನ್ನು ಕಂಡಾಗ ಇದೇನು fantasy ಯೇ ಅಥವಾ ಆತ homesick ಇರಬಹುದೇ ಎನ್ನಿಸುತ್ತದೆ. ಆದರೆ ಇದಿಷ್ಟೇ ಆಗಿದ್ದರೆ ‘ಗತಿ, ಸ್ಥಿತಿ’ ಒಂದು documentary ಚಿತ್ರವೋ ಕಾಮೆಂಟರಿಯೋ ಆಗುತ್ತಿತ್ತು. ‘ಆತ’ನ ಓಡುವಿಕೆ-ನೋಡುವಿಕೆಯ ಎಲ್ಲ ವಿವರಗಳನ್ನೂ ಗ್ರಹಿಸುವ ಆದರೆ ಯಾವುದೂ ಜೀವಂತ ತುಡಿತವಲ್ಲ ಎನ್ನಿಸುವ ನಾಯಕನ ವ್ಯಕ್ತಿತ್ವದ ಹಿಂದಿನ ಮನಸ್ಥಿತಿಯೇ ಈ ಕಾದಂಬರಿಯ ಮೂಲ ಶಕ್ತಿ. ಮುಖ್ಯವಾಗಿ ಆತನದು ಒಂದು ಕಡೆ ನಿಲ್ಲುವ ಚೇತನವಲ್ಲ. ಆತನ ಪಾಲಿಗೆ ಎಲ್ಲಿ ಹೋದರೂ ಅಲ್ಲಿ ಬಹು ಬೇಗನೆ ನೀರು ಮಡುಗಟ್ಟಿಬಿಡುತ್ತದೆ. ಗಾಳಿ ಬೀಸುವುದಿಲ್ಲ, ಧಗೆ ಜಾಸ್ತಿಯಾಗುತ್ತದೆ. ಎಲ್ಲೂ ನೆಲಸಲಾಗದ ಆತನದು ಅಲೆಮಾರಿ ವ್ಯಕ್ತಿತ್ವ. ಪರಿಸರದೊಡನೆ ಆತ ಹೊಂದಿಕೊಳ್ಳಲಾರ. ಅವನಿಗೆ ಎಲ್ಲೆಲ್ಲೂ ಅನುಭವಕ್ಕೆ ಬರುವುದು ಉಸಿರು ಕಟ್ಟುವ ವಾತಾವರಣ, ಪರ ಊರು, ತನ್ನ ಊರು, ಬೆಂಗಳೂರು, ಮೈಸೂರು ಎಲ್ಲೂ ಆತ ನಿಲ್ಲಲಾರ; ನೆಲೆಯಾಗಲಾರ. ಯಾವುದರ ಜೊತೆಯೂ, ಯಾರ ಜೊತೆಯೂ ಸಂಬಂಧ ಸ್ಥಾಪಿಸಲಾರ. ಯಾವುದರೊಡನೆಯೂ ಬೆಸೆದುಕೊಳ್ಳಲಾರ. ಎಲ್ಲವನ್ನೂ ನೋಡಿದರೂ ಅದರೊಡನೆ ಬೆರೆತುಕೊಳ್ಳಲಾಗದ, ಪ್ರತಿಕ್ರಿಯಿಸಲಾಗದ ನಿರ್ಲಿಪ್ತತೆ, ಒಂಟಿತನ, ಆಸಹಾಯಕತೆ, ಗುಮ್ಮೆನ್ನಿಸುವ ಅಸಹನೀಯ ವಾತಾವರಣ. ಇದರಿಂದ ದೂರ ಓಡುವ ಮನಸ್ಸು : ಹೋಟೆಲಿನ ಕೋಣೆಯಿಂದ ನ್ಯೂರಾಲಜಿ ಡಿಪಾರ್ಟ್‌ಮೆಂಟಿಗೆ, ಅಲ್ಲಿಂದ ಕಾಲೇಜಿಗೆ ಮತ್ತೆ
ರೂಮಿಗೆ, ರೂಮಿನಿಂದ ಬೀದಿಗೆ, ಮುಗಿದಂತೆ ಕಂಡರೂ ಮುಗಿಯದ ರಸ್ತೆಗಳ ತಿರುವಿಗೆ, ಬೆಟ್ಟ, ಗುಡ್ಡ, ಕೋಟೆಗಳಿಗೆ. ಕೊನೆಗೊಮ್ಮೆ ಬೆಂಗಳೂರಿಗೆ, ಬೆಂಗಳೂರಿನಲ್ಲಿ ಕಚೇರಿ, ಬಾರುಗಳಿಗೆ. ಅಲ್ಲಿಂದ ಮೈಸೂರಿಗೆ, ಮೈಸೂರಿನಿಂದ ತನ್ನ ಹಳ್ಳಿಗೆ, ಅಲ್ಲಿಂದ ಜೋಗ್ ಜಲಪಾತಕ್ಕೆ- ಹೀಗೆ ಅಲೆಯುತ್ತಾನೆ. ಕಾದಂಬರಿಯೂ ಯಥಾಸ್ಥಿತಿ ಓಡುತ್ತದೆ. ಘಟನೆ, ಸನ್ನಿವೇಶ, ಪಾತ್ರಗಳು, ಅನಿರೀಕ್ಷಿತ ಆಘಾತ- ಹೀಗೆ ಏನಾದರೊಂದು ಸಂಭವಿಸಿ ಕ್ರಿಯೆಯಲ್ಲಿ ಕಾದಂಬರಿ ಬೆಳೆಯುವುದಿಲ್ಲ. ‘ಆತ’ನೂ ಅಷ್ಟೇ : ಒಂದೇ ಗೆರೆಯಲ್ಲಿ ಓಡುತ್ತಾನೆ. ಆದರೂ ವೀಕ್ಷಕ ವಿವರಣೆಯಲ್ಲೇ ಅನೇಕ ಅಚ್ಚರಿಗಳ ಬಾಗಿಲು ತೆಗೆದುಬಿಡುತ್ತದೆ.
ಒಂದು ಪರಿಸರದಿಂದ ಮತ್ತೊಂದಕ್ಕೆ, ಒಂದು ವಾತಾವರಣದಿಂದ ಮತ್ತೊಂದು ವಾತಾವರಣಕ್ಕೆ ಓಡುವ ‘ಆತ’ನ ಮನಸ್ಸಿಗೆ ನಿರಂತರ ಚಲಿಸುವಿಕೆಯಷ್ಟೇ ಗುರಿಯೇನೊ ಅನ್ನಿಸುತ್ತದೆ. ಈ ಅಲೆಮಾರಿ ವ್ಯಕ್ತಿತ್ವದ ಆತನಿಗೆ ಅಚಲವಾದದ್ದೆಲ್ಲ ಅಸಹನೀಯ. ಬೆಟ್ಟ, ಗುಡ್ಡ, ಕೋಟೆ ಇಕ್ಕಟ್ಟಿನ ಕಟ್ಟಡಗಳು ಇದೊಂದೂ ಅವನಿಗಾಗದು. ಇವೆಲ್ಲ ಅವನ ಮನಸ್ಸಿನಲ್ಲಿ ಭೀತಿ, ಅಸಹನೆ, ಅಸಹಾಯಕತೆ, ಭ್ರಮೆಗಳನ್ನು ಮೂಡಿಸುತ್ತದೆ. ಗುಡ್ಡದ ಮೇಲಿನ ಬಂಡೆ ಎಲ್ಲಿ ಉರುಳಿ ಬಂದು ಆಹುತಿ ತೆಗೆದುಕೊಳ್ಳುವುದೋ ಎನ್ನಿಸಿ ಭಯವಾಗುತ್ತದೆ. ಅಚಲವಾಗಿ ನಿಂತಿರುವ ಬೆಟ್ಟ, ಕೋಟೆ, ಮುಗಿಯದ ತಿರುವಿನ ರಸ್ತೆಗಳು, ಕೊಳಕು ಬೀದಿ, ನೀರಿನ ಕಾಲುವೆ, ಹೊರಗೆ ಹೋಗಲು ಊರ ಬಾಗಿಲಿಗಾಗಿ ಹುಡುಕಾಟ ಇವೇ ಆವರಿಸಿವೆ.
ಕಾದಂಬರಿಯ ನಾಯಕ ’ಆತ’ ಮತ್ತು ಆಕೆ ನೌಕರಿಗಾಗಿ ಪರ ಊರಿಗೆ ಬರುತ್ತಾರೆ. ಆತನಿಗೆ ನ್ಯೂರಾಲಜಿ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡಲು ಆರ್ಡರ್ ಇರುತ್ತೆ. ಆಕೆಯದು ಲೆಕ್ಚರಿಕೆ. ಆದರೆ ಈ ಮಧ್ಯ appointment ವಿಷಯದಲ್ಲಿ ಸ್ವಲ್ಪ difficulties ಬಂದು ಆತ ಕೆಲಸಕ್ಕೆ ಹಾಜರಾಗಲಾಗದೇ ಕಾಯಬೇಕಾಗುತ್ತದೆ. ಈ ಕಾಯುವಿಕೆಯಲ್ಲಿ ಆತನ ಆತಂಕ ಬೆಳೆಯುತ್ತ ಹೋಗುತ್ತದೆ. ನಿಂತಕಡೆ ನಿಲ್ಲಲಾಗದೆ, ಕುಳಿತುಕೊಳ್ಳಲಾಗದೇ ತಹತಹಿಸುತ್ತಾನೆ. ಊರೆಲ್ಲ ಸುತ್ತುತ್ತಾನೆ. ಕಾದಂಬರಿ ಪೂರ್ತಿ ಈತನ ಸುತ್ತುವಿಕೆ-ಇಂದ್ರಿಯ ಪ್ರಜ್ಞೆ ಸೆರೆಹಿಡಿಯುವ ವಿವರಗಳು.
ಪರ ಊರಿನಲ್ಲಿ ವಸತಿ ಹುಡುಕುವುದರೊಂದಿಗೇ ಆರಂಭವಾಗುತ್ತದೆ, ಆತನ ಅಲೆದಾಟ, ಆತಂಕ. ಹೋಟೆಲಾದ ಮೇಲೆ ಹೋಟೆಲು. ಆಕೆಗೆ ಭಯವುಂಟು ಮಾಡುವ ಶವದ ಮನೆಯಂಥ ಉದ್ದನೆಯ ಹಜಾರದಲ್ಲಿ ಬಿಳಿಯ ಬೆಡ್‌ಷೀಟ್ ಹೊದೆದು ಸಾಲಾಗಿ ಮಲಗಿದ ವ್ಯಕ್ತಿಗಳನ್ನೊಳಗೊಂಡ ಕೋಣೆಯಲ್ಲಿನ ನಿರ್ಜೀವತನ, ಅಸಹನೀಯ ಮೌನ, ನಾಯಕನನ್ನು ಸ್ವಲ್ಪವೂ ಕದಕುವುದಿಲ್ಲ. ಸತ್ತ ಸಮಾಜವನ್ನು ಮೊದಲೇ ಒಪ್ಪಿಕೊಂಡಂತೆ ಆತ ವರ್ತಿಸುತ್ತಾನೆ. ಇಲ್ಲಿ ಹೋಟೆಲಿನ ಹುಡುಗನಿಂದ ಆಕೆಗೆ ಆಗುವ ಅನುಭವವೂ ಅವನನ್ನು ಕೆರಳಿಸುವುದಿಲ್ಲ. ಇದೆಲ್ಲದಕ್ಕೆ ತಾನು ನಿರ್ಲಿಪ್ತ ಎಂಬಂತೆ ಅವನ ವರ್ತನೆ. ಹೀಗೆ ಪರ ಊರಿನ ಪ್ರವೇಶವೇ ಅವರಿಗೆ ಉಸಿರಾಡುವ ಸೂಚನೆಯೂ ತೋರದ ನಿರ್ಜೀವ ಪ್ರಪಂಚದೊಂದಿಗೆ ಆರಂಭವಾಗುತ್ತದೆ. ಮುಂದಿನದೆಲ್ಲ ಕಾಯುವ ಆತಂಕ, ಉಸಿರು ಕಟ್ಟಿಸುವ ವಾತಾವರಣದಿಂದ ಪಾರಾಗುವ ತವಕ.
ಪರ ಊರಿನಲ್ಲಿ ಆತನಿಗೆ ಕಾಣುವುದು ಅನಿರೀಕ್ಷಿತವಾಗಿ ದೊಡ್ಡದೊಂದು ಬೆಟ್ಟ. ತೆರೆದುಕೊಳ್ಳುವುದು ಮುಗಿಯುವ ಸೂಚನೆಯೇ ಇಲ್ಲದ ತಿರುವು ದಾರಿಗಳು. ಕಣ್ಣಿಗೆ ಕತ್ತಲೆ ಬರಿಸುವ ಬಣ್ಣದ ರೂಮು, ಅಚಲವಾಗಿ ನಿಂತ ಬೆಟ್ಟ. ಒಮ್ಮೊಮ್ಮೆ ಅದರ ಮೇಲಿನ ಕೋಡುಗಲ್ಲು ಜಾರಿ ಬೀಳಬಹುದೆಂಬ ದೃಷ್ಟಿಭ್ರಮೆ, ಮುಗಿಯದ ದಾರಿಗಳು, ಕಚೇರಿಯಲ್ಲಿ ಯಾರಿಗೂ ಏನೂ ತಿಳಿಯದಂಥ ಅನಿಶ್ಚಿತ ಪರಿಸ್ಥಿತಿ, ಯಾಂತ್ರಿಕ ವ್ಯವಸ್ಥೆ ಇವೆಲ್ಲ ಆತನಿಗೆ ಜಡತೆಯ, ಸತ್ತ ಜೀವನದ ಸಂಕೇತವಾಗಿ, ಕುತ್ತಿಗೆ ಹಿಚುಕುವಂಥ ಉಸಿರುಕಟ್ಟಿಸುವ ವಾತಾವರಣವಾಗಿ ಕಾಡುತ್ತವೆ.ಮೈಮೇಲೆ ಬರುವ ವಾಸ್ತವಿಕ ಸ್ಥಿತಿಯ ಪ್ರತೀಕವಾಗಿ ತುಳಿಯುವ ಶಕ್ತಿಯಾಗಿ ಹಣ್ಣು ಮಾಡಿಬಿಡುತ್ತವೆ. ಆತನ ಗತಿಗೆಡಿಸುತ್ತವೆ. ಮುಗಿಯದ ತಿರುವು ದಾರಿಗಳು ಗುರಿ ಇಲ್ಲದ್ದನ್ನೂ ಕಣ್ಣುಕಟ್ಟುವ ಸ್ಥಿತಿಯ ಗೊಂದಲವನ್ನೂ ಸೂಚಿಸಿ ಮುಕ್ತಿಯೇ ಇಲ್ಲವೇನೋ ಎಂಬಂಥ ದಾರುಣಸ್ಥಿತಿಗೆ ತಂದುಬಿಡುತ್ತವೆ. ಈ ಆತಂಕ ಮುಂದಿನ ಹಂತಕ್ಕೆ ಅಂದರೆ ಮತ್ತೊಂದು ಓಡುವಿಕೆಗೆ ಸಿದ್ಧತೆ ನಡೆಸುತ್ತದೆ.
ಆದರೆ ದಾರಿ? ಕೋಟೆಯೊಳಗೆ ಆತ ಬಂದಿ, ಸುತ್ತಿಬಳಸುವ ದಾರಿಗೆ ಕೊನೆಯೇ ಇಲ್ಲ. ಕೋಟೆಗೆ ಬಾಗಿಲೇ ಇಲ್ಲ. ಹಳೆಯ ಮೌಲ್ಯ, ಸಂಬಂಧ, ಸಂಪ್ರದಾಯಗಳ ರಕ್ಷಕ ವ್ಯವಸ್ಥೆಯ ಪ್ರತೀಕವಾಗಿರುವ ಈ ಕೋಟೆಯಿಂದ ತಪ್ಪಿಸಿಕೊಳ್ಳಲು ಹೆಣಗಿದಂತೆಲ್ಲ ಅದರ ಹತ್ತಿರ ಬರುತ್ತಾನೆ. ಯಾರು ಇದನ್ನು ಕಟ್ಟಿದವರು ಎಂದು ಆಸಕ್ತಿಯೂ ಮೂಡುತ್ತದೆ. ಆದರೆ ಅವನಿಗೆ ಗೊತ್ತಾಗುವುದು ಅದು ಊರಿಗೆ ಕಳಶ- pride.ಸೂರ್ಯನಿಗೂ ಸೆಖೆಯಾಗುತ್ತಿರಬಹುದಾದ ಆ ಊರಿನಲ್ಲಿ ಆತನಿಗೆ ಏನೂ ಪ್ರಯೋಜನವಿಲ್ಲ. ಆತ ಬೈಯ್ಯಲಾಗದ, ಶಪಿಸಲಾಗದ, ಓಡಲಾಗದ, ಪರಿಸ್ಥಿತಿಯಲ್ಲಿ ಬೇಯುತ್ತಾನೆ. ಮನುಷ್ಯರಲ್ಲೂ ಆತನಿಗೆ ವಿಶ್ವಾಸವಿಲ್ಲ, ಯಾರ ಮಾತಿಗೂ ಅರ್ಥವಿಲ್ಲ:
“....ಇವರೆಲ್ಲ ಬಾಯಿಯಿಂದ ಶಬ್ದಗಳನ್ನು ಆಚೆ ಹಾಕುತ್ತಾರಷ್ಟೆ. ವಾಕ್ಯವಿಲ್ಲ, ಅರ್ಥವಿಲ್ಲ, ನಿರ್ಧಾರವಿಲ್ಲ, ಯೋಚನೆಯಿಲ್ಲ. (ಪುಟ-೪೭)
“ಏನೇ ಮಾಡೋದು, ಭೂಮಿ ಮೇಲೆ ಇದ್ದಹಾಗೆ ಇಲ್ಲ" ಎಂಬ ಚಡಪಡಿಕೆಗೆ ಬರುತ್ತಾನೆ. ಡೈರೆಕ್ಟರ್ ಬರುವಿಕೆಗಾಗಿ ಕಾಯುವುದು, ಬಾಸ್, ರಿಸರ್ಚ್ ಪ್ರೊಫೆಸರುಗಳ ಸತಾಯಿಸುವಿಕೆ, ಮಾನವೀಯ ಮೌಲ್ಯಗಳಿಗೆ ಎಳ್ಳಷ್ಟೂ ಬೆಲೆ ಇಲ್ಲದಂತೆ ಅಧಿಕಾರಿಗಳು, ಗುಮಾಸ್ತರುಗಳು ಆತನನ್ನು ನಡೆಸಿಕೊಳ್ಳುವ ರೀತಿ, ಸಹಿಸಲಾಗದ ಧಗೆ, ಬೆಟ್ಟ, ಕೋಟೆ, ಕೊಳಕು ಬೀದಿಗಳು ಇವೆಲ್ಲದರ ಮಧ್ಯ ‘ಆತ’ ತಪ್ತನಾಗುತ್ತಾನೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿ ಆ ಸೀಮಿತ ಪರಿಸರದಲ್ಲಿ ಅವನು ಕಂಡದ್ದಕ್ಕೇ ಡಿಕ್ಕಿ ಹೊಡೆಯುತ್ತಾನೆ. ಯಾವುದನ್ನೂ ಹೃದಯಕ್ಕೆ ಗ್ರಹಿಸಲಾಗದೇ ಅನಾಥನಾಗುತ್ತಾನೆ. ಇಂಥ ಸ್ಥಿತಿಯಲ್ಲೂ ಆತನಿಗೆ ಆ ಊರಿನಲ್ಲಿ ಒಂದೇ ಆಕರ್ಷಣೆ : sweet ಆಗಿರುವ ಒಳ್ಳೆಯ ಮೈಕಟ್ಟಿನ ಹುಡುಗಿಯರು, ಮನಸ್ಸನ್ನು ಅಮುಕುವ ಕಿರಿಕಿರಿಗಳ ಮಧ್ಯ ಕಣ್ಣು ಕಣ್ಣು ಬಿಡುತ್ತ ಬದುಕುವ ಆತನಿಗೆ ಎದುರಾಗುವ ಹುಡುಗಿಯರು ಮಾತ್ರ ಅವನಲ್ಲಿ ಇನ್ನೂ ಜೀವಂತ ಬದುಕಿನ ಬಗ್ಗೆ ಇರುವ ಆಸಕ್ತಿಯ ಸಂಕೇತವಾಗುತ್ತಾರೆ. ಗುಟ್ಟಾಗಿ ಹೊಟ್ಟೆಯಲ್ಲಿ ಅಡಗಿರುವ ಈ ಜೀವಂತಿಕೆಯ ಆಸೆ ನೆನಪಾಗಿ ಕಾಣಿಸಿಕೊಳ್ಳುತ್ತದೆ. ಕೋಪವಾಗಿ ಕೆರಳುತ್ತದೆ :
“....ಒಂದು ಥರಾ ಮನಸ್ಸಿಗೆ ನಾಲ್ಕು ಕಡೆಯಿಂದ ದೊಣ್ಣೆ ಹಾಕಿ ಅಮುಕಿದಂತೆ ಕಿರಿಕಿರಿ. ಚಿಕ್ಕಂದಿನಲ್ಲಿ ಊರಿನ ಹೋರಿಯ ಬೀಜ ಒಡೆದದ್ದರ ನೆನಪು, ಯಮಯಾತನೆ, ನಾಲ್ಕಾರು ಜನ ದಾಂಡಿಗರು ಕೈಕಾಲು ಕಟ್ಟಿ ಬೀಳಿಸದ ಹೋರಿಯ ಆ ಸಾಮಾನನ್ನ ಮರದ ದೊಣ್ಣೆಗಳಿಂದ ತಯಾರಿಸಿದ ಇಕ್ಕಳದಂತಹದೊಳಗೆ ಹಾಕಿ ತಿಕ್ಕಿತಿಕ್ಕಿ ನೀರು ಮಾಡುತ್ತಿದ್ದ, ವಿಲಿವಿಲಿ ಹೋರಿ ಒದ್ದಾಡುತ್ತಿದ್ದ ದೃಶ್ಯ, ಆ ಧಾಂಡಿಗರನ್ನೆಲ್ಲ ಬಾರು ಕೋಲಿನಿಂದ ಥಳಿಸಬೇಕು. ಅವರಿಗೂ ಅದೇ ಮಾಡಿ ರುಚಿ ತೋರಿಸಬೇಕು."
(ಪುಟ-೬೧)
ನಿರ್ವೀರ್ಯಗೊಳಿಸುತ್ತಿರುವ ಸುತ್ತಲಿನ ಬದುಕಿನಲ್ಲಿ ಸಿಕ್ಕಿಬಿದ್ದಿರುವ ಆತ ತನ್ನನ್ನು ಇಡಹೊಡೆಸಿಕೊಳ್ಳುತ್ತಿರುವ ಹೋರಿಗೆ ಹೋಲಿಸಿಕೊಳ್ಳುತ್ತಾನೆ. ಆ ಊರು, ಅಲ್ಲಿನ ಬೆಟ್ಟ-ಕೋಟೆ, ಗಲೀಜು ಬೀದಿಗಳು, ಕಾಲುವೆ, ಆಫೀಸಿನ ಯಾಂತ್ರಿಕತೆ, ಬದುಕಲಿಕ್ಕೆ ಏನೇನೂ ತರವಲ್ಲ ಎನ್ನುವಂಥ ವಾತಾವರಣ- ಹೀಗೆ ಇಕ್ಕಳದಲ್ಲಿ ಆತ ಸಿಕ್ಕಿಬಿದ್ದಿದ್ದಾನೆ. ಆತನದು ಹೋರಿಗಿಂತ ಮಿಗಿಲಾದ ಸ್ಥಿತಿ ಏನಲ್ಲ. ಆ ನೋವು ಅವನನ್ನು ಗಾಸಿಗೊಳಿಸುತ್ತದೆ. ಅದರ ವಿರುದ್ಧ ಹೋರಾಡುವ, ಜೀವಂತ ಉಳಿಯುವ ಛಲವೂ ಸ್ವಲ್ಪ ಏಳುತ್ತದೆ.ಆದರೆ ಆತನಿಗೆ ಅಂತಿಮವಾಗಿ ಕಾಣುವುದು : ಬರೀ ಖಾಲಿತನ. ಕೈಯ್ಯಲಿದ್ದ ರೊಕ್ಕವೂ ಖರ್ಚಾಗಿ ಹೋಟೆಲಿನ ಮಾಲೀಕ ಬೆನ್ನ ಹಿಂದೆ ಗೂಢಚರ್ಯೆ ನಡೆಸಿದಾಗ, ಆಕೆಗೆ ಸಿಕ್ಕ ಕೆಲಸದಲ್ಲೂ ಕಿರುಕುಳ, ದೊಡ್ಡವರ ಅಪ್ರಾಮಾಣಿಕತೆ, ಹಲ್ಕಾತನ ಕಂಡಾಗ ಅವನಿಗನ್ನಿಸುವುದು ಒಂದೇ : ಓಡಿ ಹೋಗುವುದು, ಮಾನಸಿಕವಾಗಿ ಅವರಾಗಲೇ ಓಡಲಾರಂಭಿಸುತ್ತಾರೆ. ದಮ್ಮುಕಟ್ಟಿ ಓಡುತ್ತಾರೆ. ಹೊರದಾರಿಯಿಲ್ಲದ ಊರೊಳಗೆ ಸುತ್ತುತ್ತಾರೆ. ಸಿಕ್ಕ ರೈಲು ಹಾದಿಯೂ ಅವರನ್ನು dead end ಗೆ ಒಯ್ಯುತ್ತದೆ. ಮತ್ತೆ ತಿರುಗಿ ಬೀಡ ಕಟ್ಟುವ ಧಡೂತಿ ವ್ಯಕ್ತಿಯನ್ನು ‘ದಾರಿ’ ಕೇಳುತ್ತಾರೆ. ಬೀಡಾ ಕಟ್ಟುವ ವ್ಯಕ್ತಿ ಊರಿನ ಬೆಟ್ಟದಷ್ಟೇ ಭಯಂಕರವಾಗಿ, ನಿಶ್ಚಲನಾಗಿ, ಬಾಯಿ ಬಿಡದೆ ನಿರ್ಜೀವಸ್ಥಿತಿಯ, ಮಾನವೀಯ ಮೌಲ್ಯಗಳೆಲ್ಲ ಸತ್ತ ಸಮಾಜದ ಖದೀಮ ವ್ಯವಸ್ಥೆಗಳ ಸಂಕೇತವಾಗಿ ಬಿಡುತ್ತಾನೆ. ಈತನ ಮೌನ ಕೊನೆಗೂ
ಕೈಗೂಡದ ದಿಕ್ಕೆಟ್ಟ ಸ್ಥೀತಿಯ ಸ್ಪಷ್ಟತೆ.
ಹೆಸರಿಲ್ಲದ ಊರಿಗೆ ಬಂದ ಐದನೆಯ ಶುಕ್ರವಾರದ ವೇಳೆಗೆ ಆತ ಸಂಪೂರ್ಣ ಸೋತು ಹೋಗುತ್ತಾನೆ. ಕೈ ಖಾಲಿಯಾದಾಗ ನೆನಪಾದ ಗೆಳೆಯನ ಬಗ್ಗೆಯೂ ಅನುಮಾನ, ಹಣ ಸಿಕ್ಕ ಗೆಳೆಯ ಮೂರ್ತಿ ಗುಂಡುಹಾಕಿ ಮಜಾ ಮಾಡಿರಬಹುದು. ಹಣ ಬರುವ ಖಾತ್ರಿ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಯಾರೊಬ್ಬರೊಡನೆಯೂ ಸಂಬಂಧ ಕಾಣದೆ ಅನಾಥಸ್ಥಿತಿಯಲ್ಲಿ ಇರುವ ಆತನಿಗೆ ತಾಕುವ ವ್ಯಕ್ತಿಗಳೆಂದರೆ ಆಕೆ ಮತ್ತು ಮೂರ್ತಿ. ಆಕೆ ಮತ್ತು ಆತ ಒಂದೇ ಕೋಣೆಯಲ್ಲಿದ್ದರೂ ಪರಕೀಯರಂತೆ ಕಾಣುತ್ತಾರೆ. ಆದರೆ “ಮುತ್ತಿಲ್ಲ ಮುದ್ದಿಲ್ಲ" ಎಂಬ ಮಾತುಗಳಿಂದ, ಮೂರ್ತಿ ಆಕೆ ಬಗ್ಗೆ ತೋರುವ informal attitude ನಿಂದ ಅವರಿಬ್ಬರೂ ಆತನಿಗೆ ಆಪ್ತರೆಂಬ ಸೂಚನೆ. ಆಕೆ ಡೀನ್ ತನ್ನನ್ನು ಹೀನಾಯವಾಗಿ ಕಾಣವ ಬಗ್ಗೆ ನೊಂದುಕೊಂಡಾಗ ಇವನ ಕರುಳು ಚುಚ್ಚುತ್ತದೆ. ಆಗ ಕೊಂಡಿ ಬೆಸೆದುಕೊಂಡಂಥ ಕ್ರಿಯೆ, ದುಃಖ ಮೊದಲ ಬಾರಿಗೆ ಇಬ್ಬರನ್ನೂ ಹತ್ತಿರ ತರುತ್ತದೆ. ಕೊನೆಗೊಮ್ಮೆ ಇಬ್ಬರೂ ಧಗೆಯಿಂದ ಪಾರಾಗುತ್ತಾರೆ. ಆತ ಬೆಂಗಳೂರಿನಲ್ಲಿ ಉಳಿಯುತ್ತಾನೆ. ಆಕೆ ಮೈಸೂರಿಗೆ ಹೋಗುತ್ತಾಳೆ.
ಇಲ್ಲಿಯವರೆಗೆ ಸರಾಗವಾಗಿ ಓದಿಸಿಕೊಳ್ಳುವ ಕಾದಂಬರಿ ಥಟ್ಟನೆ ನಿಂತ ಅನುಭವವಾಗುತ್ತದೆ. ಪರ ಊರಿನ ಉಸಿರು ಕಟ್ಟಿಸುವಂಥ ವಾತಾವರಣದಿಂದ ಆತನ ಬಿಡುಗಡೆಯೊಂದಿಗೇ ಎಲ್ಲ ಮುಗಿಯಿತೇನೋ- ಆತ ಬೆಂಗಳೂರಿನಲ್ಲಿ normal ಗೆ ಬಂದನೇನೊ ಎನ್ನಿಸುತ್ತದೆ. ಆದರೆ ಬೆಂಗಳೂರೂ ಅವನ ಮನಸ್ಥಿತಿಗೆ ಹೊರತಾಗುವುದಿಲ್ಲ. ಕಚೇರಿ ಬಾರ್‌ಗಳಲ್ಲಿ ಸುತ್ತುವ ಆತನಿಗೆ ಮತ್ತೆ ಅದೇ ಉಸಿರುಕಟ್ಟಿಸುವ ಅನುಭವ. ಅದರಿಂದ ಮುಕ್ತನಾಗುವ ತಲ್ಲಣ. ಬೆಂಗಳೂರಿನ ಬಾರ್ ಒಂದರಲ್ಲಿ ಗುಂಡು ಹಾಕುವಾಗ ಮೊದಲ ಬಾರಿಗೆ fact ಒಂದರೊಡನೆ ಸಂಪರ್ಕ ಪಡೆದ ಅನುಭವವೂ ಬಿಯರ್‌ನ ಕಿಕ್‌ನಷ್ಟೇ ಕ್ಷಣಿಕ. ಬಾರ್‌ನಲ್ಲಿ ಸಿಕ್ಕ ವ್ಯಕ್ತಿಯ ಕಾಮ ಜೀವನದ ವೈಫಲ್ಯ ಇವನದೂ ಆಗುತ್ತದೆ. ‘ಆತ’ನದು ಪರಿಸರದಲ್ಲಿ ಒಳಹೋಗಲಾಗದಂಥ, ಬೆರೆಯಲಾಗದಂಥ, introduce ಆಗಲಾರದಂಥ ಸ್ಥಿತಿ.
ಬೆಂಗಳೂರಿಂದ ಮೈಸೂರಿಗೆ ಕೊನೆಗೆ ಸ್ವಂತ ಊರಿಗೆ. ಸ್ವಂತ ಹಳ್ಳಿಯಲ್ಲಿ ಒಂದು ಮಧ್ಯಾಹ್ನ ಕಳೆಯುತ್ತಲೇ ಆತನಿಗೆ ಅಳುಬರುವಷ್ಟು ಬೇಸರ. ಈ ಮುಜುಗರದಿಂದ ಪಾರಾಗಲು, ಹೊತ್ತು ಕಳೆಯುವುದನ್ನೇ ಪ್ರಧಾನವಾಗಿಟ್ಟುಕೊಂಡು ಜೋಗ್ ಜಲಪಾತಕ್ಕೆ ಹೋಗುತ್ತಾನೆ.ಜೋಗ ಜಲಪಾತವೂ ಅವನ ತಾಪವನ್ನು ತಣಿಸುವುದಿಲ್ಲ. ಅಲ್ಲೂ ಅವನಿಗೆ ಆತಂಕ, ಭೀತಿ, ಜಲಪಾತ ತಲೆಯೊಳಗಿದೆಯೊ, ಹೊರಗಿದೆಯೊ ಎನ್ನಿಸುತ್ತದೆ. ಜೋಗ ಜಲಪಾತದ ಅಗಾಧತೆ, ಪ್ರಪಾತ, ಅಲ್ಲಿನ ಸನ್ನಿವೇಶಗಳು ಬದುಕಿನ ನಿಗೂಢ ಶಕ್ತಿಯ ಸಂಕೇತವಾಗಿ ಅದರ ಮುಂದೆ ತನ್ನ ಬದುಕನ್ನು ಮುಷ್ಟಿಯಲ್ಲಿ ಹಿಡಿಯುವ ಪ್ರಯತ್ನ ವಿಫಲವೆನಿಸಿ ಆತ ಆರ್ತನಾಗುತ್ತಾನೆ.
ಕಾದಂಬರಿಯನ್ನು ಮುಗಿಸಿದ ನಂತರ ಕೆಲವು ಪ್ರಶ್ನೆಗಳು ಮೂಡುತ್ತವೆ : ಈ ವೀಕ್ಷಕ ವಿವರಣೆ, ಸ್ವಗತ, ವ್ಯಾಖ್ಯಾನಗಳ ಉದ್ದೇಶವೇನು? ಆತನ ನೋಡುವಿಕೆ, ಅಲ್ಲಿಂದ ಓಡುವಿಕೆ- ಇವುಗಳ ಅರ್ಥವೇನು? ಆತನ ಈ ಅನುಭವಗಳಿಗೆಲ್ಲ ಏನೂ ಅರ್ಥವಿಲ್ಲವೆ? ತೊಣಚಿ ಹೊಕ್ಕ ದನದಂತೆ ನಿಂತಕಡೆ ನಿಲ್ಲದೆ ಸುತ್ತುವ ಆತನಿಗೆ ಬೆಟ್ಟೆ, ಕೋಟೆ, ಗಲೀಜಿ ರಸ್ತೆಗಳು, ಹರಿಯುವ ಕಾಲುವೆ, ಕಕ್ಕಸಿಗೆ ಕುಳಿತವನು ಇವು ಬಿಟ್ಟು ಬೇರೇನೂ ಕಾಣಿಸಲಿಲ್ಲವೇ? ಯಾವ ಅನುಭವವೂ ಆತನ ಮನಸ್ಸಿನಾಳಕ್ಕೆ ಇಳಿಯುವುದಿಲ್ಲ ಏಕೆ? ಆತನ ಆತಂಕ, ತಬ್ಬಲಿತನಗಳ ಬಗ್ಗೆ ಅನುಕಂಪ ಮೂಡುವುದೇ ಹೊರತು ಇದರಲ್ಲಿ ಯಾವುದೂ significant ಅನ್ನಿಸುವುದಿಲ್ಲವಲ್ಲ? ಕಾದಂಬರಿಯ ಮೂಲ ಸಮಸ್ಯೆಯೇ ಇದು. ಯಾವುದೂ significant ಅನ್ನಿಸದೇ ಹೋಗುವುದೇ ‘ಆತ’ನ ವ್ಯಕ್ತಿತ್ವದ ಬಿರುಕಿಗೆ ಕಾರಣ.
ತಬ್ಬಲಿತನ, ಪರಕೀಯತೆ, ಭ್ರಷ್ಟ ಸಮಾಜ, ಯಾಂತ್ರಿಕ ಜೀವನದ ಜಿಗುಪ್ಸೆ- ಹೀಗೆ ಬದುಕಿನ ವಿವಿಧ ಹಂತಗಳಲ್ಲಿ ಆಗುವ ಯಾವ ಅನುಭವವೂ ಅರ್ಥಪೂರ್ಣವಾಗದೇ ಹೊಯ್ದಾಡುವ ಇಂದಿನ ಯುವಕರ ಪ್ರತಿರೂಪ ‘ಆತ’. ವಿವರಗಳನ್ನೆಲ್ಲ ನೋಡುತ್ತಾನೆ. ಆ ಬಗ್ಗೆ ಕಾಮೆಂಟ್ ಮಾಡುತ್ತಾನೆ. ಆದರೆ ಯಾವುದೂ ಜೀವಸತ್ವವಾಗಿ ಆತನ ಹೃದಯದಲ್ಲಿ ಉಳಿಯುವುದಿಲ್ಲ, ಏನೂ ಅನ್ನಿಸುವುದಿಲ್ಲ. ಗೆಳೆಯ ಮೂರ್ತಿಗೆ ಹೇಳುತ್ತಾನೆ : “ಏನೂ ಅನಿಸಲಿಲ್ಲ. ಹೀಗಾಯಿತು. ಹಾಗಾಯಿತು ಅಂತ ಮತ್ತೆ ಮತ್ತೆ ಘಟನೆಗಳೇ ಮರುಕಳಿಸುತ್ತವೆ. ಅನ್ನಿಸುವುದು ಮಾತ್ರ ಏನೂ ಇಲ್ಲ. ಅಥವಾ ಹೀಗೂ ಹೇಳಬಹುದು : ಇದು ಹೀಗಿದೆ ಅನ್ನಿಸುತ್ತೆ. ಮೆಣಸಿನಕಾಯಿ ಕಾರವಾಗಿದೆ ಅಂದ ಹಾಗೆ "(ಪುಟ-೯೨)
ಯಾವುದೂ ಒಂದು ಅನುಭವವಾಗಿ ಆತ ಬೆಳೆಯದೇ ಹೋಗುವುದಕ್ಕೆ, ಇದಾವುದೂ ಆತನಿಗೆ ಅರ್ಥಪೂರ್ಣ ಎಂದೆನ್ನಿಸದೇ ಇರುವುದಕ್ಕೆ ಮುಖ್ಯ ಅವನ ಮನಸ್ಥಿತಿಯೇ ಕಾರಣ. ಒಂದು ಕಡೆ ನಿಲ್ಲಲಾಗದ ಅವನ ಮನಸ್ಥಿತಿ ಯಾವುದನ್ನೂ ಅಗೆದು, ಅಳೆದು, ಸುರಿದು ನೋಡುವುದೇ ಇಲ್ಲ. ಕ್ಯಾಮೆರಾದಂತೆ ಬಾಹ್ಯಕ್ಕೆ ಕಂಡದ್ದೆಲ್ಲವನ್ನೂ ಗ್ರಹಿಸುತ್ತದೆ. ಹೆಚ್ಚಿನ ಕಾಳಜಿ ಮಾಡದಂಥ ನಿರ್ಲಿಪ್ತಸ್ಥಿತಿ ಮತ್ತು ಬೋರ್‌ಡಂನಿಂದ, ನೋಡುವಿಕೆ ಹಂತದಲ್ಲೇ ಆತ ಒಂದು ವಸ್ತು, ವ್ಯಕ್ತಿ, ಪರಿಸರದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾನೆ : ಆ ಕ್ಷಣದಲ್ಲೇ ಅಲ್ಲಿಂದ ತಪ್ಪಿಸಿಕೊಳ್ಳುವ ಲೆಕ್ಕಾಚಾರದಲ್ಲಿರುತ್ತಾನೆ. ಆದ್ದರಿಂದ ತಿಕ್ಕಾಟಕ್ಕೆ ಎಡೆಯೇ ಇಲ್ಲ. ಈ ವಿಲಕ್ಷಣ ಮನಸ್ಥಿತಿಗೆ ಯಾವುದೂ significant ಆಗದೇ ಬರೇ ಸಹಿಸಲಾಗದ ನೋವಾಗುತ್ತದೆ. ಈ ಕಾರಣದಿಂದ significant ಏನೂ ಇಲ್ಲ ಎನ್ನುವುದೂ ಆತನ ನೋಡುವಿಕೆಯಷ್ಟೇ ಕಣ್ಣು ನೇರಕ್ಕೆ ಆಡುವ ಮಾತಾಗುತ್ತದೆ. ಗತಿ, ಸ್ಥಿತಿ ಮುಖ್ಯವಾಗಿ ನಮ್ಮ ಸಮಕಾಲೀನ ಪ್ರಜ್ಞೆಯ ನಾಡಮಿಡಿತ. ಸಮಕಾಲೀನ ನಗರಜೀವನ, ಈ ನಗರ ಜೀವನಕ್ಕೆ ಅಲ್ಲಿನ ಖೋಟಾ ವ್ಯವಸ್ಥೆ- ಇಬ್ಬಂದಿಗಳಿಗೆ ಒಳಗಾದವರ ಅಸಹಾಯಕ ಅಪರಿಚಿತ ಬದುಕಿನ ಪ್ರತಿರೂಪ.
ಕಾಫ್ಕನ ಪ್ರಭಾವ ಈ ಕಾದಂಬರಿಯಲ್ಲಿ ದಟ್ಟೈಸಿರುವುದು ಸ್ಪಷ್ಟ. ಗತಿ, ಸ್ಥಿತಿಯ ನಾಯಕ ‘ಆತ’ ಕಾಫ್ಕನ Castle ನಾಯಕನಂತೆ. ಈತನಿಗೂ ಅಂಕಿತನಾಮವಿಲ್ಲ. ಈ ‘ಆತ’ ಯಾರು ಬೇಕಾದರೂ ಆಗಬಹುದು. ಆತ ಬದುಕುವ ಹೆಸರಿಲ್ಲದ ಊರು ಸಮಕಾಲೀನ ಭಾರತದ ಯಾವ ಊರು ಬೇಕಾದರೂ ಆಗಬಹುದು. Castle ನಾಯಕನಂತೆ ಈ ನಾಯಕನಿಗೂ ನೌಕರಿ ವಿಷಯದಲ್ಲಿ ತೊಡಕು. ಆತನಿಗೆ ನೇಮಕದ ಆಜ್ಞೆ ಇದ್ದರೂ ಆಗಿ ನೇಮಕಗೊಂಡಿರುವುದಾಗಿ ತಿಳಿಸಿದರೂ ಗ್ರಾಮದವರು survey ಕಾರ್ಯ ಮುಗಿದಿದೆ, ನಿನ್ನ ಸೇವೆಯ ಅಗತ್ಯ ಇಲ್ಲ ಎನ್ನುತ್ತಾರೆ. ಆದರೆ ಕಾಫ್ಕಾ ಕಾದಂಬರಿಗಳಿಗೆ ಕೊಡಬಹುದಾದ metaphysical interpretation ಇಲ್ಲಿ ಅಸಾಧ್ಯವೆನ್ನಿಸುತ್ತದೆ. ಗಿರಿಯವರ ಮೇಲೆ ಕಾಫ್ಕಾ ಪ್ರಭಾವ ಕುರಿತು -
“ಈ ಪ್ರಭಾವಕ್ಕೆ ಒಳಗಾದ ಮನಸ್ಸು ತನ್ನ ಪ್ರಜ್ಞೆಯಲ್ಲೇ ಅಂದರೆ ವಿಶಿಷ್ಟವಾದ ರೀತಿಯಲ್ಲೇ ಬೆಂಗಳೂರಿನಲ್ಲಿ ಮೈಸೂರಿನಲ್ಲಿ, ಜೋಗದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸದ್ಯದ ನಗರಗಳಿಗೆಲ್ಲ ಸಾಂಕೇತಿಕವಾದ ಹೆಸರಿಲ್ಲದ ನಗರದಲ್ಲಿ ಬದುಕಿ ಬೇಯದಿದ್ದರೆ ಈ ಕೃತಿ ಹುಟ್ಟುತ್ತಲೇ ಇರಲಿಲ್ಲ....... ಕಾಮು, ಕಾಫ್ಕಾ ಓದಿದವರಿಗೆ ತಮ್ಮ ಪರಿಚಿತವಾದ ವಿಚಾರವನ್ನು ಈ ಆವರಣದಲ್ಲಿ ಜೀವಂತಿಸಿಕೊಂಡ ಅನುಭವದ ಜೊತೆಗೆ ಗಿರಿಯ ವಿಶಿಷ್ಟ ಪ್ರಜ್ಞೆಯ ಮೂಲಕ ನಮ್ಮ ಸಮಕಾಲೀನತೆಯನ್ನು ಹೊಸದಾಗಿ ಕಂಡಂತೆಯೂ ಆಗುತ್ತದೆ." (ಸಾಕ್ಷಿ-೧೩)
ಅನಂತಮೂರ್ತಿಯವರ ಈ ಮಾತು ಸರಿ ಎನ್ನಿಸುತ್ತದೆ. ಮೊದಲಿನಿಂದಲೂ ನಾವು ಬಾಯಿಕಟ್ಟಿಕೊಂಡು ಬೆಳೆದವರು, ಅಭಿವ್ಯಕ್ತಿಯೇ ಇಲ್ಲದವರು. ನಮಗೆ ಹಿಂದಾದ ಅನೇಕ ಅನುಭವಗಳು ಕಾಫ್ಕಾ, ಸಾರ್ತ್ರ, ಕಾಮು, ಫ್ರಾಯ್ಡ್ ಓದಿದ ನಂತರ ಜಾಗೃತಿಗೊಂಡಿಲ್ಲವೆ? ಇವರುಗಳನ್ನು ಓದಿ ನಾವು ನಮ್ಮ ಅನುಭವಗಳನ್ನು ಗುರುತಿಸಿಕೊಂಡು, ಅರ್ಥೈಸಿಕೊಳ್ಳುವುದಿಲ್ಲವೇ? ನನಗೂ ಹೀಗೆ ಅನ್ನಿಸಿತ್ತು. ಇದೇ ಅನುಭವವಾಗಿತ್ತು ಎಂದು ಹೇಳಿಕೊಳ್ಳುವುದಿಲ್ಲವೆ?"
ಇನ್ನು ಭಾಷೆ: ಇಂದ್ರಿಯಗೋಚರವಾದುದನ್ನೆಲ್ಲ ಸಾಕ್ಷಿ ಚಿತ್ರದಂತೆ ನಮ್ಮ ಮುಂದಿಡುವ ಗಿರಿಯವರ ಭಾಷೆಗೆ ಎರಡು ಮುಖ, ವಸ್ತು, ಸ್ಥಿತಿ, ವ್ಯಕ್ತಿ, ಪರಿಸರ ಮತ್ತು ಅದರ ವರ್ಣನೆಗಳನ್ನು ಮುಂದಿಡುವ ಸಾಭಿನಯವಾಗಿ ತೋರಿಸುವ ರಂಜನೀಯ ಭಾಷೆ ಕಣ್ಣಿಗೆ ಕಟ್ಟುತ್ತದೆ.
ಇನ್ನೊಂದು ಸಮಕಾಲೀನ ನೋವು-ಆತಂಕಗಳ ಮಿಡುಕು ಉಂಟುಮಾಡುವ ಧ್ವನಿ. ಮುಖ್ಯವಾದದ್ದು, ಅಮುಖ್ಯವಾದದ್ದು, ನೋಡಬಹುದಾದ್ದು, ನೋಡಲಪೇಕ್ಷಣೀಯವಲ್ಲದ್ದು, ಎಲ್ಲವನ್ನೂ ಕ್ಲಿಕ್ ಎನ್ನಿಸುವ ಅವರ ಭಾಷೆ ಸಾಕ್ಷ್ಯ ಚಿತ್ರದಂತೆ ವಿವರಗಳ ಸುರುಳಿ ಬಿಚ್ಚುತ್ತದೆ. ಮೌಲ್ಯಗಳನ್ನು ತಲೆಕೆಳಗು ಮಾಡಿ ಆತನ ಮನಸ್ಥಿತಿಯ ನಿಜರೂಪವನ್ನು ತೋರಿಸುತ್ತದೆ. “ನೋವು, ಸಂಕಟ, ಆತಂಕಗಳು ಭಾಷೆಯಲ್ಲಿ ಹಾಗೆ ಮಡುಗಟ್ಟುತ್ತವೆ. ವಿವರಗಳಲ್ಲೇ ಸಮಕಾಲೀನ ನೋವು-ನಿರರ್ಥಕತೆಗಳನ್ನೂ significant ಸ್ಥಿತಿಯನ್ನೂ ಅರ್ಥೈಸುವ ರೀತಿ ಅದ್ಭುತ. ಎಲ್ಲ ವಿವರಗಳನ್ನು ಹೆಚ್ಚಿನ ಅರ್ಥಗಳಿಗೆ ಸಂಕೇತವಾಗಿಸುವ ಇಲ್ಲಿನ ಭಾಷೆ ನಮ್ಮ ಮುಖದಿಂದಲೇ ಹೊರಟಿದ್ದೇನೋ ಎನ್ನುವಷ್ಟು ಪರಿಚಿತವಾದದ್ದು. ಹೋಟೆಲಿನ ಕೋಣೆಯಲ್ಲಿ ಅಪರಿಚಿತ ಎಣ್ಣೆ ಬೇಡುವುದು, ಬೀಡ ಕಟ್ಟುವ ವ್ಯಕ್ತಿ, ಗುಮಾಸ್ತೆಯ ಪರದಾಟ, ರೈಲು ಪ್ರಯಾಣ, ಜೋಗ ಜಲಪಾತ ಇವುಗಳ ವರ್ಣನೆಗಳು ಕಣ್ಣ ಮುಂದೆ ಪ್ರತ್ಯಕ್ಷವಾದಷ್ಟು ರಮ್ಯವಾಗಿ ಅಭಿನಯಿಸುತ್ತವೆ. ಅಲ್ಲಲ್ಲಿ ಬೇಸರ ಬರಿಸುತ್ತದೆ. significant ಆಗಿ ಏನೂ ಇಲ್ಲ ಎನ್ನುವವರೂ ಗಿರಿ ಭಾಷೆಯಲ್ಲಿ ನಡೆಸಿರುವ ಈ ಕ್ರಿಯೆ ತಾರೀಫ್ ಮಾಡುವಂಥಾದ್ದು.
ಜನವರಿ, ೧೯೭೨
ಭಾನುವಾರ, ಅಕ್ಟೋಬರ್ 13, 2013
ಗಿರಿರಾಜರ ಜಟ್ಟ
ಗಿರಿರಾಜರ
ಜಟ್ಟ (ಕಿಶೋರ್) ಅರಣ್ಯ ಸಂರಕ್ಷಕ - ಗಾರ್ಡ್. ಕಾಡಿನ ಬಗ್ಗೆ ಅಪಾರ ಜ್ಞಾನ ಉಳ್ಳವನು. ಬುಡಕಟ್ಟಿನವನು. ಒರಟ. ಇವನ ಹೆಂಡತಿ ಕಾಡು ಸುತ್ತಲು ಬಂದಿದ್ದ ಬೆಂಗಳೂರು ಯುವಕನ ಜೊತೆಗೆ ಓಡಿ ಹೋಗಿರುತ್ತಾಳೆ. ಹಿಂದೂ ಸಂಸ್ಕೃತಿಯ ಸಂರಕ್ಷಕ ಎಂದು ಹೇಳಿಕೊಳ್ಳುವ ಒಬ್ಬ ಗುರುವಿನ (ಬಿ ಸುರೇಶ್) ಮೊರೆ ಹೋಗಿ - ಅವನ ಭೋಧನೆಗಳಿಗೆ ಬಲಿಯಾಗಿ ಜಟ್ಟ ಪಾಶ್ಚ್ಯಾತ್ಯ ಉಡುಗೆ ತೊಡುಗೆಗಳ ಬಗ್ಗೆ ಅಸಹ್ಯ ಬೆಳೆಸಿಕೊಳ್ಳುತ್ತಾನೆ. ಈ ಸಮಯದಲ್ಲೇ ಫೆಮಿನಿಶ್ಟ್ - ಅಂಬೇಡ್ಕರ್ ಅವರನ್ನು ಅಪಾರವಾಗಿ ಓದಿಕೊಂಡಿರುವ ಹುಡುಗಿ ಸಾಗರಿಕ (ಸುಕೃತ ವಾಗ್ಲೆ) ಕುಡಿದು- ಡ್ರಗ್ ಸೇವನೆ ಮಾಡಿ ಗಾಡಿ ಚಾಲನೆ ಮಾಡುವಾಗ ಆಕ್ಸಿಡೆಂಟ್ ಮಾಡಿಕೊಳ್ಳುತ್ತಾಳೆ. ಜಟ್ಟ ಅವಳನ್ನು ತನ್ನ ಸೆಕ್ಲೂಡೆಡ್ ಮನೆಯಲ್ಲಿ ಕಬ್ಬಿಣದ ಸರಪಳಿಯಿಂದ ಬಂಧಿಸಿ ಇಡುತ್ತಾನೆ. ಭೀಮ್ ಕುಮಾರ್ (ಪ್ರೇಮ್ ಕುಮಾರ್) ಅರಣ್ಯಾಧಿಕಾರಿ. ದಕ್ಷ. ಕಾಡಿನ ಬಗ್ಗೆ ಅಪಾರ ಪ್ರೀತಿ ಉಳ್ಳವನು. ಇನ್ನೊಬ್ಬ ಪೋಲೀಸ್ ಅಧಿಕಾರಿ ಹೇಳುವಂತೆ ಕಮ್ಯುನಿಸ್ಟ್. ಅವರೇ ಹೇಳಿಕೊಳ್ಳುವಂತೆ ಸಂವಿಧಾನವನ್ನು ಧರ್ಮಗ್ರಂಥವೆಂದು ನಂಬಿರುವವನು.
ಕಾಡು ವಿನಾಶ ಅದಕ್ಕೆ ಜಟ್ಟ ಮತ್ತು ಅವನ ಅರಣ್ಯಾಧಿಕಾರಿಯ ಹೋರಾಟ, ಸಾಗರಿಕ ಮತ್ತು ಜಟ್ಟನ ಮಧ್ಯೆ ಘರ್ಷಣೆ, ಸಾಗರಿಕಳ ನಾಪತ್ತೆಯು ಪಾರೆಶ್ಟ್ ಅಧಿಕಾರಿಯ ಕೆಲಸಕ್ಕೆ ಕುತ್ತು ತರುವುದು, ಭೀಮ್ ಕುಮಾರ್ ಜಟ್ಟನ ಕೆಲವನ್ನು ಪರ್ಮನೆಂಟ್ ಮಾಡಲು ಶ್ರಮಿಸುವುದು- ಆದರೆ ಜಟ್ಟ ತನ್ನ ಒರಟುತನದಿಂದ ಅದನ್ನು ಹಾಳು ಮಾಡಿಕೊಳ್ಳುವುದು, ಅದಕ್ಕೆ ಅವನ ಜಾತಿ ಅಡ್ಡಬರುವುದು, ಜಟ್ಟನ ಹೆಂಡತಿ ಹಿಂದಿರುಗಿ ಓಡಿ ಬರುವುದು ಹೀಗೆ ವಿಭಿನ್ನ ಸ್ತರಗಳಲ್ಲಿ ಚಲನಚಿತ್ರ ಹಲವು ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.
ಚಲಚಿತ್ರದ ಹಲವು ಹಂತಗಳಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಒಪ್ಪಿತ ಸಮಾಜದ "ಗಂಡಸ್ತನ"ದ್ದು. ಜಟ್ಟನ ಹೆಂಡತಿ ಓಡಿಹೋಗುವದಕ್ಕೆ ಜಟ್ಟ ಗಂಡಸೇ ಅಲ್ಲ ಎಂದು ಸಾಗರಿಕ ದೂರುವುದು. ಜಟ್ಟನ ಹೆಂಡತಿ ವಾಪಸ್ ಓಡಿ ಬಂದಾಗ, ಅವಳನ್ನು ಓಡಿಸಿಕೊಂಡು ಹೋದವನು ಗಂಡಸೇ ಅಲ್ಲ ಎನ್ನುವ ಪ್ರಶ್ನೆ. - ಗಂಡಸ್ತನಕ್ಕೂ, ಲೈಂಗಿಕತೆಗೂ, ಪ್ರೀತಿಗೂ ಅತಿಯಾದ ಸಂಬಂಧವಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಜಟ್ಟ ಮತ್ತು ಅರಣ್ಯಾಧಿಕಾರಿ ಭೀಮ್ ಕುಮಾರ್ ಅವರ ನಡುವಿನ ಅವ್ಯಕ್ತ ಪ್ರೇಮವನ್ನು ಹಿಡಿದಿಡುವ ಮೂಲಕ ನಿರ್ದೇಶಕರು ತೋರಿಸುತ್ತಾರೆ. ಭೀಮ್ ಕುಮಾರ್ ಅವರ ಹೆಂಡತಿ ಅವರನ್ನು ಬಿಟ್ಟು ಓಡಿ ಹೋಗಿರುವುದನ್ನು ಜಟ್ಟ ಅವರ ಫೋನ್ ಸಂಭಾಷಣೆಗಳಲ್ಲಿ ಗುರುತಿಸಿ ಇನ್ನೊಬ್ಬ ಅರಣ್ಯಾಧಿಕಾರಿಯಿಂದ ಆಗಾಗ ತಿಳಿದುಕೊಳ್ಳುತ್ತಿರುತ್ತಾನೆ. ಜಟ್ಟ ತನ್ನ ಅರಣ್ಯಾದಿಕಾರಿಗೋಸ್ಕರ ತನ್ನ ಒರಟುತನವನ್ನು ತ್ಯಜಿಸಲು, ಅರಣ್ಯಾಧಿಕಾರಿಕಾರಿ ಜಟ್ಟನ ಕೆಲಸ ಪರ್ಮನೆಂಟ್ ಮಾಡಲು ತನ್ನ ಪ್ರಮೊಷನ್ ತ್ಯಜಿಸಲು ಮುಂದಾಗುತ್ತಾರೆ. ಸಿನೆಮಾ ತಾನು ಹೇಳಲು ಬಯಸಿರುವ ವಿಷಯಕ್ಕೆ ಇಷ್ಟವಾದರೂ ಅದನ್ನು ಹೇಳುವ ರೀತಿಗೆ ವ್ಯತಿರಿಕ್ತವಾಗುತ್ತದೆ. ಅರಣ್ಯಾಧಿಕಾರಿ ಮತ್ತು ಜಟ್ಟನ ನಡುವಿನ ಪ್ರೇಮವನ್ನು ಅಷ್ಟು ಸಟಲ್ ಆಗಿ ಸೂಕ್ಷ್ಮವಾಗಿ ತೋರಿಸುವ ನಿರ್ದೇಶಕರು ಉಳಿದಲ್ಲಿ ಸಿಕ್ಕಾಪಟ್ಟೆ ಲೌಡ್ ಎನ್ನಿಸಿಬಿಡುತ್ತಾರೆ. ನಿರ್ದೇಶಕರು ಅನಗತ್ಯವಾಗಿ ಹತ್ತು ಹಲವು ವಿಷಯಗಳನ್ನು ತುರುಕಿ ಯಾವುದನ್ನೂ ತಾತ್ತ್ವಿಕವಾಗಿ ಗಹನ ಚರ್ಚೆಗೆ ಒಳಪಡಿಸದೆ Name-dropping ಮಾಡುತ್ತಾ ಹೋಗುತ್ತಾರೆ. ಎಲ್ಲ ರಾಜಕೀಯ ವಾದ-ನಿಲುವು-ಇಸಮ್ಗಳಿಗಿಂತ ಪ್ರೀತಿ ಮುಖ್ಯ ಎಂಬ ಆಷಯವೇನೋ ಒಳ್ಳೆಯದು,ಆದರೆ ಯಾವುದೆ ಒಂದು ರಾಜಕೀಯ ನಿಲುವು-ವಾದವನ್ನು ಸೋಲಿಸಬೇಕಾದರೆ, ಆ ವಾದವನ್ನೂ ಮತ್ತು ಅದರ ವಿರುದ್ಧ ವಾದವನ್ನೂ ಒಂದೇ Intellectual ಸ್ತರದಲ್ಲಿ ಕಟ್ಟಿಕೊಡಬೇಕೆ.(Judgment at Nuremberg ಸಿನೆಮಾವನ್ನು ನಾವು ಗಮನಿಸಬಹುದು. ಅಲ್ಲಿ ಪ್ಯಾಸಿಸಮ್ ಅನ್ನು ಪೋಷಿಸಿದ ಜಡ್ಗ್ಜಳಿಗೆ ಶಿಕ್ಷೆಯಾದರೂ ಅವರ ಪರವಾಗಿ ಕಟ್ಟಿಕೊಡುವ ವಾದವೂ ಅಷ್ಟೇ ಪ್ರಮುಖ). ಅರಣ್ಯಾಧಿಕಾರಿ ಬೆಂಗಳೂರು ಹುಡುಗನನ್ನು capitalist pig ಎಂದಾಕ್ಷಣವಾಗಲೀ, ಒಬ್ಬ ಪೋಲೀಸ್ ಅಧಿಕಾರಿ ಅರಣ್ಯಾಧಿಕಾರಿಗೆ ಕಮ್ಮ್ಯುನಿಸ್ಟ್ ಎಂದಾಕ್ಷಣ ಅವುಗಳ (ಅ)ಯೋಗ್ಯತೆ ಎಲ್ಲರಿಗೂ ತಿಳಿಯಬೇಕಿಲ್ಲ. ಪೆಮಿನಿಸ್ಟ್ ಪಾತ್ರವನ್ನೂ ಅಷ್ಟೇ ಕೆಟ್ಟ ರೀತಿಯಲ್ಲಿ ಚರ್ಚಿಸಿದ್ದಾರೆ. ಪೆಮಿನಿಸ್ಟ್ ಪಾತ್ರದಲ್ಲಿ ಅವಳು ಹೇಳುವ ಅಂಬೇಡ್ಕರ್ ಪಾಠ ಕೂಡ ಮುಸುಕಾಗಿದೆ. ಎಲ್ಲ ಕಾಡುಪ್ರಾಣಿಗಳಲ್ಲೂ ಹೆಣ್ಣು ಪ್ರಾಣಿಗಳಷ್ಟೇ ಭೇಟೆಯಾಡುವುದು ಎಂದು ಅವಳು ಕೊಡುವ ಬೋಧನೆ ಪ್ಯಾಕ್ಚುಯಲ್ ಆಗಿ ಎಷ್ಟು ತಪ್ಪಿದೆಯೋ, ಎಲ್ಲವನ್ನೂ ಒಂದೇ ಸಿನೆಮಾದಲ್ಲಿ ಚರ್ಚಿಸಬೇಕು ಎಂಬ ನಿರ್ದೇಶಕನ ಆತುರತೆಯನ್ನು ಕೂಡ ಎತ್ತಿ ತೋರಿಸುತ್ತದೆ. ಸಂಭಾಷಣೆಯನ್ನು ಅತಿಯಾಗಿಸುವುದು, ಕ್ರೌಯ್ರವನ್ನು ವೈಭವೀಕರಿಸುವುದು ಮತ್ತು ಆತುರವಾಗಿ, ಗಹನತೆಯಿಲ್ಲದ ವಿಷಯಗಳನ್ನು ತೋರಿಸುವ ಅಪಾಯವೆಂದರೆ ಜನರಿಗೆ ದಕ್ಕುವುದು ಬರೀ ಆ ಕ್ರೌರ್ಯ- ಆ ಭಾಷೆ - ಆ ಕಿರುಚಾಟ ಅಷ್ಟೇ ಹೊರತು ವಿಷಯವಲ್ಲ. ವಿಷಯಗಳನ್ನು ಒಡೆದು ಚರ್ಚಿಸಿ ಇನ್ನೂ ಸಿಂಪಲ್ ಮಾಡಿ (ಸಿಂಪಲ್ ಅಂದರೆ ದಡ್ಡತನ ಎಂದಲ್ಲ) ಒಂದೆರಡು issue ಗಳನ್ನು ಸಂಭಾಳಿಸಿ ಕ್ಲಾಸಿಕ್ ಎನ್ನಿಸಿಕೊಳ್ಳುವ ಸಿನಿಮಾ ಕೃತಿಯಾಗಬಲ್ಲದ್ದನ್ನು ಹಾಳು ಮಾಡಿರುವುದು ಆ ಆತುರತೆ ಮತ್ತು ಎಲ್ಲವನ್ನು ಚರ್ಚಿಸಿಬಿಡುತ್ತೇನೆಂಬ ತೀವ್ರತೆ. ತೀವ್ರ ಹಿಂದೂ ಮತೀಯವಾದಿ ಪಾತ್ರದಲ್ಲಿ ಬಿ ಸುರೇಶ್ ಸೋತಿದ್ದಾರೆ. ತಾವು ಸಶಕ್ತವಾಗಿ ಮಾಡಬೇಕಾಗಿದ್ದ ಪಾತ್ರವನ್ನೇ ಅವರು ಲೇವಡಿ ಮಾಡಿರುವಂತಿದೆ. ಅರಣ್ಯಾಧಿಕಾರಿಯ ಪಾತ್ರದಲ್ಲಿ ಪ್ರೇಮ್ ಕುಮಾರ್ ಮತ್ತು ಜಟ್ಟನ ಪಾತ್ರದಲ್ಲಿ ಕಿಶೋರ್ ಹೊರತುಪಡಿಸಿದರೆ, ಉಳಿದವರ ನಟನೆ ಅಷ್ಟಕ್ಕಷ್ಟೆ.. ಅತ್ಯುತ್ತಮ ಸಿನೆಮಾ ತಂತ್ರಜ್ಞ ಗಿರಿರಾಜ್, ಕಿರಣ್ ಅವರಿಂದ ಚಿತ್ರೀಕರಣವನ್ನಾಗಲೀ, ಆಶ್ಲೆ-ಅಭಿಲಾಷ್ ಅವರಿಂದ ಸಂಗೀತವನ್ನಾಗಲೀ ದುಡಿಸಿಕೊಂಡಿರುವ ರೀತಿ ಅನನ್ಯ. ಚಲನ ಚಿತ್ರದ ಕಥೆಗೆ ಪ್ರೇರಕವಾಗಿರುವ ಮಾದಿ ತಾಯಿಯ ಕಥೆಯನ್ನು, ಯಕ್ಷಗಾನ ರೂಪಕದ ಮೂಲಕವೋ-ಬಯಲಾಟದ ಮೂಲಕವೋ- ಹಾಡಿನ ಮೂಲಕವೋ ಹೇಳಿದ್ದರೆ ಪರಿಣಾಮಕಾರಿಯಾಗಿರುತ್ತಿತ್ತು.
ಇನ್ನುಳಿದಂತೆ, ಗಿರಿರಾಜ್ ಅವರ ಇತ್ತೀಚಿನ ಸಂದರ್ಶನಗಳನ್ನು ಗಮನಿಸಿದರೆ, ಅವರ ಮೇಲೆ ಶಿವರಾಮ ಕಾರಂತರ ಪ್ರಭಾವ ಬಹಳಷ್ಟಿದೆ. ಕಾರಂತರೂ ಕೂಡ ಯವುದೇ ಇಸಮ್ ಗೆ ಜೋತು ಬಿದ್ದವರಲ್ಲ. ತಾವು ಕಟ್ಟಾ ನಾಸ್ತಿಕರಾದರೂ, ನಾಸ್ತಿಕತೆ ಆಸ್ತಿಕತೆಗಿಂತ ಒಬ್ಬ ಹೇಗೆ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದು ಮುಖ್ಯ ಎನ್ನುತ್ತಿದ್ದವರು. ಇದರ ಪ್ರಭಾವ ಗಿರಿರಾಜರ ಈ ಸಿನೆಮಾದಲ್ಲಿ ಕಾಣಬಹುದು. ಹಾಗೆಯೇ ಮೂಕಜ್ಜಿಯ ಕನಸುಗಳು ಕಾದಂಬರಿ ಎಷ್ಟೇ ಪ್ರೋಗ್ರೆಸ್ಸಿವ್ ಆಗಿದ್ದರೂ, ಕೊನೆಗೆ ಸಲಿಂಗಕಾಮದ ವಿಷಯಕ್ಕೆ ಬಂದಾಗ ಕಾರಂತರ ಕಾದಂಬರಿ ಸಂಪ್ರದಾಯವನ್ನು ಮೀರುವುದಿಲ್ಲ. ಈ ಚಲನಚಿತ್ರದಲ್ಲೂ ಕೂಡ ಗಿರಿರಾಜರು ಕೂಡ ಈ ವಿಷಯದಲ್ಲಿ ಸಂಪ್ರದಾಯವನ್ನು ಮುರಿಯಲು ಹಿಂಜರಿದಿದ್ದಾರೆ. ಅರಣ್ಯಾಧಿಕಾರಿ ಭೀಮ್ ಕುಮಾರ್ ಮತ್ತು ಜಟ್ಟರ ನಡುವಿನ ಪ್ರೇಮವನ್ನು ಅವ್ಯಕ್ತವಾಗಿಯೇ ಉಳಿಸುತ್ತಾರೆ. ಅರಣ್ಯಾಧಿಕಾರಿಯ ಕುಟುಂಬವನ್ನು forcefully ಒಂದು ಮಾಡುತ್ತಾರೆ.
ಜಟ್ಟಯುವ ನಿರ್ದೇಶಕ ಗಿರಿರಾಜ್ ಅವರ ನಿರ್ದೇಶನ "ಜಟ್ಟ" ಚಲನಚಿತ್ರದಲ್ಲಿ, ನಿರ್ದೇಶಕರು ಹಲವು ರಾಜಕೀಯ ವಾದಗಳ-ಇಸಮ್ ಗಳ ಬಗೆಗೆ ಬೌದ್ಧಿಕ ಕಸರತ್ತು ನಡೆಸಿ, ಎಲ್ಲದಕ್ಕೂ ಮೀರಿದ್ದು ಪ್ರೀತಿ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಒಪ್ಪಿತ ಮತ್ತು ಬಹಿಷ್ಕೃತ ಸಂಸ್ಕೃತಿ-ಮೌಲ್ಯಗಳ ಘರ್ಷಣೆಯನ್ನೂ ಹಿಡಿಯಲು ಪ್ರಯತ್ನಿಸಿದ್ದಾರೆ.

