ಮಂಗಳವಾರ, ಡಿಸೆಂಬರ್ 16, 2008

ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ತಾವರೆ ಹೂವ!!


ಫೋಟೋ ಕೃಪೆ (ಪ್ರಜಾವಾಣಿ ದಿನಪತ್ರಿಕೆ)

ಇಂದಿನ ದಿನಪತ್ರಿಕೆಯಲ್ಲಿ ನಾನು ಓದಿದ ಈ ಸುದ್ದಿಯನ್ನು ನೋಡಿ! ೨೦ ಜನರು ಕೂರಬಲ್ಲ ಹವಾನಿಯಂತ್ರಿತ ಬಸ್ ತಂಗುದಾಣ! ಇದನ್ನು ಕಾಯಲು ಒಬ್ಬ ಸಿಬ್ಬಂದಿ ಬೇರೆ! ನಗಬೇಕೋ? ಅಳಬೇಕೋ? ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬೄ ಬೆಂ ಮ ಪಾ) ಉಗಿಬೇಕೋ? ಯಾವ ತಗಡು ತಲೆಯ ಬೇಕುಪ್ಪ (ಹಿಂದಿಯ ಬೇವಕೂಫ್ ಪದದ ಕನ್ನಡ ಅವತರಣಿಕೆ ಇದು) ಅಧಿಕಾರಿಗೆ ಇಂತಹ ಉಪಾಯ/ಯೋಜನೆಗಳು ಹೊಳೆಯುತ್ತವೋ?

ನೀವು ಬೆಂಗಳೂರಿನಲ್ಲಿ ನಡೆದೋ ಅಥವಾ ಸರ್ಕಾರಿ ಬಸ್ ಸೇವಯನ್ನೋ ಉಪಯೋಗಿಸಿ ಸಂಚರಿಸುವವರಾಗಿದ್ದರೆ ಗೊತ್ತಿರುತ್ತದೆ, ಯಾವಾಗಲಾದರೂ ಆತುರವಾಗಿ ಮೂತ್ರವಿಸರ್ಜನೆಮಾಡಬೇಕೆನಿಸಿದರೆ ತಕ್ಷಣಕ್ಕೆ (ತಕ್ಷಣಕ್ಕೇನು , ಅರ್ಧ ಗಂಟೆ ಹುಡುಕಿದರೂ) ಯಾವುದೇ ಶೌಚಾಲಯ ಸಿಗುವುದಿಲ್ಲ! ಕೊನೆಗೆ ಎಲ್ಲವನ್ನೂ ಬಿಟ್ಟು ಮರದ ಮರೆಯಲ್ಲೋ, ಗೋಡೆಯ ಮರೆಯಲ್ಲೋ ಕಾಲು ಎತ್ತಬೇಕಾಗುತ್ತದೆ! ಹೀಗೆ ಆತುರವಾದವರು ನಾಲ್ಕು ಜನ ನೆನ್ನೆ ಉದ್ಘಾಟನೆಗೊಂದ ಹವಾನಿಯಂತ್ರಿತ ಬಸ್ ತಂಗುದಾಣದಲ್ಲಿ ಉಚ್ಚೆ ಉಯ್ದು, ಸುವಾಸನೆ ಬರಿಸಿದಾಗ ಗೊತ್ತಾಗುತ್ತದೆ ಬೄ ಬೆಂ ಮ ಪಾ ಗೆ, ನಮಗೆ ಬೇಕಾಗಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳು, ಹವಾನಿತಂತ್ರಿತ ಬಸ್ ನಿಲ್ದಾಣಗಳಲ್ಲವೆಂದು!

ಬೆಂಗಳೂರಿಗರೂ ಯವೊತ್ತೂ ಈ ಐಶಾರಮ್ಯದ ಸೌಲಭ್ಯಗಳನ್ನು ಕೇಳಿದ್ದಿಲ್ಲ. ಕೇಳಿದ್ಧು ಕೇವಲ ಇಂತಹ ಅತ್ಯವಶ್ಯಕವಾದ ಮೂಲ ಸೌಕರ್ಯಗಳನ್ನಷ್ಟೆ.
೧) ರಸ್ತೆಗಳಲ್ಲಿರುವ ಹೊಂಡ, ಹಳ್ಳಗಳನ್ನು ತಡಕಿ ಹುಡುಕಿ, ಟಾರ್ ತುಂಬಿಸಿ, ದುರಸ್ತಿ ಮಾಡಿಸಿ.

