ಸೋಮವಾರ, ಜೂನ್ 29, 2009

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

ಸಮರಸ ವಿಶೇಷ ಸಂಪಾದಕೀಯದಲ್ಲಿ, ಕನ್ನಡಕ್ಕೆ ಬೇಕಾಗುರುವ ಅಂತರ್ಜಾಲ ಕೈಪಿಡಿ ಬಗ್ಗೆ ರವೀಶ ರವರು ಚರ್ಚಿಸುತ್ತಾರೆ.ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು ಆಗಲೇ ಈ ಗು೦ಪಿನಲ್ಲಿರುವ ಪದವೊ೦ದನ್ನು ಉಪಯೋಗಿಸುತ್ತಿದ್ದೇನೆ ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೀರಾ? ಆದರೆ ಮಾಹಿತಿ ತ೦ತ್ರಜ್ನಾನ(IT), ಅ೦ತರ್ಜಾಲ(Internet) ದ ಬಗ್ಗೆ ಕನ್ನಡದಲ್ಲಿರುವ ಪರಿಭಾಷೆ ತಿಳಿಯದಿರುವವನಿಗೆ ಈ ಪದಗಳನ್ನು ಕೇಳಿ ಯಾವ ಪದವನ್ನು ಉಪಯೋಗಿಸಬೇಕೆ೦ದು ಗೊ೦ದಲವಾಗುವುದು ಸಹಜ. ಹಾಗೆಯೇ ನಮ್ಮಲ್ಲಿ ಹೊಸ ತ೦ತ್ರಜ್ನಾನಕ್ಕೆ ಬೇಕಾದ ಹೊಸ ಪದಗಳ ಬಗ್ಗೆ ಒ೦ದು ಅಧಿಕೃತವಾದ ಕೋಶವಿಲ್ಲದಿರುವುದು ಗಮನ ಹರಿಸಬೇಕಾದ ಸ೦ಗತಿ. ಮುಂದೆ ಓದಿ

ರಾಜಕೀಯ ವಿಭಾಗದ ಅಂಕಣದಲ್ಲಿ ರಾಜ್ ರವರು ಕೇಂದ್ರ ಬಿ ಜೆ ಪಿ ಯ ಅವಾಂತರದ ಬಗ್ಗೆ ಬರೆಯುತ್ತಾರೆ
ನೇತಾರನಿಗೆ ಹತ್ತಾರು ವರ್ಷ ಪುಡಾರಿಗೆ ಐದೇ ವರ್ಷ

ಸ್ವಾತಂತ್ರಾ ನಂತರ ಭಾರತ ದೇಶಕ್ಕೆ ’ಕಾಂಗ್ರೆಸ್ ಪಕ್ಷ’ ಅಭಿಷಿಕ್ತ ದೊರೆ. ಭ್ರಷ್ಟ ನಾಯಕರು ದಕ್ಷ ನಾಯಕರನ್ನು ಮೀರಿಸಿ ಬೆಳೆದು ನಿಂತಿದ್ದ ವಾತಾವರಣ ದೇಶದಲ್ಲಿ. ದೇಶದ ಹೆಚ್ಚಿನೆಡೆಗಳಲ್ಲಿ ಅರಾಜಕತೆಯ ರಾಜ್ಯಭಾರ. ಮತಕ್ಕಾಗಿ ಅಲ್ಪಸಂಖ್ಯಾತರ ತುಷ್ಟೀಕರಣ.ಕುಟುಂಬ ರಾಜಕಾರಣ. ಹೀಗೆ ಹಲವು ಹತ್ತಾರು ಕಾರಣಗಳಿಂದ ಕಾಂಗ್ರೆಸ್ ಗೆ ಪರ್ಯಾಯವಾಗಿ ಮತ್ತೊಂದು ರಾಷ್ಟ್ರೀಯ ಪಕ್ಷ ಜನಿಸಬೇಕೆಂಬ ಅಗತ್ಯ ಆ ದಿನಗಳಲ್ಲಿತ್ತು.ಮುಂದೆ ಓದಿ

ಗುರುವಾರ, ಜೂನ್ 25, 2009

ನಾವು ಪೋಷಕರು..