ಶನಿವಾರ, ಜುಲೈ 27, 2013
The Ship of Theseus
Director Anand Gandhi has delivered a Classical stunner in his first feature length film. The Ship of Theseus attains its critical superiority, for its intricate way of binding the problems of Identity of various types like Religion, Belief, Lifestyle, Disability to the Social-Ethical problem of Organ donation using classic philosophical problem of “Ship of Theseus”.
[The Original philosophical problem being: As the story occurs in Plutarch's Lives (Life of Theseus), A Ship by which Theseus a Semi- Mythical Hero of ancient Athens who is said to have accomplished a rescue mission, was on public display in Athens. One day all the old parts of the ships are replaced-repaired by new ones. Is the new repaired ship still the same one? In Hobbe's De Corpore the question is extended as, If all the old parts discarded combined into a ship, Is the restored ship same as the original one? ]
But its superiority comes from the fact that even with its Intellectual juggling, art of film-making never takes a back seat, whether its Acting, Cinematography, or for that matter entertaining dialogues for those who least care for its philosophical inquiry. Even though the film has three stories embedded into it the seamless switching between the stories in something commendable.
The first story is that of a visually disabled photographer, who takes pictures by sensing sounds around her. She is aided by high technology computer-camera as well as by her Boy-friend, which helps her to edit and convert them into an art form. The acting, cinematography, sequences are so natural that unless one watches it, we are disabled to imagine [For the first time when i listened to the story, At least I thought it should be some emotional drama not worthwhile to watch]. Her imagination works to her ability to get good art form, which also sometimes get her into an argument with her Boy friend, who fights over things like Black&White Vs color, over superiority of pictures, nonetheless it keeps her contended. The whole course of her life changes when she is transplanted with new eyes. Tears rolls down automatically unintended. Crossing the roads now becomes difficult in contrast to her previous life when she could have easily crossed highway, with just following the sounds. Taking photographs is not giving her joy anymore. Those visuals in one of the frame in the cinema in which she stands crippled revolving in a circle, not able to take pictures, keeps haunting the viewer. Her boy-friend who used to argue for many things slowly starts giving-in on all the matters. The second story revolves around a Jain ascetic Maitreya, who is fighting a case against Pharmaceutical companies for using the animals for the testing of their medicine. He constitutes a plethora of identities: he is an atheist, an ascetic, animal rights activist. The core of the Jain philosophy is so beautifully captured in a Bhajan sung by Maitreya. He is personally contested by a young lawyer named Charvaka who likes to argue with Maitreya on all the philosophical matters. The ascetic is diagnosed with liver cirrhosis and needs a transplantation which involves taking drugs of the same companies which he is fighting and for the same reason he refuses the transplantation. Charvaka and many of his other friends try to convince him with many philosophical arguments to quote a simple one 'torturing one's body is as bad as torturing animals' . Finally he gives in. And whether he was convinced by those arguments or he gave in for the sake of life, over being an immortal after death is left to the viewer's discretion. Again the stunning visuals, philosophical-social contradictions in each frame makes viewers stick to their chairs without a wink. The third story is that of a stock broker from a revolutionist leftist family( with views contrasting those of his own) , who is obsessed with money, and is in a hospital for a kidney transplantation. Later he finds out that there is a big kidney racket and doubts that his transplanted kidney could be a stolen one from a labourer. He gets agitated. His next course of actions benefit the labourer to get an handsome amount. The scene in which the labourer compensated with the money acts very happy, could have been avoided. Probably the last story is much louder than first two and the first one is the best in which the silence speaks in most parts of the story.
The movie ends with all those who underwent transplants coming together,and they get know that all the organs were donated by the same person. Together they watch a cave exploration video, shot by the head of the NGO which had organized these transplants. Is the director trying to depict Plato's 'allegory of cave' problem makes students of philosophy pondering, and may be, it draws them to watch the movie again.

