ಗುರುವಾರ, ಜನವರಿ 14, 2010
ಸೂರ್ಯಕಾಂತಿ -- ಚಿತ್ರ ವಿಮರ್ಶೆ
ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ಸೂರ್ಯಕಾ೦ತಿ ಚಿತ್ರವೇನೋ ಅದ್ಭುತ ಎನ್ನಬಹುದಾದ ಉಜ್ಬೇಕಿಸ್ತಾನದ ತಾಣಗಳಲ್ಲಿ ತೆರೆದುಕೊಳ್ಳುತ್ತದೆ. ಆದರೆ ನ೦ತರ ಕತೆಯು ನೀವು ಊಹಿಸಬಹುದಾದ ರೀತಿಯಲ್ಲಿಯೇ ಮು೦ದೆ ಸಾಗಿ ಕೊನೆಯಾಗುತ್ತದೆ.
ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.
ಮುಂದೆ ಓದಿ
“ಕಥಾಸಂಧಿ” ಕಾರ್ಯಕ್ರಮದ ಭಾವಚಿತ್ರಗಳು
ಕಳೆದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ’ಕೇಂದ್ರ ಸಾಹಿತ್ಯ ಅಕಾದೆಮಿ’ ವತಿಯಿಂದ "ಕಥಾಸಂಧಿ" ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ’ದೇಶಕಾಲ’ ತ್ರೈಮಾಸಿಕ ಪತ್ರಿಕೆ ಖ್ಯಾತಿಯ, ಖ್ಯಾತ ಕಥೆಗಾರ ವಿವೇಕ್ ಶಾನಭಾಗ್ ರವರು ತಮ್ಮ ಕಥೆಯಾದ "ನಿರ್ವಾಣ" ಕಥೆಯನ್ನು ಓದಿದರು. ನಂತರ ಅರ್ಥಪೂರ್ಣ ಸಂವಾದ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾದೆಮಿಯ ಮಾಜಿ ಅಧ್ಯಕ್ಷ ಯು ಆರ್ ಅನಂತಮೂರ್ತಿ, ಪ್ರಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲವು ಭಾವಚಿತ್ರಗಳು ಇಲ್ಲಿ.
ಮುಂದೆ ನೋಡಿ
ಬುಧವಾರ, ಜನವರಿ 06, 2010
ಬೆಲೆ ಏರಿಕೆ ಮತ್ತು ದಿನಕರ ಚೌಪದಿ
ದಿನಸಿಗಳು, ತರಕಾರಿಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ, ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ಬರೆದಿರುವ ಈ ಚೌಪದಿಗಳನ್ನೋದಿ..
[caption id="attachment_718" align="aligncenter" width="200" caption="ಚಿತ್ರಕೃಪೆ: http://nirpars.blogspot.com/"][/caption]
ತಿನ್ನೋಣ ಗೆಣಸು
ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.
ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.
ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-
ಬೆಳದಿಂಗಳಾಗಿ ಹೊಳೆಯುವುದು ಅಮಾವಾಸ್ಯೆ.
ಬೆಲೆಗಳ ಆಕಾಶ ಯಾತ್ರೆ
ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ
ಚಿಕ್ಕೆಯಾದವು ಎಂದು ಹೇಳುವರು, ನಾರಿ.
ಜನಗಳೆಲ್ಲಾ ವಿಮಾನದ ಮೇಲೆ ಕೂತು
ನಭಕೇರಿದರೆ ಮಾತ್ರ ಕೇಸರಿಭಾತು
ಮುಂದೆ ಓದಿ
ಸೋಮವಾರ, ಜನವರಿ 04, 2010
ಎರಡು ಚಿತ್ರ ವಿಮರ್ಶೆಗಳು
ಹೋದ ವಾರ ತೆರೆ ಕಂಡ, ಸೈನೈಡ್ ನಿರ್ಮಿಸಿದ ತಂಡದಿಂದ ನಿರ್ಮಿತವಾಗಿರುವ ಚಲನಚಿತ್ರ ಎಂಬ ನಿರೀಕ್ಷೆಯಿಂದ ನೋಡಿದ ಈ ಚಿತ್ರ ಭಾರಿ ನಿರಾಸೆಯನ್ನು ತಂದಿತು. ೧೯೯೨ ರ ಭಾಬ್ರಿ ಮಸೀದಿ ಧ್ವಂಸ ಗಲಭೆಯಲ್ಲಿ ಅರಳಿದ ಒಂದು ಸತ್ಯ ಪ್ರೇಮ ಕಥೆ ಅಧಾರಿತ ಚಿತ್ರ ಎಂಬ ಜಾಹೀರಾತಿನೊಂದಿಗೆ ಬಿಡುಗಡೆಯಾಗಿರುವ ಈ ಚಲನಚಿತ್ರದ ಕಥೆ ಅತೀ ಸಾಧಾರಣವಾದದ್ದು.
