ಶನಿವಾರ, ಆಗಸ್ಟ್ 01, 2009

ಮೂಕಜ್ಜಿಯ ಕನಸುಗಳನ್ನು ಮೂರನೆ ಬಾರಿ ಓದಿದಾಗ,ಡಾ. ಕೆ. ಶಿವಾರಾಮ ಕಾರಂತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ನಾನು ಮೊದಲನೆ ಬಾರಿಗೆ ಓದಬೇಕೆಂದುಕೊಂಡಿದ್ದು, ಇಷ್ಟು ಚಿಕ್ಕ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿಯೇ ಎಂಬ ಕುತೂಹಲಕ್ಕಾಗಿ. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾನ್ನುಡಿ ಈ ಪುಸ್ತಕಕ್ಕೇ ಹೇಳಿ ಮಾಡಿಸಿದಂತಿದೆ ಎಂದು ತಿಳಿದಿಕೊಳ್ಳಲು ಕೆಲವೇ ಪುಟಗಳ ಓದು ಸಾಕಾಗಿತ್ತು. ಇನ್ನು ಎರಡನೇ ಮತ್ತು ಮೂರನೇ ಬಾರಿ ಓದಿದ್ದು, ಏಕೆಂದು ಸಮಂಜಸವಾಗಿ ಹೇಳಲಾರೆ. ಅದೇನೋ ಎಷ್ಟು ಬಾರಿ ಓದಿದರೂ ಹೊಸ ಹೊಸ ವಿಚಾರಗಳ ಮಂಥನ ನಡೆಸುತ್ತದೆ ಮನಸ್ಸು. ಕಾದಂಬರಿಯನ್ನು ಹೊಸೆದಿರುವ ಶೈಲಿ, ಭಾಷೆ, ಬರವಣಿಗೆಯ ಸರಳತೆ ಮತ್ತೊಮ್ಮೆ, ಮಗದೊಮ್ಮೆ ಓದುವಂತೆ ಪ್ರೇರಿಪಿಸಿತು ಎನ್ನಲೆ? ಅಥವಾ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವ ವಿಚಾರಧಾರೆ ಇರುವ ನನಗೆ, ಕಾದಂಬರಿಯಲ್ಲೂ ಇಂತಹ ವಿಚಾರಧಾರೆ ಇರುವುದು ಇಷ್ಟವಾಗಿ ಮತ್ತೊಮ್ಮೆ ಓದಿದೆನೇ? ನನ್ನ ಯಾವ ಹಿರಿಯರಲ್ಲೂ ’ಎಲ್ಲವನ್ನೂ ವಿಚಾರ ಮಾಡಿ’ ನೋಡುವ ಗುಣ ಕಾಣದೆ ಇದ್ದುದ್ದನ್ನು, ಈ ಮೂಕಜ್ಜಿಯಲ್ಲಿ ಕಂಡು ಈ ಪುಸ್ತಕವೇ ನನ್ನ ಅಜ್ಜಿಯಾಗಿಬಿಟ್ಟಿತೇ, ಪುಸ್ತಕವನ್ನು ಓದುವುದೇ ಅಜ್ಜಿಯೊಂದಿಗೆ ಮಾತನ್ನಾಡುತ್ತಿರುವಂತೆ ಎಂದು ಕಲ್ಪಿಸಿಕೊಂಡೆನೇ? ಈ ಪ್ರಶ್ನೆಗಳಿಗೆ ಉತ್ತರಗಳು ನನಗೆ ಬೇಕಂತಿಲ್ಲ, ಈ ಪುಸ್ತಕ ಕೊಟ್ಟ ಆ ಅದ್ಭುತ ಓದಿನ ಅನುಭವಕ್ಕೆ ಕಾರಣಗಳನ್ನು ಹುಡುಕುವ ಅವಶ್ಯಕತೆಯಿಲ್ಲ. ಹೆಚ್ಚು ಕೊರೆಯೊಲ್ಲ ನಿಮ್ಮನ್ನು. ಈ ಪುಸ್ತಕದ ಸಣ್ಣ ಪರಿಚಯ ಇಲ್ಲಿ. ಮುಂದೆ ಓದಿ.

4 ಕಾಮೆಂಟ್‌ಗಳು:

 1. ಕಾರಂತರ ಆ ಕೃತಿ ನನಗೂ ತುಂಬಾ ಇಷ್ಟವಾದುದು. ಪ್ರತಿಸಲ ಓದಿಗೂ ಹೊಸ ಆನುಭವವನ್ನು ಕೊಡುತ್ತದೆ ಅಲ್ವಾ ಗುರು.

  ಪ್ರತ್ಯುತ್ತರಅಳಿಸಿ
 2. ಶಿವು,
  ನೀವು ಹೇಳಿದ ಹಾಗೆ ಪುಸ್ತಕವನ್ನು ಪ್ರತಿ ಬಾರಿ ಓದಿದಾಗಲೂ ಹೊಸ ಅನುಭವವಾಗುತ್ತದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. nanu kudaa oodideenee ...onde bari....shivarama karantharu odugaralli vicharawantheke yannu yecharrisutharee...

  ಪ್ರತ್ಯುತ್ತರಅಳಿಸಿ
 4. ಶೈಲಾರವರೆ,
  ಪುಸ್ತಕದ ಮಹತ್ವವನ್ನು ಅನುಮೋದಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