ಬುಧವಾರ, ಡಿಸೆಂಬರ್ 03, 2008

ರಂಗನತಿಟ್ಟು ಮತ್ತು ಅತ್ತಿವೇರಿ ಪಕ್ಷಿಧಾಮಗಳು

[ವಿಶೇಷ ಸೂಚನೆ: ಈ ಬ್ಳಾಗಿನ ಚಿತ್ರಗಳು "Internet Explorer" ನಲ್ಲಿ ವೀಕ್ಷಿಸಿದಾಗ ಸರಿಯಾಗಿ (ಸ್ಥಾನ ಪಲ್ಲಟವಾಗದೆ) ಕಾಣಿಸುತ್ತವೆ.]
ಸುಮಾರು ನನ್ನ ಜೀವನದ ೧೩ ವರ್ಷಗಳು ನಮ್ಮ ಊರಿನಲ್ಲೇ ಕಳೆದಿದ್ದು. ನಮ್ಮ ಊರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಮಳೆಗಾಲದಲ್ಲಿ ಕೆರೆ ಭರ್ತಿಯಾಗಿ ನಮ್ಮ ಹೊಲವನ್ನೂ ಸುತ್ತಿವರೆದುಬಿಡುತ್ತಿತ್ತು. ಇಂತಹ ದೊಡ್ಡ ಕೆರೆಯ ಸುತ್ತಮುತ್ತ ಬಹಳಷ್ಟು ಪಕ್ಷಿಗಳು (ಅಪರೂಪದವು ಕೂಡ) ಬಂದಿರದೆ ಇರಲಾರವು. ಆದರೆ ನಾನೆಂದೂ ಆ ದಿನಗಳಲ್ಲಿ ಹವ್ಯಾಸ, ನೋಡಲು ಚಂದವೆಂದು ಪಕ್ಷಿ ವೀಕ್ಷಣೆ ಮಾಡಿದ್ದೇ ಇಲ್ಲ! ಆ ದಿನಗಳಲ್ಲಿ ನಾನು ಹೆಚ್ಚಾಗಿ ನೋಡಿದ್ದು, ತಿಳಿದಿದ್ದು ಮತ್ತು ಗೊತ್ತಿದ್ದುದು ಕಾಗೆ, ಗುಬ್ಬಿ ಮತ್ತು ಕೊಕ್ಕರೆ ಮೂರೇ ಎನ್ನಬಹುದು. ಇನ್ನೊಂದೆರಡು ಓದಿ ತಿಳಿದಿದ್ದಿರಬಹುದು! ಎಂಥಾ ವಿಪರ್ಯಾಸ! ಅಭಿಯಂತರನಾದ (engineer) ಮೇಲೆ, ಈ ಕಾರ್ಯನಿರತ ಯಾಂತ್ರಿಕ ಜೀವನದ ನಡುವೆ ಇತ್ತೀಚಿಗೆ ಈ ಪಕ್ಷಿವೀಕ್ಷಣೆಯ ಚಪಲ ಹುಟ್ಟಿಕೊಂಡಿದೆ ನನ್ನಲ್ಲಿ.ಇಲ್ಲಿಗೆ ಪೀಠಿಕೆ ಸಾಕು,

ಪಕ್ಷಿ ವೀಕ್ಷಣೆ ಮತ್ತು ಪಕ್ಷಿ ಛಾಯಾಗ್ರಹಣಕ್ಕೆ ಹೊಸಬನಾದ ನಾನು ಸೆರೆ ಹಿಡಿದ ಕೆಲವು ಪಕ್ಷಿಗಳ ಛಾಯಾ ಪಟಗಳು ಅವುಗಳ ಹೆಸರಿನೊಂದಿಗೆ, ಮತ್ತು ಈ ಪಕ್ಷಿಗಳ ವಿಶೇಷತೆಯೇನಾದರೂ ನನಗೆ ಪಕ್ಷಿಧಾಮದ ಸಿಬ್ಬಂದಿಯ ಮೂಲಕವೋ ಅಥವಾ ಇನ್ಯಾವುದೇ ಮಾಧ್ಯಮದ ಮೂಲಕ ತಿಳಿದಿದ್ದರೆ ಅದನ್ನೂ ಪಕ್ಷಿ ಪಟದ ಕೆಳಗೆ ನಮೂದಿಸಲು ಪ್ರಯತ್ನಿಸಿದ್ದೇನೆ. ಬಹಳಷ್ಟು ಪಕ್ಷಿಗಳ ಕನ್ನಡ ಹೆಸರುಗಳಿಗೆ ಪೂರ್ಣಚಂದ್ರ ತೇಜಸ್ವಿಯವರ "ಹಕ್ಕಿ ಪುಕ್ಕ" ಪುಸ್ತಕದಿಂದ ತಿಳಿದುಕೊಂದಿರುವವು.