ಲೇಬಲ್ಗಳು:
Anand Gandhi,
Movie,
Review of The Ship of Theseus,
The Ship of Theseus
ಗುರುವಾರ, ಮಾರ್ಚ್ 14, 2013
ಗುರುವಾರ, ಮಾರ್ಚ್ 07, 2013
ಆಕೃತಿ ಅಂಗಳದಲ್ಲಿ ಶಿವರಾತ್ರಿಯಂದು ಪುಸ್ತಕಮನೆ ಪುರಾಣ
[Description]
ಆಕೃತಿ ಅಂಗಳದಲ್ಲಿ ಮಾರ್ಚ್ 10 2013, ಬೆಳಗ್ಗೆ 11 ಘಂಟೆಗೆ, ಹಿರಿಯ ಸಾಹಿತಿ, ಪತ್ರಕರ್ತ, ಪರ್ಯಾಯ ಸಂಸ್ಕೃತಿ ಚಿಂತಕ, ಪುಸ್ತಕ ಮನೆ ಖ್ಯಾತಿಯ ಶ್ರೀ ಹರಿಹರಪ್ರಿಯ ಅವರು "ಪುಸ್ತಕಮನೆ: ಸಮಾಜ, ಸರಕಾರ, ಮಾಧ್ಯಮ" ಕುರಿತಾಗಿ ಭಾಷಣ ಮಾಡಿ, ಸಂವಾದಕ್ಕೆ ತೆರೆದುಕೊಳ್ಳಲಿದ್ದಾರೆ.
ಯೋಗ್ಯ ಪುಸ್ತಕ ಸಂಗ್ರಹ ಎಂಬುದೇನು? ಅದರ ಅವಶ್ಯಕತೆ - ಉಪಯುಕ್ತತೆ? ಹಿಂದಿನ ಖ್ಯಾತ ಪುಸ್ತಕ ಸಂಗ್ರಹಕಾರರು; ಪುಸ್ತಕಮನೆ ಕಟ್ಟಿ ಬೆಳೆಸಲು ತಾವು ಪಟ್ಟ ಶ್ರಮ; ಅದು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿ, ಸಮಾಜ ಸೇವೆ; ಅದರ ಕಷ್ಟದ ದಿನಗಳು; ತಾವು ಐದು ವರ್ಷ ನಿರಂತರವಾಗಿ ನಡೆಸಿದ ಪುಸ್ತಕ ಪ್ರದರ್ಶನ; ಐದು ವರ್ಷ ತಾವೇ ಕಟ್ಟಿ ಬೆಳೆಸಿದ ಪುಸ್ತಕಮನೆ ಪತ್ರಿಕೆಯ ಶ್ರಮ - ಸಾರ್ಥಕ್ಯ; ಪುಸ್ತಕಮನೆಯಲ್ಲಿ ಸರಕಾರದ ಪಾತ್ರ; ತಮ್ಮ ನಿರೀಕ್ಷೆಗಳು; ಪುಸ್ತಕಮನೆಯ ಮುಂದಿನ ನೋಟ; ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಕೇಳುಗರ ಸಂವಾದಕ್ಕೆ ಮುಕ್ತವಾಗಿ ಭಾಗವಹಿಸಿ, ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
10 ಮಾರ್ಚ್ 2013, ಭಾನುವಾರ
ಬೆಳಗ್ಗೆ 11 ಕ್ಕೆ
ಸ್ಥಳ: ಆಕೃತಿ ಪುಸ್ತಕ ಮಳಿಗೆ
ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 10
ಗುರುತು: ಭಾಷ್ಯಂ ಸರ್ಕಲ್, ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9886694580
ಎಲ್ಲರಿಗೂ ಆದರದ ಸ್ವಾಗತ