ನಾವು ಪೋಷಕರು ಮಕ್ಕಳ ಬಗ್ಗೆ ನಡೆದುಕೊಳ್ಳುವ ರೀತಿ ಯಾವಾಗಲು ಸರಿಯೇ? ಸಮರಸ ವಿಷೇಶ ಅಂಕಣ "ವಸ್ತುನಿಷ್ಠ" ದಲ್ಲಿ ಓದಿ.

ತಂದೆ ತಾಯಿ ಮಕ್ಕಳನ್ನು ಕಷ್ಟ ಪಟ್ಟು, ಹೆತ್ತು-ಹೊತ್ತು, ಬೆಳೆಸಿ, ಓದಿಸಿ ಮುಂದೆ ತರುತ್ತಾರೆ, ಆದರೆ ಮಕ್ಕಳು ಅದೇ ಪ್ರೀತಿಯನ್ನು ತಂದೆ ತಾಯಿಗಳಿಗೆ ಧಾರೆಯೆರೆಯುವುದಿಲ್ಲ, ಮಕ್ಕಳು ತಂದೆ ತಾಯಿಗಳಿಂದ ದೂರವಾಗಿಬಿಡುತ್ತಾರೆ ಎಂಬ ಕೂಗು-ಕೊರಗು ಹಿಂದಿನಿಂದ ಇದೆ.ಇದಕ್ಕೆ ಬಹಳಷ್ಟು ಸಮಯದಲ್ಲಿ ಪ್ರೀತಿ, ತತ್ವ ಮತ್ತು ತರ್ಕಗಳ ಆಧಾರವಿರದೆ ಸಿನಿಕ ಭಾವುಕತೆಯ ಮೇಲೆ ಕೇಳಿ ಬರುವಂತಹ ದೂರು. ಇಂತಹ ಒಂದು ಸೂಕ್ಷ್ಮ ವಿಷಯವನ್ನು ಇಂದು ವಸ್ತುನಿಷ್ಠವಾಗಿ ವಿಶ್ಲೇಷಿಸೋಣ.

ಮೊದಲನೆಯದಾಗಿ ನಾವು ನಮ್ಮ ಮಗುವನ್ನು ಹೆತ್ತು ಹೊತ್ತು ಬೆಳೆಸುವುದರಲ್ಲಿ (ಯಾವುದೇ ಮಗುವನ್ನು ಬೆಳೆಸುವುದರಲ್ಲಿ) ಕಷ್ಟ ಎಂಬುದು ಅತಿಶಯದ, ಸತ್ಯಕ್ಕೆ ದೂರವಾದ ಮಾತು. ನಮಗೆ ಒಂದು ಮಗು ಬೇಕೆನ್ನಿಸಿದರೆ ನಮಗೆ ಮಗುವಿನ ಅವಶ್ಯಕತೆಯಿರುತ್ತದೆ. ಇನ್ನು ಮಕ್ಕಳ ಆಟ ಪಾಠ, ಅವುಗಳ ಮುಗ್ಧತೆ ನಮ್ಮ ಕಷ್ಟ ದುಖ: ಗಳನ್ನು ಮರೆಸುತ್ತವೆ. ಸಾಮಾನ್ಯವಾಗಿ ಯಾವ ಮಗುವೂ ತಾನು ೧೦-೧೨ ವರ್ಷ ದಾಟುವವರೆಗೆ ಮುಗ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಪ್ರೀತಿ ತೋರಿ ಬೆಳೆಸುವುದು ಪಾಲಕರ ಕರ್ತವ್ಯ. ಕರ್ತವ್ಯ ಎನ್ನುವುದಕ್ಕಿಂತ ಅದು ಪಾಲಕರಿಗೆ ಸಂತಸ ತರುವ ಕಾಯಕವಾಗಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಪಾಲಕರಿಗೆ ಕೊಡುವ ಸಂತೋಷವನ್ನು ನೆನಪಿನಲ್ಲಿಟ್ಟರೆ ಜೀವನ ಪರ್ಯಂತ ಆ ಸಂತೋಷವನ್ನು ಮೆಲುಕಿ ಹಾಕಿ ಕಾಲ ಕಳೆಯುವಷ್ಟಿರುತ್ತದೆ. ನಮ್ಮಲ್ಲಿ ಇನ್ನೊಂದು ತಪ್ಪು ಕಲ್ಪನೆಯಿದೆ. ಮಕ್ಕಳನ್ನು ಸಂತೋಷವಾಗಿ ಬೆಳೆಸುವುದಕ್ಕೆ ಅಪಾರ ದುಡ್ಡಿರಬೇಕೆಂಬುದು! ಇದು ಅಕ್ಷರಷ: ತಪ್ಪು. ಮಕ್ಕಳಿಗೆ ಬೇಕಾಗಿರುವು ನಿಮ್ಮ ಸನಿಹ, ಪ್ರೀತಿ. ಮುದ್ದೆ ಮಾಡುವ ಕೋಲಿನಿಂದಲೇ ನೀವು ಅವನಿಗೆ ಕ್ರಿಕೆಟ್ ಆಟ ಆಡಿಸಿ ಸಂತಸಪಡಿಸಬಹುದು.ಹೌದು ನಮ್ಮ ಶಕ್ತಿಗಾನುಸಾರವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ. ಆದುದರಿಂತ ಅಷ್ಟು ಹಣವನ್ನು ಸಂಪಾದಿಸಿ, ನಾವು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಮೇಲೆ ನಾವು ಮಗುವನ್ನು ಹೊಂದುವ ಯೋಚನೆ ಮಾಡುವುದು ಒಳಿತು. ಒಂದು ಸುಖ ಬೇಕಾದರೆ ಹಿನ್ನಲೆಯಲ್ಲಿ ಸ್ವಲ್ಪ ಕಷ್ಟ ಪಡಬೇಕಾದೀತು. ಆದರೆ ಆ ಕಷ್ಟಕ್ಕೆ ಮಕ್ಕಳನ್ನು ದೂರುವುದು ಸರಿಯಲ್ಲ.ನಮ್ಮ ಶಕ್ತಿಗನುಗುಣವಾಗಿ ಕಡಿಮೆ ಮಕ್ಕಳನ್ನು ಹೊಂದುವುದು ಮತ್ತೊಂದು ನೆನಪಿನಲ್ಲಿಡಬೇಕಾದ ಅಂಶ. ಮಕ್ಕಳೊಂದಿಗೆ ನಾವೂ ಮಕ್ಕಳಾಟವಾಡಬಹುದಾದ ಸವಿ ಸಮಯ ಇದು. ಮುಂದೆ ಓದಿ

