ಸೋಮವಾರ, ಮಾರ್ಚ್ 02, 2009

ಪ್ರತಾಪ್ ಸಿಂಹ ಹೇಳಿದ ದೂರಸಂಪರ್ಕ (Telecommunications) ಪಾಠ

ಭೂತದ ಬಾಯಲ್ಲಿ ಭಗವದ್ಗೀತೆ

ಪ್ರತಾಪ್ ಸಿಂಹರ ಈ ಶನಿವಾರದ ಲೇಖನ ಓದಿದ ಮೇಲೆ ನನಗೆ ಮೊದಲು ನೆನಪಿಗೆ ಬಂದಿದ್ದು, ಉಪೇಂದ್ರ ಚಲನಚಿತ್ರದಲ್ಲಿ "ಹೌದು ನಾನು ಕಚಡ, ಲೋಪರ್, ಪಾಪಿ ಏನೀಗ?" ಎಂದು ಉಪೇಂದ್ರ ಹೇಳುವುದು. ಈ ಕಥೆಯೂ ಹೀಗೆ ಆಯಿತು. ಹೋದ ವಾರ ಬರೆದಿದ್ದೇ ತಪ್ಪು ಕಣಯ್ಯ, ಬೇಕಿದ್ರೆ ಯಾರಾದ್ರು ಪರಿಣಿತರನ್ನು ಕೇಳಿ ಬರೆಯಪ್ಪ ಎಂದು ಎಷ್ಟೋ ಜನ ಹಿತೈಷಿಗಳು ಪ್ರತಾಪ್ ಸಿಂಹನಿಗೆ ತಿಳಿ ಹೇಳಿದರು. ಆದರೆ ಪ್ರತಾಪ್ ಕೇಳಲಿಲ್ಲ, ಹೌದು ನಾನು ಅಙ್ನಾನಿ, ನಾನು ಬರೆಯೋದೆಲ್ಲಾ ಅರ್ಥವಿಲ್ಲದ್ದೆ ನಿಮಗೇನು ಎಂಬಂತೆ ಈ ವಾರದ ಸಂಪಾದಕೀಯವನ್ನು ಅತಿ ಕೆಟ್ಟದಾಗಿ ಬರೆದಿದ್ದಾರೆ.

ನಾನು ಈ ೩ ನೇ ಪೀಳಿಗೆ ತಂತ್ರಙ್ನಾನವಾದ UMTS (ಪ್ರತಾಪ್ ಸಿಂಹ ಹೇಳುವ product development!) ಅಭಿವೃದ್ಧಿಯಲ್ಲಿ ಕೆಲಸ ಮಾಡಿರುವುದರಿಂದ ದೂರಸಂಪರ್ಕ ತಂತ್ರಙ್ನಾನವನ್ನು ಅಲ್ಪ ಸ್ವಲ್ಪ ಅರಿತಿರುವೆ. ಆದ್ದರಿಂದ ಪ್ರತಾಪ್ ಸಿಂಹನ ಲೇಖನ ಓದಿ ಪಕ ಪಕ ನಕ್ಕಿಬಿಟ್ಟೆ! ಇಸ್ರೋ ಅಭಿವೃದ್ಧಿಪಡಿಸಿದ ಉಪಗ್ರಹಗಳಿಂದ ತಂತಿರಹಿತ ದೂರಸಂಪರ್ಕ (mobile telecommunications) ಕ್ರಾಂತಿಯಾಗಿದೆ ಎಂದು ಪ್ರತಾಪ್ ಮಾಹಾಶಯರು ಹೇಳಿಬಿಟ್ಟಿದ್ದಾರೆ.ನಾವು ಮಾಡುವ ಮೊಬೈಲ್ ಕರೆಗಳು ಈ ಉಪಗ್ರಹಗಳ ಮೂಲಕವೇ ಹಾದು ಹೋಗುವುದಂತೆ! :))

