ಬುಧವಾರ, ಡಿಸೆಂಬರ್ 30, 2009

ಇನ್ನು ಕನ್ನಡ ಕಾವ್ಯಗಳನ್ನು ಜನ ಸಾಮಾನ್ಯರಿಗೆ ಹತ್ತಿರ ತರುವವರು ಯಾರು?

ಕನ್ನಡ ಕಾವ್ಯವನ್ನು ಸುಗಮ ಸಂಗೀತ, ಭಾವಗೀತೆ ಎಂಬಿತ್ಯಾದಿ ಹೆಸರುಗಳಿಂದ ಹಾಡಿ ಸಾಮಾನ್ಯರ ಸಮೀಪಕ್ಕೆ ತಂದು ತನು ಮನಗಳನ್ನು ತುಂಬಿದ್ದ ಸಿ ಅಶ್ವಥ್ ಇಂದು ದೂರವಾಗಿದ್ದಾರೆ. ಬರೀ ಸುಗಮ ಸಂಗೀತ ಲೋಕಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ, ಕಾವ್ಯ, ಸಂಗೀತ ಒಟ್ಟಿನಲ್ಲಿ ಕರ್ನಾಟಕಕ್ಕೇ ಇದು ತುಂಬಲಾರದ ನಷ್ಟ ಹೌದು.

[caption id="attachment_702" align="aligncenter" width="544" caption="ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್"]ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್[/caption]


ಶಿಶುನಾಳ ಶರೀಫರ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿ ಕನ್ನಡಿಗರ ಮನಸೂರೆಗೊಂಡಿದ್ದ ಸಂಗೀತಗಾರ ಕಣ್ಮರೆಯಾದ ಮೇಲೆ, ಶರೀಫರ ಉಳಿದ ಹಾಡುಗಳಿಗೆ ಸ್ವರ ಹಾಕುವವರು ಯಾರು? ಜೆ ಎಸ್ ಶಿವರುದ್ರಪ್ಪನವರ ರವರ "ಎಲ್ಲೋ ಹುಡುಕಿದೆ ಇಲ್ಲದ ದೇವರ", ಯಾವುದೀ ಪ್ರವಾಹವೂ, ಆಕಾಶದ ನೀಲಿಯಲ್ಲಿ, ಬೇಂದ್ರೆಯವರ ’ಶ್ರಾವಣ, ಕುರುಡು ಕಾಂಚಾಣ, ನೀ ಹಿಂಗ ನೋಡಬ್ಯಾಡ ನನ್ನ, ಕೆ ಎಸ್ ನರಸಿಂಹಸ್ವಾಮಿಯವರ "ಮೊದಲ ದಿನ ಮೌನ", ಅಡಿಗರ "ಮೌನ ತಬ್ಬಿತು ನೆಲವ ಜುಮ್ಮನೆ" ಕುವೆಂಪುರವರ ಬಾ ಇಲ್ಲಿ ಸಂಭವಿಸು, ನೂರು ದೇವರನೆಲ್ಲಾ ನೂಕಾಚೆ ದೂರ, ಚನ್ನವೀರ ಕಣವಿಯವರ ಬಾ ಮಲ್ಲಿಗೆ, ಮುಂಜಾವಿನಲಿ ತುಂತುರಿನ ಸೋನೆ ಮಳೆ, ಬಿ ಆರ್ ಲಕ್ಷ್ಮಣ್ ರಾವ್ ರವರ ಜಾಲಿ ಬಾರಿನಲ್ಲಿ, ಸುಬ್ಬಭಟ್ಟರ ಮಗಳೆ ಹಾಡುಗಳನ್ನೆಲ್ಲಾ ಇನ್ಮುಂದೆ ಧ್ವನಿ ಸುರಳಿಯಲ್ಲಿ ಮಾತ್ರ ಕೇಳಬೇಕೆ? ಅಶ್ವಥ್ಥರ ಕಂಚಿನ ಕಂಠದಿಂದ ನೇರವಾಗಿ ಕೇಳುವ ಅವಕಾಶ ಮುಗಿದು ಹೋಯಿತೇ?