ರಂಗನತಿಟ್ಟು

(ಮೇಲೆ) ರಂಗನತಿಟ್ಟು ಪಕ್ಷಿಧಾಮದ ಪಕ್ಷಿನೋಟ

(ಮೇಲೆ, ಬಲ, ಕೆಳಗೆ) 'ಐಬಿಸ್ (Ibis) ಪಕ್ಷಿಗಳ' (ಈ ಪಕ್ಷಿಗೆ ಕನ್ನಡ ನಾಮ?) ಆಕರ್ಷಕ ಭಂಗಿಗಳು(ಮೇಲೆ) 'ಚಮಚ ಕೊಕ್ಕು ಪಕ್ಷಿ'ಯ ಪಾರ್ಶ್ವ ನೋಟ - side view of 'Spoonbill'
(ಬಲ)'[ಬಿಳಿ ಎದೆಯ ಕಿರು?]ಮಿಂಚುಳ್ಳಿ - white breasted kingfisher'
(ಕೆಳಗೆ) ಹಾರುತ್ತಿರುವ ಮೇಲಿನ 'ಮಿಂಚುಳ್ಳಿ'(ಮೇಲೆ) ಮರದಲ್ಲಿ ನೇತಾಡುತ್ತಿರುವ ’ಹಣ್ಣು ಬಾವಲಿ / ಕಪಟ’? ಗಳು - Fruit Bats
(ಬಲ) ಗುಬ್ಬಚ್ಚಿಯಲ್ಲದ ಈ ಪಕ್ಷಿಯ ಹೆಸರೇನು?
(ಕೆಳಗೆ) ಬಂಡೆಯ ಮೇಲೆ ಬಿಸಿಲು ಕಾಯಿಸುತ್ತಿರುವ 'ಮಾರ್ಷ್ ಮೊಸಳೆಗಳು' - Marsh Crocodiles


ರಂಗನತಿಟ್ಟಿನ ಮತ್ತೊಂದು ವಿಶೇಷ ಅಲ್ಲಿನ ಮಾರ್ಶ್ ಮೊಸಳೆಗಳು! ಇವುಗಳನ್ನು ಕೆಲವೇ ಅಡಿಗಳ ದೂರದಿಂದ ನೋಡಬಹುದು. ಇವುಗಳು ಇಲ್ಲಿಯವರೆಗೂ ಯಾವುದೇ ಮನುಷ್ಯನಿಗೂ ತೊಂದರೆ ಮಾಡಿಲ್ಲವಂತೆ!ರಂಗನತಿಟ್ಟಿನಲ್ಲಿರುವ ಮಾರ್ಷ್ ಮೊಸಳೆಗಳ ಸಂಖ್ಯೆ ೪೦ - ೫೦. ಈ ಮೊಸಳೆಗಲು ಹೆಚ್ಚಾಗಿ ಸಂತಾನೋತ್ಪತ್ತಿ ಮಾಡಿದರೂ, ಇವುಗಳ ಸಂಖ್ಯೆ ೪೦ - ೫೦ ರ ಆಸುಪಾಸಿನಲ್ಲೇ ಇರುವುದು ಒಂದು ರಹಸ್ಯ ಮತ್ತು ಆಶ್ಚರ್ಯಕರವಾದ ಸಂಗತಿ ಎನ್ನುತ್ತಾರೆ ರಂಗನತಿಟ್ಟಿನ ಸಿಬ್ಬಂದಿ.
_____________________________________________________________________________________
ಅತ್ತಿವೇರಿ ಪಕ್ಷಿಧಾಮ