ಸ್ವಾಮಿ ಪ್ರತಾಪ್ ಸಿಂಹ, ನಾವು ಬಳಸುವ ಮೊಬೈಲ್ ಫೋನ್ ಗಳಿಗೂ, ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಉಪಗ್ರಹ ಚಾಲಿತ ಫೋನಗಳನ್ನು (satellite phone) ಸಾಮಾನ್ಯವಾಗಿ ಸೇನೆಯಲ್ಲಿ ಬಳಸುತ್ತಾರೆ. ಇತ್ತೀಚೆಗೆ ಉಗ್ರರು ಕೂಡ ಈ ಫೋನ್ ಗಳನ್ನು ಬಳಸುತ್ತಿರುವುದು ದುರದೃಷ್ಟಕರ.ಇನ್ನು ಬಹಳ ಸರಳ ಸಾಲುಗಳಲ್ಲಿ ಹೇಳುವುದಾದರೆ, ನಾವು ಬಳಸುವ ಮೊಬೈಲ್ ಫೋನ್ ಗಳು ಒಂದು ನಿರ್ಧಿಷ್ಟ ತರಂಗಾಂತರ ಶ್ರೇಣಿಯಲ್ಲಿ ವಿದ್ಯುತ್ ತರಂಗಗಳನ್ನು ಹಾಯಿಸಿ, (ಮೊಬೈಲ್ ಫೋನ್ ನಿಂದ base station ನ ವರೆಗೆ) ನಂತರ ಎಲ್ಲವೂ ತಂತಿಯ ಮೂಲಕ digital signal ಗಳನ್ನು ಕಳಿಸಿ ಕೆಲಸ ಮಾಡೂತ್ತವೆ. ಇದಕ್ಕೂ ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಪ ಸ್ವಲ್ಪ ಕಲಿತ ನಮಗೇ ತಂತ್ರಙ್ನಾನದ ಬಗ್ಗೆ ಬರೆಯುವಾಗ ಹೆದರಿಕೆಯಾಗುತ್ತದೆ. ಎಲ್ಲಿ ತಪ್ಪಾಗುವುದೋ ಎಂದು. ಪ್ರತಾಪ್ ನೋಡಿ, ಮೈ ಚಳಿ ಬಿಟ್ಟು ಎಲ್ಲವನ್ನೂ ಬೆತ್ತಲೆಯಾಗಿ ಬರೆದುಬಿಟ್ಟಿದ್ದಾರೆ!

ಮತ್ತದೇ ತಲೆ ಕೆಟ್ಟ ವಿತಂಡ ವಾದಕ್ಕೆ ಉತ್ತರಿಸುವುದಕ್ಕೆ ಬೇಸರ. ಆದರೂ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಬೇಕೆಂಬ ಬಯಕೆ.

ಪ್ರತಾಪ್ ಸಿಂಹ, ಪೇಟೆಂಟ್ ನಲ್ಲಿ ಚಿಲ್ಲರೆ ಪೇಟೆಂಟ್, ನಗದು ಪೇಟೆಂಟ್ ಗಳೆಂಬ ಎರಡು ವಿಧಗಳಿಲ್ಲಪ್ಪ. ಇನ್ಫೋಸಿಸ್ ಬಳಿ ಇರುವುದೆಲ್ಲಾ ಚಿಲ್ಲರೆ ಪೇಟೆಂಟ್ ಅಂತೆ. ಇಂತಹ ಒಂದು ಹೇಳಿಕೆ ಕೊಡುವ ಅರ್ಹತೆಯಾದರೂ ಪ್ರತಾಪ್ ಗಿದೆಯೆ? ತಾನು ಓದಿರುವುದೇನು? ತಾನು ಬರೆಯುತ್ತಿರುವುದೇನು ಎಂಬುದರ ಬಗ್ಗೆ ಸ್ವಲ್ಪ ವಿವೇಚನೆ ಇದ್ದಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲವೇನೋ?