ಬುಧವಾರ, ಜೂನ್ 24, 2009

ಪ್ರಶ್ನೆಪತ್ರಿಕೆ ಬಟಾ ಬಯಲು!

ಸಮರಸ ಹಾಸ್ಯ ಅಂಕಣದಲ್ಲಿ ಸಂಪಾದಕರು, ಪರೀಕ್ಷೆಗೆ ಮುಂಚೆ ಪ್ರಶ್ನೆ ಪತ್ರಿಕೆ ಬಯಲಾಗದೆ ಇರುವುದಕ್ಕೆ ಏನು ಮಾಡಬೇಕೆಂಬ ಚರ್ಚೆ ಇಲ್ಲಿದೆ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೆಶ್ನೆಪತ್ರಿಕೆ ಪರೀಕ್ಷೆಗೆ ಮುಂಚಿತವೇ ಬಯಲಾದ ಘಟನೆಯನ್ನು ವಿಷ್ಲೇಶಿಸಲು ಸಮರಸ ಟೀವಿ ಯಲ್ಲಿ ವಿಶೇಷ ಚರ್ಚೆಯನ್ನು ಏರ್ಪಡಿಸಿದ್ದೆವು. ಚರ್ಚೆಯಲ್ಲಿ ಭಾಗವಹಿಸಿದ್ದ (ನ)ಗಣ್ಯರು (ಕು)ಖ್ಯಾತ ರಾಜಕಾರಿಣಿ ಢಾ.ಕು.ಶಾ ಕುಮಾರ್, (ಕು)ಖ್ಯಾತ ಚಿಂತಕ ಜೋ. ಕೆ . ಗೋ ರಾವ್, (ಅ)ಸಂಸ್ಕೃತ ಪಂಡಿತ ನಾನೆ ಆಚಾರ್ಯ, ಜ್ಯೋತಿಷಿ ಸೋಮಾರಿಯಾಜಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಘನವೆತ್ತ ವಿದ್ಯಾರ್ಥಿಗಳು.