ಪುಸ್ತಕಮನೆ ಹರಿಹರಪ್ರಿಯ : ಬಹುಮುಖ ಪ್ರತಿಭೆ ಹರಿಹರಪ್ರಿಯ ಅವರು ಬಾಲ್ಯದಲ್ಲೇ ಸಾಹಿತ್ಯ ಕೃಷಿಗೆ ಇಳಿದವರು. ಕನ್ನಡ ಮತ್ತು ತೆಲುಗು ಭಾಷಾ ಪ್ರವೀಣರಾದ ಹರಿಹರಪ್ರಿಯ ಅವರು ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಗುರುತಿಸಿಕೊಂಡವರು. ಇವರು ಸಂಪಾದನೆ ಮಾಡಿದ 'ಇವರು ಕುವೆಂಪು', 'ಕುವೆಂಪು ಪತ್ರಗಳು', 'ಕುವೆಂಪು ಒಲವು ನಿಲುವು' ಕನ್ನಡ ಸಾಹಿತ್ಯದ ಬಹುಮುಖ್ಯ ಕೃತಿಗಳು. ಪುಸ್ತಕ ಸಂಗ್ರಹದ ಗೀಳು ಹತ್ತಿಸಿಕೊಂಡ ಹರಿಹರಪ್ರಿಯ ಅವರು, ತಮ್ಮ ಸಂಗ್ರಹದಲ್ಲಿ ಕನ್ನಡ, ಇಂಗ್ಲಿಶ್, ತೆಲುಗು ಭಾಷೆಗಳ ಪುಸ್ತಕಗಳು ಮತ್ತು ಪತ್ರಿಕೆಗಳನ್ನೊಳಗೊಂಡು ಸುಮಾರು ಒಂದೂವರೆ ಲಕ್ಷಕ್ಕೂ ಮಿಗಿಲಾದ ಪುಸ್ತಕ - ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಇವರ ಗ್ರಂಥ ಭಂಡಾರ ಅತಿ ಪುರಾತನ, ಅಪರೂಪದ ಪುಸ್ತಕ - ಪತ್ರಿಕೆಗಳೂ ಅಲ್ಲದೆ, ಇತ್ತೀಚಿನ ಯುವ ಲೇಖಕರ ಪುಸ್ತಕಗಳನ್ನೂ ಒಳಗೊಂಡಿದೆ. ಅಲ್ಲದೆ ನಿರಂತರ ಐದು ವರ್ಷ ವಿವಿಧ ಸಾಹಿತಿಗಳ ಪುಸ್ತಕ ಪ್ರದರ್ಶನ ನಡೆಸಿ, ಸಾಹಿತ್ಯ ಪರಿಚಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐದು ವರ್ಷ ತಾವೇ ಸಂಪಾದಿಸಿ ಹೊರಡಿಸಿದ ಪುಸ್ತಕಮನೆ ಎಂಬ ಪತ್ರಿಕೆ ಕೂಡ ಕನ್ನಡದ ಸಾಹಿತ್ಯ ಲೋಕಕ್ಕೆ ಅತಿ ದೊಡ್ಡ ಕೊಡುಗೆ. ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಹರಿಹರಪ್ರಿಯ ಅವರು ಸಂಗೀತ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳ ಬಗ್ಗೆ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಪಂಗಡಗಳನ್ನು ಕಟ್ಟಿಕೊಂಡು ಹೊಗಳಿಕೊಳ್ಳುವುದನ್ನು ಒಪ್ಪದ ಹರಿಹರಪ್ರಿಯ ಅವರು, ವಿಮರ್ಶೆ-ಖಂಡನಾ ಶೈಲಿಯಲ್ಲಿ ಉಪನ್ಯಾಸಗಳನ್ನು ನೀಡಿ ಹರಿತ ಭಾಷಣಕಾರರೆಂದು ಗುರುತಿಸಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ ಬಹುಮಾನ, ವರ್ಧಮಾನ ಉದಯೋನ್ಮುಖ ಶ್ರೇಷ್ಠ ಸಾಹಿತಿ ಪ್ರಶ
ಸ್ತಿ, ಕಾವ್ಯಾನಂದ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಹರಿಹರಪ್ರಿಯ ನಿರಂತರ ಸಾಹಿತ್ಯಜೀವಿ. ಪುಸ್ತಕಮನೆ ಮತ್ತು ಹರಿಹರಪ್ರಿಯ ಕೇವಲ ಮನೆ ಮತ್ತು ವ್ಯಕ್ತಿಯಾಗಿ ಉಳಿಯದೆ, ಕನ್ನಡ ಸಾಹಿತ್ಯ ಲೋಕದ ಅನರ್ಘ್ಯಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
For those ONLY who cannot read Kannada:
Noted Writer, Thinker, Bibliophile Shri Harihara Priya will be interacting with the audience at Aakruti Books, Rajajinagar Bangalore on March 10th Sunday at 11 AM.
Hariharapriya will speak about importance of Book Collection, Important Bibliophiles till day, About the institution "pustaka mane" which he built over several years, about the book exhibition of various individual authors which he organized over several years, about the Magazine "pustakamane" which he edited and ran for Five years, about the contribution of Pustakmane to the culture and society, Government’s and Media's role in Pustakamane, His expectations and on the future of Puatskamane.
Pustakamane Hariharapriya: Multifaceted Hariharapriya started his literature career at an early age. Being an expert in both Kannada and Telugu Language, he has authored books in different Genre. The books edited by Hariharapriya "ivaru kuvempu", "kuvempu patragaLu", kuvempu olavu niluvu" are few of the notable woks of Kannada literature. A compulsive bibliophile, at present he has over 1.5 lakh Books and Magazines, in Kannada, Telugu and English Languages in his collection. This includes books of various genre, prints varying from rarest to the books of latest young writers. He edited and ran a magazine called "pustakamane" for 5 years and continuously exhibited the books of various authors for over 5 years to spread the literature and culture among the youth. A critic in Literature, Music and Art, he is a staunch opposite to group cultural politics and self praising-promotion among the groups and he is known for his fiery speeches. Recipient of Kannada Rajyotsava prashsti, Kempegowda prashasti, he has won numerous awards and Calling him one of the gem in Kannada culture and Literature is not an exaggeration.