ವಿಜಯಕರ್ನಾಟದ ಆರ್ಥಿಕ ಸುದ್ದಿಯ ವಿಭಾಗದಲ್ಲಿ ಹಿಂದಿನ ದಿನದ ಎಕನಾಮಿಕ್ ಟೈಮ್ಸ್ ಸುದ್ದಿಯ ಹಳಸನ್ನು ಪ್ರಕಟಿಸುವುದಕ್ಕಿಂತ, ಬೆನ್ನೆಟ್ಟೆನ್ ಕೋಲ್ಮಾನ್ ನಿಂದ ಹೊರಬಂದು, ನವೀನ ಪತ್ರಿಕೆಯನ್ನು ಪ್ರಾರಂಭಿಸುವ ತಾಕತ್ತಿದೆಯೆ ಪ್ರತಾಪ್ ಸಿಂಹನಿಗೆ? ಇಲ್ಲಾ! ಎಲ್ಲದ್ದಕ್ಕೂ ತನ್ನದೇ ಆದ ಸಮಯ ಹಿಡಿಯುತ್ತೆ. ಮಾ. ತಂ ಕ್ಷೇತ್ರದಲ್ಲೂ ಅಷ್ಟೆ, ಒಂದೇ ದಿನದಲ್ಲಿ R&D ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳಿ ನಡೆದಿವೆ. ಉದಾಹರಣೆಗೆ "ತೇಜಸ್ ನೆಟ್ವರ್ಕ್ಸ್" ಪಕ್ಕಾ ದೇಶೀಯ product ಸಂಸ್ಥೆ. ಈ ರೀತಿಯ ಸಂಸ್ಥೆಗಳು ನೂರಾರಿವೆ. ಆದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಸಮಯ ಬೇಕಷ್ಟೆ. ಅಷ್ಟಕ್ಕೂ ಅಮೇರಿಕಾದಲ್ಲಿರುವಷ್ಟು ಉನ್ನತ ವ್ಯಾಸಂಗ ಮಹಾ ವಿದ್ಯಾಲಯಗಳು ಭಾರತದಲ್ಲಿ ಕಡಿಮೆ, ಮತ್ತು ಬಹಳಷ್ಟು ಸಂಶೋಧನೆ ನಡೆಯುವುದು ಉನ್ನತ ವ್ಯಾಸಂಗ ವಿದ್ಯಾಲಯಗಳಲ್ಲೇ.

ಇನ್ಫೋಸಿಸ್ ನ 'finacle' ಎಂಬ ಉತ್ಪನ್ನ (product) ಜಗತ್ಪ್ರಸಿದ್ಧ ಸ್ವಾಮಿ. ಇದನ್ನು ಬಹಳಷ್ಟು ಬ್ಯಾಂಕಗಳು ಬಳಸುತ್ತವೆ. ಮತ್ತೊಮ್ಮೆ ತಮ್ಮಲ್ಲಿ ವಿನಂತಿ, ತಮಗೆ ಗೊತ್ತಿಲ್ಲದ ಸಂಗತಿಗಳನ್ನು ಕೇಳಿ ತಿಳಿಯಿರಿ. ತಿಳಿದ ಮೇಲೆ ಅದನ್ನು ಚಿಲ್ಲರೆ ಎನ್ನುವ ದುರಹಂಕಾರ ಬೇಡ!

ಒಂದೇ ಸಾಲಿನಲ್ಲಿ ಪ್ರಾತಾಪ್ ಸಿಂಹನ ಸಂಪಾದಕೀಯದ ಬಗ್ಗೆ ಅಭಿಪ್ರಾಯ ಹೇಳುವುದಾದರೆ, "ಭೂತದ ಬಾಯಲ್ಲಿ ಭಗವದ್ಗೀತೆ"

8 ಕಾಮೆಂಟ್‌ಗಳು:

  1. ಗುರು ನಾನು ಸ್ವಲ್ಪ ಸಾಫ್ಟ್ ಆಗಿ ಬರೆದ್ರೆ ನೀವು ಸ್ವಲ್ಪ ಹಾರ್ಡ್ ಆಗಿ ಬರೆದ್ರಿ!

