ಶುಕ್ರವಾರ, ನವೆಂಬರ್ 30, 2012
ಸಿನೆಮಾ ನೋಡವ್ನು ಮ್ಯಾಲೆ ಕುಂತವ್ನೆ..
ಒರಾಯಾನ್ ಮಾಲ್ ನಲ್ಲಿ ೭೦ ರುಪಾಯಿ ಕೊಟ್ಟು ಡ್ರಾಮಾ ಸಿನೆಮಾ ನೋಡಿದೆ.. (ಇಲ್ಲಿ ಡ್ರಾಮಾ ಸಿನೆಮಾ ಹೆಸರು.. genre/ಪ್ರಾಕಾರ ಅಲ್ಲ).. ಗೆಳೆಯ ಒಬ್ಬ ಹೇಗಿದೆ ಹೇಗಿದೆ ಅಂತ ತುಂಬ ಕೇಳ್ದ.. ನನ್ನ ಪಕ್ಕ ಒಬ್ಬ ಕಾಲೇಜ್ ಹೈಕಳು ಕೂತಿದ್ದ. ಹೋಗ್ಬೇಕಾದ್ರೆ ಒಂದು ನೋಟ್ ಬುಕ್ ಬಿಟ್ಟೋದ.. ಅದ್ರಲ್ಲಿ ಡ್ರಾಮಾ ಫಿಲ್ಮ್ ಬಗ್ಗೆ ಬರೆದಿದ್ದ. ಅವನು ವಿವೇಕಾನಂದ ಕಾಲೇಜಿನ ೨ ನೇ ಪಿ ಯು ಸಿ ಹುಡ್ಗ ಅಂತೆ.. ಸಂತೋಷ ಅಂತ ಅವನ ಹೆಸ್ರಂತೆ... ನೋಟ್ ಬುಕ್ ಮೇಲೆ ಬರ್ದಿತ್ತು.. ಅವನು ಫಿಲ್ಮ್ ಬಗ್ಗೆ ಬರೆದಿದ್ದನ್ನ ನಾನು ಕಷ್ಟ ಪಟ್ಟು ಟೈಪ್ ಮಾಡಿ, ಇಲ್ಲಿ ಬರ್ದಿದ್ದೀನಿ.. ಚೆನ್ನಾಗಿದೆ ಅನ್ಸಿದ್ರೆ ಫಿಲ್ಮ್ ಚೆನ್ನಾಗಿದೆ.. ಇಲ್ಲಾ ಅನ್ಸಿದ್ರೆ ಇಲ್ಲ... ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ..
ನಾನು ಮೂರನೆ ಸಾರ್ತಿ ಈ ಪಿಕ್ಚರ್ ನೋಡ್ದೆ.. ಈ ಸಾರ್ತಿ ನನ್ನ ಗರ್ಲ ಫ್ರೆಂಡ್ ಜೊತೆ. ಅವನಕ್ಕ* ಯೇನ್ ಚಿಂದಿ ಮೂವಿ ಗುರು... ಬ್ರಿಲ್ಲಿಯಂಟ್... ಯೇನ್ ಕಾಮಿಡಿ ಮಗ.. ಯಶ್, ನೀನಾಸಮ್ ಸತೀಶ್ ಫುಲ್ಲ್ ಕಾಮಿಡೀ ಗುರು.. ಯೇನ್ ಕಲ, ಊಂಕಲ ಅಂತ ಮಾತಾಡ್ತಾ ಇದ್ರೆ ಫುಲ್ಲ್ ಕಾಮಿಡೀ ಗುರು. ನಮ್ಮುಡ್ಗಿ ನಕ್ಕಿದ್ದೇ ನಕ್ಕಿದ್ದು. ಮನುಶ್ಯರು ಅಂಗೂ ಮಾತಾಡ್ತಾರೆ ಅಂತಾನೆ ಗೊತ್ತಿರ್ಲೆ ಇಲ್ಲ... ಅದೇ ಕಾಮಿಡೀ ಗುರು.. ಮಾತೇ ಕಾಮಿಡೀ.. ಯೇನ್ ಕಾಮಿಡೀ ಸೀನ್ಸು ಗುರು, ನೀರಲ್ಲಿ ಕಾಚ ಹಿಡ್ಯೋದು, ಕಾಚ ಯೆಸ್ಯೋದು, ಕಿವಿಲ್ಲಿ ಗುಗ್ಗೆ ತೆಗ್ಯೋದು, ತಲೆ ಬೋಳ್ಸೋದು, ವಿಗ್ ತೆಗ್ಯೋದು, ನಿದ್ದೆ ಮಾಡೋವ್ನಿಗೆ ಹೆಣ ಮೇಕಪ್ ಮಾಡೋದು. ಎಶ್ಟು ಸಿನೆಮಾದಲ್ಲಿ ನೋಡಿದ್ರೂ ಕಾಮಿಡೀ ಕಾಮಿಡೀನೇ ಗುರು.. ಸಕತ್ ನಗು ನನ್ ಹುಡ್ಗೀಗೆ.. ಪಿಚ್ಚರ್ ಪೂರ್ತಿ ಎಲ್ಲಾರೂ ಮಾತಾಡ್ತಾನೇ ಇರ್ತಾರೆ ಗುರು.. ಸುಮ್ನೆ ಯಾವ್ದೋ ಲೈಪ್ ಆಪ್ ಪೈ ಅಂತೆ. ಹುಲಿ ಬರುತ್ತಂತೆ.. ದೇವ್ರಲ್ಲಿ ನಂಬ್ಕೆ ಬರೋ ಸಿನೆಮಾ ಅಂತೆ... ಸಮುದ್ರದ ಮಧ್ಯೆ ಸಿಕ್ಕಿ ಹಾಕ್ಕೊಳ್ತಾರಂತೆ..... ಒಳ್ಳೆ ಕಥೆ ಅಂತೆ....ಅದೂ ಒಂದು ಸಿನೆಮಾ ಅಂತೆ.. ನನ್ನ ಫ್ರೆಂಡ್ ಒಬ್ಬ ಬಾ ಅಂತ ಬಲವಂತ ಮಾಡ್ದ.. ಅವನ್ ಶಾ...
ಸೂಪರ್ ಆಕ್ಟಿಂಗ ಮಗ.. ಎಲ್ಲಾ ಮಾತಾಡ್ತಾರೆ ಮಗ... ಆದ್ರೆ ನೀನಾಸಮ್ ಸತೀಶ್ ಹೀರೋಇನ್ ಬಿಟ್ಟು.. ಅವಳ್ದು ಮೂಗಿ ಪಾರ್ಟು.. ಗೊತ್ತೇ ಆಗಲ್ಲ ಅವ್ಳು ಮೂಗಿ ಅಂತ.., ಸುಮ್ನೆ ಮಾತಾಡಕ್ಕೆ ಬರಲ್ಲ ಅನ್ನೋಂಗ್ ಆಕ್ಟ್ ಮಾಡು ಅಂದವ್ರೆ, ಅವ್ಳು ಒಂತರಾ ಮಾತಾಡ್ದಂಗೆ ಮಗ... ಸಕತ್ ಡೈಲಾಗ್ಸ್ ಶಿಸ್ಯ.. ಶಿಳ್ಳೆ ವಡ್ದು ವಡ್ದು, ಹೊಟ್ಟೆ ವಳ್ಗೆ ಗಾಳಿ ಎಲ್ಲಾ ಹೊರ್ಟೋಯ್ತು... ನೀನಾಸಂ ಸತೀಶ ಮಗ, ಎಲ್ಲಾ ಫಿಲ್ಮ್ ಒಂದೇ ತರ ಸಕತ್ತಾಗ್ ಮಾಡ್ತಾನ್ ಮಗ... ನಾನೂ ನೀನಾಸಂ ಅಂತ ನನ್ನ ಹೆಸ್ರುಗೆ ಸೇರ್ಸ್ಕಂಡ್ ಬಿಡ್ತೀನಿ...
