ಮಂಗಳವಾರ, ಅಕ್ಟೋಬರ್ 06, 2009

ಹುಯಿಲಗೋಳ ನಾರಾಯಣರಾಯರ ಬಗೆಗೆ ಇನ್ನೊಂದಿಷ್ಟು ಮಾಹಿತಿಗಳು

huyolu2


ಮಹಾತ್ಮ ಗಾಂಧಿಯವರು ೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯೆಂದು ಸ್ವೀಕರಿಸಲಾದ "ಉದಯವಾಗಲಿ" ಗೀತೆಯ ಭಾವಾರ್ಥ ಕೇಳಿ ತಿಳಿದು ನಾರಾಯಣರಾಯರನ್ನು ಮೆಚ್ಚಿಕೊಂಡು ಹೂವಿನ ಹಾರ ಹಾಕಿ ಗೌರವಿಸಿದ್ದರಂತೆ.


ಅಪರಿಮಿತ ದೇಶಭಕ್ತರಾಗಿದ್ದ ಹುಯಿಲಗೋಳ ನಾರಯಣರಾಯರು, ಕರ್ನಾಟಕ ಏಕೀಕರಣಕ್ಕೇ ಅಲ್ಲದೇ ಸ್ವಂತತ್ರ ಹೋರಾಟಕ್ಕೂ ಶ್ರಮಿಸಿದ್ದರು. ಇವರು ಕನ್ನಡ ನಾಡಿನ ಬಗೆಗಿನ ಪದ್ಯಗಳನ್ನು ರಚಿಸಿದುದ್ದಲ್ಲದೆ ದೇಶಭಕ್ತಿಯನ್ನು ಹೊಮ್ಮಿಸುವ ಪದ್ಯಗಳನ್ನೂ ರಚಿಸಿದ್ದಾರೆ. ಓದುಗರ ಪರಿಚಯಕ್ಕಾಗಿ "ಧ್ವಜಗೀತೆ"ಎಂಬ ಈ ಅತ್ಯುತ್ತಮ ದೇಶಭಕ್ತಿಗೀತೆ!


ಧ್ವಜಗೀತೆಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ|

ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ ||ಪ||


ಹಾಸಿ ಮನೆಯಲಿ ನೇಯ್ದ ಖದ್ದರದ ಬಟ್ಟೆಯಲಿ|

ಕೇಸರಿ ಬಿಳಿ ಹಸಿರು ಬಣ್ಣಗಳ ಪಟ್ಟಿಯಲಿ|

ಸೂಸಿ ನೀಲಿಯಿಟ್ಟು, ಚಕ್ರ ನಡುವೆ ಮೆಟ್ಟಿನಲಿ|

ಬೀಸುತಿಹ ಗಾಳಿಯಲಿ ಭಾರತದ ನಿಟ್ಟೆಯಲಿ||


ಸತ್ಯ, ದಮೆ, ದಯೆ, ಶಾಂತಿ, ಪ್ರೇಮಗಳ ಗುರುತೆಂಬ|

ಸ್ತುತ್ಯ ಬಣ್ಣದ ನಡುವೆ ಧರ್ಮಚಕ್ರದ ಬಿಂಬ|

ನಿತ್ಯ ಅಭಯ ಅಹಿಂಸೆಗಳ ತೋರ್ಪಧ್ವಜ ಕಂಬ|

ಪ್ರತ್ಯಕ್ಷದಲಿ ನೋಡಿ ವಂದಿಸಿರಿ ಮನದುಂಬ||


ಖಡಖಡನೆ ಗಾಳಿಯಲಿ ಬೀಸಿ ಶಬ್ದವ ಮಾಡಿ|

ಛಡಛಡನೆ ಹಗೆಗಳೆಡೆ ಬಿರಿವಂತೆ ಹಾರಾಡಿ|

ಒಡೆಯ ಗದುಗಿನ ವೀರ ನಾರಾಯಣನ ಪಾಡಿ|

ಗುಡಿ ತನ್ನ ಮೊಗವೆತ್ತಿ ನಿಲುವಂತೆ ಮೇಲ್ಮಾಡಿ||


ಹುಯಿಲಗೋಳ ನಾರಾಯಣರಾಯರು ಏಕೀಕರಣದ ನಂತರ ರಚಿಸಿದ ಈ ಒಂದು ಸುಂದರ ಕವನವನ್ನೋದಿ ಆನಂದಿಸಿ.ಮೂಡಿದುದು ಮೂಡಿದುದು ಕನ್ನಡದ ರವಿಬಿಂಬ

ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