ಬುಧವಾರ, ಫೆಬ್ರವರಿ 25, 2009

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ,

ಪ್ರತಿದಿನದ ವಿಜಯಕರ್ನಾಟಕ ನನಗೆ ಮೊದಲ ಪುಟದಿಂದ ಶುರುವಾದರೆ, ಶನಿವಾರದ ವಿಜಯಕರ್ನಾಟಕ ಮಾತ್ರ ಸಂಪಾದಕೀಯದಿಂದ ಪ್ರಾರಂಭವಾಗುತ್ತದೆ-ಕಾರಣ: ಪ್ರತಾಪ್ ಸಿಂಹರ ಸಂಪಾದಕೀಯ. ತಾವು ಬರೆದ ಲೇಖನದ ತರ್ಕ ಭರ್ಜರಿಯಾಗಿದ್ದರೂ ಅಥವಾ ಬಾಲಿಷವಾಗಿದ್ದರೂ, ಬರೆಯುವ ಶೈಲಿ ಮತ್ತು ಉಪಯೋಗಿಸುವ ಭಾಷೆ ಮಾತ್ರ ಎಂದೂ ಹರಿತವಾಗಿರುತ್ತದೆ. ಎಷ್ಟೋ ಬಾರಿ ತಾವು "ವಿಕಿಪೀಡಿಯಾದಿಂದ" ಹೆಕ್ಕಿ ತೆಗೆದ ವಿಷಯಗಳನ್ನು ಕೂಡ ತಮ್ಮ ಬರವಣಿಗೆ ಶೈಲಿಗೆ ಬದಲಾವಣೆ ಮಾಡಿ ಲೇಖನವನ್ನು ಮೊನಚುಗೊಳಿಸುತ್ತಾರೆ. ಎಷ್ಟೋ ಬಾರಿ ತಾವು ಬರೆದ ವಿಷಯಗಳಲ್ಲಿ ತಿರುಳಿಲ್ಲದಿದ್ದರೂ, ಆ ವಿಷಯದ ಬಗ್ಗೆ ತಿಳುವಳಿಕೆ ತೀರ ಕಡಿಮೆ ಇರುವವರಿಗೆ ಆ ಲೇಖನ ಇಷ್ಟವಾಗಿ ಹೋಗುತ್ತದೆ. ಪ್ರತಾಪ್ ಸಿಂಹ ಹೋದ ಶನಿವಾರ ಬರೆದ ಸಂಪಾದಕೀಯದ ಮೇಲೆ ಕಣ್ಣಾಡಿಸಿದರೆ, ಮಾಹಿತಿ ತಂತ್ರಙ್ನಾನ, ಮಾಹಿತಿ ತಂತ್ರಙ್ನರ ಮತ್ತು ಜಾಕತಿಕ ಆರ್ಥಿಕ ಬಿಕ್ಕಟ್ಟಿನ ಬಗೆಗಿನ ತಮ್ಮ ಅಙ್ನಾನವನ್ನು ಸಂಪಾದಕೀಯದಲ್ಲಿ ಪ್ರದರ್ಶಿಸಿದ್ದಾರೆ! ಕೆಲವು ಪತ್ರಕರ್ತರು ಅರ್ಥವಿಲ್ಲದೆ ಮಾ.ತಂ ವನ್ನು ದೂಷಿಸುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ತಮ್ಮ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಕಲ್ಪನೆಯಲ್ಲಿ ಮುಳುಗಿರುವವರಿಗೆ ಈ ಲೇಖನ ಸ್ವಲ್ಪವಾದರು ಕಣ್ಣು ತೆರೆಸುತ್ತೇನೊ!

