ಗುರುವಾರ, ಜೂನ್ 25, 2009

ನಾವು ಪೋಷಕರು..

ನಾವು ಪೋಷಕರು ಮಕ್ಕಳ ಬಗ್ಗೆ ನಡೆದುಕೊಳ್ಳುವ ರೀತಿ ಯಾವಾಗಲು ಸರಿಯೇ? ಸಮರಸ ವಿಷೇಶ ಅಂಕಣ "ವಸ್ತುನಿಷ್ಠ" ದಲ್ಲಿ ಓದಿ.

ತಂದೆ ತಾಯಿ ಮಕ್ಕಳನ್ನು ಕಷ್ಟ ಪಟ್ಟು, ಹೆತ್ತು-ಹೊತ್ತು, ಬೆಳೆಸಿ, ಓದಿಸಿ ಮುಂದೆ ತರುತ್ತಾರೆ, ಆದರೆ ಮಕ್ಕಳು ಅದೇ ಪ್ರೀತಿಯನ್ನು ತಂದೆ ತಾಯಿಗಳಿಗೆ ಧಾರೆಯೆರೆಯುವುದಿಲ್ಲ, ಮಕ್ಕಳು ತಂದೆ ತಾಯಿಗಳಿಂದ ದೂರವಾಗಿಬಿಡುತ್ತಾರೆ ಎಂಬ ಕೂಗು-ಕೊರಗು ಹಿಂದಿನಿಂದ ಇದೆ.ಇದಕ್ಕೆ ಬಹಳಷ್ಟು ಸಮಯದಲ್ಲಿ ಪ್ರೀತಿ, ತತ್ವ ಮತ್ತು ತರ್ಕಗಳ ಆಧಾರವಿರದೆ ಸಿನಿಕ ಭಾವುಕತೆಯ ಮೇಲೆ ಕೇಳಿ ಬರುವಂತಹ ದೂರು. ಇಂತಹ ಒಂದು ಸೂಕ್ಷ್ಮ ವಿಷಯವನ್ನು ಇಂದು ವಸ್ತುನಿಷ್ಠವಾಗಿ ವಿಶ್ಲೇಷಿಸೋಣ.

ಮೊದಲನೆಯದಾಗಿ ನಾವು ನಮ್ಮ ಮಗುವನ್ನು ಹೆತ್ತು ಹೊತ್ತು ಬೆಳೆಸುವುದರಲ್ಲಿ (ಯಾವುದೇ ಮಗುವನ್ನು ಬೆಳೆಸುವುದರಲ್ಲಿ) ಕಷ್ಟ ಎಂಬುದು ಅತಿಶಯದ, ಸತ್ಯಕ್ಕೆ ದೂರವಾದ ಮಾತು. ನಮಗೆ ಒಂದು ಮಗು ಬೇಕೆನ್ನಿಸಿದರೆ ನಮಗೆ ಮಗುವಿನ ಅವಶ್ಯಕತೆಯಿರುತ್ತದೆ. ಇನ್ನು ಮಕ್ಕಳ ಆಟ ಪಾಠ, ಅವುಗಳ ಮುಗ್ಧತೆ ನಮ್ಮ ಕಷ್ಟ ದುಖ: ಗಳನ್ನು ಮರೆಸುತ್ತವೆ. ಸಾಮಾನ್ಯವಾಗಿ ಯಾವ ಮಗುವೂ ತಾನು ೧೦-೧೨ ವರ್ಷ ದಾಟುವವರೆಗೆ ಮುಗ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಪ್ರೀತಿ ತೋರಿ ಬೆಳೆಸುವುದು ಪಾಲಕರ ಕರ್ತವ್ಯ. ಕರ್ತವ್ಯ ಎನ್ನುವುದಕ್ಕಿಂತ ಅದು ಪಾಲಕರಿಗೆ ಸಂತಸ ತರುವ ಕಾಯಕವಾಗಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಪಾಲಕರಿಗೆ ಕೊಡುವ ಸಂತೋಷವನ್ನು ನೆನಪಿನಲ್ಲಿಟ್ಟರೆ ಜೀವನ ಪರ್ಯಂತ ಆ ಸಂತೋಷವನ್ನು ಮೆಲುಕಿ ಹಾಕಿ ಕಾಲ ಕಳೆಯುವಷ್ಟಿರುತ್ತದೆ. ನಮ್ಮಲ್ಲಿ ಇನ್ನೊಂದು ತಪ್ಪು ಕಲ್ಪನೆಯಿದೆ. ಮಕ್ಕಳನ್ನು ಸಂತೋಷವಾಗಿ ಬೆಳೆಸುವುದಕ್ಕೆ ಅಪಾರ ದುಡ್ಡಿರಬೇಕೆಂಬುದು! ಇದು ಅಕ್ಷರಷ: ತಪ್ಪು. ಮಕ್ಕಳಿಗೆ ಬೇಕಾಗಿರುವು ನಿಮ್ಮ ಸನಿಹ, ಪ್ರೀತಿ. ಮುದ್ದೆ ಮಾಡುವ ಕೋಲಿನಿಂದಲೇ ನೀವು ಅವನಿಗೆ ಕ್ರಿಕೆಟ್ ಆಟ ಆಡಿಸಿ ಸಂತಸಪಡಿಸಬಹುದು.ಹೌದು ನಮ್ಮ ಶಕ್ತಿಗಾನುಸಾರವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ. ಆದುದರಿಂತ ಅಷ್ಟು ಹಣವನ್ನು ಸಂಪಾದಿಸಿ, ನಾವು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಮೇಲೆ ನಾವು ಮಗುವನ್ನು ಹೊಂದುವ ಯೋಚನೆ ಮಾಡುವುದು ಒಳಿತು. ಒಂದು ಸುಖ ಬೇಕಾದರೆ ಹಿನ್ನಲೆಯಲ್ಲಿ ಸ್ವಲ್ಪ ಕಷ್ಟ ಪಡಬೇಕಾದೀತು. ಆದರೆ ಆ ಕಷ್ಟಕ್ಕೆ ಮಕ್ಕಳನ್ನು ದೂರುವುದು ಸರಿಯಲ್ಲ.ನಮ್ಮ ಶಕ್ತಿಗನುಗುಣವಾಗಿ ಕಡಿಮೆ ಮಕ್ಕಳನ್ನು ಹೊಂದುವುದು ಮತ್ತೊಂದು ನೆನಪಿನಲ್ಲಿಡಬೇಕಾದ ಅಂಶ. ಮಕ್ಕಳೊಂದಿಗೆ ನಾವೂ ಮಕ್ಕಳಾಟವಾಡಬಹುದಾದ ಸವಿ ಸಮಯ ಇದು. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