ಸೂಪರ್ ಕಥೆ ಮಗ...ದುಬೈ ಮಾಫಿಯಾ ಐತೆ. ಒಂದು ಕೊಲೆ ಆಗುತ್ತೆ. ಲವ್ ಐತೆ. ಫೈಟ್ ಐತೆ.. ಯಾವನಿಗ್ ಬೇಕು ಮಗ ಕಥೆ... ಸಕತ್ ಕಾಮಿಡೀ ಇದೆ. ಸಕತ್ ಸೆಂಟಿಮೆಂಟ್ ಇದೆ.. ಸಕತ್ ಡೈಲಾಗ್ ಇದೆ. ಡೈಲಾಗ್ ಮಗ ಡೈಲಾಗ್...
ಫಿಲಾಸಫಿ ಮಗ.. ಯೋಗರಾಜ್ ಭಟ್ ಫಿಲ್ಮ್ ಅಂದ್ರೆ ಫಿಲಾಸಫಿ ಮಗ.. ಸಕತ್ ಫಿಲಾಸಫಿ.. ಪರಮಾತ್ಮದಲ್ಲೂ ಫಿಲಾಸಫಿ...ಪರಮಾತ್ಮ ಫಿಲಾಸಫಿ ಸಕತ್...ಈ ಪಿಚ್ಚರ್ ನಲ್ಲಿ ಬೊಂಬೆ ಆಡ್ಸೋ ಫಿಲಾಸಫಿ ಮಗ.. ಸಕತ್ ಈಸಿ ಫಿಲಾಸಫಿ... ಚಿಂದಿ.. ಸುಮ್ನೆ ನಮ್ಮ ಕನ್ನಡ ಮೇಷ್ಟ್ರು ಅದೇನೋ ಅದ್ವೈತ, ರಸೆಲ್, ಹೆಗೆಲ್ ಅಂತ ಬಡ್ಕಂಡ್ ಸಾಯ್ತಾನೆ. ಸುಮ್ನೆ ಬಂದು ಪಿಚರ್ ನೋಡಿದ್ರೆ ಎಲ್ಲಾ ಸಿಕ್ಕ್ಬಿಡುತ್ತೆ...
ಸಾಂಗ್ಸ ಮಗ.. ಯೇನ್ ಲಿರಿಕ್ಸ್ ಮಗ.. ಚಿಂದಿ.. ಯೋಗ್ ರಾಜ್ ಭಟ್ ಹಳೇ ಫಿಲ್ಮ್ಸ್ ಎಲ್ಲಾ ನೆನಪಿಗೆ ಬರ್ತಾವೆ... ರಂಗಾಯಣ ರಘು ಬಂದಂಗೆ ಆಯ್ತದೆ ಮಗ... "ಸಂಡೆ ಆದ್ಮೇಲೆ ಮಂಡೆ ಬರ್ತದೆ... 10th ಆದ್ಮೇಲೆ ಪಿ ಯು ಬರ್ತದೆ"... ಸಿಂಪ್ಲಿ ಸೂಪರ್ಬ್.. ಸಕತ್ ಮೀನಿಂಗ್...ಇನ್ನೊಂದ್ ಸಾಂಗ್ "ಒಮ್ಮೆಮ್ಮೆ ಯೋಚಿಸಿದೆ.. ಯಾತಕ್ಕೆ ನಾನಾದೆ ಎದೆಯಲ್ಲಿ ಕುರ್ಚಿಯನ್ನು ಕೆತ್ತುವಾ ಬಡಗಿ.. ಇಬ್ಬನಿಯು ಸುಡುತಿಹುದು ತಂಗಾಳಿ .... ಚಂದ್ರಂಗೆ ಮುಂಬತ್ತಿ ಕೊಟ್ಟಿರ್ಲಾ....ಸೌಂಡಾದ್ರು ಬರಲಿ..." ಇಂಗೆಲ್ಲಾ ಯೇನೇನೋ ಬರ್ತದೆ ಮಗ....ಯೇನ್ ಮೆಲಡಿ ಗುರು.. ಸೆಕ್ಸಿ ಸಾಂಗ್... ಯೇನ್ ಸಕತ್ ಮೀನಿಂಗ್ ..ಅರ್ಥಾನೆ ಆಗಲ್ಲ.. ಸುಮ್ನೆ ನಮ್ಮ ಕನ್ನಡ ಮೇಷ್ಟ್ರು ಇಂತ ಸಾಂಗ್ಸ್ ಹೇಳಿ ಕೊಡ್ಬೇಕು.. ಕೆಲ್ಸಕ್ಕೆ ಬರ್ದ ಪದ್ಯ ಹೇಳ್ಕೊಟ್ಟು ಸಾಯ್ತಾನೆ....
ಹ್ಯಾಂಡ್ ಫೈಟ್, ಲೆಗ್ ಫೈಟ್, ಗನ್ ಫೈಟ್ ಎಲ್ಲಾ ಸೂಪರ್ ಗುರು.. ಅವನಮ್ಮ* ಚಿಂದಿ ಚಿತ್ರಾನ್ನ.. ಮ್ಯಾಟ್ರಿಕ್ಸ್, ಮಿಶಿನ್ ಇಂಪಾಸಿಬಲ್ ಎಲ್ಲಾ ವೇಷ್ಟ್ ಗುರು. ಯೋಗರಾಜ್ ಭಟ ಫುಲ್ ಇಂಪ್ರೂವ್ ಮೆಂಟ್ ಗುರು!
ಯೇನ್ ಕೈಮ್ಯಾಕ್ಸ್ ಮಗ... ಅಪ್ಪ ಅವನ ಮಗ್ಳು ಪ್ರೀತ್ಸಿದ್ ಹುಡ್ಗನ್ ಜೊತೆ ಸುಕ್ವಾಗಿರ್ಲಿ ಅಂತ ಮಾನವ ಬಾಂಬ್ ಇಟ್ಕಂಡು ಬ್ಲಾಸ್ಟ್ ಮಾಡಿ, ವಿಲ್ಲನ್ಸ್ ಎಲ್ಲಾರ್ನೂ ಸಾಯಿಸ್ಬಿಡ್ತಾನೆ... ಸೂಪರ್ ಮಗ ಸೂಪರ್... ನನ್ನ ಗರ್ಲ್ ಪ್ರೆಂಡ್ ಅಪ್ಪಾನೂ ಇದಾನೆ... ಸಾಯ್ತಾನೆ, ನನ್ನ ಜೊತೆ ಫಿಲ್ಮ್ ಗೆ ಕಳ್ಸೋಕ್ಕೆ...
ಆದ್ರೂ ರಾಧಿಕಾ ಪಂಡಿತ್ ಇನ್ನೂ ಚೆನ್ನಾಗ್ ಮಾಡ್ಬೋದಿತ್ತು... ಲೊಕೇಶನ್ಸ್ ಇನ್ನೂ ಒಳ್ಳೇದ್ ಇರ್ಬೋದಿತ್ತು...
ಯೇನೇ ಆದ್ರು ಯೋಗರಾಜ್ ಭಟ್ ಸೂಪರ್, ಚಿಂದಿ ಮಗ... ಅವೊತ್ತು ಯಾವನೊ ಗಡ್ಡ ಬಿಟ್ಕಂಡು ಫಿಲ್ಮ್ ಗೆ ಬೈತಾ ಇದ್ದ.. ಅವನಕ್ಕ* ಸುಮ್ನೆ ನೇಣ್ ಹಾಕ್ಬೇಕ್ ಅವನ್ಗೆ!ಯೋಗರಾಜ್ ಭಟ್ಟೇ ಸಿನೆಮಾ ಮಗ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)