ಮೊದಲು ಪ್ರತಾಪ್ ಸಿಂಹ ರವರು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಕೇವಲ ಮಾಹಿತಿ ತಂತ್ರಙ್ನಾನ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ತಟ್ಟಿರುವುದು ಎಂಬ ತಮ್ಮ ತಪ್ಪು ವಾದವನ್ನು ತಿದ್ದಿಕೊಳ್ಳಬೇಕು. ಈ ಬಿಸಿ ತಟ್ಟಿದ್ದು ಮೊದಲು ಹಣಕಾಸು, ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ. ಹಲವಾರು ಜನರು ಮೊದಲು ಕೆಲಸ ಕಳೆದುಕೊಂಡಿದ್ದು ಅಲ್ಲೇ! ಇದರ ಕಾರಣಗಳು ಈ ಲೇಖನದ ವ್ಯಾಪ್ತಿಗೆ ಸೇರಿಸುವುದು ಬೇಡ. ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ. ಆಮೇಲೆ ಮಾಹಿತಿ ತಂತ್ರಙ್ನಾನ, ರೀಟೈಲ್, ಹಾಸ್ಪಿಟಾಲಿಟಿ, ಹೋಟೆಲ್, ಪ್ರವಾಸೊದ್ಯಮ, ಸಾರಿಗೆ, ಹೀಗೆ ಬಹಳಷ್ಟು ಎಲ್ಲಾ ಉದ್ಯಮಗಳಿಗೂ ಬಿಸಿ ಪಸರಿಸಿದ್ದು, ಎಲ್ಲಾ ಉದ್ಯಮಗಳಲ್ಲೂ ಜನರು ಕೆಲಸ ಕಳೆದುಕೊಂಡ ನಿದರ್ಶನಗಳಿವೆ. ಪತ್ರಕರ್ತರಿಗೆ ಸ್ವಲ್ಪ ವಿಶಾಲವಾಗಿ, ಕೂಲಂಕುಶವಾಗಿ ಅವಲೋಕಿಸುವ ಸಂಯಮ ಇರಬೇಕಿತ್ತು! ಬಹುಷ: ಈ ಬಿಕ್ಕಟ್ಟಿನ ಸುದ್ದಿಗಳನ್ನು ಮನೆಮನೆಗೆ (ಅಂತರ್ಜಾಲಕ್ಕಿಂತ ಸ್ವಲ್ಪ ನಿಧಾನವಾಗಿಯಾದರೂ) ತಲುಪಿಸುವ ಪತ್ರಿಕಾ ಮಾಧ್ಯಮಕ್ಕೆ ಇನ್ನೂ ಈ ಬಿಸಿ ತಟ್ಟಿಲ್ಲ ಎಂದೆನಿಸುತ್ತದೆ.ಅದಕ್ಕೇ ಪ್ರತಾಪ್ ಸಿಂಹರವರು ಬಹಳಷ್ಟು ಅರ್ಥವಿಲ್ಲದ ಮಾತುಗಳನ್ನು ತಮ್ಮ ಲೇಖನದಲ್ಲಿ ಪ್ರಲಾಪಿಸಿದ್ದಾರೆ! (ಆ ಲೇಖನಕ್ಕೆ ಇಲ್ಲಿ ಒತ್ತಿ).

ನಾನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾಗ, ದಿನ ಪತ್ರಿಕೆಗಳನ್ನು ಓದುತ್ತಿದ್ದುದು ಕಡಿಮೆ. ಯಾವಾಗಲಾದರೂ ಪತ್ರಿಕೆ ತೆಗೆದರೆ, "ನಿರುದ್ಯೋಗದ" ಬಗ್ಗೆ ಒಂದು ಲೇಖನ ಇದ್ದೇ ಇರುತ್ತಿತ್ತು. ನಿರುದ್ಯೋಗದ ವಿರುದ್ಧ ಹೋರಾಟಗಳು ನಿರಂತರ ನಡೆಯುತ್ತಿದ್ದವು. "ನಿರುದ್ಯೋಗ"ವೆಂಬ ಪದ ಅಂದಿನ ಯುವಕರ ನಾಲಿಗೆಯಲ್ಲಿ ತಾಂಡವವಾಡುತ್ತಿದ್ದ ಪದ ಎಂದರೆ ತಪ್ಪಾಗಲಾರದು! ಇಂದು ಈ ಪದದ ಬಳಕೆಯಿಂದ ಹಿಡಿದು, ನಿರುದ್ಯೋಗ ಸಮಸ್ಯೆಯೇ ಕಡಿಮೆಯಾಗಿದೆಯೆಂದರೆ, ಅದಕ್ಕೆ ಕಾರಣ ಜಾಗತೀಕರಣ ಮತ್ತು ಮಾಹಿತಿ ತಂತ್ರಙ್ನಾನದಲ್ಲಾದ ’ಕ್ರಾಂತಿ’. ಇದು ಸ್ವತಂತ್ರ ಪೂರ್ವ, ಸ್ವತಂತ್ರಾನಂತರ ನಡೆದ ಯಾವುದೇ ಕ್ರಾಂತಿಗಳಷ್ಟೇ ಮಹತ್ವವಾದದ್ದು. ೧೦ ವರ್ಷಗಳ ಹಿಂದಿದ್ದ ನಿರುದ್ಯೋಗದ ಪಿಡುಗನ್ನು ನೆನೆದರೆ ಆ ಮಹತ್ವ ಗೊತ್ತಾಗುತ್ತದೆ. ಮಾ.ತಂ ಬಂತು, ಊಟಕ್ಕೆ, ವಸತಿಗೃಹಗಳಿಗೆ, ಮನೆಗಳಿಗೆ, ಪತ್ರಿಕೆಗಳಿಗೆ, ಸಾರಿಗೆಗೆ, ಚಾಲಕರಿಗೆ, ಮೂಲಸೌಕರ್ಯಕ್ಕೆ ಎಲ್ಲದಕ್ಕೂ ಬೇಡಿಕೆ ಬಂತು. ಇದೇ ಸ್ವಾಮಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಕಾರಣ! ಮಾ.ತಂ ನಿಂದ ಕೆಲವೊಂದು ವ್ಯತಿರಿಕ್ತ ಪರಿಣಾಮಗಳಾಗಿವೆ, ಮೂಲ ಸೌಕರ್ಯದ ನೆಪದಲ್ಲಿ ಮರಗಳು ಕಡಿಯಲ್ಪಟ್ಟವು, ಹಸಿರು ಕಡಿಮೆಯಾಯಿತು. ತ್ರಿಚಕ್ರ ವಾಹನಗಳ ಪ್ರಯಾಣ ದರ ತೀವ್ರ ಏರಿಕೆ ಕಂಡಿತು. ಸಾಮಾಜಿಕ ಅಸಮತೋಲನ ಕೆಲವೊಂದು ಕಡೆ ಹೆಚ್ಚಾಯಿತು.(ಕೆಲೊವೊಂದು ಕಡೆ ಕಡಿಮೆಯೂ ಆಗಿದೆ).

