ಇದ್ದ ಐವರಲ್ಲಿ ಉತ್ತಮನು ಯಾರು?
ನಾನೇ ಎಂದಿತು ಪಬ್ಬಿನ ಬೀರು!
ಪಬ್ಬಿನ ಹೈಕಳಿಗೆ ಮ(ಮು)ತ್ತನು ಕೊಟ್ಟೆ!
ಧೀರ-ಶೂರ ಸೇನೆಯನ್ನು ಜೈಲಿಗೆ ಅಟ್ಟೆ!
ಮಾಧ್ಯಮಕ್ಕೆ ಬಿಸಿ ಬಿಸಿ ಸುದ್ದಿಯ ಹಾರಿಸಿ ಬಿಟ್ಟೆ!
ರೇಣುಕಾ ಅಮ್ಮನಿಗೆ ಯಾಕೊ ಕಾಣೆ, ಬರೀ ಸಿಟ್ಟೆ!
ಬೀರು ಉವಾಚ,
ತೋರುವರು ತಮ್ಮ ಬೆಟ್ಟುಗಳನ್ನು ನನ್ನೆಡೆಗೆ(ಇನ್ನೊಬ್ಬನೆಡೆಗೆ), ನರರು
ಮುಚ್ಚಿಕೊಳ್ಳಲು ತಮ್ಮ ದೌರ್ಬಲ್ಯಗಳನು,
ಪಬ್ಬಿನ ಹೈಕಳಿಗೆ ಅಮಲಿನ,
ಸೇನೆಗೆ ಕ್ಷಣದಲಿ ಸರ್ವನಾಯಕರಾಗುವ ದುರಾಸೆಯ,
ಮಾಧ್ಯಮಕ್ಕೆ ಹಸಿ ಬಿಸಿ ಸುದ್ದಿಯನು ತೋರುವ ತೆವಲಿನ,
ರೇಣುಕಮ್ಮನಿಗೆ ರಾಜಕೀಯದಲ್ಲಿ ಚಾಲ್ತಿಯಲ್ಲಿರಬೇಕಾದ,
ಇವುಗಳನ್ನೋದುವವರಿಗೆ ಕೆಲಸದೊತ್ತಡದ ಮಧ್ಯೆ ಬೇಕಾದ ಮನರಂಜನೆಯ ದೌರ್ಬಲ್ಯ......
ಕುಡಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುಡಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬುಧವಾರ, ಫೆಬ್ರವರಿ 04, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