ಇಬ್ಬರು (ವಿಶ್ವಣ್ಣ ಮತ್ತು ವೆಂಕಟೇಶ್ ಗೌಡ -- ಚಲನಚಿತ್ರದ ಹೆಸರುಗಳು) ಪೋಲೀಸ್ ಪೇದೆಗಳು. ಬೇರೆ ಬೇರೆ ಜಾತಿಯವರು, ಆದರೆ ಪ್ರಾಣ ಸ್ನೇಹಿತರು. ವೆಂಕಟೇಶ್ ತನ್ನ ಕುಟುಂಬವನ್ನು ಧಿಕ್ಕರಿಸಿ ಕೆಳಜಾತಿ ಎನ್ನಿಸಿಕೊಳ್ಳುವ ವರ್ಗದಿಂದ ಬಂದಿರುವ ಅನಾಥೆಯನ್ನು ಮದುವೆಯಾಗುತ್ತಾನೆ. ಆದರೆ ಅಕಾಲ ಮರಣ ಹೊಂದುತ್ತಾನೆ. ಆಗ ವಿಶ್ವಣ್ಣ ತನ್ನ ಗೆಳೆಯ ವೆಂಕಟೇಶ್‌ನ ಹೆಂಡತಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾನೆ. ಅನಿತಾ (ಸೋನು) ವಿಶ್ವಣ್ಣನ ಮಗಳು. ಜಾಣ ಹುಡುಗಿ, ಸಂಭಾವಿತೆ. ಅಶ್ವಿನ್ (ಅನೀಶ್ ತೇಜೇಶ್ವರ್) ವೆಂಕಟೇಶ್ ನ ಮಗ. ಪೊರ್ಕಿ, ತರಲೆ, ಹೊರಟ. ಆದರೂ ವಿಶ್ವಣ್ಣನೆಂದರೆ ಭಯ ಭಕ್ತಿ, ಗೌರವ.
ಮುಂದೆ ಓದಿ
ರಾಮ್ : ಅಪ್ಪು ಮತ್ತೆ ಹಾದಿಗೆ!
ಭರ್ಜರಿ ನೃತ್ಯ, ಹಾಸ್ಯಭರಿತ ಸಂಭಾಷಣೆ, ಮಚ್ಚು ಬಿಟ್ಟು ಹಾದಿಗೆ ಬಂದಿರುವ ಪುನೀತ್, ಮೊದಲ ಬಾರಿಗೇ ಕನ್ನಡ ಚಿತ್ರದಲ್ಲಿ ಮಿಂಚಿರುವ ಸುಂದರಿ ಪ್ರಿಯಾಮಣಿ - ಒಟ್ಟಿನಲ್ಲಿ ಹೇಳುವುದಾದರೆ "ರಾಮ್" ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ರಸದೌತಣ ಬಡಿಸುವ ಚಿತ್ರ.