ಸ್ವಾಮಿ ’ಬದಲಾವಣೆ’ ಜಗತ್ತಿನ ನಿಯಮ! ತಾನು ದುಡಿದಿದ್ದನ್ನು ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ. ಹಿಂದೆಯೂ ಇದನ್ನು ಮಾಡುತ್ತಿದ್ದರು, ಬಹುಪಾಲು ಆಗ ದುಡಿಯುತ್ತಿದ್ದು ಕಡಿಮೆ ಇರಬಹುದು.ನೀವು ಹೇಳುವ ಪ್ರಕಾರ ಮಾ.ತಂ. ದಲ್ಲಿ ಕೆಲಸ ಮಾಡುವವರು ಯಾರೂ ಮಕ್ಕಳನ್ನು ಬೆಳೆಸುವುದೇ ಇಲ್ಲ, ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಇಲ್ಲ ಏಂಬ ಅರ್ಥ ಕಲ್ಪಿಸುವಂತೆ ಏನೇನೋ ಬಡಬಡಾಯಿಸಿದ್ದೀರ.ಹಿಂದೆಯೂ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುತ್ತಿದ್ದರು, ಇಂದೂ ಅದೇ ಆಗುತ್ತಿರುವುದು.ಇನ್ನು ಖರ್ಚು ಮಾಡುವುದು ಎಂದರೇನು? ದುಡಿದಿದ್ದನ್ನು ಕೂಡಿಡುವ ಸಂಸ್ಕೃತಿ ಬೆಳೆಸಿಕೊಂಡರೆ ಯಾವುದೇ ದೇಶದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗುವುದಿಲ್ಲ. ಹಿಂದಿನ ಕಾಲಗಳಲ್ಲಿ ಹಾಗೆ ಮಾಡುವವರನ್ನು ಜಿಪುಣರು, ಜುಗ್ಗರು ಎಂದು ಹಂಗಿಸುತ್ತಿದ್ದುದುಂಟು. (ಪುರಂದರ ದಾಸರೂ ಕೂಡ ಮೊದಲು ಜಿಪುಣರಾಗಿ, ಆಮೇಲೆಯೇ ಅವರಿಗೆ ಙ್ನಾನೋದಯವಾದದ್ದು). ದುಡಿದ ದುಡ್ಡನ್ನು ಅಗತ್ಯಕ್ಕೆ ,ಅಭಿರುಚಿಗೆ ತಕ್ಕಂತೆ ಖರ್ಚು ಮಾಡಿದಾದ, ಅಂದರೆ ಒಂದು ಬಟ್ಟೆಯನ್ನು ಕೊಂಡಾಗ, ಬಟ್ಟೆ ಮಾರುವವನ, ಬಟ್ಟೆ ಹೊಲೆಯುವವನ, ಗಾರ್ಮೆಂಟ್ಸ್ನಲ್ಲಿ ದುಡಿಯುವವನ ಜೀವನೋಪಾಯವಾಗುತ್ತದೆ. ಅಷ್ಟೇ ಯಾಕೆ ಸ್ವಾಮಿ, ನಾನು ನಿಮ್ಮ ಐದೂ ’ಬೆತ್ತಲೆ ಜಗತ್ತು’ ಪುಸ್ತಕಗಳನ್ನು ಮತ್ತು ’ಯಾರೂ ತುಳಿಯದ ಹಾದಿಯನ್ನು’ ಕೊಂಡಿದ್ದು ನಾನು ಕಷ್ಟ ಪಟ್ಟು ದುಡಿದ ದುಡ್ಡಿನಿಂದಲೇ!

"ದುಡ್ಡಿಗಿಂತ ಕಸುಬು ಕಲಿಯಬೇಕು ಎಂಬ ಮೆಂಟಾಲಿತು ಐ ಟಿ ಯವರಿಗೆ ಬರಲೇ ಇಲ್ಲ" ಎಂದಿರಿ. ಈ ನಿಮ್ಮ ಅಙ್ನಾನಕ್ಕೆ ಏನೆನ್ನಬೇಕೊ. ಸ್ವಾಮಿ ನೀವು ಸರ್ಕಾರಿ ನೌಕರಿಗಳನ್ನು ಮನಸ್ಸಿನಲ್ಲಿಟ್ಟು ಮಾಹಿತಿ ತಂತ್ರಙ್ನಾನದ ಬಗ್ಗೆ ಬರೆದರೆ ಹೀಗೆ ಅಪಭ್ರಂಶವಾಗುವುದು. ಎಲ್ಲಾದರು ತಾವು ದುಡಿಯುವ ದುಡ್ಡಿಗೆ ಅಗತ್ಯವಾದ ಙ್ನಾನವುಳ್ಳ ಮಾನವ ಸಂಪನ್ಮೂಲವಿದ್ದರೆ, ಅದರಲ್ಲಿ ಮೊದಲ ಸ್ಥಾನ ಮಾ.ತಂ ಕ್ಷೇತ್ರವೆ!ಕಸುಬು ಮತ್ತು ಙ್ನಾನ ಒಂದೊಕ್ಕೊಂದು ಪೂರಕ.