ಪ್ರಶ್ನೆ ಪತ್ರಿಕೆ ಬಯಲಾಗುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಸಮರಸ ಟೀವಿಯವರು ನಾನೆ ಅಚಾರ್ಯ ರವರಿಗೆ ಕೇಳಿದಾಗ,

ನಾನೆ ಆಚಾರ್ಯರವರು, ನೋಡಿ ಈಗಿನ ಶಿಕ್ಷಣ ಪದ್ಧತಿ ಇದೆಯೆಲ್ಲಾ ಇದು ಶೂನ್ಯ. ನಾವು ೧೦೦೦ - ಒಂದರ ಮುಂದೆ ಮೂರು ಶೂನ್ಯ ವರ್ಷ ಹಿಂದೆ ಹೋಗಿ ನೋಡಬೇಕು. ಆಗಿನ ಗುರು-ಕುಲ ಪದ್ಧತಿಗೆ ಈಗಿನ ಶಿಕ್ಷಣ ಪದ್ಧತಿ ಸಾಟಿಯಿಲ್ಲ. ಆಗ ವಿದ್ಯಾರ್ಥಿಗಳು ಮರಳಿನ ಮೇಲೆ ತಿದ್ದಿ ವಿದ್ಯೆ ಕಲಿಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಎಲ್ಲಿ? ಅದು ಬಯಲಾಗುವುದು ಎಲ್ಲಿ? ಇಂದು ನಾವು ಆ ಮರಳಿನ ಮೇಲೆ ತಿದ್ದುವ ಶಿಕ್ಷಣಕ್ಕೆ ಮರಳಿ ಹೋಗಬೇಕೆಂದರು. ಹೀಗೆಂದ ಕ್ಷಣ ಘನವೆತ್ತ ವಿದ್ಯಾರ್ಥಿಗಳು ತಮ್ಮ ಮುಂದೆ ಕುಳಿತವರ ಬೆನ್ನು ತಟ್ಟಿ ನಾನೆ ಆಚಾರ್ಯರ ಮಾತುಗಳನ್ನು ಸಮರ್ಥಿಸಿದ್ದು ವಿಶೇಷ. ಮುಂದೆ ಓದಿ...

ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ!

ಸಮರಸ ವಿಶೇಷ ಅಂಕಣದಲ್ಲಿ 'ಯಾರಿಗೆ ಹಿಂಜರಿತ' ಎಂದು ರವೀಶ ಕೇಳುತ್ತಾರೆ..

ಬಹುಶ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಎಗ್ಗಿಲ್ಲದ೦ತೆ ಬಳಕೆಯಾದ ಪದ ಹಿ೦ಜರಿತ ಅಥವಾ Recession. ಆರ್ಥಿಕ ಹಿ೦ಜರಿತದ ದುಷ್ಪರಿಣಾಮಗಳೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಾಗ ಈ ಸಮಯದಲ್ಲಿ ನಾವು ಕಾಣಬಹುದಾದ ಒಳ್ಳೆಯ ಬೆಳವಣಿಗೆಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಜಗವೇ ನ೦ಬಿಕೆಯ ಮೇಲೆ ನಿ೦ತಿದೆಯಲ್ಲವೇ. ಅದು ಮು೦ಬರುವ ಕಾಲವು ಹಿ೦ದಿಗಿ೦ತ ಚ೦ದವಾಗಿರುದೆ೦ಬ ಅಚಲವಾದ ನ೦ಬಿಕೆಯ ಮೇಲೆ. ಮುಂದೆ ಓದಿ...

ಮಂಗಳವಾರ, ಜೂನ್ 23, 2009

ಶಿಕ್ಷಣ ಪದ್ಧತಿ ಬದಲಾಗಬೇಕಲ್ಲವೆ?