(ಮೇಲೆ) ಅತ್ತಿವೇರಿ ಪಕ್ಷಿಧಾಮದ ಪಕ್ಷಿನೋಟ

ಅತ್ತಿವೇರಿ ಪಕ್ಷಿಧಾಮ ಹುಬ್ಬಳ್ಳಿ ಯಿಂದ ಸುಮಾರು ೪೫ ಕಿ ಮೀ ಗಳು. ಹುಬ್ಬಳ್ಳಿಯಿಂದ ಮುಂಡಗೋಡ್ (ಉತ್ತರ ಕನ್ನಡ ಜಿಲ್ಲೆ) ಗೆ ಹೋಗುವ ದಾರಿಯಲ್ಲಿದೆ.(ಪಕ್ಷಿಧಾಮ ಇರುವುದು ಹಾವೇರಿ ಜಿಲ್ಲೆಯಲ್ಲಿ). ಹುಬ್ಬಳ್ಳಿಯಿಂದ ಬಸ್ ಹತ್ತಿ, ಪಕ್ಷಿಧಾಮದ ತಿರುವಿನಲ್ಲಿ ಕೋರಿಕೆಯ ಮೇರಿಗೆ (ಅಲ್ಲಿ ನಿಲ್ದಾಣ ಇಲ್ಲ್ಲ) ಇಳಿದುಕೊಂಡು, ಅಲ್ಲಿಂದ ನಾಲ್ಕು ಕಿ ಮೀ ಪಕ್ಷಿಧಾಮಕ್ಕೆ. ನಡೆದೇ ಹೋಗಬೇಕು. ಬೇರೆ ಯಾವುದೇ ಸರ್ಕಾರಿ ವಾಹನಗಳಿಲ್ಲ. ಆರ್ಥಿಕವಾಗಿ ಬಹಳ ವ್ಯಥೆ ಪಡದೆ ಇರುವವರು ಮುಂಡಗೋಡ್ ಗೆ ಹೋಗಿ ತ್ರಿಚಕ್ರ ವಾಹನದಲ್ಲಿ (auto) ಕೂಡ ಹೋಗಬಹುದು. ಒಂದು ಕಡೆಗೆ ಸುಮಾರು (೧೮ ಕಿ ಮೀ ಪ್ರಯಾಣ).

ಈ ವರ್ಷ ಮಳೆ ಪ್ರಮಾಣ ಕಡಿಮೆ ಇದ್ದು, ಕೆರೆ ಪೂರ್ಣ ತುಂಬದೆ ಇದ್ದ ಕಾರಣ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯ ಕಡಿಮೆಯಾಗಿತ್ತು.

ಇಲ್ಲಿನ ಸಿಬ್ಬಂದಿ ವರ್ಗ ಬಹಳ ಸ್ನೇಹಜೀವಿಗಳು. ಆಸಕ್ತಿ ಯಿದ್ದವರಿಗೆ ಪಕ್ಷಿಗಳನ್ನು ವಿಶೇಷಾಸಕ್ತಿಗಳಿಂದ ತೋರಿಸುತ್ತಾರೆ. ಮಹೇಶ್ ಎನ್ನುವವರು (ಅರಣ್ಯ ಇಲಾಖೆಯ ಸಿಬ್ಬಂದಿ) ನನಗೆ ಬಹಳ ಆತ್ಮೀಯತೆಯಿಂದ ಪಕ್ಷಿಗಳ ವಿವರಗಳನ್ನು ತಿಳಿಸಿದರು. ಸುಮಾರು ೨ ಘಂಟೆಗಳ ಕಾಲ ದೋಣಿ ವಿಹಾರದೊಂದಿಗೆ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಹಳ ಸಹಾಯ ಮಾಡಿ, ಪಕ್ಷಿಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನೂ ಕೊಟ್ಟರು.

(ಮೇಲೆ)ಅತ್ತಿವೇರಿಯಲ್ಲಿ ಕಂಡುಬಂದ 'ಚಮಚ ಕೊಕ್ಕು (spoon bill)' ಪಕ್ಷಿಗಳು(ಮೇಲೆ) 'ಬಿಳಿ ಮಿಂಚುಳ್ಳಿ - pied kingfisher'
(ಬಲ) '[ಬಿಳಿ ಎದೆಯ] ಗದ್ದೆ ಮಿಂಚುಳ್ಳಿ - white brested kingfisher'

(ಕೆಳಗೆ) 'ಕಿರು ನೀಲಿ ಮಿಂಚುಳ್ಳಿ - small blue kingfisher'(ಮೇಲೆ) ಸಾಮಾನ್ಯವಾಗಿ ದಂಡೆಯ ಮೇಲೇ ಗೂಡು ಮಾಡುವ 'ರಿವರ್ ಟರ್ನ್ (River tern)' ಪಕ್ಷಿಗಳು, (ಕನ್ನಡ ನಾಮ?)
(ಬಲ) ನಾವು ಸಮೀಪಿಸಿದಂತೆ ಎಚ್ಚರಗೊಂಡು ಕಿರುಚುತ್ತಿರುವ ರಿವರ್ ಟರ್ನ್
(ಕೆಳಗೆ) ನಾವಿನ್ನೂ ಹತ್ತಿರ ಸಮೀಪಿಸಿದಂತೆ ಪುರ್ರೆಂದು ಹಾರಿದ ರಿವೆರ್ ಟರ್ನ್