    ನಂಗೂ ಈ ತಪ್ಪು ಗೊತ್ತಾಗಿತ್ತು ಅದ್ರೆ ಮತ್ತೆ ಅದನ್ನು ಪ್ರಸ್ತಾವಿಸಿದ್ರೆ ನಾನು ಪ್ರತಾಪ್ ರನ್ನು ವಿರೋಧಿಸೋದಕ್ಕೆ ವಿರೋಧಿಸ್ತೀನಿ ಅಂತಾರೆ...
    ನಾನು ಮೊದಲು ವಿರೋಧಿಸಿ ಬರೆದದ್ದು ಮಣಿಕಾಂತ್ ಲೇಖನಕ್ಕೆ .ಅದು ಎಷ್ಟೋ ಜನಕ್ಕೆ ಗೊತ್ತಿಲ್ಲ..

    ಪ್ರತ್ಯುತ್ತರಅಳಿಸಿ
  2. ಪ್ರತಾಪ್ ನದು ಒಂದು ಹಲಗಿನ ಕತ್ತಿಯಾದರೆ, ನಿಮ್ಮದು ಎರಡೂ ಕಡೆ ಹಲಗು! ಆದರೂ ಚೆನ್ನಾಗಿ ವಿಷಯವನ್ನು ವಿವರಿಸಿದ್ದೀರಿ.

    ಪ್ರತ್ಯುತ್ತರಅಳಿಸಿ
  3. ಗುರು,
    ತು೦ಬಾ ಖಾರವಾಗೇ ಪ್ರತಿಕ್ರಿಯಿಸಿದ್ದೀಯ!

    ಪ್ರತ್ಯುತ್ತರಅಳಿಸಿ
  4. ಸಂದೀಪ್, ಮಲ್ಲಿಕಾರ್ಜುನ, ರವೀಶ , ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. When Pratap wrote “homestay owners leave their homes to IT people and they themselves stay in sheds” I wrote to my contact in Madikeri, who coordinates homestays for tourists, for clarification on this issue-

    she wrote back- “what rubbish it is very easy to write and to talk : a pen and tongue both have no bones in them. Actually there are homestays where the people lend their entire house to the tourists, I don’t deny that but they will stay in their old house and the new house could be given to the tourists.
    I really don’t think such a thing will be there but I don’t know in what bases he might have written that.

    ಪ್ರತ್ಯುತ್ತರಅಳಿಸಿ
  6. ಪತ್ರಿಕಾ ಉದ್ಯಮವೇನು ಹಿ೦ಜರಿತದಿ೦ದ ಮುಕ್ತವಾಗಿಲ್ಲ. ಇ೦ದು ಒ೦ದೂವರೆ- ಎರಡು ರುಪಾಯಿಗೆ ಮಾರಾಟವಾಗುವ ಪತ್ರಿಕೆ ಮುದ್ರಿಸಲು ಏನಿಲ್ಲವೆ೦ದರು ೧೫-೨೦ ರೂ ಖರ್ಚಾಗುತ್ತದೆ. ಆದರೆ ಲಕ್ಷಾ೦ತರ ರೂ ವಿವಿಧ ಕ೦ಪೆನಿಗಳ ಜಾಹೀರಾತಿನಿ೦ದ ಹರಿದು ಬರುವುದರಿ೦ದ ದಿನಪತ್ರಿಕೆಯನ್ನು ಕಡಿಮೆ ಬೆಲೆಗೆ ಮಾರಲು ಸಾಧ್ಯವಾಗಿದೆ. ಆರ್ಥಿಕ ಹಿ೦ಜರಿತದಿ೦ದ ಜಾಹೀರಾತುಗಳು ಕಡಿಮೆಯಾದ೦ತೆ ಪತ್ರಿಕೆಯ ವೆಚ್ಚ ತಗ್ಗಿಸಲು ಪುಟಗಳನ್ನು ಕಡಿತಗೊಳಿಸುವುದು, ಬೆಲೆ ಹೆಚ್ಚಿಸುವುದು, ಬರಹಗಾರರ ಸ೦ಬಳ/ಸ೦ಭಾವನೆ ಕಡಿತಗೊಳಿಸುವುದು ಮಾಡಬೇಕಾಗುತ್ತದೆ...