ಇವರ ವಾದಗಳನ್ನು ಇನ್ನೂ ಓದುತ್ತಾ ಹೋದರೆ, ದೊಡ್ಡ ನಿಟ್ಟುಸಿರು ಬಿಡಬೇಕು. ಇಲ್ಲಿ ನೋಡಿ, ಇದಕ್ಕಿಂತ ಜೊಳ್ಳು, ಬಾಲಿಷ ಇನ್ನಿರಲಾರದು! ನಕ್ಕುಬಿಡಿ.
"ಎಲ್ಲಾ ವೃತ್ತಿಗಳಿಗೂ ಅವುಗಳದೇ ಆದ ಒಂದು ಗುಣ, ಲಕ್ಷಣಗಳಿವೆಯಂತೆ, ಐ ಟಿ ಗೆ ಮಾತ್ರ ಏನೂ ಇಲ್ಲವಂತೆ. ಎಲ್ಲಾ ವೃತ್ತಿಗಳಲ್ಲೂ ಅವರ ಮಾಡುವ ಕೆಲಸ ಗೊತ್ತಾಗುತ್ತದಂತೆ, ಐ ಟಿ ಯವರು ನೆನೆದರೆ ಹೊಳೆಯುವುದು ದುಡ್ಡು ಮಾತ್ರವಂತೆ!"
ಇದು ಹೇಗೆಂದರೆ ನನಗೆ ಪತ್ರಕರ್ತರನ್ನು ನೆನೆದರೆ ರಾಜಕಾರಣಿಗಳನ್ನು ಬೆದರಿಸಿ ದುಡ್ಡು ಮಾಡುವ ಕೆಟ್ಟ ಜನರೇ ನೆನಪಿಗೆ ಬರುವುದು ಎಂಬ ಹೇಳಿಕೆ ಕೊಟ್ಟರೆ ಎಷ್ಟು ತಪ್ಪಾಗುತ್ತದಲ್ಲವೆ?ಪುಟ ತುಂಬಿಸಲು ಇವರಿಗೆ ಇದಕ್ಕಿಂತ ಒಳ್ಳೆಯ ಅಂಶಗಳೇ ಸಿಗಲಿಲ್ಲವೆ? ಇವರಿಗೆ ಐ ಟಿ ಬಗ್ಗೆ ಙ್ನಾನ ಬೇಕಾಗಿದ್ದರೆ ಯಾರನ್ನಾದರೂ ಕೇಳಬಹುದಿತ್ತು. ಹೇಳಿಕೊಳ್ಳುವದಕ್ಕೆ ಖ್ಯಾತ ಪತ್ರಕರ್ತರು. ಬೇರೆದ್ದಕ್ಕೆಲ್ಲಾ ವಿಕಿಪೀಡಿಯಾದಲ್ಲಿ, ಗೂಗಲ್ಲಿನಲ್ಲಿ ಹುಡುಕಾಡುತ್ತಾರೆ. ಈ ವಿಷಯದ ಬಗ್ಗೆ ಮಾತ್ರ ಜಾಣ ಕುರುಡು! ವಿಕಿಪೀಡಿಯ, ಗೂಗಲ್ಲು, ಸ್ವಾಮಿ ಅಷ್ಟೇ ಯಾಕೆ ತಾವು ಬಳಸುವ ದೂರವಾಣಿ, ಸುದ್ದಿ ಸಂಪಾದನೆಗೆ ಬಳಸುವ ಇನ್ನೂ ಹಲವಾರು ಸಲಕರಣೆಗಳು ಐ ಟಿ ಯವರು ಸಿದ್ಧಪಡಿಸಿದ್ದೇ!

ಇವರು ಈ ವಾದ ಚರ್ಚೆಗಳಲ್ಲಿ ಎಲ್ಲೆ ತಪ್ಪಿ, ಅನಾಥಾಲಯ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವುದು, ತೆರಿಗೆ ಕಟ್ಟುವುದು ಮತ್ತು ಸರ್ಕಾರದಿಂದ ಉತ್ತಮ ಮೂಲ ಸೌಕರ್ಯಗಳನ್ನು ಅಪೇಕ್ಷಿಸುವುದು ಕೂಡ ತಪ್ಪೆಂದಿದ್ದಾರೆ. ಪತ್ರಕರ್ತರು ಏನು ಬೇಕಾದರೂ ಬರೆಯಬಹುದು ಎಂಬ ಉದ್ಧಟತನವೇ? ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರೆ ಹೀಗೆ ಆಗುವುದು ಅನ್ನಿಸುತ್ತಿದೆ. ಅವರೇ ಹೇಳಿಕೊಂಡಂತೆ, ’ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರೀಲಿ ಕೊಡೆ ಹಿಡಿದುಕೊಂಡನಂತೆ!’ ಎಂಬ ಮಾತು ಪ್ರತಾಪ್ ಸಿಂಹರಿಗೇ ಹೆಚ್ಚು ಅನ್ವಯವಾಗುತ್ತದೆ.ಇನ್ನು ಕೂಲಿಯವನ ಬಳಿ ಮೊಬೈಲ್ ಫೋನು ಇರುವುದೇ ತಪ್ಪೆನ್ನುವಂತೆ ಅನಗತ್ಯ ಚರ್ಚೆಯನ್ನು ಎಳೆದು ತಂದಿದ್ದಾರೆ. ದೂರಸಂಪರ್ಕ ಕ್ರಾಂತಿಯ ಬಗ್ಗೆ ಇವರಿಗೆ ತಿಳಿ ಹೇಳಬೇಕಾರೆ ವರ್ಷಗಳೇ ಬೇಕಾಗಬಹುದು.