೧) 'ಕರಿ ಕುಂಡೆಕುಸ್ಕ - large pied wagtail'
೨) ಹಾರುತ್ತಿರುವ ಕರಿ ಕುಂಡೆಕುಸ್ಕ - pied wagtail's flight
೩) 'ಬೂದು? ಕುಂಡೆಕುಸ್ಕ - gray wagtail'?
(ಮೇಲೆ) 'ಬಾಯ್ಕಳಕ - open billed strok'
(ಬಲ) ಕೊಕ್ಕಿನಲ್ಲಿ ಆಹಾರದೊಂದಿಗೆ ಬಾಯ್ಕಳಕ - open billed strok with its prey in its Beak
(ಕೆಳಗೆ) ಬಿಳಿ ಪಾರಿವಾಳದಂತಿರುವ 'ಬೆಳವನ ಹಕ್ಕಿ' - Ring Dove

ಈ ಪಕ್ಷಿಯನ್ನು ಮಹೇಶ್ ರವರು ಶಿಶುನಾಳ ಶರೀಪರ ಗೀತೆಯ ಮೂಲಕವೇ ಪರಿಚಿಯಿಸಿದ್ದು,
" ಕೂ ಕೂ ಎನುತಿದೆ ಬೆಳವಾ - ಬಂದು
ಹೊಕ್ಕಿತು ಭವವೆಂಬ ದು:ಖದ ಹಳುವ "


(ಮೇಲೆ) 'ಬಾಲಗೋರೆ'ಗಳ ಸಮೂಹ - stock of 'Pin Tailed Ducks'
(ಎಡ) ಈಜುತ್ತಿರುವ ಒಂಟಿ ’ಬಾಲಗೋರೆ’ - lone pin tailed duck swimming

ಮಹೇಶ್ ರವರು ವಿವರಿಸುವಂತೆ : ಈ ಬಾಲಗೋರೆ ಪಕ್ಷಿಗಳು ಯೂರೋಪ್ ಖಂಡದಿಂದ ವಲಸೆ ಬರುವ ಪಕ್ಷಿಗಳಂತೆ. ಇವುಗಳ ವಿಶೇಷತೆಯೆಂದರೆ, ಈ ಪಕ್ಷಿಗಳು ಆಹಾರವನ್ನು ತಿಂದು, ಕೊಬ್ಬಿನ ರೂಪದಲ್ಲಿ ಶೇಖರಿಸಿ ಒಂದೇ ಸಮನೆ ಯೂರೋಪಿನಿಂದ ಭಾರತದವರೆಗೆ ಬೇರೆನನ್ನೂ ತಿನ್ನದೆ ಒಂದೇ ಉಸಿರಿನಲ್ಲಿ ಹಾರಿ ಬರುವ ಸಾಮರ್ಥ್ಯವುಳ್ಳವವಂತೆ!(ಮೇಲೆ , ಬಲ, ಕೆಳಗೆ) 'ಕೆಮ್ಮಂಡೆ ಗಣಿಗಾರ್ಲ ಹಕ್ಕಿ - small green bee eater'
ಈ ಪಕ್ಷಿಗಳ ವಿಶೇಷತೆಯೆಂದರೆ, ಎಲ್ಲಿಂದಲೋ ಪುರ್ರೆಂದು ಹಾರಿ ಹೋಗಿ, ಮತ್ತದೇ ಜಾಗದಲ್ಲಿ ಬಂದು ಕೂರುತ್ತವೆ
!


(ಮೇಲೆ) 'ಚೋರೆಹಕ್ಕಿ ಚಾಣ ? - osprey / (kestrel ?)'
ಇದು ಚಳಗಾಲದಲ್ಲಿ ಹಿಮಾಲಯದಿಂದ ವಲಸೆ ಬರುವ ಪಕ್ಷಿಯಂತೆ!