ಮುಂದೆ ಓದಿ

ಮಂಗಳವಾರ, ಡಿಸೆಂಬರ್ 29, 2009

ಕುವೆಂಪು ಜಯಂತಿ

ಇಂದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರ ಜನ್ಮ ದಿನ.

kuvempu

ಕುವೆಂಪುರವರ ಬಗ್ಗೆ ಹಿಂದೆ ಬರೆದ ಎರಡು ಕಿರು ಲೇಖನಗಳನ್ನು ಇಲ್ಲಿ ಓದಿ.

ಕುವೆಂಪು - ೧

ಕುವೆಂಪು - ೨


ಕುವೆಂಪು ರವರ ಬಗ್ಗೆ ಕನ್ನಡದ ದೈತ್ಯ ಕಾದಂಬರಿಕಾರ "ಅ ನ ಕೃ" ರವರು ಹೀಗೆನ್ನುತ್ತಾರೆ. (ಕನ್ನಡ ಕುಲರಸಿಕರು ಪುಸ್ತಕದಿಂದ ಆರಿಸಿಕೊಂಡದ್ದು)

"

ಕೆ. ವಿ. ಪುಟ್ಟಪ್ಪನವರ ಕೃತಿಗಳ ಬಗ್ಗೆ ಪ್ರಸ್ತಾಪಿಸುತ್ತಾ ರಾಜರತ್ನಂ ಅವರನ್ನು ’ಕನ್ನಡದ ದೈತ್ಯ’ (Titan) ಎಂದು ಸಂಬೋಧಿಸಿದರು. ಕುವೆಂಪು, ಅವರ ಕಾವ್ಯಸೃಷ್ಟಿಯ ಅಗಾಧತೆಯನ್ನು ಕಂಡವರಿಗೆ ಈ ಮಾತು ಅಕ್ಷರಶಃ ಸತ್ಯವೆನಿಸದಿರಲಾರದು.


ಮುಂದೆ ಓದಿ

ಸೋಮವಾರ, ಡಿಸೆಂಬರ್ 21, 2009

ಮನೆಯಂಗಳದಲ್ಲಿ ಮಾತುಕತೆಯಲ್ಲಿ ಪ್ರೊ.ವಿವೇಕ್ ರೈ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳಿನ ಮೂರನೇ ಶನಿವಾರದಂದು ನಯನ ಸಭಾಂಗಣದಲ್ಲಿ ಪ್ರಸ್ತುತ ಪಡಿಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ೧೦೭ ನೆ ಸಂಚಿಕೆಯಲ್ಲಿ ಭಾಗವಹಿಸಿದ್ದವರು ಪ್ರೊ. ವಿವೇಕ್ ರೈ ರವರು. ಕನ್ನಡ ವಿ ವಿ ಯ ಮಾಜಿ ಕುಲಪತಿಗಳಾದ ವಿವೇಕ್ ರೈ ರವರು ಸದ್ಯಕ್ಕೆ ಜರ್ಮನಿಯ ವೂಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ, ಕನ್ನಡ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

maneyamgaladalli-maatukathe

ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆ ನಿರ್ದೇಶಕರಾದ ಮನು ಬಳಿಗಾರ್ ರವರು ವಿವೇಕ್ ರೈ ರವರನ್ನು ಸ್ವಾಗತಿಸಿ, ವಿವೇಕ್ ರೈರವರ ಕಿರು ಪರಿಚಯವನ್ನು ಮಾಡಿ ಕೊಟ್ಟರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನಲೆಯಲ್ಲಿ, ಸಂಶೋಧನೆಗೆಂದು ಮುಖ್ಯಮಂತ್ರಿಗಳು ಘೋಷಿಸಿದ ೧೧ ಕೋಟಿ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ವಿವೇಕ್ ರೈ ರವರ ಮಾರ್ಗದರ್ಶನದಲ್ಲಿ ಕಾರ್ಯಸೂಚಿಯನ್ನು ಸಿದ್ಧಪಡಿಸಿ, ಅನುದಾನವನ್ನು ೧೧ ವಿಶ್ವವಿದ್ಯಾಲಯಗಳಿಗೆ ಹಂಚಿದ್ದನ್ನು ನೆನಪಿಸಿಕೊಂಡರು. ಆ ವಿಶ್ವವಿದ್ಯಾಲಯಗಳು ವಿವೇಕ್ ರೈ ರವರ ಕಾರ್ಯಸೂಚಿಯಂತೆಯೇ ಕಾರ್ಯವನ್ನು ನಿರ್ವಹಿಸುತ್ತಿರುವದನ್ನ ನೆನೆದರು.



ಮುಂದೆ ಓದಿ

ಭಾನುವಾರ, ಡಿಸೆಂಬರ್ 13, 2009

ರತ್ನನ ಪದಗಳು - ವಿಚಾರ, ಸತ್ವ, ತತ್ವ - ಭಾಗ - ೧ ( ರತ್ನನ ಮೊಕಾಬಿಲೆ)

ರತ್ನನ ಪದಗಳು ಕನ್ನಡ ಸಾಹಿತ್ಯದ ಒಂದು ರತ್ನ, ವಜ್ರ ಎಂದೇ ಪ್ರಖ್ಯಾತ. ಇದರಲ್ಲಿ ಒಟ್ಟು ೭೭ ಪದಗಳಿವೆ. ಆಡು ಗ್ರಾಮೀಣ ಭಾಷೆಯಲ್ಲಿ ರಚಿತವಾಗಿರುವ ಈ ಪದ್ಯಗಳು ಓದುತ್ತಾ ಹೋದಾಗ, ಇವುಗಳ ಶೈಲಿ ಮನಸ್ಸಿಗೆ ಮುದ ನೀಡುವುದಲ್ಲದೆ, ಜೀವನೋತ್ಸಾಹವನ್ನು ಸಾರುವಂತಹ ತತ್ವವನ್ನು ಈ ಪದಗಳು ಅಡಗಿಕೊಂಡಿರುವುದು ಕಂಡು ಬರುತ್ತದೆ. ಇವು ೫ ವಿಭಾಗಗಳಾಗಿವೆ. ರತ್ನನ ಮೊಕಾಬಿಲೆ, ಬುಂಡೇ ಬಕ್ತ ರತ್ನ, ಮುನಿಯನ್ ಗಿರಾಕಿ ರತ್ನ, ಪುಟ್ನಂಜಿ ರತ್ನ, ರುಸ್ತುಂ ರತ್ನ.

ratnan-padgol

ರತ್ನನ ಮೊಕಾಬಿಲೆಯಲ್ಲಿ ರತ್ನನ ಪರಿಚಯವಾಗುತ್ತದೆ ನಮಗೆ. ಇಲ್ಲಿ ೬ ಪದಗಳಿವೆ. ರತ್ನನ ಮನೋಭಾವವನ್ನು ಸೂಚಿಸುವ ಪದ್ಯಗಳಿವು.

ಮೊದಲನೆಯಯ ಪದದಲ್ಲಿ, ರತ್ನನ ಪರಿಚಯದ ಜೊತೆಗೆ ರತ್ನನ ಪದಗಳನ್ನು ಬರೆದುಕೊಳ್ಳುವೆ ಬೇವರ್ಸಿಯ ಪರಿಚಯವೂ ಆಗುತ್ತದೆ.


"ಮೊಟ್ಮೊದಲು"

ನನ್ಗೂನೆ ಯೊಂಡಕ್ಕು ಬಲ್ ಬಲೆ ದೋಸ್ತಿ.

ಕುಡದ್‌ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.

ನಂಗ್ ಎಸರು ಯೇಳ್ತಾರೆ - ರ‍್ರರ‍್ರರ‍್ರರ‍್ರರ್ರತ್ನ.

ನಾನ್ ಆಡೋ ಪದಗಳು ಯೆಂಡದ್ ಪ್ರಯತ್ನ.


ಮಾಬಾರ‍್ತ ಬರೆಯಾಕೆ ಯಾಸಂಗ್ ಇನಾಯ್ಕ

ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ

ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್ದು.

ಏನ್ ಐತೊ ಯಾರ್ ಬಲ್ರು ಔಂಗ್ ಇರೋ ದರ‍್ದು!

...........

...........


ಮುಂದೆ ಓದಿ

ಭಾನುವಾರ, ಡಿಸೆಂಬರ್ 06, 2009

ರತ್ನನ ಪದಗಳ ಭಾಷಾ ಶೈಲಿ

raajaratnam-padya

ಯೇಳ್ಕೊಳ್ಳಾಕ್ ಒಂದ್ ಊರು

ತಲೇಮೇಗ್ ಒಂದ್ ಸೂರು

ಮಲಗಾಕೆ ಭೂಮ್ತಾಯಿ ಮಂಚ

ಕೈ ಯಿಡದೋಳ್ ಪುಟ್ನಂಜಿ

ನೆಗನೆಗತ ಉಪ್ಗಂಜಿ

ಕೊಟ್ರಾಯ್ತು ರತ್ನನ್ ಪರ್ಪಂಚ


ರತ್ನನ ಪದಗಳು ಮೈಸೂರು ಪ್ರಾಂತ್ಯದ ಗ್ರಾಮೀಣ ಆಡುಭಾಷೆಯಲ್ಲಿ ರಚಿತವಾಗಿವೆ ಎಂದು ಬಲ್ಲ ತಜ್ಞರು ಹೇಳುವುದುಂಟು. ಈ ಪದಗಳ ವಿಶೇಷತೆಯೆಂದರೆ, ಹಾಡಿಕೊಳ್ಳಲು ಅಷ್ಟು ಸರಳವಾಗಿರುವುದು ಮತ್ತು ಆ ಸರಳ ಪದಗಳಲ್ಲಿ ಅಷ್ಟೋಂದು ತತ್ವವನ್ನು ಅಷ್ಟೇ ಸರಳವಾಗಿ ಸೇರಿಸಿರುವುದು. ಹೆಚ್ಚಿನ ಪದಗಳಲ್ಲಿ ಒಬ್ಬ ವ್ಯಕ್ತಿ ಕುಡಿದಾಗ ಹೇಗೆ ಹಿಂದನ ಘಟನೆಗಳು ಮತ್ತು ಮುಂದೆ ನಡೆಯುವುದನ್ನು ಮರೆತು ವರ್ತಮಾನವನ್ನು ಸಂತೋಷವಾಗಿ ಕಳೆಯುವನೋ ಅದೇ ತತ್ವವಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ತತ್ವದ ಮಾತನ್ನು ಬದಿಗಿಟ್ಟರೆ ಆ ಪದಗಳ ಗ್ರಾಮ್ಯ ಭಾಷೆ ಹಾಡಿಕೊಂಡಾಗ ಮನಸ್ಸಿಗೆ ಬೇಗ ನಾಟುತ್ತವೆ. ಕೆಲವೆಡೆ ಹಿಂದಿ ಪದಗಳ ಮಿಶ್ರಣವಿದ್ದರೂ ಅವು ಆ ಪದಕ್ಕೆ ಒದಗಿಸಬಹುದಾದ ಪ್ರಾಸಕ್ಕಾಗಿ, ಮತ್ತು ಆ ಪದದ ಅಂದವನ್ನು ಹೆಚ್ಚಿಸಲು.


ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!

ಎಲ್ಲಾ ಕೊಚ್ಕೊಂಡ್ ಓಗ್ಲಿ!

ಪರ್ಪಂಚ್ ಇರೋ ತನಕ ಮುಂದೆ

ಕನ್ನದ್ ಪದಗೊಳ್ ನುಗ್ಲಿ!


ಹೀಗೆ ಅಪಾರ ಖ್ಯಾತಿಯನ್ನು ಗಳಿಸಿದ ರತ್ನನ ಪದಗಳನ್ನು ಹಲವು ಜನರ ಅದರ ಭಾಷಾ ಶೈಲಿಗೆ ಟೀಕಿಸಿದ್ದುಂಟಂತೆ. ಆ ಪದ್ಯಗಳಿದ್ದ ವಸ್ತುವನ್ನು ಒಪ್ಪಿಕೊಂಡ ಎಷ್ಟೋ ಮಹಾನುಭಾವರುಗಳು, ಭಾಷೆಯ ಬಗ್ಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರಂತೆ. ಕನ್ನಡ ಭಾಷೆಯನ್ನು ಹಾಳು ಮಾಡುತ್ತಿರುವ ಈ ಪದಗಳನ್ನು ಸಾಂಪ್ರದಾಯಿಕ ಭಾಷೆಯಲ್ಲಿ ಬರೆಯಬಾರದೇ ಎಂದದ್ದೂ ಉಂಟಂತೆ. ಇದಕ್ಕೆ ಉತ್ತರಿಸಲು ರಾಜರತ್ನಂರವರೇ ಸ್ವತಃ ತಮ್ಮ ಒಂದೆರಡು ರತ್ನನ ಪದಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬರೆದು ಪ್ರಕಟಿಸಿದ್ದರಂತೆ. ಅದನ್ನು ಒದಿದ ಮೇಲೆ ಗ್ರಾಮೀಣ ಶೈಲಿಯ ಪದ್ಯಗಳೇ ಉತ್ತಮವಾಗಿವೆ ಎಂದರಂತೆ.


ಮುಂದೆ ಓದಿ

ಶನಿವಾರ, ಡಿಸೆಂಬರ್ 05, 2009

ರತ್ನನ ಜಯಂತಿ

ಇಂದು ಜೆ ಪಿ ರಾಜರತ್ನಂ ರವರ ಜಯಂತಿ

rajaratnam

ಹಿಂದೆ ಬರೆದ ಎರಡು ಲೇಖನಗಳು,

ರಾಜರತ್ನಂ - ೧

ರಾಜರತ್ನಂ - ೨


ರಾಜರತ್ನಂರವರ ಸಮಾಧಾನ ಪದ್ಯವನ್ನು ಈ ಕೆಳಗಿನ ಲೇಖನದ ಎರಡನೇ ಭಾಗದಲ್ಲಿ ಓದಿ

http://samarasa.net/samarasa/?p=395


ನಮ್ಮ ನಾಡಿನ ಹಿರಿಯ ಸಾಹಿತಿಗಳು ರಾಜರತ್ನಂ ಬಗ್ಗೆ ಬರೆದ ಕೆಲವು ಸಾಲುಗಳು


ನಮ್ಮ ರಾಜಣ್ಣ


ಇನ್ನು ರಾಜಣ್ಣ. ಈ ಉಳಿದವರ ರೀತಿಯಲಿ

ಇವರಾದರೂ ಪಂಡಿತರೆ. ಜೊತೆಗೆ ತಮ್ಮದೇ

ಒಂದೆರಡು ಬೇರೆ ಶಕ್ತಿಗಳ ಪಡೆದಿಹರಹುದು.

ಕಷ್ಟಗಳ ಕಂಡು ಅವುಗಳ ಕಾವಿನಲಿ ಕರಗಿ

ಕಡುಬಡವ ಕಡೆ ಕಡಮೆಯೆಂಬವರ ನೋವುಗಳು

ತಮ್ಮವೇ ಎಂಬಂತೆ ಅನುಭವಿಸಿ ಮರುಗುವರು.


ಮುಂದೆ ಓದಿ