ಸೋಮವಾರ, ಡಿಸೆಂಬರ್ 21, 2009

ಮನೆಯಂಗಳದಲ್ಲಿ ಮಾತುಕತೆಯಲ್ಲಿ ಪ್ರೊ.ವಿವೇಕ್ ರೈ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳಿನ ಮೂರನೇ ಶನಿವಾರದಂದು ನಯನ ಸಭಾಂಗಣದಲ್ಲಿ ಪ್ರಸ್ತುತ ಪಡಿಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ೧೦೭ ನೆ ಸಂಚಿಕೆಯಲ್ಲಿ ಭಾಗವಹಿಸಿದ್ದವರು ಪ್ರೊ. ವಿವೇಕ್ ರೈ ರವರು. ಕನ್ನಡ ವಿ ವಿ ಯ ಮಾಜಿ ಕುಲಪತಿಗಳಾದ ವಿವೇಕ್ ರೈ ರವರು ಸದ್ಯಕ್ಕೆ ಜರ್ಮನಿಯ ವೂಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ, ಕನ್ನಡ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

maneyamgaladalli-maatukathe

ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆ ನಿರ್ದೇಶಕರಾದ ಮನು ಬಳಿಗಾರ್ ರವರು ವಿವೇಕ್ ರೈ ರವರನ್ನು ಸ್ವಾಗತಿಸಿ, ವಿವೇಕ್ ರೈರವರ ಕಿರು ಪರಿಚಯವನ್ನು ಮಾಡಿ ಕೊಟ್ಟರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನಲೆಯಲ್ಲಿ, ಸಂಶೋಧನೆಗೆಂದು ಮುಖ್ಯಮಂತ್ರಿಗಳು ಘೋಷಿಸಿದ ೧೧ ಕೋಟಿ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ವಿವೇಕ್ ರೈ ರವರ ಮಾರ್ಗದರ್ಶನದಲ್ಲಿ ಕಾರ್ಯಸೂಚಿಯನ್ನು ಸಿದ್ಧಪಡಿಸಿ, ಅನುದಾನವನ್ನು ೧೧ ವಿಶ್ವವಿದ್ಯಾಲಯಗಳಿಗೆ ಹಂಚಿದ್ದನ್ನು ನೆನಪಿಸಿಕೊಂಡರು. ಆ ವಿಶ್ವವಿದ್ಯಾಲಯಗಳು ವಿವೇಕ್ ರೈ ರವರ ಕಾರ್ಯಸೂಚಿಯಂತೆಯೇ ಕಾರ್ಯವನ್ನು ನಿರ್ವಹಿಸುತ್ತಿರುವದನ್ನ ನೆನೆದರು.ಮುಂದೆ ಓದಿ

1 ಕಾಮೆಂಟ್‌:

  1. ಗುರು,

    ನನಗೆ ಬರಬೇಕಂತಾ ತುಂಬಾ ಆಸೆಯಿತ್ತು. ಕೆಲಸದ ಒತ್ತಡದಲ್ಲಿ ಬರಲಾಗಲಿಲ್ಲ...ಅವರನ್ನು ಬೇಟಿಯಾಗುವ ಅವಕಾಶ ತಪ್ಪಿದ್ದಕ್ಕೆ ನನಗೆ ವಿಷಾದವಿದೆ.
    ಮುಂದಿನ ಬಾರಿ ಖಂಡಿತ ಪ್ರಯತ್ನಿಸುತ್ತೇನೆ.

    ಪ್ರತ್ಯುತ್ತರಅಳಿಸಿ