(ಮೇಲೆ) ಈಜುತ್ತಿರುವ 'ಸ್ಪಾಟ್ಟೆಡ್ ಬಾತುಕೋಳಿಗಳು' ? - Swimming 'Spotted Ducks'
(ಎಡ) ಹಾರುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಗಳು - Flying 'Spotted Ducks'
(ಕೆಳಗೆ) ಒಂಟಿಯಾಗಿ ಈಜುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಯ ಮರಿ - A lone 'Baby Spotted Duck' swimming
(ಮೇಲೆ) ಹಾರುತ್ತಿರುವ 'ಬೆಳ್ಳಕ್ಕಿ'ಯ ಆಕರ್ಷಕ ಭಂಗಿ
(ಬಲ) 'ದೊಡ್ಡ ಬೆಳ್ಳಕ್ಕಿ'

ನಾವು ಸಾಮಾನ್ಯವಾಗಿ ಕಾಣುವ 'ಕೊಕ್ಕರೆಗಳಲ್ಲಿ (ಬೆಳ್ಳಕ್ಕಿ) - Egret ೩ ವಿಧ, ದೊಡ್ಡ ಬೆಳ್ಳಕ್ಕಿ (Big Egret) , ಮಧ್ಯಮ ಬೆಳ್ಳಕ್ಕಿ (Little Egret) ಮತ್ತು ಜಾನುವಾರು ಬೆಳ್ಳಕ್ಕಿ (Cattle Egret)'. (ಸಾಮಾನ್ಯವಾಗಿ ಹಸುಗಳ ಒಟ್ಟಿಗಿರುವುದರಿಂದ ಜಾನುವಾರು ಬೆಳ್ಳಕ್ಕಿಯೆಂಬ ಹೆಸರಂತೆ)


(ಮೇಲೆ) 'ನೀರು ಕಾಗೆ - Little Indian Cormorant' (ನೀರು ನವಿಲು ಎಂದೂ ಕರೆಯುವುದುಂಟಂತೆ)
(ಎಡ) ಹಾರುತಿರುವ ನೀರು ಕಾಗೆಯ ಭಂಗಿ - Flight of Cormorant


ಈ ಪಕ್ಷಿಗಳ ಹೆಸರುಗಳು ನಿಖರವಾಗಿ ನೆನಪಿಲ್ಲ!ಕೊನೆಯದಾಗಿ ಈ ಗೂಡಿನ ಭಾವಚಿತ್ರ (ಪಕ್ಷಿಯ ಹೆಸರು ನೆನಪಿಲ್ಲ! :()

ಅತ್ತಿವೇರಿ ಪಕ್ಷಿಧಾಮದ ಸಿಬ್ಬಂದಿಗಳು ಪಕ್ಷಿಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳ ಸಂಪೂರ್ಣ ವಿವರಗಳನ್ನು ಕೂಡ ಬರೆದು ಬೃಹತ್ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಇವರ ಶ್ರಮಕ್ಕೆ ಮೆಚ್ಚಲೇಬೇಕಾದ್ದು. ಆ ಸಂಗ್ರಹದ ಮೊದಲಿಗೆ ಕನ್ನಡದ ಮೇರು ಕವಿಗಳು ಹಕ್ಕಿಗಳ ಬಗ್ಗೆ ಬರೆದ ಕವನಗಳ ಕೆಲವು ಸಾಲುಗಲನ್ನೂ ಬರೆದಿದ್ದಾರೆ. ಆದರೆ ವರಕವಿ ಬೇಂದ್ರೆ ಯವರ ಈ ಕವನ ಬಿಟ್ಟು ಹೋಗಿದೆ!

ಹಕ್ಕಿ ಹಾರುತಿದೆ ನೋಡಿದಿರಾ?

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿ ನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ - ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು
ಸೂರ್ಯ - ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ಕಿ ಸೂ : ಈ ಪಕ್ಷಿಗಳನ್ನು ಸೆರೆ ಹಿಡಿಯಲು ತಮ್ಮ ಕ್ಯಾಮರಾವನ್ನು ಒದಗಿಸಿಕೊಟ್ಟ ಗೆಳೆಯ ಕೃಪಾ ಶಂಕರ್ ಗೆ ಅನಂತ ಧನ್ಯವಾದಗಳು.

ಈ ಚಿತ್ರ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮ್ಮ ಬಳಿ ಈ ಪಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆಯೆ? ಪಕ್ಷಿಗಳ ಚಿತ್ರ ಮತ್ತು ಅವುಗಳ ಹೆಸರುಗಳಲ್ಲಿ ವ್ಯತ್ಯಾಸವೇನಾದರೂ ಇದೆಯೆ? ದಯವಿಟ್ಟು ಕೆಳಗೆ ಬರೆಯಿರಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