ಶಿಕ್ಷಣ ಮಕ್ಕಳ ಸರ್ವತೋಮುಖಿ ಅಭಿವೃದ್ಧಿಗೆ ಸಹಾಯವಾಗಬೇಕೆಂಬುದು ಎಲ್ಲೆಲ್ಲಿಯೂ ಕೇಳಿ ಬರುವ ಕೂಗು. ಅದಕ್ಕಿಂತ ಮೊದಲು ಶಿಕ್ಷಣ, ಮಕ್ಕಳಲ್ಲಿ ಓದುವುದಕ್ಕೆ ಆಸಕ್ತಿಯನ್ನು ಬೆಳೆಸುವುದಕ್ಕೆ ಪ್ರೇರೇಪಣೆಯಾಗಬೇಕು. ನನಗೆ ನನ್ನ ಪ್ರಾಥಮಿಕ ತರಗತಿಗಳು ನೆನಪಿಗೆ ಬರುತ್ತಿವೆ. ಪದ್ಯ, ಮಗ್ಗಿ, ಕವಿ ಕಾವ್ಯ ಪರಿಚಯವನ್ನು ಬಾಯಿಪಾಠ ಮಾಡುವುದು. ಪಾಠದ ಕೊನೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅವುಗಳನ್ನು ಬಾಯಿ ಪಾಠ ಮಾಡುವುದು. ಹೀಗೆ ಬರೀ ಬಾಯಿ ಪಾಠ ಮಾಡುವುದರಲ್ಲೇ ನಮ್ಮ ಪ್ರಾಥಮಿಕ ಶಿಕ್ಷಣ ಕಳೆದು ಹೋಯಿಯು. ಶಿಕ್ಷಣ ಎಂಬುದು ಒಂದು ರೀತಿಯ ಶಿಕ್ಷೆ ಎಂದೆನಿಸಿ ಬಿಟ್ಟಿತ್ತು.ಇನ್ನು ಓದುವುದಕ್ಕೆ ಸ್ವಂತ ಆಸಕ್ತಿ ಬೆಳೆಯುವುದು ದೂರದ ಮಾತು. ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಟ್ಟು, ರೇಗಿ, ಬೈದು ಬಾಯಿಪಾಠ ಮಾಡುವುದಕ್ಕೆ ಸಹಾಯ ಮಾಡಿದರೆ ಅಂತಹ ಮಕ್ಕಳು ಬುದ್ಧಿವಂತ ವಿದ್ಯಾರ್ಥಿಗಳಾಗುತ್ತಿದ್ದರು. ಎಷ್ಟೋ ಜನರ ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಡಲಾಗದಂತಹ ಸ್ಥಿತಿ. ಅಂತಹ ಮಕ್ಕಳಿಗೆ ಓದುವುದರಲ್ಲಿ ನಿರಾಸಕ್ತಿ ಉಂಟಾಗಿ ದಡ್ಡರೆನಿಸಿಕೊಳ್ಳುತ್ತಿದ್ದರು. ಇನ್ನು ಸಾಮಾನ್ಯವಾಗಿ ಬೋಧಕರಿಗೆ ಬುದ್ಧಿವಂತ ವಿದ್ಯಾರ್ಥಿಗಳೆಂದರೆ ಪ್ರೀತಿ. (ಎಲ್ಲರೂ ಹೀಗೆ ಎಂದಲ್ಲ, ದಡ್ಡ ವಿದ್ಯಾರ್ಥಿಗಳೆನಿಕೊಂಡವರ ಬಗ್ಗೆ ವಿಶೇಷ ಆಸಕ್ತಿ ತೋರುವ ಶಿಕ್ಷಕರೂ ಇದ್ದಾರೆ, ಆದರೆ ಕಡಿಮೆ). ದಡ್ಡರಿಗೆ ಸಾಮಾನ್ಯವಾಗಿ ಬೆತ್ತದ ಪೆಟ್ಟು. ಓದಿನಲ್ಲಿ ಹೆಚ್ಚಿನ ನಿರಾಸಕ್ತಿ.

ಇದಕ್ಕೆಲ್ಲ ಏನು ಕಾರಣ? ಮುಂದೆ ಓದಿ...

ಮಂಗಳವಾರ, ಜೂನ್ 16, 2009

ಬ್ಳಾಗ್ ಮೌನ, ಸಮರಸ ಜನನ!