ಪುಸ್ತಕಮನೆ ಹರಿಹರಪ್ರಿಯ : ಬಹುಮುಖ ಪ್ರತಿಭೆ ಹರಿಹರಪ್ರಿಯ ಅವರು ಬಾಲ್ಯದಲ್ಲೇ ಸಾಹಿತ್ಯ ಕೃಷಿಗೆ ಇಳಿದವರು. ಕನ್ನಡ ಮತ್ತು ತೆಲುಗು ಭಾಷಾ ಪ್ರವೀಣರಾದ ಹರಿಹರಪ್ರಿಯ ಅವರು ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಗುರುತಿಸಿಕೊಂಡವರು. ಇವರು ಸಂಪಾದನೆ ಮಾಡಿದ 'ಇವರು ಕುವೆಂಪು', 'ಕುವೆಂಪು ಪತ್ರಗಳು', 'ಕುವೆಂಪು ಒಲವು ನಿಲುವು' ಕನ್ನಡ ಸಾಹಿತ್ಯದ ಬಹುಮುಖ್ಯ ಕೃತಿಗಳು. ಪುಸ್ತಕ ಸಂಗ್ರಹದ ಗೀಳು ಹತ್ತಿಸಿಕೊಂಡ ಹರಿಹರಪ್ರಿಯ ಅವರು, ತಮ್ಮ ಸಂಗ್ರಹದಲ್ಲಿ ಕನ್ನಡ, ಇಂಗ್ಲಿಶ್, ತೆಲುಗು ಭಾಷೆಗಳ ಪುಸ್ತಕಗಳು ಮತ್ತು ಪತ್ರಿಕೆಗಳನ್ನೊಳಗೊಂಡು ಸುಮಾರು ಒಂದೂವರೆ ಲಕ್ಷಕ್ಕೂ ಮಿಗಿಲಾದ ಪುಸ್ತಕ - ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಇವರ ಗ್ರಂಥ ಭಂಡಾರ ಅತಿ ಪುರಾತನ, ಅಪರೂಪದ ಪುಸ್ತಕ - ಪತ್ರಿಕೆಗಳೂ ಅಲ್ಲದೆ, ಇತ್ತೀಚಿನ ಯುವ ಲೇಖಕರ ಪುಸ್ತಕಗಳನ್ನೂ ಒಳಗೊಂಡಿದೆ. ಅಲ್ಲದೆ ನಿರಂತರ ಐದು ವರ್ಷ ವಿವಿಧ ಸಾಹಿತಿಗಳ ಪುಸ್ತಕ ಪ್ರದರ್ಶನ ನಡೆಸಿ, ಸಾಹಿತ್ಯ ಪರಿಚಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐದು ವರ್ಷ ತಾವೇ ಸಂಪಾದಿಸಿ ಹೊರಡಿಸಿದ ಪುಸ್ತಕಮನೆ ಎಂಬ ಪತ್ರಿಕೆ ಕೂಡ ಕನ್ನಡದ ಸಾಹಿತ್ಯ ಲೋಕಕ್ಕೆ ಅತಿ ದೊಡ್ಡ ಕೊಡುಗೆ. ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಹರಿಹರಪ್ರಿಯ ಅವರು ಸಂಗೀತ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳ ಬಗ್ಗೆ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಪಂಗಡಗಳನ್ನು ಕಟ್ಟಿಕೊಂಡು ಹೊಗಳಿಕೊಳ್ಳುವುದನ್ನು ಒಪ್ಪದ ಹರಿಹರಪ್ರಿಯ ಅವರು, ವಿಮರ್ಶೆ-ಖಂಡನಾ ಶೈಲಿಯಲ್ಲಿ ಉಪನ್ಯಾಸಗಳನ್ನು ನೀಡಿ ಹರಿತ ಭಾಷಣಕಾರರೆಂದು ಗುರುತಿಸಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ ಬಹುಮಾನ, ವರ್ಧಮಾನ ಉದಯೋನ್ಮುಖ ಶ್ರೇಷ್ಠ ಸಾಹಿತಿ ಪ್ರಶ
ಸ್ತಿ, ಕಾವ್ಯಾನಂದ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಹರಿಹರಪ್ರಿಯ ನಿರಂತರ ಸಾಹಿತ್ಯಜೀವಿ. ಪುಸ್ತಕಮನೆ ಮತ್ತು ಹರಿಹರಪ್ರಿಯ ಕೇವಲ ಮನೆ ಮತ್ತು ವ್ಯಕ್ತಿಯಾಗಿ ಉಳಿಯದೆ, ಕನ್ನಡ ಸಾಹಿತ್ಯ ಲೋಕದ ಅನರ್ಘ್ಯಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಮಂಗಳವಾರ, ಡಿಸೆಂಬರ್ 04, 2012
ಶುಕ್ರವಾರ, ನವೆಂಬರ್ 30, 2012
ಸಿನೆಮಾ ನೋಡವ್ನು ಮ್ಯಾಲೆ ಕುಂತವ್ನೆ..
ಒರಾಯಾನ್ ಮಾಲ್ ನಲ್ಲಿ ೭೦ ರುಪಾಯಿ ಕೊಟ್ಟು ಡ್ರಾಮಾ ಸಿನೆಮಾ ನೋಡಿದೆ.. (ಇಲ್ಲಿ ಡ್ರಾಮಾ ಸಿನೆಮಾ ಹೆಸರು.. genre/ಪ್ರಾಕಾರ ಅಲ್ಲ).. ಗೆಳೆಯ ಒಬ್ಬ ಹೇಗಿದೆ ಹೇಗಿದೆ ಅಂತ ತುಂಬ ಕೇಳ್ದ.. ನನ್ನ ಪಕ್ಕ ಒಬ್ಬ ಕಾಲೇಜ್ ಹೈಕಳು ಕೂತಿದ್ದ. ಹೋಗ್ಬೇಕಾದ್ರೆ ಒಂದು ನೋಟ್ ಬುಕ್ ಬಿಟ್ಟೋದ.. ಅದ್ರಲ್ಲಿ ಡ್ರಾಮಾ ಫಿಲ್ಮ್ ಬಗ್ಗೆ ಬರೆದಿದ್ದ. ಅವನು ವಿವೇಕಾನಂದ ಕಾಲೇಜಿನ ೨ ನೇ ಪಿ ಯು ಸಿ ಹುಡ್ಗ ಅಂತೆ.. ಸಂತೋಷ ಅಂತ ಅವನ ಹೆಸ್ರಂತೆ... ನೋಟ್ ಬುಕ್ ಮೇಲೆ ಬರ್ದಿತ್ತು.. ಅವನು ಫಿಲ್ಮ್ ಬಗ್ಗೆ ಬರೆದಿದ್ದನ್ನ ನಾನು ಕಷ್ಟ ಪಟ್ಟು ಟೈಪ್ ಮಾಡಿ, ಇಲ್ಲಿ ಬರ್ದಿದ್ದೀನಿ.. ಚೆನ್ನಾಗಿದೆ ಅನ್ಸಿದ್ರೆ ಫಿಲ್ಮ್ ಚೆನ್ನಾಗಿದೆ.. ಇಲ್ಲಾ ಅನ್ಸಿದ್ರೆ ಇಲ್ಲ... ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ..
ನಾನು ಮೂರನೆ ಸಾರ್ತಿ ಈ ಪಿಕ್ಚರ್ ನೋಡ್ದೆ.. ಈ ಸಾರ್ತಿ ನನ್ನ ಗರ್ಲ ಫ್ರೆಂಡ್ ಜೊತೆ. ಅವನಕ್ಕ* ಯೇನ್ ಚಿಂದಿ ಮೂವಿ ಗುರು... ಬ್ರಿಲ್ಲಿಯಂಟ್... ಯೇನ್ ಕಾಮಿಡಿ ಮಗ.. ಯಶ್, ನೀನಾಸಮ್ ಸತೀಶ್ ಫುಲ್ಲ್ ಕಾಮಿಡೀ ಗುರು.. ಯೇನ್ ಕಲ, ಊಂಕಲ ಅಂತ ಮಾತಾಡ್ತಾ ಇದ್ರೆ ಫುಲ್ಲ್ ಕಾಮಿಡೀ ಗುರು. ನಮ್ಮುಡ್ಗಿ ನಕ್ಕಿದ್ದೇ ನಕ್ಕಿದ್ದು. ಮನುಶ್ಯರು ಅಂಗೂ ಮಾತಾಡ್ತಾರೆ ಅಂತಾನೆ ಗೊತ್ತಿರ್ಲೆ ಇಲ್ಲ... ಅದೇ ಕಾಮಿಡೀ ಗುರು.. ಮಾತೇ ಕಾಮಿಡೀ.. ಯೇನ್ ಕಾಮಿಡೀ ಸೀನ್ಸು ಗುರು, ನೀರಲ್ಲಿ ಕಾಚ ಹಿಡ್ಯೋದು, ಕಾಚ ಯೆಸ್ಯೋದು, ಕಿವಿಲ್ಲಿ ಗುಗ್ಗೆ ತೆಗ್ಯೋದು, ತಲೆ ಬೋಳ್ಸೋದು, ವಿಗ್ ತೆಗ್ಯೋದು, ನಿದ್ದೆ ಮಾಡೋವ್ನಿಗೆ ಹೆಣ ಮೇಕಪ್ ಮಾಡೋದು. ಎಶ್ಟು ಸಿನೆಮಾದಲ್ಲಿ ನೋಡಿದ್ರೂ ಕಾಮಿಡೀ ಕಾಮಿಡೀನೇ ಗುರು.. ಸಕತ್ ನಗು ನನ್ ಹುಡ್ಗೀಗೆ.. ಪಿಚ್ಚರ್ ಪೂರ್ತಿ ಎಲ್ಲಾರೂ ಮಾತಾಡ್ತಾನೇ ಇರ್ತಾರೆ ಗುರು.. ಸುಮ್ನೆ ಯಾವ್ದೋ ಲೈಪ್ ಆಪ್ ಪೈ ಅಂತೆ. ಹುಲಿ ಬರುತ್ತಂತೆ.. ದೇವ್ರಲ್ಲಿ ನಂಬ್ಕೆ ಬರೋ ಸಿನೆಮಾ ಅಂತೆ... ಸಮುದ್ರದ ಮಧ್ಯೆ ಸಿಕ್ಕಿ ಹಾಕ್ಕೊಳ್ತಾರಂತೆ..... ಒಳ್ಳೆ ಕಥೆ ಅಂತೆ....ಅದೂ ಒಂದು ಸಿನೆಮಾ ಅಂತೆ.. ನನ್ನ ಫ್ರೆಂಡ್ ಒಬ್ಬ ಬಾ ಅಂತ ಬಲವಂತ ಮಾಡ್ದ.. ಅವನ್ ಶಾ...
ಸೂಪರ್ ಆಕ್ಟಿಂಗ ಮಗ.. ಎಲ್ಲಾ ಮಾತಾಡ್ತಾರೆ ಮಗ... ಆದ್ರೆ ನೀನಾಸಮ್ ಸತೀಶ್ ಹೀರೋಇನ್ ಬಿಟ್ಟು.. ಅವಳ್ದು ಮೂಗಿ ಪಾರ್ಟು.. ಗೊತ್ತೇ ಆಗಲ್ಲ ಅವ್ಳು ಮೂಗಿ ಅಂತ.., ಸುಮ್ನೆ ಮಾತಾಡಕ್ಕೆ ಬರಲ್ಲ ಅನ್ನೋಂಗ್ ಆಕ್ಟ್ ಮಾಡು ಅಂದವ್ರೆ, ಅವ್ಳು ಒಂತರಾ ಮಾತಾಡ್ದಂಗೆ ಮಗ... ಸಕತ್ ಡೈಲಾಗ್ಸ್ ಶಿಸ್ಯ.. ಶಿಳ್ಳೆ ವಡ್ದು ವಡ್ದು, ಹೊಟ್ಟೆ ವಳ್ಗೆ ಗಾಳಿ ಎಲ್ಲಾ ಹೊರ್ಟೋಯ್ತು... ನೀನಾಸಂ ಸತೀಶ ಮಗ, ಎಲ್ಲಾ ಫಿಲ್ಮ್ ಒಂದೇ ತರ ಸಕತ್ತಾಗ್ ಮಾಡ್ತಾನ್ ಮಗ... ನಾನೂ ನೀನಾಸಂ ಅಂತ ನನ್ನ ಹೆಸ್ರುಗೆ ಸೇರ್ಸ್ಕಂಡ್ ಬಿಡ್ತೀನಿ...
ಸೂಪರ್ ಕಥೆ ಮಗ...ದುಬೈ ಮಾಫಿಯಾ ಐತೆ. ಒಂದು ಕೊಲೆ ಆಗುತ್ತೆ. ಲವ್ ಐತೆ. ಫೈಟ್ ಐತೆ.. ಯಾವನಿಗ್ ಬೇಕು ಮಗ ಕಥೆ... ಸಕತ್ ಕಾಮಿಡೀ ಇದೆ. ಸಕತ್ ಸೆಂಟಿಮೆಂಟ್ ಇದೆ.. ಸಕತ್ ಡೈಲಾಗ್ ಇದೆ. ಡೈಲಾಗ್ ಮಗ ಡೈಲಾಗ್...
ಫಿಲಾಸಫಿ ಮಗ.. ಯೋಗರಾಜ್ ಭಟ್ ಫಿಲ್ಮ್ ಅಂದ್ರೆ ಫಿಲಾಸಫಿ ಮಗ.. ಸಕತ್ ಫಿಲಾಸಫಿ.. ಪರಮಾತ್ಮದಲ್ಲೂ ಫಿಲಾಸಫಿ...ಪರಮಾತ್ಮ ಫಿಲಾಸಫಿ ಸಕತ್...ಈ ಪಿಚ್ಚರ್ ನಲ್ಲಿ ಬೊಂಬೆ ಆಡ್ಸೋ ಫಿಲಾಸಫಿ ಮಗ.. ಸಕತ್ ಈಸಿ ಫಿಲಾಸಫಿ... ಚಿಂದಿ.. ಸುಮ್ನೆ ನಮ್ಮ ಕನ್ನಡ ಮೇಷ್ಟ್ರು ಅದೇನೋ ಅದ್ವೈತ, ರಸೆಲ್, ಹೆಗೆಲ್ ಅಂತ ಬಡ್ಕಂಡ್ ಸಾಯ್ತಾನೆ. ಸುಮ್ನೆ ಬಂದು ಪಿಚರ್ ನೋಡಿದ್ರೆ ಎಲ್ಲಾ ಸಿಕ್ಕ್ಬಿಡುತ್ತೆ...
ಸಾಂಗ್ಸ ಮಗ.. ಯೇನ್ ಲಿರಿಕ್ಸ್ ಮಗ.. ಚಿಂದಿ.. ಯೋಗ್ ರಾಜ್ ಭಟ್ ಹಳೇ ಫಿಲ್ಮ್ಸ್ ಎಲ್ಲಾ ನೆನಪಿಗೆ ಬರ್ತಾವೆ... ರಂಗಾಯಣ ರಘು ಬಂದಂಗೆ ಆಯ್ತದೆ ಮಗ... "ಸಂಡೆ ಆದ್ಮೇಲೆ ಮಂಡೆ ಬರ್ತದೆ... 10th ಆದ್ಮೇಲೆ ಪಿ ಯು ಬರ್ತದೆ"... ಸಿಂಪ್ಲಿ ಸೂಪರ್ಬ್.. ಸಕತ್ ಮೀನಿಂಗ್...ಇನ್ನೊಂದ್ ಸಾಂಗ್ "ಒಮ್ಮೆಮ್ಮೆ ಯೋಚಿಸಿದೆ.. ಯಾತಕ್ಕೆ ನಾನಾದೆ ಎದೆಯಲ್ಲಿ ಕುರ್ಚಿಯನ್ನು ಕೆತ್ತುವಾ ಬಡಗಿ.. ಇಬ್ಬನಿಯು ಸುಡುತಿಹುದು ತಂಗಾಳಿ .... ಚಂದ್ರಂಗೆ ಮುಂಬತ್ತಿ ಕೊಟ್ಟಿರ್ಲಾ....ಸೌಂಡಾದ್ರು ಬರಲಿ..." ಇಂಗೆಲ್ಲಾ ಯೇನೇನೋ ಬರ್ತದೆ ಮಗ....ಯೇನ್ ಮೆಲಡಿ ಗುರು.. ಸೆಕ್ಸಿ ಸಾಂಗ್... ಯೇನ್ ಸಕತ್ ಮೀನಿಂಗ್ ..ಅರ್ಥಾನೆ ಆಗಲ್ಲ.. ಸುಮ್ನೆ ನಮ್ಮ ಕನ್ನಡ ಮೇಷ್ಟ್ರು ಇಂತ ಸಾಂಗ್ಸ್ ಹೇಳಿ ಕೊಡ್ಬೇಕು.. ಕೆಲ್ಸಕ್ಕೆ ಬರ್ದ ಪದ್ಯ ಹೇಳ್ಕೊಟ್ಟು ಸಾಯ್ತಾನೆ....
ಹ್ಯಾಂಡ್ ಫೈಟ್, ಲೆಗ್ ಫೈಟ್, ಗನ್ ಫೈಟ್ ಎಲ್ಲಾ ಸೂಪರ್ ಗುರು.. ಅವನಮ್ಮ* ಚಿಂದಿ ಚಿತ್ರಾನ್ನ.. ಮ್ಯಾಟ್ರಿಕ್ಸ್, ಮಿಶಿನ್ ಇಂಪಾಸಿಬಲ್ ಎಲ್ಲಾ ವೇಷ್ಟ್ ಗುರು. ಯೋಗರಾಜ್ ಭಟ ಫುಲ್ ಇಂಪ್ರೂವ್ ಮೆಂಟ್ ಗುರು!
ಯೇನ್ ಕೈಮ್ಯಾಕ್ಸ್ ಮಗ... ಅಪ್ಪ ಅವನ ಮಗ್ಳು ಪ್ರೀತ್ಸಿದ್ ಹುಡ್ಗನ್ ಜೊತೆ ಸುಕ್ವಾಗಿರ್ಲಿ ಅಂತ ಮಾನವ ಬಾಂಬ್ ಇಟ್ಕಂಡು ಬ್ಲಾಸ್ಟ್ ಮಾಡಿ, ವಿಲ್ಲನ್ಸ್ ಎಲ್ಲಾರ್ನೂ ಸಾಯಿಸ್ಬಿಡ್ತಾನೆ... ಸೂಪರ್ ಮಗ ಸೂಪರ್... ನನ್ನ ಗರ್ಲ್ ಪ್ರೆಂಡ್ ಅಪ್ಪಾನೂ ಇದಾನೆ... ಸಾಯ್ತಾನೆ, ನನ್ನ ಜೊತೆ ಫಿಲ್ಮ್ ಗೆ ಕಳ್ಸೋಕ್ಕೆ...
ಆದ್ರೂ ರಾಧಿಕಾ ಪಂಡಿತ್ ಇನ್ನೂ ಚೆನ್ನಾಗ್ ಮಾಡ್ಬೋದಿತ್ತು... ಲೊಕೇಶನ್ಸ್ ಇನ್ನೂ ಒಳ್ಳೇದ್ ಇರ್ಬೋದಿತ್ತು...
ಯೇನೇ ಆದ್ರು ಯೋಗರಾಜ್ ಭಟ್ ಸೂಪರ್, ಚಿಂದಿ ಮಗ... ಅವೊತ್ತು ಯಾವನೊ ಗಡ್ಡ ಬಿಟ್ಕಂಡು ಫಿಲ್ಮ್ ಗೆ ಬೈತಾ ಇದ್ದ.. ಅವನಕ್ಕ* ಸುಮ್ನೆ ನೇಣ್ ಹಾಕ್ಬೇಕ್ ಅವನ್ಗೆ!ಯೋಗರಾಜ್ ಭಟ್ಟೇ ಸಿನೆಮಾ ಮಗ!
ಶುಕ್ರವಾರ, ಡಿಸೆಂಬರ್ 30, 2011
ಅಂಚೆ ಅಂಟು ಪರದೆ ನಂಟು - ಪುಸ್ತಕ ಬಿಡುಗಡೆ

