ಮಂಗಳವಾರ, ಅಕ್ಟೋಬರ್ 06, 2009

ಮುಖ್ಯಮಂತ್ರಿ ಹಾಲಲ್ಲಿ.. ಜನ ಜಾನುವಾರುಗಳು ನೀರಲ್ಲಿ!

nere-haavali


ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ತತ್ತರಿಸಿ, ಅನ್ನ ನೀರಿಲ್ಲದೆ(ರಾಜಕಾರಣಿಗಳಿಗಾಗಿ ಸ್ಪಷ್ಟಣೆ, ನೀರಿಲ್ಲದೆ ಎಂದರೆ ಕುಡಿಯುವ ನೀರಿಲ್ಲದೆ ಎಂದು ತಿಳಿಯಬೇಕು) ಪ್ರಾಣ ಬಿಡುತ್ತಿದ್ದಾಗ ಯಡಿಯೂರಪ್ಪನವರು ಕರ್ನಾಟಕ ಹಾಲು ಒಕ್ಕೂಟದ ವತಿಯಿಂದ "ಕ್ಷೀರಬಂಧು" ಬಿರುದನ್ನು ಸೋಮಶೇಖರ ರೆಡ್ಡಿಯವರಿಂದ ಸನ್ಮಾನಿಸಿಕೊಳ್ಳುವುದರಲ್ಲಿ ಕಾರ್ಯನಿರತರಾಗಿದ್ದರು. ಅ ದಿನಕ್ಕೂ ಮುಂಚೆ ನಾಡಿಗೆ ಏನೇ ಆದರೂ ತಲೆ ಬಿಸಿಯಿಂದ ಮುಕ್ತನಾಗಿರಬೇಕು ಎಂದು ಸುತ್ತೂರು ಮಠದಲ್ಲಿ "ಯೋಗ" ಮತ್ತಿನ್ಯಾವುದೋ ವಿಷಯಗಳ ಮೇಲಿನ ಕಾರ್ಯಾಗಾರದಲ್ಲಿ ಕಾರ್ಯನಿರತರಾಗಿದ್ದರು!


ನಾವೇನು ನೆರೆ ಪೀಡಿತರಿಗೆ ಮುಖ್ಯಮಂತ್ರಿ ಸಹಾಯ ಮಾಡಬೇಕು ಎಂದಾಗ, ಅವರು ನೆರೆ ಹಾಳಿ ಪ್ರದೇಶಕ್ಕೆ ಭೇಟಿಯಿತ್ತು ತಮ್ಮ ತಲೆಯ ಮೇಲೆ ಎಲ್ಲರನ್ನೂ ಹೊತ್ತುಕೊಂಡು ಬರಬೇಕೆಂದು ನಿರೀಕ್ಷಿಸುತ್ತಿಲ್ಲ. ಕನಿಷ್ಟ ಪಕ್ಷ ಯೋಗ ತರಬೇತಿಗಳು, ಸನ್ಮಾನ ಕಾರ್ಯಕ್ರಮಗಳನ್ನು ಬದಿಗಿಟ್ಟು ಅತಿವೄಷ್ಟಿಯಿಂದ ಹಾನಿಗೊಳಗಾದವರನ್ನು ರಕ್ಷಿಸಲು ಯೋಜನೆಗಳನ್ನಾದರೂ ರೂಪಿಸಬಹುದಿತ್ತು. ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲೇ ಕೂತು ನಿರ್ವಹಿಸಬಹುದಿತ್ತು. ಅಧಿಕಾರಿಗಳು ಮಾಡುವುದಿಲ್ಲವೇ? ಎಂದರೆ ಅದರ ಮೇಲ್ವಿಚಾರಣೆಯನ್ನಾದರೂ ಮಾಡಬೇಕಲ್ಲವೇ? ಇಷ್ಟು ವರ್ಷ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಂಡಿಲ್ಲವೇ? ಹಾಗೆಂದು ರಾಜಕಾರಣಿಗಳು ಅಧಿಕಾರಿಗಳಿಗಿಂತ ಉತ್ತಮರೆಂದಲ್ಲ. ಸಾಮಾನ್ಯರ, ರೈತರ ನಾಯಕ ಎಂದು ಹೇಳಿಕೊಳ್ಳುವ ಯಡ್ಡಿಯೂರಪ್ಪನವರು ತಮ್ಮ ವ್ಯಕ್ತಿ ವಿಕಸನ ಕಾರ್ಯಕ್ರಮಗಳನ್ನು ಮತ್ತು ಬಿರುದು ಬಿಮ್ಮಾನಗಳ ವಿಕಸನ ಕಾರ್ಯಕ್ರಮಗಳನ್ನು ಮೊಟುಕುಗೊಳಿಸಿ, ಹಾನಿಗೊಳಗಾದ, ನಿರಾಶ್ರಿತರಾದ ಜನಗಳಿಗೆ ಸಹಾಯ ತಲುಪುತ್ತಿದೆಯೇ ಎಂಬುದರ ಮೇಲ್ವಿಚಾರಣೆ ಮಾಡಿದ್ದರೆ ಅವರು ಜನಸಮಾನ್ಯರಿಗೆ ಇನ್ನೂ ಹತ್ತಿರವಾಗುತ್ತಿದ್ದುದರಲ್ಲಿ ಸಂಶಯವಿರಲಿಲ್ಲ! ಆದರೆ ಪ್ರತಿಪಕ್ಷಗಳ ಬೇರೆ ಸಂದರ್ಭಗಳಲ್ಲಿ ಮಾಡಿದ್ದ ಅರ್ಥವಿಲ್ಲದ ಟೀಕೆಗಳಿಗೆ ಹೆದರುವುದಿಲ್ಲ ಎಂಬಂತೆ ಪ್ರತಿಪಕ್ಷಗಳ ಜೊತೆಗೆ ಜಿದ್ದಿಗೆ ಬಿದ್ದಿರುವಂತೆ ಕಾಣುತ್ತಿರುವ ಯಡ್ಡಿಯೂರಪನವರಿಗೆ ನಿಯತ್ತಿನ ಟೀಕೆಗಳಿಗೂ ಕಿವುಡರಾಗಿಬಿಟ್ಟಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ನಾನ್ನುಡಿಯಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಜಿದ್ದಿನಲ್ಲಿ ಜನಸಾಮಾನ್ಯರು ನರಳುತ್ತಿದ್ದಾರೆ ಅಷ್ಟೆ!


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