ಸೋಮವಾರ, ಮಾರ್ಚ್ 09, 2009

ಕನ್ನಡ ಪುಸ್ತಕ ಮತ್ತು ಕನಿಷ್ಠ ೨೫% ರಿಯಾಯಿತಿ ಮಾರಾಟ


ಪುಸ್ತಕ ಪ್ರೇಮಿಗಳಿಗೊಂದು ಸುವರ್ಣಾವಕಾಶ. ನಿಮ್ಮ ಗ್ರಂಥಾಲಯದಲ್ಲಿ ಪುಸ್ತಕ ಭಂಢಾರವನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಙ್ನಾನ ಭಂಢಾರವನ್ನೂ ವೃದ್ಧಿಸಿಕೊಳ್ಳಿ, ಬಹಳ ಕಡಿಮೆ ಖರ್ಚಿನಲ್ಲಿ. ಇಗೋ ನಡೆಯುತ್ತಿದೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಷ್ಟಿತ ಮುದ್ರಕರ ಪುಸ್ತಕ ಮೇಳ. ಕನಿಷ್ಟ ಶೇಕಡ ೨೫ ರಿಂದ ಶೇಕಡ ೬೦ ರ ವರೆಗೆ ರಿಯಾಯಿತಿ. ಕೊಂಡಿರುವ ಪುಸ್ತಕಗಳನ್ನೆ ಇನ್ನೂ ಓದಿ ಮುಗಿಸಿಲ್ಲವೆ? ನಿಮ್ಮ ದು:ಖಕ್ಕೆ ರಿಯಾಯಿತಿ ಕೊಡಿ. ಮುಂದೊಂದು ದಿನ ಓದುವೆನೆಂಬ ಆಶಾವಾದದೊಂದಿಗೆ ಪುಸ್ತಕಗಳನ್ನು ಸಂಗ್ರಹಿಸಿ.

ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಮುಖ್ಯಾಂಶಗಳು,

* ಮಾರ್ಚ್ ೧೦ ರ ವರೆಗೆ ಈ ಮೇಳ ನಡೆಯುತ್ತದೆ. ಸಮಯ ಬೆಳಗ್ಗೆ ೧೦:೩೦ ರಿಂದ ರಾತ್ರಿ ೮ ರ ವರೆಗೆ. ಇನ್ನೆರಡೇ ದಿನ ಉಳಿದಿರುವುದು ನೆನಪಿರಲಿ!
* ಮಳಿಗೆಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಮಳಿಗೆಗಳ ಮೇಲಿನ ಮರಗಳ ನೆರಳು, ಪುಸ್ತಕಾಭಿಮಾನಿಗಳ ದಣಿವನ್ನು ಕಡಿಮೆ ಮಾಡಿವೆ.
ಮತ್ತು ನೂಕು ನುಗ್ಗಲು ಕಡಿಮೆ. (ಇದು ಒಂದು ರೀತಿ ದು:ಖದ ಸಮಾಚಾರವೂ ಹೌದು!)
* ತ ರಾ ಸು ಮತ್ತು ಅ ನ ಕೃ ರವರ ಎಲ್ಲಾ ಪುಸ್ತಕಗಳೂ ೨೫% ರಿಯಾಯಿತಿಯಲ್ಲಿ ಎರಡು ಪ್ರತ್ಯೇಕ ಮಳಿಗೆಗಳಲ್ಲಿ ದೊರೆಯುತ್ತಿವೆ.
* ಮೈಸೂರು ಪ್ರಸಾರಾಂಗದ ಪುಸ್ತಕ ಮಳಿಗೆಯಲ್ಲಿ, ಉತ್ತಮ ಪುಸ್ತಕಗಳಿವೆ. ಉದಾ: ಬಿ ಎಂ ಶ್ರೀ ಯವರ ಸಮಗ್ರ ಸಾಹಿತ್ಯ, ಸಾಮಾನ್ಯವಾಗಿ ಇವುಗಳ
ದರ ಹೆಚ್ಚಿದ್ದರೂ ೩೫% ರಿಯಾಯಿತಿಯಲ್ಲಿ ಕೊಳ್ಳಲು ಬಹಳಷ್ಟು ಅನುಕೂಲ.
* ಸಪ್ನಾ ಕೂಡ ತಮ್ಮ ಪ್ರಕಾಶನದ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರುತ್ತಿದೆ.
* ಹಂಪಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಒಳ್ಳೆಯ ಪುಸ್ತಕಗಳಿವೆ. ೫೦% ರಿಯಾಯಿತಿ.
* ಸರ್ಕಾರಕ್ಕೆ ಸಂಬಂಧಿಸಿದ ಮುದ್ರಕರು ಸಾಮಾನ್ಯ ವಾಗಿ ೫೦% ರಿಂದ ೬೦% ರಿಯಾಯಿತಿ. ನವಕರ್ನಾಟಕ ಕೂಡ ೫೦% ರಿಯಾಯಿತಿ ದರದಲ್ಲಿ
ಪುಸ್ತಕಗಳನ್ನು ಮಾರುತ್ತಿವೆ. ಗೀತ ಪ್ರಕಾಶನ ಮೈಸೂರು:೨೫%
* ಸಂಗೀತ ಪ್ರೇಮಿಗಳಿಗಂತೂ (ಕರ್ನಾಟಕ ಮತ್ತು ಹಿಂದೂಸ್ತಾನಿ) ರಸದೌತಣ. ಸಂಗೀತಕ್ಕೆ ಸಂಬಂಧಿಸಿದ ಬಹಳಷ್ಟು ಪುಸ್ತಕಗಳು ಪ್ರದರ್ಶನದಲ್ಲಿವೆ.
ಮತ್ತೂ ಲಹರಿ ಸಂಸ್ಥೆ ಕೂಡ ಮಳಿಗೆಯನ್ನು ತೆರೆದು ೧೦% ರಿಯಾಯಿತಿ ದರದಲ್ಲಿ ಸಿ ಡಿ ಗಳನ್ನು ಮಾರುತ್ತಿದೆ.
* ತುಳು ನಾಡಿನವರಿಗೆ ಸಂತಸವನ್ನು ತರಬಲ್ಲ, ಗೋವಿಂದ ಪೈ ಸಂಶೋಧನಾ ಸಂಸ್ಥೆಯವರ ಮಳಿಗೆ ಮಳಿಗೆ ಮತ್ತು ದ್ರಾವಿಡ ವಿಶ್ವವಿದ್ಯಾನಿಲಯದ
ಮಳಿಗೆಗಳು, ತುಳು ಮತ್ತು ಯಕ್ಷಗಾನ ಸಂಬಂಧಿಸಿದ ಬಹಳಷ್ಟು ಉತ್ತಮ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
* ಆಧ್ಯಾತ್ಮಿಕ ಪುಸ್ತಕ ಮಳಿಗೆಗಳೂ ಕೂಡ ಇವೆ.
* ರವಿ ಬೆಳಗೆರೆ ಅಭಿಮಾನಿಗಳಿಗೆ, ಭಾವನ ಪ್ರಕಾಶನ ಕೂಡ ಮಳಿಗೆಯನ್ನು ತೆರೆದಿದೆ.
* ಅಂಕಿತ, ಲಂಕೇಶ್ ಮತ್ತು ಅಭಿನವ ಪ್ರಕಾಶಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
* ಆಂಗ್ಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇಲ್ಲ. ತಿಂಡಿ ತಿನಿಸುಗಳ ಮಳಿಗೆಗಳಿಲ್ಲ! :)

ಕೊನೆಗೆ,
ಫೋಟೊ ಒದಗಿಸಿಕೊಟ್ಟ ರವೀಶನಿಗೆ ಧನ್ಯವಾದಗಳು.