ಆಕೃತಿ ಪುಸ್ತಕ - ರಾಜಾಜಿನಗರ
www.akrutibooks.com
ಶಂಖನಾದ ಖ್ಯಾತಿಯ ಉಮೇಶ್ ಕುಲಕರ್ಣಿ ಅವರ
"ಅಂಚೆ ಅಂಟು ಪರದೆ ನಂಟು"
ಚಲನಚಿತ್ರರಂಗದ ಪಿತಾಮಹನಿಂದ ಅಣ್ಣನವರೆಗೆ
ಪುಸ್ತಕ ಲೋಕಾರ್ಪಣೆ
31-12-2011 ಶನಿವಾರ
ಬೆಳಗ್ಗೆ ೧೧ ಘಂಟೆಗೆ
ಪ್ರೆಸ್ ಕ್ಲಬ್ ಸಭಾಂಗಣ
ಕಬ್ಬನ್ ಪಾರ್ಕ್
ಬೆಂಗಳೂರು
ಅಂದು ನಮ್ಮೊಂದಿಗೆ
ಅಧ್ಯಕ್ಷತೆ ಮತ್ತು ಪುಸ್ತಕ ಬಿಡುಗಡೆ:
ಶ್ರೀ ವಿ. ಕೆ. ಮೂರ್ತಿ
ಖ್ಯಾತ ಸಿನಿ ಛಾಯಾಗ್ರಾಹಕ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ
ಮುಖ್ಯ ಅಥಿತಿ:
ಡಾ| ಸಂಗೋರಾಮ್
ಅಧ್ಯಕ್ಷರು,
ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘ
ಜೊತೆಗೆ
ವಿಶೇಷ ಆಹ್ವಾನಿತರಿಂದ ನಾಲ್ಕು ಮಾತು
ಎಲ್ಲರಿಗೂ ಆದರದ ಸ್ವಾಗತ
To buy this book...visit...
http://bit.ly/se67q2
ಪತ್ರಿಕಾ ಪ್ರಕಟಣೆ:
ಪುಸ್ತಕ ಲೋಕಾರ್ಪಣೆ
ಸಮಯ : 11 ಘಂಟೆಗೆ, ದಿನಾಂಕ : 31/12/2011 ಶನಿವಾರ, ಸ್ಥಳ : ಪ್ರೆಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್,ಬೆಂಗಳೂರು
ಆಕೃತಿ ಪುಸ್ತಕ, ರಾಜಾಜಿನಗರ, ಬೆಂಗಳೂರು ಪ್ರಕಟಿಸಿರುವ, ಶಂಖನಾದ ಚಲನಚಿತ್ರ ಖ್ಯಾತಿಯ ಶ್ರಿ ಉಮೇಶ್ ಕುಲಕರ್ಣಿ ಬರೆದಿರುವ ಪುಸ್ತಕ "ಅಂಚೆ ಅಂಟು ಪರದೆನಂಟು - ಚಲನಚಿತ್ರದ ಪಿತಾಮಹನಿಂದ ಅಣ್ಣನವರೆಗೆ" ಕೃತಿಯನ್ನು ದಿನಾಂಕ 31/12/2011 ಶನಿವಾರ, ಬೆಳಗ್ಗೆ ೧೧ ಘಂಟೆಗೆ, ಪ್ರೆಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್,ಬೆಂಗಳೂರು ಇಲ್ಲಿ ಲೋಕಾರ್ಪಣೆಯಾಗಲಿದೆ. ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಖ್ಯಾತ ಸಿನಿ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರು ಅಧ್ಯಕ್ಷತೆ ವಹಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಡಾ| ಸಂಗೋರಾಮ್, ಅಧ್ಯಕ್ಷರು, ಕರ್ನಾಟಕ ಅಂಚೆ ಚೀಟಿ ಸಂಗ್ರಹಗಾರರ ಸಂಘ, ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಲ್ಲರಿಗೂ ಆದರದ ಸ್ವಾಗತ
ಲೇಖಕರ ಬಗ್ಗೆ
ಬಹುಮುಖ ಪ್ರತಿಭೆಯ, ಪುಸ್ತಕದ ಲೇಖಕ ಶ್ರೀ ಉಮೇಶ್ ಕುಲಕರ್ಣಿ ಜನಿಸಿದ್ದು 1949 ರಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು 1972 ರಲ್ಲಿ ಪುಣೆ "ಫಿಲ್ಮ್ ಅಂಡ್ ಟಿ ವಿ ಇನ್ಸ್ಟಿಟ್ಯೂಟ್" ನ ಸಂಕಲನ ವಿಭಾಗದಲ್ಲಿ ಡಿಪ್ಲೊಮೋ ಪದವಿ ಪಡೆದರು. ಶ್ರೀಯುತರು ಬಹಳಷ್ಟು ಕನ್ನಡ ಚಲನ ಚಿತ್ರಗಳಿಗೆ ಮುಖ್ಯ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿ ’ಘಟಷ್ರಾದ್ಧ’ ಚಲಚಿತ್ರಕ್ಕೂ ಮುಖ್ಯ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ತಾವೇ ಸ್ವತಃ ಮೂರು ಚಲನಚಿತ್ರಗಳನ್ನು (ಶಂಖನಾದ,ಉತ್ತರ ಭೂಪ, ಗಂಡುಗೂಳಿಗಳು) ನಿರ್ದೇಶಿಸಿದ್ದು, ಶಂಖನಾದ ಚಿತ್ರಕ್ಕೆ 1986 ರಲ್ಲಿ ರಾಷ್ಟ್ರ ಮಟ್ಟದ "ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ" ಪ್ರಶಸ್ತಿ ದೊರೆತಿದೆ. ಲೇಖಕರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಮಾರು 10 ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ, ಸಂಕಲಿಸಿದ್ದಾರೆ. ಸ್ವತಃ ಕಥೆಗಾರರೂ ಆಗಿರುವ ಉಮೇಶ್ ಕುಲಕರ್ಣಿ ಅವರ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿ, ಬಹುಮಾನಗಳನ್ನು ಪಡೆದಿವೆ. ಲೇಖಕರು, ಚಲನಚಿತ್ರ ನಿರ್ದೇಶಕ ಎನ್ ಲಕ್ಷ್ಮಿನಾರಯಣ ಅವರ ಚರಿತ್ರೆಯನ್ನು ನಿರೂಪಿಸಿದ ಪುಸ್ತಕ ಪ್ರಕಟಗೊಂಡು ಓದುಗರ ಮತ್ತು ವಿಮರ್ಶಕರ ಮನ್ನಣೆ ಪಡೆದಿದೆ. ಚಲಚಿತ್ರದಷ್ಟೇ, ಅಂಚೆ ಚೀಟಿ ಸಂಗ್ರಹ ಲೇಖಕರ ಬಹು ಒಲವಿನ ಹವ್ಯಾಸ.
ಪುಸ್ತಕದ ಬಗ್ಗೆ
ಒಂದು ದೇಶವನ್ನು ಸಮಗ್ರವಾಗಿ ಅರಿಯಬೇಕಾದರೆ, ಆ ದೇಶದ ಅಂಚೆ ಚೀಟಿಗಳನ್ನು ಅಧ್ಯಯನ ಮಾಡಿದರೆ ಸಾಕಂತೆ! ಭಾರತದಲ್ಲಿ ಚಲನಚಿತ್ರಗಳು ಆರಂಭವಾಗಿದ್ದು ಅಂಚೆ ಚೀಟಿ ಜನ್ಮ ತಳೆದ 60 ವರ್ಷಗಳ ನಂತರವೇ ಆದರೂ, ಕಳೆದ ನೂರು ವರ್ಷಗಳಲ್ಲಿ ಚಲಚಿತ್ರರಂಗ ಬೃಹತ್ ಆಗಿ ಬೆಳೆದಿದೆ. ಚಲನಚಿತ್ರ ಮತ್ತು ಚಲನಚಿತ್ರರಂಗಕ್ಕೆ ನಂಟಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು 80 ಅಂಚೆ ಚೀಟಿಗಳು ಬಿಡುಗಡೆಯಾಗಿವೆ. ಅದರಲ್ಲಿ ಚಲಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯದ್ದೂ ಒಂದು ಮತ್ತು ಕನ್ನಡ ಚಿತ್ರರಂಗದ ಅಣ್ಣ ಎಂದೇ ಖ್ಯಾತಿ ಪಡೆದ ಡಾ| ರಾಜಕುಮಾರ್ ಅವರದ್ದೂ ಒಂದು. ಚಲನಚಿತ್ರ ಪಿತಾಮಹನಿಂದ ಅಣ್ಣನವರೆಗೆ ಎಂಬ ಅಡಿಬರಹವಿದ್ದರೂ, "ಅಂಚೆ ಅಂಟು ಪರದೆ ನಂಟು" ಪುಸ್ತಕದಲ್ಲಿ ಸಿನೆಮಾಗೆ ಸಂಬಂಧಿಸಿದ 64 ವ್ಯಕ್ತಿಗಳ ಹಾಗೂ 5 ಸಂಸ್ಥೆಗಳ ವಿಹಂಗಮ ದೃಶ್ಯದ ದರ್ಶನವನ್ನು ಉಣ ಬಡಿಸಿದ್ದಾರೆ ಲೇಖಕ ಉಮೇಶ್ ಕುಲಕರ್ಣಿ ಅವರು. ಅಂಚೆ ಚೀಟಿಗಳನ್ನು ಕೇಂದ್ರದಲ್ಲಿಟ್ಟು ಚಲನಚಿತ್ರರಂಗದ ಮತ್ತು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸಿದ ಮಹನೀಯರ ಇತಿಹಾಸವನ್ನು ನಿರೂಪಿಸಿರುವ ಈ ಪುಸ್ತಕ ಭಾರತೀಯ ಚಲನಚಿತ್ರ ರಂಗದಲ್ಲಿ ಮತ್ತು ಪುಸ್ತಕ ಪ್ರಪಂಚದಲ್ಲೇ ವಿಶಿಷ್ಟವಾದ ಹಾಗೂ ಚೊಚ್ಚಲ ಪ್ರಯತ್ನವೇ ಎನ್ನಬಹುದು! ಪುಸ್ತಕಕ್ಕೆ ಅಂತರ್ ರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಮುನ್ನುಡಿ ಇದೆ.
ಸೋಮವಾರ, ಸೆಪ್ಟೆಂಬರ್ 26, 2011
ಆಕೃತಿಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರ ಜೊತೆ ಸಂವಾದ ಮತ್ತು ಸನ್ಮಾನ

ಆಕೃತಿ ಪುಸ್ತಕ ರಾಜಾಜಿನಗರ
ಈ-ಕವಿ ಕ್ಯಾಲಿಫೋರ್ನಿಯಾ
ಪ್ರಸ್ತುತ ಪಡಿಸುವ
"ಹೇಳತೇನೆ ಕೇಳ"
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರ ಜೊತೆ ಸಂವಾದ ಮತ್ತು ಸನ್ಮಾನ
ಸಂವಾದದಲ್ಲಿ:
ಶ್ರೀ ಜಿ ಬಿ ಹರೀಶ್
ಶ್ರೀ ಎಂ ಎಸ್ ಮೂರ್ತಿ
27/09/2011 ಮಂಗಳವಾರ
ಸಂಜೆ 6 ರಿಂದ 7:30
ಸ್ಥಳ: ಆಕೃತಿ ಪುಸ್ತಕ ಮಳಿಗೆ
ನಂ 31/1, 12ನೇ ಮುಖ್ಯರಸ್ತೆ
3ನೇ ಬ್ಲಾಕ್, ರಾಜಾಜಿನಗರ
ಬೆಂಗಳೂರು-೫೬೦೦೧೦
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹತ್ತಿರ
ವಿವರಗಳಿಗಾಗಿ: 9886694580
ಎಲ್ಲರಿಗೂ ಆದರದ ಸ್ವಾಗತ
ಸೋಮವಾರ, ಆಗಸ್ಟ್ 29, 2011
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ
ಆಕೃತಿ ಪುಸ್ತಕ ರಾಜಾಜಿನಗರ
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ
ಮತ್ತು
ಮೂರು ಪುಸ್ತಕಗಳ ಲೋಕಾರ್ಪಣೆ
೧. ಜನಾರಣ್ಯ (ಕಾದಂಬರಿ) - ಶಂಕರ್, (ಕನ್ನಡಕ್ಕೆ) ಗೀತಾ ವಿಜಯಕುಮಾರ್
೨. ಒಡಲಾಳದ ತಳಮಳ (ಸಣ್ಣ ಕಥೆಗಳು) - ಕೇಶವ ಕುಡ್ಲ
೩. ಮರದ ಮರ್ಮರ (ಮಕ್ಕಳ ನಾಟಕ) - ನಾರಾಯಣ ಕಂಗಿಲೆ
ಅಂದು ನಮ್ಮೊಂದಿಗೆ,
1. ಡಿ ಕೆ ಚೌಟ (ಖ್ಯಾತ ನಾಟಕಕಾರರು)
2. ಚಂದ್ರಶೇಖರ ಕಂಬಾರ (ಖ್ಯಾತ ಸಾಹಿತಿಗಳು)
3. ಸಾ ಶಿ ಮರಳಯ್ಯ (ಖ್ಯಾತ ಸಾಹಿತಿಗಳು)
4. ಪ್ರೇಮಾ ಭಟ್ (ಖ್ಯಾತ ಕಥೆಗಾರ್ತಿ)
ಎಂದು?
ಸೆಪ್ಟಂಬರ್ 4 , ಬೆಳಗ್ಗೆ 10:30 ಕ್ಕೆ
ಎಲ್ಲಿ?
ನಯನ ಸಭಾಂಗಣ
ಕನ್ನಡ ಭವನ
ಜೆ ಸಿ ರಸ್ತೆ

