ಶುಕ್ರವಾರ, ಡಿಸೆಂಬರ್ 30, 2011

ಅಂಚೆ ಅಂಟು ಪರದೆ ನಂಟು - ಪುಸ್ತಕ ಬಿಡುಗಡೆ


ಆಕೃತಿ ಪುಸ್ತಕ - ರಾಜಾಜಿನಗರ

www.akrutibooks.com

ಶಂಖನಾದ ಖ್ಯಾತಿಯ ಉಮೇಶ್ ಕುಲಕರ್ಣಿ ಅವರ
"ಅಂಚೆ ಅಂಟು ಪರದೆ ನಂಟು"
ಚಲನಚಿತ್ರರಂಗದ ಪಿತಾಮಹನಿಂದ ಅಣ್ಣನವರೆಗೆ
ಪುಸ್ತಕ ಲೋಕಾರ್ಪಣೆ

31-12-2011 ಶನಿವಾರ
ಬೆಳಗ್ಗೆ ೧೧ ಘಂಟೆಗೆ

ಪ್ರೆಸ್ ಕ್ಲಬ್ ಸಭಾಂಗಣ
ಕಬ್ಬನ್ ಪಾರ್ಕ್
ಬೆಂಗಳೂರು

ಅಂದು ನಮ್ಮೊಂದಿಗೆ

ಅಧ್ಯಕ್ಷತೆ ಮತ್ತು ಪುಸ್ತಕ ಬಿಡುಗಡೆ:
ಶ್ರೀ ವಿ. ಕೆ. ಮೂರ್ತಿ
ಖ್ಯಾತ ಸಿನಿ ಛಾಯಾಗ್ರಾಹಕ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ

ಮುಖ್ಯ ಅಥಿತಿ:
ಡಾ| ಸಂಗೋರಾಮ್
ಅಧ್ಯಕ್ಷರು,
ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘ

ಜೊತೆಗೆ
ವಿಶೇಷ ಆಹ್ವಾನಿತರಿಂದ ನಾಲ್ಕು ಮಾತು

ಎಲ್ಲರಿಗೂ ಆದರದ ಸ್ವಾಗತ

To buy this book...visit...
http://bit.ly/se67q2

ಪತ್ರಿಕಾ ಪ್ರಕಟಣೆ:
ಪುಸ್ತಕ ಲೋಕಾರ್ಪಣೆ

ಸಮಯ : 11 ಘಂಟೆಗೆ, ದಿನಾಂಕ : 31/12/2011 ಶನಿವಾರ, ಸ್ಥಳ : ಪ್ರೆಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್,ಬೆಂಗಳೂರು

ಆಕೃತಿ ಪುಸ್ತಕ, ರಾಜಾಜಿನಗರ, ಬೆಂಗಳೂರು ಪ್ರಕಟಿಸಿರುವ, ಶಂಖನಾದ ಚಲನಚಿತ್ರ ಖ್ಯಾತಿಯ ಶ್ರ‍ಿ ಉಮೇಶ್ ಕುಲಕರ್ಣಿ ಬರೆದಿರುವ ಪುಸ್ತಕ "ಅಂಚೆ ಅಂಟು ಪರದೆನಂಟು - ಚಲನಚಿತ್ರದ ಪಿತಾಮಹನಿಂದ ಅಣ್ಣನವರೆಗೆ" ಕೃತಿಯನ್ನು ದಿನಾಂಕ 31/12/2011 ಶನಿವಾರ, ಬೆಳಗ್ಗೆ ೧೧ ಘಂಟೆಗೆ, ಪ್ರೆಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್,ಬೆಂಗಳೂರು ಇಲ್ಲಿ ಲೋಕಾರ್ಪಣೆಯಾಗಲಿದೆ. ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಖ್ಯಾತ ಸಿನಿ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರು ಅಧ್ಯಕ್ಷತೆ ವಹಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಡಾ| ಸಂಗೋರಾಮ್, ಅಧ್ಯಕ್ಷರು, ಕರ್ನಾಟಕ ಅಂಚೆ ಚೀಟಿ ಸಂಗ್ರಹಗಾರರ ಸಂಘ, ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಎಲ್ಲರಿಗೂ ಆದರದ ಸ್ವಾಗತ



