ಗುರುವಾರ, ಆಗಸ್ಟ್ 13, 2009

ಅಕ್ಕ ಪಕ್ಕದವರು ಕಾಣೆಯಾಗಿಬಿಟ್ಟರುಫೋಟೋ ಕೃಪೆ : http://blogtown.portlandmercury.com


ಶ್ರೇಷ್ಠ ಗೊತ್ತಲ್ಲ? ಅವನ ಶಾಲೆಯವರು ಮುಂಜಾಗ್ರತಾ ಕ್ರಮವಾಗಿ, ಹಂದಿ ಜ್ವರ ಹರಡದಂತೆ ತಡೆಯುವ ಮುಖವಾಡವನ್ನು ಧರಿಸಿ ಬರಲು ಹೇಳಿದ್ದರು. ನಾನು ಏನೂ ಬೇಡ ಪುಟ್ಟ, ಅದು ಜ್ವರ ಬಂದಿರೋರ್ಗೆ ಹೇಳಿರ್ತಾರೆ ಅಷ್ಟೆ, ಎಲ್ಲರಿಗೂ ಅಲ್ಲ ಎಂದು ಎಷ್ಟು ಗೋಗರೆದರೂ ಬಿಡಲೇ ಇಲ್ಲ. ಕೊನೆಗೂ ಔಷಧಿ ಅಂಗಡಿಗೆ ಹೋಗಲೇ ಬೇಕಾಯಿತು. ಅಲ್ಲಿ ತುಂಡರಿಸಿದಂತೆ ಹೇಳೇಬಿಟ್ಟ, ಇಲ್ಲಾ ಸಾರ್ .. ಎಲ್ಲೂ ಸಿಕ್ತಾ ಇಲ್ಲ.. ಸಿಕ್ಕಾಪಟ್ಟೆ ಬೇಡಿಕೆ ಇದೆ. ಮುಂದಿನ ಶಾಲೆಗೆ ಹೋಗಿ ಬಂದು ಪಟ್ಟು ಹಿಡಿದೇ ಬಿಟ್ಟ, ಬೇಕೇ ಬೇಕು, ಎಲ್ಲಾ ಮಕ್ಕಳು ಅದನ್ನು ಹಾಕ್ಕೊಂಡು ಬಂದಿದ್ರು ಅಂತ. ನಾನು ಸ್ವಲ್ಪ ಕಷ್ಟ ಪಟ್ಟು ಸುತ್ತ ಮುತ್ತ ಸುತ್ತಾಡಿ ಕೊನೆಗೂ ಒಂದು ಔಷಧಾಲಯಕ್ಕೆ ಹೋಗಿ

ಗುರು "ಸ್ವೈನ್ ಫ್ಳೂ ಮಾಸ್ಕ್" ಇದ್ಯಾ ಅಂದೆ?
ಅವ ಇದೆ ಸಾರ್... ೨೫೦ ರುಪಾಯಿ ಅಂದ.. ಸದ್ಯ ದುಡ್ಡು ತೆಗೆದುಕೊಂಡು ಹೋಗಿದ್ದೆ.
ದುಡ್ಡು ಕೊಟ್ಟು ಕೊಂಡು, ಪಕ್ಕದಲ್ಲಿ ನೋಡ್ತೀನಿ,

ಪಕ್ಕದಲ್ಲಿ ನಿಂತಿದ್ದ ಇಬ್ಬರೂ ಆಸಾಮಿಗಳು ಪರಾರಿ.. ಇಬ್ಬರೂ ಹೋಗಿ ಔಷಧಾಲಯದ ಮತ್ತೊಂದು ದ್ವಾರದಲ್ಲಿ ನಿಂತುಬಿಟ್ಟಿದ್ದಾರೆ.

ನಂತರ ಅವರಿಗೆ ಕೇಳುವಂತೆ ಜೋರಾಗಿ, ನನ್ನ ಸೋದರಳಿಯನ ಶಾಲೆಯಲ್ಲಿ ಮುಖವಾಡ ಧರಿಸಿ ಬರುವಂತೆ ಹೇಳಿದ್ದಾರೆ ಎಂದು ಕೂಗಿ ಹೇಳಿ ಅಲ್ಲಿಂದ ಹೊರಟೆ.


ಆದರೂ ನನಗೆ ಸಮಾಧಾನ ಇಲ್ಲ, ಶಾಲೆಯವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದರೆ, ತಾತ್ಕಾಲಿಕವಾಗಿ ಶಾಲೆಗೆ ೧೫ ದಿನ ರಜ ಕೊಡಬಹುದು. ಅದನ್ನು ಬಿಟ್ಟು LKG/UKG ಮಕ್ಕಳಿಗೆ ಮುಖವಾಢ ಧರಿಸಿ ಬನ್ನಿ ಎಂದರೆ, ಅವರಿಗೆ ಮುಖವಾಡವನ್ನು ಬಳಸವು ವಿಧಾನವನ್ನು ಕಲಿಸಿಕೊಡಲು ಸುಲಭವೇ? ಕಲಿಸಿಕೊಟ್ಟರೂ ಅದನ್ನು ಅವರು ಪಾಲಿಸುತ್ತಾರೆಯೇ? ಅದೇ ಮುಖವಾಡವನ್ನು, ಪಿಸ್ತೊಲ್ ಮಾಡಿಕೊಂಡೋ, ಚೆಂಡು ಮಾಡಿಕೊಂಡೋ ಆಟವಾಡಲು ಪ್ರಾರಂಭಿಸಿದರೆ ತೊಂದರೆ ಹೆಚ್ಚಾಗುವುದಲ್ಲವೇ?

ಅಯ್ಯೋ, ಶಾಲೆಯವರು ಏನಾದ್ರು ಮಾಡ್ಕೋಳ್ಲಿ, ನೀವು ಶಾಲೆಗೆ ಕಳಿಸಬೇಡಿ ಅಂತೀರ?

2 ಕಾಮೆಂಟ್‌ಗಳು:

  1. ಗುರುವೇ,

    ಎಲ್ಲರ ಮನೆಯ ಕತೆಯೂ ಇದೇ ಆಗಿದೆಯಲ್ಲಾ...

    ಪ್ರತ್ಯುತ್ತರಅಳಿಸಿ
  2. ಫೋಟೊ ಸೂಪರ್... ಏನು ಮುಂಜಾಗರೂಕತೆ ತೆಗೆದುಕೊಂಡರೂ ಅಷ್ಟೇ ಸರ್ ಈ ವಾಯು ಮುಖಾಂತರ ಹರಡೊ ರೋಗಗಳು ಕಂಟ್ರೋಲ್ ಮಾಡೊದು ಸುಲಭ ಅಲ್ಲ ಬಿಡಿ, ಮಕ್ಕಳು ಕೆಲ ದಿನ ಮನೆಯಲ್ಲಿರೋದೇ ವಾಸಿ

    ಪ್ರತ್ಯುತ್ತರಅಳಿಸಿ