ಶನಿವಾರ, ಜೂನ್ 25, 2011
ಭೂಮಿಗುದುರಿತೆ ಜೀವ ಮತ್ತು ಇತರ ಪ್ರಶ್ನೆಗಳು - ಲೋಕಾರ್ಪಣೆ

ಮತ್ತೊಮ್ಮೆ, ಕೊನೆಯದಾಗಿ ಪ್ರೀತಿಯ ಆಗ್ರಹ, ಆಹ್ವಾನ.. ಪುಸ್ತಕ ಬಿಡುಗಡೆಗೆ ಬನ್ನಿ...
ಭೂಮಿಯ ಮೇಲೆ ಜೀವಬೀಜ ಬಿತ್ತನೆ ಹೇಗಾಯಿತು ಎಂಬ ಕೌತುಕದ ಭೂಮಿಗುದುರಿತೇ ಜೀವ? ಪ್ರಶ್ನೆಯಿಂದ ಇಲ್ಲಿನ ಲೇಖನ ಮಾಲೆ ಆರಂಭವಾಗುತ್ತದೆ. ಬೇರಾವುದೋ ಲೋಕದಿಂದ ಸೂಕ್ಷ್ಮಜೀವಿಗಳು ಬಂದು ಸೌರವ್ಯೂಹದ ಎಲ್ಲ ಗ್ರಹಗಳಿಗೆ ಜೀವಸಿಂಚನ ಮಾಡಿದವು (ಕೆಲವು ತಜ್ಞರ ಪ್ರಕಾರ ಈಗಲೂ ಮಾಡುತ್ತಿವೆ) ಎಂಬ ವಾದವನ್ನು ಒಪ್ಪಿಕೊಂಡರೆ ನಮ್ಮ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ಅವು ಬದುಕಿ ವಿಕಾಸವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ನಮ್ಮಲ್ಲಿ ಏಳುತ್ತದೆ. ಅದಕ್ಕೆ ಉತ್ತರ ರೂಪವಾಗಿ ಕೊನೆಯ ಲೇಖನವಿದೆ. ಜೀವಲೋಕದ ಈ ಆದಿ-ಅಂತ್ಯಗಳ ನಡುವೆ ಅರಿವಿನ ವಿರಾಟ್ ಜಗತ್ತನ್ನು ತೋರಿಸುವ ಇತರ ೨೫ ಆಸಕ್ತಿದಾಯಕ ಲೇಖನಗಳ ಸರಮಾಲೆ ಈ ಸಂಕಲದಲ್ಲಿದೆ. ಕೊನೆಗೊಂದು ವಿಶಿಷ್ಟ ಹಿನ್ನುಡಿಯೂ ಇದೆ. ಇಲ್ಲಿಂದ ಆರಂಭಿಸಿ ಅಲ್ಲಿಯವರೆಗೂ ಕ್ರಮಿಸಿ, ಅರಿವಿನ ಹೊಸಹೊಸ ಮಜಲುಗಳನ್ನು ಮುಟ್ಟಿ ಬರುವ ಅವಕಾಶ ಕನ್ನಡ ಓದುಗರಿಗಿದೆ.
---- ನಾಗೇಶ ಹೆಗಡೆ (ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು ಪುಸ್ತಕ ಮುನ್ನುಡಿಯಿಂದ)
ಸೋಮವಾರ, ಜೂನ್ 20, 2011
"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ

ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ
ಅಧ್ಯಕ್ಷತೆ : ಶ್ರೀ ನಾಗೇಶ ಹೆಗಡೆ
ಕೃತಿ- ಕರ್ತೃ ಪರಿಚಯ : ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ
ಕೃತಿ ಲೋಕಾರ್ಪಣೆ : ಶ್ರೀ ಟಿ ಆರ್ ಅನಂತರಾಮು
ಪೆನ್ ಸರ್ಕಲ್ ಗೌರವಾರ್ಪಣೆ
ಪ್ರೊ ಜೆ ಆರ್ ಲಕ್ಷ್ಮಣರಾವ್
ಪ್ರೊ ಅಡ್ಯನಡ್ಕ ಕೃಷ್ಣಭಟ್
ಶ್ರೀ ಆರ್ ಎಸ್ ರಾಜಾರಾಮ್
(ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ ಲಿ ಪರವಾಗಿ)
ಸನ್ಮಾನಿತರ ಪರಿಚಯ
ಶ್ರೀಮತಿ ಸುಮಂಗಲ ಮುಮ್ಮಿಗಟ್ಟಿ
ಕಾರ್ಯಕ್ರಮ ನಿರ್ವಹಣೆ
ಶ್ರೀ ಟಿ ಜಿ ಶ್ರೀನಿಧಿ
ನಿಮ್ಮ ನೆಜ್ಜಿನ ವಿಜ್ಞಾನ ಲೇಖಕರನ್ನೆಲ್ಲಾ ಒಟ್ಟಿಗೆ ಕಾಣಲು ಸದವಕಾಶ..
ನಾಲ್ಕು ವರೆಗೆ ಲಘು ಉಪಾಹಾರ ಇದೆ..
ದಯವಿಟ್ಟು ಜೊತೆಗೂಡಿ..
ನಯನ ಸಭಾಂಗಣ,
ಕನ್ನಡ ಭವನ,
ಜೆ ಸಿ ರಸ್ತೆ,
ಬೆಂಗಳೂರು - ೧,
ರವೀಂದ್ರ ಕಲಾಕ್ಷೇತ್ರದ ಪಕ್ಕ
ಸಂಜೆ ೫ ಕ್ಕೆ
ಮಂಗಳವಾರ, ಏಪ್ರಿಲ್ 19, 2011
ಬೆಂಗಳೂರು ಕರಗ ೨೦೧೧ ನೋಡಿದ್ದು

ಹಿನ್ನಲೆ!
ಬೆಂಗಳೂರು ಕರಗ ನೋಡಬೇಕೆನ್ನಿಸಿದ ಆಸೆಯ ಹಿಂದಿನ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ವಿಷಯಕ್ಕೆ ಬಂದುಬಿಡುತ್ತೇನೆ. ಒಮ್ಮೆ ಎಸ್ ಪಿ ರೋಡಿನಲ್ಲಿರುವ ಒಬ್ಬ ಸಿ ಡಿ ವಿತರಕನ ವಿಳಾಸ ಕೇಳಿದಾಗ ಅವ ಒಂದೇ ಮಾತಿನಲ್ಲಿ, ಧರ್ಮರಾಯನ ದೇವಸ್ಥಾನದ ಹಿಂಭಾಗ ಎಂದಿದ್ದ! ನಾನು ಆಶ್ಚರ್ಯದಿಂದ ಕೇಳಿದ್ದೆ, ಏನು ಸ್ವಾಮಿ ನಮ್ಮಲ್ಲಿ ಧರ್ಮರಾಯನಿಗೂ ದೇವಸ್ಥಾನವುಂಟೇ? ಅವ ತಿರುಗಿ ಪ್ರಶ್ನಿಸಿದ್ದ, ಎಷ್ಟು ವರ್ಷದಿಂದ ಬೆಂಗಳೂರಿನಲ್ಲಿದ್ದೀರೀ? ಯಾಕ್ರಿ.. ಬೇಕಾದಷ್ಟು ವರ್ಷದಿಂದ ಇಲ್ಲೇ ಇದ್ದೀನಿ.. ಬೆಂಗಳೂರು ಕರಗ ಅಂತ ಒಂದು ನಡೆಯುತ್ತೇ ಗೊತ್ತಾ ಅಂದ.. ಓ ಗೊತ್ತು ಅಂದಿದ್ದೆ. ಕರಗ ಶುರು ಆಗೋದೇ, ಧರ್ಮರಾಯನ ದೇವಸ್ಥಾನದಿಂದ ಗುರು.. ಕರಗ ಅಂತ ಹೊತ್ತುಕೊಳ್ಳೋದು ದ್ರೌಪದಿಯನ್ನೇ ಅಂದಿದ್ದ! ಓ! ಎಂದು ಉದ್ಗಾರ ತೆಗೆದು.. ಈ ಬಾರಿ ಹೇಗಾದರೂ ಕರಗವನ್ನು, ನಡೆಯುವ ಸ್ಥಳದಲ್ಲೇ ಕಣ್ಣಾರೆ ನೋಡೇ ಬಿಡಬೇಕು ಎಂದುಕೊಂಡಿದ್ದವನಿಗೆ ಇಂದು ದಿನಪತ್ರಿಕೆಯಲ್ಲಿ ಕರಗ ನಡೆಯುವ ಸುದ್ದಿ ತಿಳಿದು ಗೆಳೆಯನ್ನು ಬಲವಂತಿಸಿ ಎಳೆದೊಯ್ದೆ!
ಯಡ್ಡಿ ಬೆದರಿದ್ದು!
ಕರಗ ಪ್ರಾರಂಭವಾಗುವ ಸಮಯ ತಿಳಿಯದ ನಾವು ೧೦: ೩೦ ಕ್ಕೇ ಧರ್ಮರಾಯನ ದೇವಸ್ಥಾನದ ಹತ್ತಿರ ತಲುಪಿದಾಗ ಒಡೆಯರ್ ವಂಶಸ್ಥದ ಶ್ರೀಕಂಠದತ್ತ ಒಡೆಯರ್ ದೊಡ್ಡದಾದ ಒಂದು ಕಾರಿನಲ್ಲಿ ಹಿಂತಿರುತ್ತಿದ್ದರು. ಕರಗ ನೋಡಲು ಹೋಗಬೇಕೆಂಬುದರ ಹಿನ್ನಲೆಯಲ್ಲಿ ಇನ್ನೊಂದು ಗುಪ್ತ ಆಸೆಯೂ ಇತ್ತು. ಅದು ಇಂದು ಕರಗಕ್ಕೆ ಯಡೆಯೂರಪ್ಪನವರು ಚಾಲನೆ ನೀಡುತ್ತಾರೆಂಬ ಸುದ್ದಿ. ಕರಗ ಹೊರುವವನ ಮೈಮೇಲೆ ದೇವರು ಬರುವುದೆಂದು ಕೇಳಿದ್ದೇನೆ. ಕರಗ ಹೊರುವವನು ಇದನ್ನು ರಾಜ್ಯದ ಅನುಕೂಲಕ್ಕೆ ಬಳಸಿ ಯಡ್ಡಿಯವರಿಗೆ ಒಮ್ಮೆ ಗುಮ್ಮಿ, ಎಲ್ಲಾ ಜಮೀನು ವಾಪಸು ಕೊಡು, ರಾಜಿನಾಮೆ ಕೊಡು, ಇಲ್ಲಾ ಅಂದ್ರೆ ನಾನು ಸುಮ್ನೆ ಇರಲ್ಲಾ! ಎಂಬ ದೇವಿಯ ಸುವಾರ್ತೆಯನ್ನು ಹೇಳುವವನೋ ಎಂಬ ಒಂದು ಸಣ್ಣ ಆಸೆ ಕೂಡ! ಹಾಗೇನೂ ಆಗಲಿಲ್ಲ. ಕನಿಷ್ಟ ರಥಕ್ಕೆ ಎಸೆಯುವ ಬಾಳೆಯ ಹಣ್ಣಗಳು ಯಡ್ಡಿಯವರ ಕಡೆ ತಿರುಗುವವೋ ಏನೋ ಎಂಬ ಒಂದು ಸಣ್ಣ ಸಂಶಯ ಕೂಡ ಇತ್ತು! ಇಂತಹ ಕೆಲವು ಪ್ರಯತ್ನಗಳು ನಡೆದವಾದರೂ ರಥಕ್ಕೆ ಬಿದ್ದ ಬಾಳೆಹಣ್ಣುಗಳ ಸಂಖ್ಯೆಗೆ ಹೋಲಿಸಿದರೆ, ಯಡ್ಡಿ ಕಡೆ ತಿರುಗಿದ ಬಾಳೆಹಣ್ಣುಗಳು ಕಡಿಮೆಯೇ. ಯಡ್ಡಿ ದೇವಸ್ಥಾನಕ್ಕೆ ಬಂದಾಗ ಪ್ರಸನ್ನಚಿತ್ತರಾಗಿ ಕಂಡರಾದರೂ, ಕರಗದ ಸುತ್ತಾ ಖಡ್ಗ ಹಿಡಿಯುವ ಯುವಕರನ್ನು ನೋಡಿ ಸ್ವಲ್ಪ ಬೆದರಿದಂತೆ ಕಂಡು ಬಂದರು. (ಎಲ್ಲಿ ಬಂದರೂ ನನ್ನ ವಿರುದ್ಧ ಕತ್ತಿ ಮಸೆಯುವವರೇ ಎನ್ನಿಸಿರಬೇಕು!)

ಅವರವರ ಭಕುತಿಗೆ! ಅವರವರ ಭಾವಕ್ಕೆ!
ಏನು ಜನ ಅಂತೀರಾ? ಅಬ್ಬಬ್ಬಾ.. ಆದರೂ ಟೀ ಮಾಡುವವ ಈ ಸಾರ್ತಿ ಜನಾನೆ ಇಲ್ಲಾ ಸಾರ್. ಇನ್ನೂ ಇನ್ನೂರೇ ಟೀ ಖರ್ಚಾಗಿರೋದು ಅನ್ನೋದೆ! ಇರಲಿ. ನನಗಂತೂ ಕರಗವನ್ನು ಆದಷ್ಟೂ ಹತ್ತಿರದಿಂದಲೇ ನೋಡಬೇಕೆಂದು ಹೋದವನಿಗೆ, ಇಕ್ಕಟ್ಟಿನಲ್ಲಿ ಜಜ್ಜಿ ಹೋಗಿದ್ದೆ. ಬೆರೆತ ಬೆವರಿನ ವಾಸನೆ, ಕೆಲವರ ವ್ಯಯಕ್ತಿಕ ಪರಮಾತ್ಮನ ವಾಸನೆಯಲ್ಲಿ ತೇರಿನ ಮೇಲೆ, ಕರಗದ ಮೇಲೆ ಎಸೆಯುತ್ತಿದ್ದ ಮಲ್ಲಿಗೆ ವಾಸನೆ ಎಲ್ಲಿ ಬೀರಬೇಕು? ಯಾರೋ ಒಬ್ಬ.. "maccha we go upstairs Daa.. we should not miss the part when god resists come out of the temple Daa.." ಎಂದದ್ದು ನನಗೆ ಕೇಳಿಸಿ, ಹೀಗೂ ಉಂಟೆ ಎನ್ನಿಸಿತು! ಧರ್ಮದೇವರಯನ ದೇವಸ್ಥಾನದ ಎದುರಿಗಿದ್ದ ಅಂಗಡಿಯವನಿಗೆ ವ್ಯವಹಾರವೇ ದೇವರು, ಅದೇ ಪೂಜೆ. ರಾತ್ರಿಯೆಲ್ಲಾ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ. ಅಂಗಡಿಯಲ್ಲಿ ವ್ಯಾಪಾರ ಮಾಡುವಾಗ, ಅಂಗಡಿ ಮುಂದೆ ಬಂದು ಯಾರಾದರೂ ನಿಂತರೆ, ಅವರಿಗೆ ನಿರಂತರ ಮಂತ್ರಗಳ ಸುರಿಮಳೆ. ಯಾರೋ ಭಲಿಷ್ಟ ಭಕ್ತಾದಿಗಳು ಬಂದು ಅಂಗಡಿ ಮುಂದೆ ನಿಂತಾಗ, ಮಂತ್ರಗಳು ಅಪ್ಪ, ಅಣ್ಣ, ಜಾತಿ ಎಲ್ಲವನ್ನೂ ಆರಾಧಿಸುವಂತಹವು! ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಅದು ಹೇಗೋ ನಿಂತು ಹೋಯಿತು! ಯಾರೋ ಒಬ್ಬ, ಒಬ್ಬಳು ಹೆಂಗಸನ್ನು ದೂಡಿ ಹೋದಾಗ, ಆ ಹೆಂಗಸಿಂದ ’ಲೋಫರ್ ಕಚಡ ನಿನಗೆ ಅಕ್ಕ ತಂಗಿ ಯಾರೂ ಇಲ್ಲವೇನೋ’ ಎಂಬ ಬೈಗುಳ! ಯಾರೋ ಒಬ್ಬ, ಕತ್ತಿ ಹಿಡಿದ ಅರೆಬೆತ್ತಲೆ ಭಕ್ತಾದಿಯನ್ನು ದೂಡಿದ ಎಂದು, ಅವ ಇನ್ಯಾರೋ ಒಬ್ಬನಿಗೆ ಪಟ ಪಟ ಭಾರಿಸಿಯೇಬಿಟ್ಟ. ಇದೇ ಅವಕಾಶವನ್ನು ಬಳಸಿಕೊಂಡ ಕತ್ತಿ ಹಿಡಿದ ಇತರೆ ಅರೆಬೆತ್ತಲೆ ಯುವಕರು, ಸಾಮಾನ್ಯ ಧಿರಿಸಿನಲ್ಲಿದ್ದ ಬೇರೆ ಭಕ್ತಾದಿಗಳನ್ನೆಲ್ಲಾ ಭಲಿಷ್ಟವಾಗಿ ಅತ್ತಿತ್ತ ದೂಡಿ ಹಾಕಿ ತಮ್ಮ ತಾಕತ್ತನ್ನು, ದರ್ಪವನ್ನೂ ತೋರಿಸಿದ್ದೂ ಕೂಡ ವಿಷೇಷ. ಬಹುಷಃ, ಕರಗ ಹೊತ್ತವನ ಹಿಂದೆ ಇಂತಹ ಭಲಿಷ್ಟ, ಧಾಂಡಿಗ ಭಕ್ತಾದಿಗಳೇ ಬೇಕೇನೋ! ಇನ್ನೂ ಅಲ್ಲೇ ಪಕ್ಕದಲ್ಲಿದ್ದ ಪಡ್ಡೆ ಹುಡುಗರ ಗುಂಪೊಂದು, ಯಡ್ಡಿ, ಶೋಭಕ್ಕನಿಗೂ ಜೈಕಾರ ಹಾಕಿದ್ದೇ! ಅಲ್ಲೇ ಇದ್ದ ಪೋಲೀಸ್ ಹೆಂಗಸಿನ ಧಿರಿಸಿನ ಮೇಲೂ ಕಮೆಂಟಗಳ ಸುರಿಮಳೆ! ಕರಗ ದೇವಾಲಯದಿಂದ ಹೊರಬಿದ್ದಾಗ ಪಟಾಕಿಗಳೂ ಸುಟ್ಟವು. ಒಂದೆರಡು ಪಾರಿವಳಗಳು ಘಂಟೆಯ ಶಬ್ದಕ್ಕೇನೋ, ಬೆಳಗಾಯಿತೇನೋ ಎಂದು ಬೆದರಿ ಮೇಲೆ ಹಾರಿ ಹೋದವು. ಅವಗಳೂ ಪ್ರಸಾದ ಉದುರಿಸಿದವೇನೋ! ಕರಗ ಹೊತ್ತ ಮನುಷ್ಯ ಮಲ್ಲಿಗೆ ಹೂವಿನ ಅಲಂಕಾರದ ಮುಡಿಯಲ್ಲಿ ನೃತ್ಯ ಮಾಡುತ್ತಾ ಅತ್ತಿತ್ತ ಸುಳಿದಾಡುತ್ತಿದ್ದ! ಕೆಲವರು ಗೋವಿಂದಾ ಗೋವಿಂದಾ ಎನ್ನುತ್ತಿದ್ದರು. ಒಬ್ಬಾತ ತನ್ನ ಮೊಬೈಲ್ ಫೋನ್ ಬೀಳಿಸಿ, ಲೇ ಯಾರ್ಗಾದ್ರು ಮೊಬೈಲ್ ಫೋನ್ ಸಿಕ್ಕಿದ್ರೆ ಕೊಡ್ರೋ! ಸಾಕು ನೀವು ಕಿರಚಾಡಿದ್ದು ಎನ್ನುತ್ತಿದ್ದ. ಒಬ್ಬ ತನಗೆ ೧೧ ಘಂಟೆಯಿಂದ ನಿಂತು ನಿಂತು ಸಾಕಾಯಿತು. ತಲೆ ಸುತ್ತುತ್ತಿದೆ ಎಂದು ಕೂತ! ಇದಕ್ಕೂ ಮುನ್ನ ಹೆಚ್ಚು ಮನರಂಜನೆ ಕೊಟ್ಟಿದ್ದು, ರಥ ಹೊರಟಾಗ ಬಾಳೆಹಣ್ಣು ಎಸೆಯುವ ಆಟ. ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಎಸೆದಾಡಿ, ಕೊನೆಗೂ ಬೇಸತ್ತು ರಥಕ್ಕೆ ಎಸೆಯುವುದು. ರಥದಲ್ಲಿ ಕುಳಿತ ಮಕ್ಕಳು ಬಾಳೆ ಹಣ್ಣಿನ ಎಸೆತವನ್ನು ತಪ್ಪಿಸಿಕೊಳ್ಳುವುದು. ನಾವು ಇವಗಳನ್ನು ತಪ್ಪಿಸಿಕೊಳ್ಳಲೇಬಾರದು! ಮತ್ತೊಬ್ಬ ಹೆಂಗಸು ಅಲ್ಲಿ ಆರ್ಭಟಿಸುತ್ತಿದ್ದಳು. ಕಮಿಟಿ ಅಂತ ಮಾಡಿದ ಮೇಲೇ ನಮ್ಮ ಜನಕ್ಕಾದರೂ ಕರಗ ನೋಡಲು ಒಳ್ಳೇ ಸೌಕರ್ಯ ಕೊಡಬೇಕೆ. ಎಲ್ಲಾ ಜನಾನು ಒಂದೇ ತರ ಆಗ್ಬಿಟ್ರೆ! ಅಬ್ಬಾ ಫೋನಗಳಲ್ಲಿ ಕ್ಯಾಮರಾ ಯಾಕೆ ಎನ್ನುವವರು, ಅದರ ಉಪಯುಕ್ತತೆ ಕಾಣಲು ಕರಗಕ್ಕೆ ಬರಲೇಬೇಕು! ಏನೋ ನನಗೆ ಕಂಡದ್ದಿಷ್ಟು. ಆದರೆ ಲಯ ವಾದ್ಯಗಳು ಇಲ್ಲದೇ ಇದ್ದದ್ದು ಸ್ವಲ್ಪ ಬೇಸರವಾಯಿತು! ತಮಟೆಯ ಶಬ್ದಕ್ಕೆ ಮಾರುಹೋಗುವುದರಿಂದಲೇ ನಾನು ಈ ಜಾತ್ರೆಗಳನ್ನು ಹೆಚ್ಚು ಇಷ್ಟಪಡುವುದು! ನಾವು ಯಾತಕ್ಕಾಗಿ ಹೋಗುತ್ತೇವೋ ಅಷ್ಟೇ ನಮಗೆ ದಕ್ಕುವುದೇನೋ! ಆದರೂ ಬಹಳಷ್ಟು ಮನರಂಜನೆ ಇತ್ತು. ಸಾಕಷ್ಟು ಖುಷಿ ಪಟ್ಟೆ. ನನಗೂ ತುಸು ಹೆಚ್ಚು ಭಕ್ತಿಯಿದ್ದರೆ, ಅಲ್ಲೆಲ್ಲಾದರೂ ಒಂಚೂರು ಭಕ್ತಿ ಕಾಣಿಸುತ್ತಿತ್ತೇನೋ!
ಶನಿವಾರ, ಫೆಬ್ರವರಿ 26, 2011
ವರಕವಿ ಬೇಂದ್ರೆಯವರ ನಾಕುತಂತಿ ಕವನ - ಉಪನ್ಯಾಸ
ಗೆಳೆಯರೆ,
ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದ
ವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ
ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆ
ದಿನ: 27/ 02/ 2011 ಭಾನುವಾರ
ಸಮಯ: 10:30 ರಿಂದ 12:30
ವಿಳಾಸ : ಆಕೃತಿ ಪುಸ್ತಕ ಮಳಿಗೆ
ನಂ: 31/1, 12 ನೇ ಮುಖ್ಯರಸ್ತೆ,
3 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560010
ಹತ್ತಿರದ ಗುರುತು: ಇ ಎಸ್ ಐ ಆಸ್ಪತ್ರೆ ಹತ್ತಿರ
ದಾರಿ ತಪ್ಪಿದರೆ ಕರೆ ಮಾಡಿ: 9886694580
ಬನ್ನಿ ಭಾಗವಹಿಸಿ..ಚರ್ಚಿಸಿ... ನಿಮ್ಮ ಗೆಳೆಯರನ್ನೂ ಕರೆತನ್ನಿ...