ಲೇಖಕರ ಬಗ್ಗೆ

ಬಹುಮುಖ ಪ್ರತಿಭೆಯ, ಪುಸ್ತಕದ ಲೇಖಕ ಶ್ರೀ ಉಮೇಶ್ ಕುಲಕರ್ಣಿ ಜನಿಸಿದ್ದು 1949 ರಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು 1972 ರಲ್ಲಿ ಪುಣೆ "ಫಿಲ್ಮ್ ಅಂಡ್ ಟಿ ವಿ ಇನ್ಸ್ಟಿಟ್ಯೂಟ್" ನ ಸಂಕಲನ ವಿಭಾಗದಲ್ಲಿ ಡಿಪ್ಲೊಮೋ ಪದವಿ ಪಡೆದರು. ಶ್ರೀಯುತರು ಬಹಳಷ್ಟು ಕನ್ನಡ ಚಲನ ಚಿತ್ರಗಳಿಗೆ ಮುಖ್ಯ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿ ’ಘಟಷ್ರಾದ್ಧ’ ಚಲಚಿತ್ರಕ್ಕೂ ಮುಖ್ಯ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ತಾವೇ ಸ್ವತಃ ಮೂರು ಚಲನಚಿತ್ರಗಳನ್ನು (ಶಂಖನಾದ,ಉತ್ತರ ಭೂಪ, ಗಂಡುಗೂಳಿಗಳು) ನಿರ್ದೇಶಿಸಿದ್ದು, ಶಂಖನಾದ ಚಿತ್ರಕ್ಕೆ 1986 ರಲ್ಲಿ ರಾಷ್ಟ್ರ ಮಟ್ಟದ "ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ" ಪ್ರಶಸ್ತಿ ದೊರೆತಿದೆ. ಲೇಖಕರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಮಾರು 10 ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ, ಸಂಕಲಿಸಿದ್ದಾರೆ. ಸ್ವತಃ ಕಥೆಗಾರರೂ ಆಗಿರುವ ಉಮೇಶ್ ಕುಲಕರ್ಣಿ ಅವರ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿ, ಬಹುಮಾನಗಳನ್ನು ಪಡೆದಿವೆ. ಲೇಖಕರು, ಚಲನಚಿತ್ರ ನಿರ್ದೇಶಕ ಎನ್ ಲಕ್ಷ್ಮಿನಾರಯಣ ಅವರ ಚರಿತ್ರೆಯನ್ನು ನಿರೂಪಿಸಿದ ಪುಸ್ತಕ ಪ್ರಕಟಗೊಂಡು ಓದುಗರ ಮತ್ತು ವಿಮರ್ಶಕರ ಮನ್ನಣೆ ಪಡೆದಿದೆ. ಚಲಚಿತ್ರದಷ್ಟೇ, ಅಂಚೆ ಚೀಟಿ ಸಂಗ್ರಹ ಲೇಖಕರ ಬಹು ಒಲವಿನ ಹವ್ಯಾಸ.

ಪುಸ್ತಕದ ಬಗ್ಗೆ

ಒಂದು ದೇಶವನ್ನು ಸಮಗ್ರವಾಗಿ ಅರಿಯಬೇಕಾದರೆ, ಆ ದೇಶದ ಅಂಚೆ ಚೀಟಿಗಳನ್ನು ಅಧ್ಯಯನ ಮಾಡಿದರೆ ಸಾಕಂತೆ! ಭಾರತದಲ್ಲಿ ಚಲನಚಿತ್ರಗಳು ಆರಂಭವಾಗಿದ್ದು ಅಂಚೆ ಚೀಟಿ ಜನ್ಮ ತಳೆದ 60 ವರ್ಷಗಳ ನಂತರವೇ ಆದರೂ, ಕಳೆದ ನೂರು ವರ್ಷಗಳಲ್ಲಿ ಚಲಚಿತ್ರರಂಗ ಬೃಹತ್ ಆಗಿ ಬೆಳೆದಿದೆ. ಚಲನಚಿತ್ರ ಮತ್ತು ಚಲನಚಿತ್ರರಂಗಕ್ಕೆ ನಂಟಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು 80 ಅಂಚೆ ಚೀಟಿಗಳು ಬಿಡುಗಡೆಯಾಗಿವೆ. ಅದರಲ್ಲಿ ಚಲಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯದ್ದೂ ಒಂದು ಮತ್ತು ಕನ್ನಡ ಚಿತ್ರರಂಗದ ಅಣ್ಣ ಎಂದೇ ಖ್ಯಾತಿ ಪಡೆದ ಡಾ| ರಾಜಕುಮಾರ್ ಅವರದ್ದೂ ಒಂದು. ಚಲನಚಿತ್ರ ಪಿತಾಮಹನಿಂದ ಅಣ್ಣನವರೆಗೆ ಎಂಬ ಅಡಿಬರಹವಿದ್ದರೂ, "ಅಂಚೆ ಅಂಟು ಪರದೆ ನಂಟು" ಪುಸ್ತಕದಲ್ಲಿ ಸಿನೆಮಾಗೆ ಸಂಬಂಧಿಸಿದ 64 ವ್ಯಕ್ತಿಗಳ ಹಾಗೂ 5 ಸಂಸ್ಥೆಗಳ ವಿಹಂಗಮ ದೃಶ್ಯದ ದರ್ಶನವನ್ನು ಉಣ ಬಡಿಸಿದ್ದಾರೆ ಲೇಖಕ ಉಮೇಶ್ ಕುಲಕರ್ಣಿ ಅವರು. ಅಂಚೆ ಚೀಟಿಗಳನ್ನು ಕೇಂದ್ರದಲ್ಲಿಟ್ಟು ಚಲನಚಿತ್ರರಂಗದ ಮತ್ತು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸಿದ ಮಹನೀಯರ ಇತಿಹಾಸವನ್ನು ನಿರೂಪಿಸಿರುವ ಈ ಪುಸ್ತಕ ಭಾರತೀಯ ಚಲನಚಿತ್ರ ರಂಗದಲ್ಲಿ ಮತ್ತು ಪುಸ್ತಕ ಪ್ರಪಂಚದಲ್ಲೇ ವಿಶಿಷ್ಟವಾದ ಹಾಗೂ ಚೊಚ್ಚಲ ಪ್ರಯತ್ನವೇ ಎನ್ನಬಹುದು! ಪುಸ್ತಕಕ್ಕೆ ಅಂತರ್ ರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಮುನ್ನುಡಿ ಇದೆ.