8 ಕಾಮೆಂಟ್‌ಗಳು:

  1. ನನ್ನಂತವರು ಬೆಂಗಳೂರಿನಿಂದ ದೂರ ಕುಳಿತು ಹೊಟ್ಟೆ ಉರ್ಕೋತಿದ್ದೀವಿ! ನೀವೇನು ಪುಸ್ತಕ ತಗೊಂಡ್ರಿ?

    ಪ್ರತ್ಯುತ್ತರಅಳಿಸಿ
  2. ಮಲ್ಲಿಕಾರ್ಜುನ ರವರೆ,

    ಛೆ! ನೀವು ಬೆಂಗಳೂರಿನಲ್ಲಿಲ್ಲವೆ? ನಾನು ಎರಡು ದಿನ ಪುಸ್ತಕ ಪ್ರದರ್ಶನದಲ್ಲಿ ಸುತ್ತಾಡಿ, ಬಹಳಷ್ಟು ಪುಸ್ತಕಗಳನ್ನು ಕೊಂಡೆ. (ಎಷ್ಟೋ ಪುಸ್ತಕಗಳ ಹೆಸರುಗಳು ನಿಖರವಾಗಿ ನೆನಪಿಲ್ಲ.) ನೆನಪಿನಲ್ಲಿರುವ ಕೆಲವು ಪುಸ್ತಕಗಳು,
    ೧. ಭಂಡಾಯ - ವ್ಯಾಸರಾಲ ಬಲ್ಲಾಳ (ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ)
    ೨. ವೀಣೆಯ ನೆರಳಿನಲ್ಲಿ - ದೊರೈ ಸ್ವಾಮಿ ಅಯ್ಯಂಗಾರ್
    ೩. ಕನಕೋಪನಿಷತ್ತು - ಬನ್ನಂಜೆ
    ೪. ನಲ್ಲೂರು ಪ್ರಸಾದರ ಒಂದು ಕವನ ಸಂಕಲನ
    *ಯಕ್ಷಗಾನ, ರಂಗಭೂಮಿ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಹರಿಕಥೆ, ಚಿತ್ರಕಲೆಗಳ ಮೇಲೆ ಕೆಲವು ಪುಸ್ತಕಗಳು.
    *ಏಣಗಿ ಬಾಳಪ್ಪ, ಮೈಸೂರು ಸದಾಶಿವರಾಯರು, ಪಿ ಕಾಳಿಂಗರಾವ್, ಮೈಸೂರು ಅನಂತ ಸ್ವಾಮಿ, ವೀಣೆ ವೆಂಕಟಗಿರಿಯಪ್ಪ ಇವರುಗಳ ಸಂಕ್ಷಿಪ ಆತ್ಮಚರಿತ್ರೆಯುಳ್ಳ ಪ್ರತ್ಯೇಕ ಪುಸ್ತಕಗಳು.
    *ಬಾದಾಮಿ ಸ್ಥಳದ ಬಗ್ಗೆ ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿದ ಒಂದು ಪುಸ್ತಕ
    *ಕನ್ನಡ, ತುಳು, ತೆಲುಗು, ಮಲೆಯಾಳಂ, ತಮಿಳು (ದ್ರಾವಿಡ ಭಾಷೆಗಳ) ಪದಗಳ ಸಮಾನಾರ್ಥವಿರುವ ಒಂದು ಪದಕೋಶ,
    *ಶಿವರಾಮ ಕಾರಂತರು ಮತ್ತು ಲೀಲಾ ಕಾರಂತರು ಅನುವಾದಿಸಿದ ಒಂದು ಮರಾಠಿ ಕಾದಂಬರಿ.
    ಇನ್ನೂ ಕೆಲವು ...