ಇನ್ನು ಮಾ.ತಂ ಮಂದಿ, ವಾರಾಂತ್ಯಕ್ಕೆ ಇನ್ನೋವಾ ದಲ್ಲಿ ಪ್ರವಾಸ ಹೋಗಿಬಿಡುತ್ತಾರಂತೆ. ಮಹನೀಯ ಪತ್ರಕರ್ತರಿಗೆ "ಕೋಶ ಓದು, ದೇಶ ಸುತ್ತು" ಎಂಬ ನಾನ್ನುಡಿ ಮರೆತುಹೋಗಿರುವ ಹಾಗಿದೆ. ಪತ್ರಕರ್ತರು ಎಂದೂ ಮರೆಯಬಾರದಂತಹ ಮಾತು ಸ್ವಾಮಿ ಇದು! ಆದರೆ ತಿಳಿಯಿರಿ, ಇನ್ನೋವಾದಲ್ಲಿ ಹೋಗುವವರೂ ಇದ್ದಾರೆ, ಸರ್ಕಾರಿ ಬಸ್ಸುಗಳಲ್ಲಿ ಹೋಗುವವರೂ ಇದ್ದಾರೆ, ಎಲ್ಲಾ ಅವರವರ ಅನುಕೂಲಕ್ಕೆ ಬಿಟ್ಟಿದ್ದು.

ಇಂತಹ ಒದಲು ಅನರ್ಹವಾದ ಈ ಲೇಖನ ಓದಿದ ಮೇಲೆ ಏನನ್ನಾದರೂ ಬರೆಯಬೇಕೆನ್ನಿಸಿತು. ಬರೆದೆ. ಇನ್ನೂ ಬಹಳಷ್ಟು ಅಸಂಬದ್ಧ ಹೇಳಿಕೆಗಳು, ವಾದಗಳಿವೆ ಈ ಲೇಖನದಲ್ಲಿ. ಅವುಗಳಿಗೆ ಉತ್ತರಿಸಲು ಆ ಸಾಲುಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸಲೂ ಕೂಡ ಅರ್ಹವಲ್ಲ.ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ.

ಸ್ವಾಮಿ ಕೊನೆಯದಾಗಿ, ನಿಮ್ಮ ಅನುಕಂಪ ಯಾವ ಮಾ.ತಂ ಉದ್ಯೋಗಿಗೂ ಬೇಕಾಗಿಲ್ಲ. ’ಸಮಾಜ’ ಎಂಬುದು ನಿಮ್ಮಂತಹ ಸಣ್ಣ ಜನಗಳೇ ತುಂಬಿರುವ ವ್ಯವಸ್ಥೆ ಎಂಬ ತಪ್ಪು ಕಲ್ಪನೆಯನ್ನು ತಿದ್ದುಕೊಳ್ಳಿ. ನಿಮಗಿಂತಲೂ ವಿಶಾಲ ದೃಷ್ಟಿ ಕೋನ ಹೊಂದಿರುವ ಸಾಮಾನ್ಯರು, ಸಮಾನ ಮನಸ್ಕರು ಬಹಳಷ್ಟು ಜನರಿದ್ದಾರೆ. ನಿಮ್ಮ ದೃಷ್ಟಿಕೋನವೂ ವಿಶಾಲವಾಗಲಿ ಎಂದು ಹಾರೈಸುತ್ತೇನೆ. ಬೇಂದ್ರೆಯವರು, ಕೆಲವು ದುಷ್ಟರು ದುಡ್ಡಿನ ಮದದಲ್ಲಿ ಬಡವರನ್ನು ತುಳಿಯುತ್ತಿದ್ದಾರೆ ಎಂಬ ಅರ್ಥದಲ್ಲಿ ಬರೆದ ಕವನ ವನ್ನು, ಮಾಹಿತಿ ತಂತ್ರಙ್ನರಿಗೆ ಸಮೀಕರಿಸಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದೀರಿ. ಹಿರಿಯರು ಹೇಳಿದ್ದಾರೆ, ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ಇನ್ನು ಮುಂದೆಯಾದರೂ ನೀವು ತಿಳಿದ ಮತ್ತು ಓದುಗರು ನಂಬಲಾರ್ಹವಾದುದ್ದನ್ನೇ ಬರೆಯಿರಿ. ಎಲ್ಲ ಬಲ್ಲೆನೆಂಬ ಅಹಂಕಾರ ಬಿಡುವುದು ಒಳಿತು.

13 ಕಾಮೆಂಟ್‌ಗಳು:

  1. ಅನಾಮಧೇಯ4:00 ಅಪರಾಹ್ನ

    Good response. I had lots of respect for this guy (Pratap Simha) finally he proved that he is yet another idiot.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ee thara IT yavara bagegina abhipraayagaLu Pratap obbarade alla. Pratap ravara lekhanavu ee bari poorvagraha peeditha vaagide. Idu hegendre manadalli ondu vishayada bagge ondu nirNaya kaigondu, amEle adannu samarthisalu poLLu vaadagaLannu mandisutta hoguvudu. Heegiruvaaga Pratapara ee lekhana analytical aagi illa.

    ಪ್ರತ್ಯುತ್ತರಅಳಿಸಿ
  4. ಅನಾಮಧೇಯ: ಧನ್ಯವಾದಗಳು,
    ರವೀಶ: ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀನು ಹೇಳುವುದು ಸರಿ.

    ಪ್ರತ್ಯುತ್ತರಅಳಿಸಿ
  5. ನಿಮ್ಮ ಪ್ರತಿಕ್ರಿಯೆ ಸಾಧುವಾದದ್ದೇ. ಐಟಿ ಎಷ್ಟೊಂದು ಮಂದಿಗೆ ಉದ್ಯೋಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೊಟ್ಟಿವೆ. ಇಂದು ನಾವೆಲ್ಲ - ಈಹೊತ್ತಿಗೆ ಇಲ್ಲಿ ನಾನೂ ಸೇರಿದ ಹಾಗೆ - ಎಲ್ಲರೂ ಬಳಸುತ್ತಿದ್ದೇವೆ ಐಟಿ ಸಂಬಂಧಿತ ಉಪಕರಣಗಳನ್ನು, ನಮ್ಮ ಜೀವನ ವಿಧಾನವೇ ಬದಲಾಗಿದೆ, ಆಗುತ್ತಿದೆ. ಮಧ್ಯ ಪ್ರಾಚ್ಯ ದೇಶಗಳಿಂದ ಮತ್ತಿತರ ದೇಶಗಳಿಂದ ನಮ್ಮ ಎಳೆಯರು ಬರುತ್ತಿರುವ ಬಗ್ಗೆ ಅವರ ಮಾನಸಿಕ ತುಮುಲಗಳ ಬಗ್ಗೆ ಮುಖ್ಯ ದೈನಿಕದಲ್ಲಿ ಲೇಖನ ಬರಬೇಕಾದಲ್ಲಿ ಹೀಗಳೆಯುವ ಬಗೆಯ ಲೇಖನ ಬರಬೇಕಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಈ ಬಗೆಯ ಹಲವು ಲೇಕನಗಳು ಅಲ್ಲಿ ಬರುತ್ತಿರುವುದು ಪತ್ರಿಕೆಯ ಪು ಟಗಳ ದುರುಪಯೋಗ ಅನ್ನಿಸುತ್ತದೆ - ಏಕೆಂದರೆ ಅದರೊಳಗಿನವರೇ ಬರೆದದ್ದನ್ನು ಪ್ರಕಟಿಸಿ ಅದನ್ನೇ ಜನರು ಓದಬೇಕೆನ್ನುವ ಧೋರಣೆ ಇದ್ದ ಹಾಗಿದೆ.
    ರಾಧಾಕೃಷ್ನ
    apkrishna.wordpress.com

    ಪ್ರತ್ಯುತ್ತರಅಳಿಸಿ
  6. ರಾಧಾಕೃಷ್ಣ, ನೀವು ಹೇಳುವುದು ಸರಿ.

    ಪ್ರತ್ಯುತ್ತರಅಳಿಸಿ
  7. Hi Guru,

    Some of your thoughts are right but the Pratap sinha has a point to tell. The reality is because of IT.. normal people are suffering...room and house rent became higher, auto people started asking more money, Food rates in all hotel reached higher...so on [BCZ IT people started giving more money without thinking ].
    Then what about the people working in small industries..??
    And however he wright the articles [google, wikipedia...] is does not matter... what he is righting is matters. because all people can't go to google and wikipedia for reading.

    ಪ್ರತ್ಯುತ್ತರಅಳಿಸಿ
  8. ಅನಾಮಧೇಯರೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ಕೆಲವೊಮ್ಮೆ ಪ್ರಗತಿಯಿಂದ ವ್ಯತಿರಿಕ್ತ ಸಾಮಾಜಿಕ ಪರಿಣಾಮಗಳುಂಟಾಗುತ್ತಿರುವುದು ವಿಷಾದಕರ. ಇದರ ನಿವಾರಣೆಗೆ, ನಾವೆಲ್ಲರೂ ಕಂಕಣ ಸಿದ್ಧ. ಇದಕ್ಕೆ ಒಳ್ಳೆಯ ಆರೋಗ್ಯಕರ ಚರ್ಚೆ ಅಗತ್ಯ. ಅದನ್ನು ಬಿಟ್ಟು ಸಂಗತಿಗಳನ್ನು ತಿರುಚಿ, ತಮಗೆ ರುಚಿಸದ, ತಾವು ತಿಳಿದಿರದ ಬೇರೆ ಒಂದು ಉದ್ಯೋಗ ವರ್ಗದ ಮೇಲೆ ವಿಷಕಾರಿ, ಒಂದು ಪ್ರಭಾವಿ ವೇದಿಕೆಯನ್ನು ಬಳಸಿಕೊಂಡು ತಮ್ಮ ತಪ್ಪನ್ನು (ಕೆಟ್ಟ ಮಾಹಿತಿಯನ್ನು) ಸಾಮಾನ್ಯ ಜನರಿಗೆ ತಲುಪಿಸುವುದು ಸರಿ ಅಲ್ಲ. ಇಂತಹ ಅತಿರೇಕಕ್ಕೆ ಪ್ರತಾಪ್ ಕೈ ಹಾಕಿದ್ದರಿಂದ ಈ ರೀತಿಯ ಪ್ರತಿಕ್ರಿಯೆಗಳನ್ನು ಅವರು ಹೆದುರಿಸಬೇಕಾಯಿತು. ವಿಕಿಪೇಡಿಯಾ, ಗೂಗಲ್ಲನ್ನು ಬಳಸಿದ್ದು ತಪ್ಪಲ್ಲ. ವಾಸ್ತವ ಎಂಬತೆ ಲೇಖನದಲ್ಲಿ ಬಿಚ್ಚಿಟ್ಟಿದ್ದೇನಷ್ಟೆ. ಇಂತಹ ತಂತ್ರಙ್ನಾನ ಸಮಾಜದ ಎಲ್ಲರನ್ನೂ ತಲುಪಿದರೆ, ಸಮಾಜದ ಸಬಲೀಕರಣ ಎನ್ನಬಹುದು. ಆ ನಿಟ್ಟಿನಲ್ಲಿ ನಡೆಸಬೇಕಾಗಿದೆ ಚರ್ಚೆಯನ್ನು. ತಪ್ಪು ಸಂಗತಿಗಳನ್ನಿಟ್ಟುಕೊಂಡು ಮಾಡುವ ವಾದಕ್ಕೆ ಬೆಲೆ ಇಲ್ಲ.

    ಪ್ರತ್ಯುತ್ತರಅಳಿಸಿ
  9. ಅನಾಮಧೇಯ3:03 ಅಪರಾಹ್ನ

    Yes Guru, we need a healthy discussion on this, now we are ready for that bcz we are facing the heat and not ready to accept it . I have been observing my freinds, collegues there is lot of change in their attitude.. they got enough ego, irrespectfull to others just because of money. And No big IT companies are working for india and they are not ready for that bcz they will not get more money. From last three years I am working in Indian MNC and i never worked for Indian Client. You can see our indian buziness websites and just observe that those are made by small companies with poor performance!!!. No Indian company has own product in market! like IBM, ORACLE,APPLE, HP.

    ಪ್ರತ್ಯುತ್ತರಅಳಿಸಿ
  10. ಅನಾಮಧೇಯರೇ, ಒಂದಂತೂ ನಿಜ, ನಮ್ಮಲ್ಲಿ ಉತ್ಪಾದನಾ ಮಾ.ತಂ ಸಂಸ್ಥೆಗಳಿಲ್ಲ ಎಂಬುದು ತಪ್ಪು ಗ್ರಹಿಕೆ. ಕಡಿಮೆ ಸಂಖ್ಯೆಯಲ್ಲಿವೆ ಒಪ್ಪಿಕೊಳ್ಳೋಣ. ಉದಾಹರಣೆಗೆ, Tejas Networks , Sloka Telecom ಹೀಗೆ ಬರೆಯುತ್ತಾ ಹೋದರೆ ಬಹಳಷ್ಟು ಇವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಜಾಗತಿಕ ಮಟ್ಟದಲ್ಲಿ ಪ್ರ್ಥಥಮ ಸ್ಥಾನಕ್ಕೆ ಏರಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಕಾದು ನೋಡೋಣ, ಆ ಸಮಯವೂ ದೂರವಿಲ್ಲ. ಬಹಳಷ್ಟು ಅಂತರಾಷ್ಟ್ರೀಯ ಸಂಸ್ಥೆಗಳು ಭಾರತೀಯ ಸಂಸ್ಥೆಗಳನ್ನು ಗ್ರಾಹಕರಾಗಿ ಹೊಂದಿವೆ. ಸರಳ ಉದಾಹರಣೆ ಎಂದರೆ, ಭಾರತಿ (Airtel) ಹೋದ ವರ್ಷ ericsson ಸಂಸ್ಥೆಗೆ ತಮ್ಮ GSM Network ಅಳವಡಿಕೆ ಮತ್ತು ನಿರ್ವಹಿಸಲು ೧ ಬಿಲ್ಲಿಯನ್ ಡಾಲರ್ ಮೊತ್ತವನ್ನು ಕೊಟ್ಟಿತ್ತು. ಮುಂದೊಂದು ದಿನ ನಮ್ಮ ಶ್ಲೋಕ ಟೆಲಿಕಾಮ್ ಗೆ ಆ ವ್ಯವಹಾರ ಸಿಗಬಹುದೇನೋ! ಹೀಗೆ ಬಹಳಷ್ಟು ಕಂಪನಿಗಳಿವೆ. ನಮ್ಮ ಆಸಕ್ತಿಗೆ ತಕ್ಕ ಸಂಸ್ಥೆಗಳನ್ನು ಹುಡುಕಿಕೊಳ್ಳುವುದು ಸ್ವಲ್ಪ ತ್ರಾಸದಾಯವಾದರೂ, ಭವಿಷ್ಯದ ಚಿಂತನೆಯಲ್ಲಿ ಅದು ಒಳ್ಳೆಯದು. ಮನುಷ್ಯರು ಬದಲಾಗುವುದು, ಹೊಡೆತ ಬಿದ್ದ ಮೇಲೆ ಮತ್ತೆ ಮರು ಬದಲಾಗುವುದು ಇವೆಲ್ಲಾ ಕಾಲ ಚಕ್ರದ ನಿಯಮಗಳು. ನಾವು ಒಳ್ಳೆಯವರಾಗೋಣ. ಹೀಗೆ ಒಬ್ಬೊಬ್ಬರೂ ಒಳ್ಳೆಯದಕ್ಕೆ ಬದಲಾದಂತೆ ಪ್ರಪಂಚ ಸುಂದರವಾಗುತ್ತದೆ.

    ಪ್ರತ್ಯುತ್ತರಅಳಿಸಿ
  11. When Pratap wrote “homestay owners leave their homes to IT people and they themselves stay in sheds” I wrote to my contact in Madikeri, who coordinates homestays for tourists, for clarification on this issue-

    she wrote back- “what rubbish it is very easy to write and to talk : a pen and tongue both have no bones in them. Actually there are homestays where the people lend their entire house to the tourists, I don’t deny that but they will stay in their old house and the new house could be given to the tourists.
    I really don’t think such a thing will be there but I don’t know in what bases he might have written that.

    ಪ್ರತ್ಯುತ್ತರಅಳಿಸಿ
  12. ಅನಾಮಧೇಯ6:19 ಅಪರಾಹ್ನ

    Guruve... Yare agali history alli Adha sagathigala bhagge bhareya bekendhare.. adhanna yelli adhru Odhi bhareyabeku illandre.. keli barayabeku.. Iga Internet soulabhya irodhrindha google alli/ wikipedia dhalli huduki..hekki thegedhu bareyodhralli thappilla...
    Nimma bharavanige chennagidhe adhre.. nimma bharaha nodidhmele neevu pratap sinha avarnna baiyalikke bharitha idhdhiree anistha idhe... adhu hagagabharadhu, yavudhe bharahagarana bagge "poorvagraha peeditharagirabedi"... Bekadre nimma bharaha dhindha nimma visheya galanna defend madkolli.. aga chennagiruththe... All the BEST.

    ಪ್ರತ್ಯುತ್ತರಅಳಿಸಿ
  13. ಅನಾಮಧೇಯರೆ ನಿಮ್ಮ ಬುದ್ಧಿವಾದದ ಮಾತುಗಳಿಗೆ ಧನ್ಯವಾದಗಳು. ಮುಂದೆ ಬರೆಯುವಾಗ ಖಂಡಿತಾ ನೆನಪಿನಲ್ಲಿಟ್ಟಿರುತ್ತೇನೆ. ಒಂದಂತೂ ಸ್ಪಷ್ಟ. ಪ್ರತಾಪ್ ಸಿಂಹ ನನ್ನ ನೆಚ್ಚಿನ ಅಂಕಣಕಾರ. ಅವರು ತಪ್ಪನ್ನು ಬರೆದಾಗ, ಕೊಟ್ಟ ತೀಕ್ಷ್ಣ ಪ್ರತಿಕ್ರೆಯಯಲ್ಲಿ ಕೆಲವೊಂದು ಮಾತುಗಳು ಎಲ್ಲರಿಗೂ ಪ್ರಿಯವಾಗಿಲ್ಲದೆ ಇರಬಹುದು. ಯಾವುದೇ ಒಂದು ಹೇಳಿಕೆಯಿಂದ ನೋವುಂಟಾಗಿದ್ದರೆ ಕ್ಷಮೆಯಿರಲಿ. ಆದರೆ ಉದ್ದೇಶ ಇಷ್ಟೆ, ತಪ್ಪನು ಖಂಡಿಸುವುದು ಮತ್ತು ತಿದ್ದಿಕೊಳ್ಳಲು ಅನುವು ಮಾಡಿಕೊಡುವುದು. ಮತ್ತು ನಾನು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತನಾಗಿಲ್ಲ. ಒಂದು ಪಕ್ಷ ಪೂರ್ವಾಗ್ರಹ ಪೀಡಿತನಾಗಿದ್ದರೂ ಅದು ಪ್ರತಾಪ್ ಸಿಂಹ ಯಾವಾಗಲೂ ಚೆನ್ನಾಗಿ ಮತ್ತು ತಪ್ಪಿಲ್ಲದೆ ಬರೆಯುವನೆಂದು.

    ಪ್ರತ್ಯುತ್ತರಅಳಿಸಿ