[caption id="attachment_709" align="aligncenter" width="600" caption="ಚಿತ್ರ ಕೃಪೆ : http://www.123musiq.com/Ram.html"][/caption]
ಎರಡು ವಾರದಿಂದ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಹು ನಿರೀಕ್ಷಿತ ಚಿತ್ರ "ರಾಮ್" ಚಿತ್ರವನ್ನು ವೀಕ್ಷಿಸಿದ ಮೇಲೆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ವಂಶಿ, ರಾಜ್ ಮುಂತಾವ ಮಚ್ಚು-ಕೊಚ್ಚು ಚಿತ್ರಗಳನ್ನು ಕೊಟ್ಟು ಅಭಿಮಾನಿಗಳಿಗೆ ಬೇಸರ ತರಿಸಿದ್ದ ಪುನೀತ್ ಈ ಬಾರಿ ಉತ್ತಮ ಪಾತ್ರವನ್ನು/ಚಿತ್ರವನ್ನು ಆಯ್ದುಕೊಂಡು ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಒಲ್ಲದ ಮದುವೆಯನ್ನು ತಪ್ಪಿಸಿ ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾಗುವ ರಾಮ್, ತಪ್ಪು ಕಲ್ಯಾಣ ಮಂಟಪಕ್ಕೆ ಹೋಗಿ ಬೇರೆ ಯಾವುದೋ ಹುಡುಗಿಯನ್ನು (ಪ್ರಿಯಾಮಣಿ) ಅಲ್ಲಿಂದ ಹೊತ್ತು ತರುತ್ತಾನೆ. ಆ ಹುಡುಗಿಗೆ ಇಬ್ಬರು ಮಾವಂದಿರು. ಇಬ್ಬರೂ ಪ್ರತ್ಯೇಕವಾಗಿ ಅವಳನ್ನು ಹುಡುಕುತ್ತಿರುತ್ತಾರೆ. ರಾಮ್ ಗೆ ನಾಯಕಿಯನ್ನು ರಕ್ಷಿಸುವ ಹೊಣೆ. ಕೊನೆಗೆ ಒಬ್ಬ ಮಾವ ಆ ಹುಡುಗಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಫಲವಾಗುತ್ತಾನೆ. ನಂತರ ನಾಯಕ, ನಾಯಕಿಯ ಇಬ್ಬರ ಮಾವಂದಿರ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಲೆಕ್ಕಿಗನ (ರಂಗಾಯಣ ರಘು) ಸಹಾಯಕನಾಗಿ ಅವರುಗಳ ಮನೆ ಹೊಕ್ಕಿ, ತಂತ್ರವನ್ನು ಹೂಡಿ ನಾಯಕಿಯನ್ನು ವರಿಸಿಕೊಳ್ಳುತ್ತಾನೆ.
ನೀವಿಲ್ಲಿಗೆ ಊಹಿಸಿರುವಂತೆ ಕಥೆಯಲ್ಲಿ ಏನೂ ಹೊಸತನವಿಲ್ಲ, ರೋಚಕವೂ ಇಲ್ಲ. ಆದರೂ ಚಿತ್ರವನ್ನು ಗೆಲ್ಲಿಸಬಲ್ಲ ಅಂಶಗಳು ಸಾಕಷ್ಟಿವೆ.
ಮುಂದೆ ಓದಿ
ಶುಕ್ರವಾರ, ಜನವರಿ 01, 2010
ಶುಭಾಶಯಗಳು
ನಿರೀಕ್ಷೆಯಲಿ
ಹೊಸ ವರ್ಷ ತರುವುದೆಂದ ಹೆಚ್ಚಿನ ಹರುಷ
ಬೆಳೆಯಲಿ ಕ್ಷಮಿಸುವ ಗುಣ
ತೊಲಗಲಿ ದೂರುವುದನ
ಹೆಚ್ಚಲಿ ವ್ಯಾಯಾಮ ಮಾಡುವ ದಿನ
ಕರಗಲಿ ಹೊಟ್ಟೆಯ ಸುತ್ತಿರುವ ಕೊಬ್ಬಿನ ಘನ
ದೂರವಾಗಲಿ ಸೋಮಾರಿತನ
ಕೆಲಸದಲ್ಲಿ ಕಾಣಲಿ ಹೊಸತನ
ಮರೆಯುವ ನೋವನ್ನ
ಹಂಚುವ ನಲಿವನ್ನ
ಇನ್ನೂ ಉತೃಷ್ಟವಾದದ್ದನ್ನ ಬರೆಯೋಣ
ತುಂಬಿರಲಿ ಚೇತನ ಪ್ರತಿಕ್ಷಣ
ಎಲ್ಲರಿಗೂ ಹೊಸ ವರ್ಷದ/ದಶಕದ ಹಾರ್ದಿಕ ಶುಭಾಶಯಗಳು..