    ಪ್ರತ್ಯುತ್ತರಅಳಿಸಿ
  7. ಶ್ರೀನಿಧಿ,
    ಹೋಮ್ ಸ್ಟೇ ಮತ್ತು ಪತ್ರಿಕಾ ರಂಗಕ್ಕೆ ತಗುಲಿರುವ ಆರ್ಥಿಕ ಹಿಂಜರಿತದ ಬಿಸಿ, ಇವುಗಳ ಬಗ್ಗೆ ಮಾಹಿತಿಗೆ ಧನ್ಯವಾದಗಳು.
    ಪ್ರತಾಪ್ ಸಿಂಹರಿಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿದು ವಾದ ಗೆಲ್ಲುವ ಹುಚ್ಚು. ಜನರು ವಾರಾಂತ್ಯದಲ್ಲಿ ತಮ್ಮ ಮನೆಯನ್ನು ಅಥವಾ ತಮ್ಮ ಮನೆಯ ಒಂದು ಭಾಗವನ್ನೋ ಬಾಡಿಗೆಗೆ ಕೊಟ್ಟು, ಅದರಿಂದ ಬರುವ ದುಡ್ಡು ಅವರ ಕುಟುಂಬ ವರ್ಗದ ಅರೋಗ್ಯಕ್ಕೊ, ವಿದ್ಯಾಭ್ಯಾಸಕ್ಕೊ ಸಹಾಯವಾದಲ್ಲಿ ಒಳ್ಳೆಯದೇ! ಕೊನೆಯದಾಗಿ ಎಲ್ಲ ಸುಖವೂ ಸ್ವಲ್ಪ ಕಷ್ಟಪಟ್ಟರೇ ಬರುವುದಲ್ಲವೇ?

    ಪ್ರತ್ಯುತ್ತರಅಳಿಸಿ
  8. ಅನಾಮಧೇಯ8:00 ಅಪರಾಹ್ನ

    ಒಂದೇ ಮಾತಿನಲ್ಲಿ ಹೇಳ್ಬೇಕು ಅಂದ್ರೆ ಪತ್ರಿಕಾ ರಂಗದ ಜಲಸ್ ನಿಮನ್ನು ಕಾಡುತ್ತ ಇದೆ ಗುರುವೇ ಪ್ರತಾಪ್ ಸಿಂಹ ಅಸ್ಟೊಂದು ಪಾಪ್ಯುಲರ್ ಆಗಿದ್ದು ನಿಮ್ಮ ಕೈನಲ್ಲಿ ಸಹಿಸೋಕೆ ಆಗ್ತಾ ಇಲ್ಲ .
    ಅವನ ಮಾತು ಗಳಲ್ಲಿ ಸತ್ಯ ಇಲ್ಲದೆ ಇದ್ದಿದರೆ ಮುಸ್ಲಿಂ ಉಗ್ರ ಗಮಿಗಳು ಯಾಕೆ ಅವನನ್ನು ಟಾರ್ಗೆಟ್ ಮಾಡುತ್ತ ಇದ್ದರು .ದೇವರ ದಯೆಯಿಂದ ಅವರೆಲ್ಲ ಸಿಕ್ಕಿಬಿದ್ದರು . ವಸ್ತು ಸ್ತಿತಿ ಬಗ್ಗೆ ನಿಸ್ತೇ ಯಿಂದ ಹೇಳೋರ್ಗೆ ಇವೆ ಬಹುಮಾನ ಇನ್ನಾದರೂ ಜಲಸ್ ಬಿಟ್ಟು ಚೆನ್ನಾಗಿ ಬರೆದಾಗ ಮೆಚ್ಚುಗೆ ಹಾಕು ಗುರುವೇ ದೊಡ್ಡವ ಆಗ್ತೀಯ ಸುಮ್ಮನೆ ಚಿಕ್ಕದಾಗಿ ಬರೆದು ಸಣ್ಣವ ಆಗಬೇಡ .

    ಪ್ರತ್ಯುತ್ತರಅಳಿಸಿ