ಇಷ್ಟು ದಿನ ಎಲ್ಲಿ ಹಾಳಾಗ್ ಹೋಗಿದ್ನಪ್ಪಾ ಅಂತೀರಾ? ಅಥವಾ RSS ಫೀಡ್ ನಲ್ಲಿ ಯಾವುದೇ ಅಪ್ಡೇಟ್ಸ್ ಕಾಣಿಸಲಿಲ್ಲ ಅಂತ ಈ ಕಡೆ ಬರಲೇ ಇಲ್ಲವ? ಏನಿಲ್ಲ ರೀ, ಜಾಗತಿಕ ಹಿಂಜರಿತ, ನಮ್ಮ ಸಂಸ್ಥೆಯ ಗ್ರಾಹಕರೆಲ್ಲಾ ಓಡಿ ಹೋಗಿಬಿಟ್ಟಿದಾರೆ. ಮಾಡೋಕ್ಕೆ ಕಛೇರಿಲ್ಲಿ ಕೆಲ್ಸ ಇಲ್ಲ.
ಕೆಲ್ಸ ಇಲ್ಲ ಅಂದ್ರೆ ಬ್ಳಾಗ್ ನಲ್ಲಿ ಏನಾದ್ರು ಗೀಚೋಕ್ಕೂ ಸೋಮಾರಿತನನಾ? ಹಾಳಾಗ್ ಹೋಗ್ಲಿ, ನಾವು ಬರೆದಿರೋದನ್ನ ಓದಿ, ಒಂದೆರಡು ಪ್ರತಿಕ್ರಿಯೆ ಬರಿಯೋದಕ್ಕೂ ಮೈಗಳ್ಳತನನಾ? ಇಲ್ಲ ಸ್ವಾಮಿ, ಇಂತಹ ಬಿಡುವಿನ ಸಮಯವನ್ನ ಸದುಪಯೋಗ ಮಾಡ್ಕೊಳ್ಳೋಣ ಅಂತ ಒಂದು ಕೆಲ್ಸ ಮಾಡ್ದೆ, ಹೇಳ್ಕೋಳ್ಳೋಕೆ ಜಾಸ್ತಿ ಏನಿಲ್ಲ..

http://samarasa.net/ ನೋಡಿ, ಹೇಗಿದೆ ಹೇಳಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ. ವಿನ್ಯಾಸ ಮತ್ತು ವಿಷಯದ ವಸ್ತುಗಳನ್ನು ಇನ್ನೂ ಅಭಿವೃದ್ಧಿಪಡಿಸಲು ನಿಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನಿತ್ತು ಸಮರಸವನ್ನು ಸಲಹಿ.

ದಯವಿಟ್ಟು ನೀವೆಲ್ಲರೂ ಹೇರಳವಾಗಿ ನಿಮ್ಮ ಬರವಣಿಗೆಗಳನ್ನು ಸಮರಸಕ್ಕೆ ಕಳುಹಿಸಿ. ಸದ್ಯಕ್ಕೆ ಓದುಗರೇ ನೊಂದಾಯಿಸಿಕೊಳ್ಳುವ ಸೌಲಭ್ಯ ಕೊಟ್ಟಿಲ್ಲ. ಮುಂದೆ ಅದನ್ನು ಒದಗಿಸುವ ಯೋಚನೆಯಿದೆ.

ಕೆಲವು ವಿಭಾಗಗಳಲ್ಲಿ ಲೇಖನಗಳಿಲ್ಲ, ಏನಪ್ಪಾ ಖಾಲಿ ಖಾಲಿ ಅಂತ ಬೈಬೇಡಿ, ಎಲ್ಲಾ ವಿಭಾಗಕ್ಕೂ ಗುಣಮಟ್ಟದ ಲೇಖನಗಳನ್ನು ಸೇರಿಸೋಣ.

ಗೆಳೆಯ ರವೀಶ್ ಮತ್ತು ಮಧುರ್ ಈ ಕಾರ್ಯಕ್ಕೆ ನನ್ನ ಜೊತೆ ಕೈ ಜೋಡಿಸಿದ್ದಾರೆ. ಅವರಿಗೂ ಧನ್ಯವಾದಗಳು.

Internet Explorer ನಲ್ಲಿ ಸಮರಸವನ್ನು ಓದುವಾಗ ಕೆಲವು ನ್ಯೂನ್ಯತೆಗಳು ಕಾಣ್ತಾ ಇವೆ. ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. Mozillaa ದಲ್ಲಿ ಓದುವುದು ಸುಲಭ.

ಇವಲ್ಲದೆ ಇನ್ನೂ ಹಲವು ನ್ಯೂನ್ಯತೆಗಳು ಉಳಿದೆವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಸಹಕಾರವಿರಲಿ.
ವೆಬ್ ಸೈಟ್ ವಿನ್ಯಾಸಕ್ಕೆ Wordpress ಮತ್ತು Mimbo ಗಳನ್ನು ಬಳಸಿದ್ದೇನೆ. ಅವರಿಗೂ ಧನ್ಯವಾದಗಳು.

ಇನ್ನು ಮುಂದೆಯೂ ಇಲ್ಲಿ ಬರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ.