ಗುರುವಾರ, ಮಾರ್ಚ್ 14, 2013
ಗುರುವಾರ, ಮಾರ್ಚ್ 07, 2013
ಆಕೃತಿ ಅಂಗಳದಲ್ಲಿ ಶಿವರಾತ್ರಿಯಂದು ಪುಸ್ತಕಮನೆ ಪುರಾಣ
[Description]
ಆಕೃತಿ ಅಂಗಳದಲ್ಲಿ ಮಾರ್ಚ್ 10 2013, ಬೆಳಗ್ಗೆ 11 ಘಂಟೆಗೆ, ಹಿರಿಯ ಸಾಹಿತಿ, ಪತ್ರಕರ್ತ, ಪರ್ಯಾಯ ಸಂಸ್ಕೃತಿ ಚಿಂತಕ, ಪುಸ್ತಕ ಮನೆ ಖ್ಯಾತಿಯ ಶ್ರೀ ಹರಿಹರಪ್ರಿಯ ಅವರು "ಪುಸ್ತಕಮನೆ: ಸಮಾಜ, ಸರಕಾರ, ಮಾಧ್ಯಮ" ಕುರಿತಾಗಿ ಭಾಷಣ ಮಾಡಿ, ಸಂವಾದಕ್ಕೆ ತೆರೆದುಕೊಳ್ಳಲಿದ್ದಾರೆ.
ಯೋಗ್ಯ ಪುಸ್ತಕ ಸಂಗ್ರಹ ಎಂಬುದೇನು? ಅದರ ಅವಶ್ಯಕತೆ - ಉಪಯುಕ್ತತೆ? ಹಿಂದಿನ ಖ್ಯಾತ ಪುಸ್ತಕ ಸಂಗ್ರಹಕಾರರು; ಪುಸ್ತಕಮನೆ ಕಟ್ಟಿ ಬೆಳೆಸಲು ತಾವು ಪಟ್ಟ ಶ್ರಮ; ಅದು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿ, ಸಮಾಜ ಸೇವೆ; ಅದರ ಕಷ್ಟದ ದಿನಗಳು; ತಾವು ಐದು ವರ್ಷ ನಿರಂತರವಾಗಿ ನಡೆಸಿದ ಪುಸ್ತಕ ಪ್ರದರ್ಶನ; ಐದು ವರ್ಷ ತಾವೇ ಕಟ್ಟಿ ಬೆಳೆಸಿದ ಪುಸ್ತಕಮನೆ ಪತ್ರಿಕೆಯ ಶ್ರಮ - ಸಾರ್ಥಕ್ಯ; ಪುಸ್ತಕಮನೆಯಲ್ಲಿ ಸರಕಾರದ ಪಾತ್ರ; ತಮ್ಮ ನಿರೀಕ್ಷೆಗಳು; ಪುಸ್ತಕಮನೆಯ ಮುಂದಿನ ನೋಟ; ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಕೇಳುಗರ ಸಂವಾದಕ್ಕೆ ಮುಕ್ತವಾಗಿ ಭಾಗವಹಿಸಿ, ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
10 ಮಾರ್ಚ್ 2013, ಭಾನುವಾರ
ಬೆಳಗ್ಗೆ 11 ಕ್ಕೆ
ಸ್ಥಳ: ಆಕೃತಿ ಪುಸ್ತಕ ಮಳಿಗೆ
ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 10
ಗುರುತು: ಭಾಷ್ಯಂ ಸರ್ಕಲ್, ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9886694580
ಎಲ್ಲರಿಗೂ ಆದರದ ಸ್ವಾಗತ
ಪುಸ್ತಕಮನೆ ಹರಿಹರಪ್ರಿಯ : ಬಹುಮುಖ ಪ್ರತಿಭೆ ಹರಿಹರಪ್ರಿಯ ಅವರು ಬಾಲ್ಯದಲ್ಲೇ ಸಾಹಿತ್ಯ ಕೃಷಿಗೆ ಇಳಿದವರು. ಕನ್ನಡ ಮತ್ತು ತೆಲುಗು ಭಾಷಾ ಪ್ರವೀಣರಾದ ಹರಿಹರಪ್ರಿಯ ಅವರು ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಗುರುತಿಸಿಕೊಂಡವರು. ಇವರು ಸಂಪಾದನೆ ಮಾಡಿದ 'ಇವರು ಕುವೆಂಪು', 'ಕುವೆಂಪು ಪತ್ರಗಳು', 'ಕುವೆಂಪು ಒಲವು ನಿಲುವು' ಕನ್ನಡ ಸಾಹಿತ್ಯದ ಬಹುಮುಖ್ಯ ಕೃತಿಗಳು. ಪುಸ್ತಕ ಸಂಗ್ರಹದ ಗೀಳು ಹತ್ತಿಸಿಕೊಂಡ ಹರಿಹರಪ್ರಿಯ ಅವರು, ತಮ್ಮ ಸಂಗ್ರಹದಲ್ಲಿ ಕನ್ನಡ, ಇಂಗ್ಲಿಶ್, ತೆಲುಗು ಭಾಷೆಗಳ ಪುಸ್ತಕಗಳು ಮತ್ತು ಪತ್ರಿಕೆಗಳನ್ನೊಳಗೊಂಡು ಸುಮಾರು ಒಂದೂವರೆ ಲಕ್ಷಕ್ಕೂ ಮಿಗಿಲಾದ ಪುಸ್ತಕ - ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಇವರ ಗ್ರಂಥ ಭಂಡಾರ ಅತಿ ಪುರಾತನ, ಅಪರೂಪದ ಪುಸ್ತಕ - ಪತ್ರಿಕೆಗಳೂ ಅಲ್ಲದೆ, ಇತ್ತೀಚಿನ ಯುವ ಲೇಖಕರ ಪುಸ್ತಕಗಳನ್ನೂ ಒಳಗೊಂಡಿದೆ. ಅಲ್ಲದೆ ನಿರಂತರ ಐದು ವರ್ಷ ವಿವಿಧ ಸಾಹಿತಿಗಳ ಪುಸ್ತಕ ಪ್ರದರ್ಶನ ನಡೆಸಿ, ಸಾಹಿತ್ಯ ಪರಿಚಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐದು ವರ್ಷ ತಾವೇ ಸಂಪಾದಿಸಿ ಹೊರಡಿಸಿದ ಪುಸ್ತಕಮನೆ ಎಂಬ ಪತ್ರಿಕೆ ಕೂಡ ಕನ್ನಡದ ಸಾಹಿತ್ಯ ಲೋಕಕ್ಕೆ ಅತಿ ದೊಡ್ಡ ಕೊಡುಗೆ. ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಹರಿಹರಪ್ರಿಯ ಅವರು ಸಂಗೀತ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳ ಬಗ್ಗೆ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಪಂಗಡಗಳನ್ನು ಕಟ್ಟಿಕೊಂಡು ಹೊಗಳಿಕೊಳ್ಳುವುದನ್ನು ಒಪ್ಪದ ಹರಿಹರಪ್ರಿಯ ಅವರು, ವಿಮರ್ಶೆ-ಖಂಡನಾ ಶೈಲಿಯಲ್ಲಿ ಉಪನ್ಯಾಸಗಳನ್ನು ನೀಡಿ ಹರಿತ ಭಾಷಣಕಾರರೆಂದು ಗುರುತಿಸಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ ಬಹುಮಾನ, ವರ್ಧಮಾನ ಉದಯೋನ್ಮುಖ ಶ್ರೇಷ್ಠ ಸಾಹಿತಿ ಪ್ರಶ
ಸ್ತಿ, ಕಾವ್ಯಾನಂದ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಹರಿಹರಪ್ರಿಯ ನಿರಂತರ ಸಾಹಿತ್ಯಜೀವಿ. ಪುಸ್ತಕಮನೆ ಮತ್ತು ಹರಿಹರಪ್ರಿಯ ಕೇವಲ ಮನೆ ಮತ್ತು ವ್ಯಕ್ತಿಯಾಗಿ ಉಳಿಯದೆ, ಕನ್ನಡ ಸಾಹಿತ್ಯ ಲೋಕದ ಅನರ್ಘ್ಯಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
For those ONLY who cannot read Kannada:
Noted Writer, Thinker, Bibliophile Shri Harihara Priya will be interacting with the audience at Aakruti Books, Rajajinagar Bangalore on March 10th Sunday at 11 AM.
Hariharapriya will speak about importance of Book Collection, Important Bibliophiles till day, About the institution "pustaka mane" which he built over several years, about the book exhibition of various individual authors which he organized over several years, about the Magazine "pustakamane" which he edited and ran for Five years, about the contribution of Pustakmane to the culture and society, Government’s and Media's role in Pustakamane, His expectations and on the future of Puatskamane.
Pustakamane Hariharapriya: Multifaceted Hariharapriya started his literature career at an early age. Being an expert in both Kannada and Telugu Language, he has authored books in different Genre. The books edited by Hariharapriya "ivaru kuvempu", "kuvempu patragaLu", kuvempu olavu niluvu" are few of the notable woks of Kannada literature. A compulsive bibliophile, at present he has over 1.5 lakh Books and Magazines, in Kannada, Telugu and English Languages in his collection. This includes books of various genre, prints varying from rarest to the books of latest young writers. He edited and ran a magazine called "pustakamane" for 5 years and continuously exhibited the books of various authors for over 5 years to spread the literature and culture among the youth. A critic in Literature, Music and Art, he is a staunch opposite to group cultural politics and self praising-promotion among the groups and he is known for his fiery speeches. Recipient of Kannada Rajyotsava prashsti, Kempegowda prashasti, he has won numerous awards and Calling him one of the gem in Kannada culture and Literature is not an exaggeration.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)