ಮಂಗಳವಾರ, ಜೂನ್ 23, 2009

ಶಿಕ್ಷಣ ಪದ್ಧತಿ ಬದಲಾಗಬೇಕಲ್ಲವೆ?

ಶಿಕ್ಷಣ ಮಕ್ಕಳ ಸರ್ವತೋಮುಖಿ ಅಭಿವೃದ್ಧಿಗೆ ಸಹಾಯವಾಗಬೇಕೆಂಬುದು ಎಲ್ಲೆಲ್ಲಿಯೂ ಕೇಳಿ ಬರುವ ಕೂಗು. ಅದಕ್ಕಿಂತ ಮೊದಲು ಶಿಕ್ಷಣ, ಮಕ್ಕಳಲ್ಲಿ ಓದುವುದಕ್ಕೆ ಆಸಕ್ತಿಯನ್ನು ಬೆಳೆಸುವುದಕ್ಕೆ ಪ್ರೇರೇಪಣೆಯಾಗಬೇಕು. ನನಗೆ ನನ್ನ ಪ್ರಾಥಮಿಕ ತರಗತಿಗಳು ನೆನಪಿಗೆ ಬರುತ್ತಿವೆ. ಪದ್ಯ, ಮಗ್ಗಿ, ಕವಿ ಕಾವ್ಯ ಪರಿಚಯವನ್ನು ಬಾಯಿಪಾಠ ಮಾಡುವುದು. ಪಾಠದ ಕೊನೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅವುಗಳನ್ನು ಬಾಯಿ ಪಾಠ ಮಾಡುವುದು. ಹೀಗೆ ಬರೀ ಬಾಯಿ ಪಾಠ ಮಾಡುವುದರಲ್ಲೇ ನಮ್ಮ ಪ್ರಾಥಮಿಕ ಶಿಕ್ಷಣ ಕಳೆದು ಹೋಯಿಯು. ಶಿಕ್ಷಣ ಎಂಬುದು ಒಂದು ರೀತಿಯ ಶಿಕ್ಷೆ ಎಂದೆನಿಸಿ ಬಿಟ್ಟಿತ್ತು.ಇನ್ನು ಓದುವುದಕ್ಕೆ ಸ್ವಂತ ಆಸಕ್ತಿ ಬೆಳೆಯುವುದು ದೂರದ ಮಾತು. ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಟ್ಟು, ರೇಗಿ, ಬೈದು ಬಾಯಿಪಾಠ ಮಾಡುವುದಕ್ಕೆ ಸಹಾಯ ಮಾಡಿದರೆ ಅಂತಹ ಮಕ್ಕಳು ಬುದ್ಧಿವಂತ ವಿದ್ಯಾರ್ಥಿಗಳಾಗುತ್ತಿದ್ದರು. ಎಷ್ಟೋ ಜನರ ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಡಲಾಗದಂತಹ ಸ್ಥಿತಿ. ಅಂತಹ ಮಕ್ಕಳಿಗೆ ಓದುವುದರಲ್ಲಿ ನಿರಾಸಕ್ತಿ ಉಂಟಾಗಿ ದಡ್ಡರೆನಿಸಿಕೊಳ್ಳುತ್ತಿದ್ದರು. ಇನ್ನು ಸಾಮಾನ್ಯವಾಗಿ ಬೋಧಕರಿಗೆ ಬುದ್ಧಿವಂತ ವಿದ್ಯಾರ್ಥಿಗಳೆಂದರೆ ಪ್ರೀತಿ. (ಎಲ್ಲರೂ ಹೀಗೆ ಎಂದಲ್ಲ, ದಡ್ಡ ವಿದ್ಯಾರ್ಥಿಗಳೆನಿಕೊಂಡವರ ಬಗ್ಗೆ ವಿಶೇಷ ಆಸಕ್ತಿ ತೋರುವ ಶಿಕ್ಷಕರೂ ಇದ್ದಾರೆ, ಆದರೆ ಕಡಿಮೆ). ದಡ್ಡರಿಗೆ ಸಾಮಾನ್ಯವಾಗಿ ಬೆತ್ತದ ಪೆಟ್ಟು. ಓದಿನಲ್ಲಿ ಹೆಚ್ಚಿನ ನಿರಾಸಕ್ತಿ.

ಇದಕ್ಕೆಲ್ಲ ಏನು ಕಾರಣ? ಮುಂದೆ ಓದಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