    ಇವನ್ನೆಲ್ಲಾ ಯಾವಾಗ ಓದಿ ಮುಗಿಸುತ್ತೀನೋ, ಅದು ಮಾತ್ರ ಗೊತ್ತಿಲ್ಲ!

    ಪ್ರತ್ಯುತ್ತರಅಳಿಸಿ
  3. ಗುರುವೇ,

    ಸರ್, ನಿಮ್ಮ ಹೆಸರೇ ಚೆನ್ನಾಗಿದೆ...ಹೀಗೆ ಮಲ್ಲಿಕಾರ್ಜುನ್ ಬ್ಲಾಗಿನಿಂದ ಹಾರಿಬಂದೆ...ನಿಮಗೂ ನಮ್ಮಂತೆ ಪುಸ್ತಕ ಪ್ರೀತಿಯಿದೆ....ಮಲ್ಲಿಕಾರ್ಜುನ್ ಪುಸ್ತಕ ಮಾರಾಟ ಎಲ್ಲಿದ್ದರೂ ಓಡಿ ಬರುತ್ತಾರೆ...ರಾಶಿ ಕೊಂಡು ಹೋಗುತ್ತಾರೆ...ಒದೋದು ಬಿಡೋದು ನಂತರ..ಅದಕ್ಕೆ ಈ ಬಾರಿ ಅವರು ಬರುತ್ತೆನೆಂದಾಗ ನಾನೇ...ಬರಬೇಡಿ ಅಂತ ತಾಕಿತ್ತು...ಮಾಡಿದ್ದೆ....ಕಾರಣ ತಿಳಿದು ಅವರು ಸುಮ್ಮನಾದರು.....

    ನಿಮ್ಮ ಬ್ಲಾಗಿಗೆ ಮೊದಲಬಾರಿಗೆ ಬಂದಾಗಲೇ...ಪುಸ್ತಕಗಳನ್ನು ತೋರಿಸಿದ್ದೀರಿ...ಖುಷಿಯಾಯಿತು...
    ಬಿಡುವಾದಾಗ ನನ್ನ ಬ್ಲಾಗಿನ ಕಡೆಗೂ ಬನ್ನಿ....
    http://chaayakannadi.blogspot.com/

    ಪ್ರತ್ಯುತ್ತರಅಳಿಸಿ
  4. ಶಿವು,
    ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ತಮ್ಮ ಪ್ರತಿಕ್ರಿಯೆಗೆ ಮತ್ತು ಮಚ್ಚುಗೆಯ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು. ತಾವು ಮತ್ತು ಮಲ್ಲಿಕಾರ್ಜುನ್ ಪುಸ್ತಕ ಪ್ರೇಮಿಗಳು ಎಂದು ಕೇಳಿ ಬಹಳ ಸಂತೋಷವಾಯಿತು.

    ತಮ್ಮ "ಛಾಯಾ ಕನ್ನಡಿಯ" ಬಗ್ಗೆ ತಿಳಿಸಿದ್ದಕ್ಕೆ ಕೂಡ ಧನ್ಯವಾದಗಳು. ಓದಲು ಪ್ರಾರಂಭಿಸುವೆ.

    ಪ್ರತ್ಯುತ್ತರಅಳಿಸಿ
  5. ಗುರುಪ್ರಸಾದ್...

    ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ..ಹಲವು ಪುಸ್ತಕಗಳನ್ನೂ ಕೊಂಡಿದ್ದೇನೆ..

    ನಿಮ್ಮಲ್ಲಿಗೆ ತಡವಾಗಿ ಬಂದಿದ್ದಕ್ಕೆ ..
    ಕ್ಷಮೆ ಇರಲಿ...

    ನಿಮ್ಮ ಬ್ಲಾಗಿನ ಹಳೆಯ ಲೇಖನಗಳನ್ನು ಸಧ್ಯದಲ್ಲೇ ಓದುವೆ..

    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  6. ಪ್ರಕಾಶ್ ರವರೆ,

    ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
    ಹೀಗೆ ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