ಶುಕ್ರವಾರ, ಫೆಬ್ರವರಿ 04, 2011
ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಂಚಿಕೆಯಲ್ಲಿ ಅಕ್ರಮ
೨ಜಿ ತರಂಗಾಂರಗಳ ಹಂಚಿಕೆಯಲ್ಲಿ ಅಕ್ರಮ, ಕರ್ನಾಟಕದ ಮುಖ್ಯಮಂತ್ರಿ, ಮಂತ್ರಿಗಳ ಭೂಹಗರಣಗಳಷ್ಟು ಈ ಹಗರಣ ದೊಡ್ಡದಲ್ಲದಿದ್ದರೂ, ರಾಜಕಾರಣಿಗಳನ್ನು ತಿದ್ದಬೇಕಾಗಿರುವ ಈ ಅಕ್ಷರಲೋಕದ ಕೆಲವು ಗಣ್ಯರ ನೈತಿಕ ದೀವಾಳಿತನವನ್ನು ತೋರಿಸುತ್ತದೆ.,
ವಿಷಯ ಇಂತಿಷ್ಟು. ಬೆಂಗಳೂರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಟಕ್ಕೆ ಪುಸ್ತಕ ಮಾರಾಟಗಾರರಿಗೆ ಆಹ್ವಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಒಬ್ಬರಿಗೇ ಒಂದೇ ಮಳಿಗೆ ಎಂದು ಪ್ರಕಟಿಸಲಾಗಿತ್ತು. ನಾನು ಮಳಿಗೆಗೆ ೨೦೦೦/- ದುಡ್ಡನ್ನು ನೀಡಿ ಹೆಚ್ಚುವರಿ ಒಂದು ಮಳಿಗೆ ಬೇಡಿಕೆಯಿತ್ತಾಗಲೂ ಅವರು ಹೊಡೆಸಿದ್ದ ನಿಯಮಗಳ ಸುತ್ತೋಲೆಯನ್ನು ನೀಡಿ ಹೆಚ್ಚುವರಿ ಮಳಿಗೆಯನ್ನು ನಿರಾಕರಿಸಿದ್ದರು.
ಇಂದು ಸಮ್ಮೇಳನದ ಜಾಗಕ್ಕೆ ತಲುಪಿದಾಗ ಅಲ್ಲಿನ ಚಿತ್ರಣವೇ ಬೇರೆ.
೧) ೨ ಮಳಿಗೆ, ಮೂರು ಮಳಿಗೆ, ಆರು ಮಳಿಗೆ ತೆರೆದಿದ್ದಾರೆ, ಕೆಲವು ಪುಸ್ತಕ ಮಾರಾಟಗಾರರು/ಪ್ರಕಾಶಕರು!
೨) ಈ ಒಂದಕ್ಕಿಂದ ಹೆಚ್ಚಿರುವ ಎಲ್ಲಾ ಮಳಿಗೆಗಳು ಮೂಲೆಯಿಂದಲೇ ಪ್ರಾರಂಭವಾಗುತ್ತವೆ!
ಸಾರ್ವಜನಿಕರು ಆಸ್ಥೆಯಿಂದ ನೋಡುತ್ತಿರುವ ಸಮ್ಮೇಳನದ ಒಂದು ಪ್ರಮುಖ ಅಂಗವಾದ ಪುಸ್ತಕ ಪ್ರದರ್ಶನವನ್ನು ಪಾರದರ್ಶಕವಾಗಿ ಅಯೋಜಿಸುವುದು ಅಷ್ಟೋಂದು ಕಷ್ಟವೇ? ದೊಡ್ಡ ಮಟ್ಟದಲ್ಲಿ ಬೆಳೆದಿರುವ ಪ್ರಕಾಶಕರ/ ಪುಸ್ತಕ ಮಾರಾಟಗಾರರ ಸ್ವತ್ತೇ ಈಗ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ?

ಶುಕ್ರವಾರ, ಅಕ್ಟೋಬರ್ 29, 2010
’ನುಡಿ’ದರೆ...
ಇಂದು ಬೆಳಗ್ಗೆ ಅಳ್ವಾಸ್ ’ನುಡಿಸಿರಿ’ಗ ಇಂದು ಬೆಳಗ್ಗೆ ಕರ್ನಾಟಕದ ವಿವಿಧ ಕಲಾವಿದರ ತಂಡದಿಂದ ಲಯ ವಾದ್ಯಗಳ ಮೇಳಗಳ ಪ್ರದರ್ಶನದೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. ಲಯ ವಾದ್ಯಗಳ ಪ್ರದರ್ಶನ ಅದ್ಭುತವಾಗಿತ್ತು. ಕೇಳಲು, ನೋಡಲು ಆನಂದ. ವೈದೇಹಿಯವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ, ವೇದಿಕೆಗೆ ಕರೆತರುವುದನ್ನೂ ನೋಡುವುದೇ ಚಂದ. ಈ ಉನ್ಮಾದದಲ್ಲಿ ನೆನ್ನೆಯ ಕಹಿಯನ್ನು ಮರೆತಿದ್ದೆ.

ನಂತರದ ಘಟನೆಗಳು ಮತ್ತೆ ಮನಸ್ಸಿಗೆ ಬೇಸರವನ್ನು ತಂದವು. ನೆನ್ನೆಯ ಬ್ಲಾಗ್‌ನಲ್ಲಿ ಹೆಸರಿಸಿದ ವ್ಯಕ್ತಿಗೆ ವಿಷಯ ತಿಳಿದು ನಮ್ಮ ಮಳಿಗೆಗೆ ಬಂದು ಕಿರುಚಾಡಲು ಪ್ರಾರಂಬಿಸಿದ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರಿಂದ ನಾನೂ ಆ ಶಬ್ದಗಳನ್ನು ಅವರಿಗೆ ತಿರುಗಿಸಬೇಕಾಯಿತು! ನೀವು ಕೃತಘ್ನರು. ಮುಂದಿನ ವರ್ಷದಿಂದ ಬರಲೇಬೇಡಿ. ಊಟ ಹಾಕ್ತೀವಿ! ನಿಮಗೆ ವಸತಿ ಕೊಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಬ್ಲಾಗ್‌ನಲ್ಲಿ ಬರೆದಿದ್ದೀರಿ, ___________ (ಅವಾಚ್ಯ ಶಬ್ದಗಳು)..
ಸ್ವಲ್ಪ ಸಮಯದ ನಂತರ ಕೆಲ ಸಹೃದಯ ಗೆಳೆಯರು, ಈ ತಪ್ಪಿನ ವಿರುದ್ಧ ಧ್ವನಿ ಎತ್ತಿದ್ದರಿಂದ ಕಿರುಚಾಡಿದ ವ್ಯಕ್ತಿ ಮತ್ತು ಸಂಘಟನೆಯ ಕೆಲ ಸದಸ್ಯರೂ ಬಂದು ನನ್ನ ಕ್ಷಮೆ ಕೇಳಿದರು. ಆದ್ದರಿಂದ ಈ ಸಮಸ್ಯೆಯನ್ನು ಬೆಳಸದೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ. ಆದರೆ ಕೆಲವು ಸ್ಪಷ್ಟೀಕರಣಗಳೊಂದಿಗೆ!
ನಾನು ಅವರ ವಸತಿಯನ್ನೂ ನಿರಾಕರಿಸಿದ್ದೇನೆ. ಅವರ ಊಟವನ್ನೂ ಕೂಡ. ನಾವು ಕೊಟ್ಟ ೨೦೦೦/- ರೂಪಾಯಿ ಅವುಗಳನ್ನು ಒಳಗೊಂಡಿವೆ ಎಂದು ತಿಳಿದು ಒಪ್ಪಿಕೊಂಡಿದ್ದೆನೇ ಹೊರತು ಅವರ ಮರ್ಜಿಗೆ ಬಿದ್ದಲ್ಲ. ಅಕ್ಕ ಪಕ್ಕದ ಮಳಿಗೆಗಳ ವಾರಸುದಾರರು ಹೇಳುವಂತೆ ಅವೆಲ್ಲವೂ ನಾವು ಪಾವತಿಸಿರುವ ಹಣದಲ್ಲಿಯೇ ಕೊಡವೇಕಾದ ಅನುಕೂಲಗಳು. ಇಲ್ಲೂ ಪಾರದರ್ಶಕತೆಯಿಲ್ಲ. ನನಗೆ ಅವರ ಫೇವರ್‌ಗಳು ಅನವಶ್ಯಕ!
ಅಳ್ವಾಸ್ ನುಡಿಸಿರಿ ಕಾರ್ಯಕ್ರಮ ಸಂಘಟನೆ ಹೆಸರುವಾಸಿ. ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶ ಸಂಘಟನೆ ತನ್ನ ನ್ಯೂನ್ಯತೆಗಳನ್ನು ತಿದ್ದಿಕೊಂಡು ಹೆಚ್ಚು ಬೆಳೆಯಲಿ ಎಂಬ ಉದ್ದೇಶದಿಂದಷ್ಟೇ! ಅಲ್ವಾಸ್ ನುಡಿಸಿರಿಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದರಿಂದ ನನಗೆ ಯಾವುದೇ ರೀತಿಯ ವ್ಯಯಕ್ತಿಕ ಲಾಭಗಳಿಲ್ಲ.
ಯಾವುದೇ ಸಾಹಿತ್ಯ ಸಮ್ಮೇಳನದ ಅತ್ಯಂತ ದೊಡ್ಡ ಆಕರ್ಷಣೆ ಮತ್ತು ಅಗತ್ಯ ಪುಸ್ತಕ ಮೇಳ. ನೀವು ಕರೆಸುವ ಸಾಹಿತಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನೇ ಒದಗಿಸಿ. ಅವರ ಪುಸ್ತಕಗಳನ್ನು ಮಾರಾಟ ಮಾಡುವ ಪುಸ್ತಕ ಮಾರಾಟಗಾರರಿಗೆ ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿ! ನಮಗೂ ಕನ್ನಡದ ಕಳಕಳಿಯಿದೆ.
ಇನ್ನು, ನುಡಿಸಿರಿ ಎಂಬ ಹೆಸರಿಟ್ಟಿದ್ದೀರಿ. ನಿಮ್ಮ ಕಾರ್ಯಕ್ರಮ ಸಂಘಟಕರಿಗೆ ಒಂದು ಕಿವಿಮಾತು ಅವಶ್ಯಕ! "ನುಡಿದರೆ........ " ಇದನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಹುತೇಕ ಜನಕ್ಕೆ ಗೊತ್ತಿರಬೇಕು.
_____________________________________________________________________________________
ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು.
_____________________________________________________________________________________
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಭರಾಟೆಯಲ್ಲಿ, ಘೋಷ್ಠಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲವೆಲ್ಲ ಎಂಬುದೇ ಸಂಕಟ!

ಗುರುವಾರ, ಅಕ್ಟೋಬರ್ 28, 2010
ಅಲ್ವಾಸ್ ನುಡಿಸಿರಿಯ ಲಿಫ್ಟ್ ಗಣ್ಯರಿಗೆ ಮಾತ್ರವೇ?
ನೆನ್ನೆ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.
ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!
ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್‌ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.
ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!
೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.
೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!
೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.
೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!
೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!
ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?

ಶನಿವಾರ, ಆಗಸ್ಟ್ 21, 2010
ಸಚಿವನ ಕಾರಿಗೆ ಅಡ್ಡ ಬಂದ ಹಸುವಿಗೆ ಚಿತ್ರಹಿಂಸೆ, ಸಾವು! ’ಗೋಹತ್ಯಾ ನಿಷೇಧ ಕಾಯಿದೆ’ಗೆ ತಿದ್ದುಪಡಿ ಚಿಂತನೆ!
ನೆಲಮಂಗಲದ ಬೈಪಾಸ ರಸ್ತೆಯ ಬಳಿ ಧಾವಿಸುತ್ತಿದ್ದ ಮಾನ್ಯ ಸಚಿವ ಬಚ್ಚಾ ಗೌಡನ ಕಾರಿಗೆ ಅಡ್ಡ ಬಂದದ್ದರಿಂದ, ಚಿತ್ರ ಹಿಂಸೆ ಅನುಭವಿಸಿ ಸಾವಿಗೀಡಾದ ದನದ ದಾರುಣ ಕಥೆ, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲ ಬ್ಯೂರೋ ಇಂದ ಸಮರಸ ಠೀವಿಯ ಭಾತ್ಮೀದಾರ, ಹೈಬ್ರಿ ಜೆರ್ಸಿ ವರದಿ ಕೊಟ್ಟಿದ್ದಾರೆ. ಮುಂದೆ ಓದಿ.
ನಡೆದದ್ದು ಹೀಗೆ, ತುಮಕೂರು ಸಮೀಪದ ಪ್ರಸಿದ್ಧ ಮಠದಲ್ಲಿ ಗೋಹತ್ಯಾ ನಿಷೇಧದ ಬಗ್ಗೆ ಭಾಷಣ ಮಾಡಲು ತೆರಳುತ್ತಿದ್ದಾಗ, ನೆಲಮಂಗಲದ ಬೈಪಾಸ್ ಬಳಿ ಒಂದು ಸೀಮೆ ಹಸು ಮಾನ್ಯ ಸಚಿವ ಬಚ್ಚಾ ಗೌಡರ ಕಾರಿಗೆ ಅಡ್ಡ ಹಾದು ಹೋದದ್ದರಿಂದ ಕಾರು ಚಲನೆಯಲ್ಲಿ ನಿದಾನವಾಗಿ, ನಿಲ್ಲಿಸಬೇಕಾದ ಸಂದರ್ಭ ಒದಗಿತು. ತಕ್ಷಣ ಕೆಳಗಿಳಿದ ಕಾರಿನ ಚಾಲಕ, ಈ ಹಿಂದಿನಂತೆ ಕೆಟ್ಟದಾಗಿ ವರ್ತಿಸದೆ, ರಸ್ತೆ ದಾಟಿ ನಿಂತಿದ್ದ ದನಕ್ಕೆ ನಯವಾಗಿ “ಏಯ್ ದನ ಕಣ್ಣ ಕಾಣಕ್ಕಿಲ್ವ, ಮಿನಿಸ್ಟ್ರು ಕಾರ್ ಬತ್ತಾ ಐತೆ ಅಂತ” ಕೇಳಿದ್ದಾಗ್ಯೋ, ಉತ್ತರಿಸದೆ ತನ್ನ ಪಾಡಿಗೆ ತಾನು ಮೆಲುಕು ಹಾಕಿಕೊಂಡು ಶಾಂತವಾಗಿ ನಿಂತಿದ್ದ ದನದವನ್ನು ಕಂಡು ಕೆರಳಿದ ಮಾನ್ಯ ಸಚಿವ ಬಚ್ಚಾ ಗೌಡರು ಕೆರಳಿ, ದನದ ಮೂಗು ದಾರವನ್ನು ಜಗ್ಗಿಸಿದ್ದಲ್ಲದೆ, ದನದ ಬಾಲವನ್ನು ಹಿಡಿದು ಜಗ್ಗಿಸಿ, ಬಾರುಗೋಲಿನಿಂದ ಹಿಗ್ಗಾ ಮುಗ್ಗ ಥಳಿಸಿದರೆಂದು ’ಪ್ರತ್ಯಕ್ಷ-ದನಗಳಿಂದ’ ತಿಳಿದು ಬಂದಿದೆ. ಅಲ್ಲದೆ ’ದನ ಕಾಯವ್ನೆ’ ಎಂದು ಮಾನವನ ಜಾತಿಗೆ ಹೋಲಿಸಿ ಆ ದನಕ್ಕೆ ಅವಾಚ್ಯವಾಗಿ ಬೈದರೆಂದೂ ಸುದ್ದಿ ಬಂದಿದೆ. ಥಳಿತದಿಂದ ಗಾಯಗೊಂಡ ದನ ಸ್ವಲ್ಪ ಸಮಯದ ನಂತರ ಅಸು ನೀಗಿತೆಂದೂ ತಿಳಿದು ಬಂದಿದೆ.
ಮುಂದೆ ಓದಿ

ಮಂಗಳವಾರ, ಆಗಸ್ಟ್ 03, 2010
ಬುಧವಾರ, ಜುಲೈ 28, 2010
ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….
ಸಮರಸದಲ್ಲಿ ಗೋಪಾಲರು ಬರೆದಿರುವ ಈ ಹಾಸ್ಯ ಲೇಖನ ಓದಿ...
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ “ಕಟ್… ಕಟ್…. ” ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. “ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ”. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ. ಮುಂದೆ ಓದಿ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)