ಸಣ್ಣ ಉದಾಹರಣೆ ನೋಡಿ. ದಿನಾಲು ಮಲ್ಲೇಶ್ವರಮ್ ನ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ. ಸಮಸ್ಯೆ ಏನೆಂದರೆ, ಸಂಪಿಗೆ ಚಿತ್ರಮಂದಿರದ ಕಡೆ ಇರುವ ಎಡತಿರುವಿನ ರಸ್ತೆ (ದೇವಯ್ಯ ಉದ್ಯಾನವನ, ಶ್ರೀರಾಮಪುರ, ಸುಬ್ರಮಣ್ಯನಗರಗಳ ಕಡೆ ತಿರುಗುವ ರಸ್ತೆ!) ಗಬ್ಬೆದ್ದು ಹೋಗಿದೆ! ಇದರಿಂದ ವಾಹನಗಳು ಎಡಕ್ಕೆ ಮುಕ್ತವಾಗಿ ತಿರುಗಿಸಲಾಗದೆ ಬಳಸಿ ಬರುವ ಕಾರಣ ನೇರವಾಗಿ ಹೋಗುವ ವಾಹನಗಳು ಕೂಡ ನಿಲ್ಲಬೇಕಾಗುತ್ತವೆ. ಇದರಿಂದ ಗಂಟೆಗಟ್ಟಲೆ ವಾಹನ ದಟ್ಟಣೆ! ಸುಮಾರು ೧೦೦ ಮೀಟರ್ ಈ ರಸ್ತೆಯ ತಿರುವನ್ನು ದುರಸ್ತಿ ಮಾಡಿದರೆ ಸಾಕು, ಸಮಸ್ಯೆ ಬಗೆ ಹರಿಯುತ್ತದೆ!

೨) ಹೆಚ್ಚಿನ ಸಂಖ್ಯೆಯ ಆಕಾಶ ಮಾರ್ಗಗಳನ್ನು (sky walk) ನಿರ್ಮಿಸಿ. (ಇಲ್ಲಿ ಜನಗಳೂ ಕೂಡ ಆಕಾಶ / ಸುರಂಗ ಮಾರ್ಗಗಳನ್ನು ಉಪಯೋಗಿಸಿವ ಮತ್ತು ಅವುಗಳ ಸ್ವಚ್ಚತೆಯನ್ನು ಕಾಪಾಡುವ ಔದಾರ್ಯವನ್ನು ತೋರಿಸಬೇಕಾಗಿದೆ!)

ಕೋರಮಂಗಲದಿಂದ ದೊಮ್ಮಲೂರಿನ ಕಡೆ ಹೋಗುವ ಒಳ ವರ್ತುಲ ರಸ್ತೆಯ ಒಂದು ಬದಿಯಲ್ಲಿ EGL ವ್ಯವಹಾರ ಕ್ಷೇತ್ರ. (Embassy golf view business park). ಇಲ್ಲಿ ನೂರಾರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಸಾವಿರಾರು ಜನರು ಉದ್ಯೋಗ ಮಾಡುತ್ತಾರೆ. ಈ ಪಾದಾಚಾರಿ ಉದ್ಯೋಗಿಗಳಿಗೆ ಈ ವರ್ತುಲ ರಸ್ತೆ ದಾಟುವುದು ಎಂತ ಸಾಹಸ ಕಾರ್ಯ ನೋಡಬೇಕು. (ಯಾವುದೇ ಕಡಿದಾದ ಬೆಟ್ಟದಲ್ಲಿ ಚಾರಣ ಮಾಡುವ ಸಾಹಸಕ್ಕಿಂತ ಕಡಿಮಿಯೇನಿಲ್ಲ!). ಇಲ್ಲಿ ಒಂದು ಆಕಾಶ ಮಾರ್ಗ ನಿರ್ಮಾಣವಾದರೆ, ಸಾವಿರಾರು "ಪ್ರಙ್ನಾವಂತ" ಸಿಬ್ಬಂದಿಗಳ ಕಷ್ಟ ಕಳೆಯುತ್ತದೆ! (ಯಾರಾದರೂ ಕುಮಾರನಂತ ರಾಜಕಾರಣಿಗಳ ಛೇಲಗಳು ಬೄ ಬೆಂ ಮ ಪಾಲಿಕೆಯಲ್ಲಿದ್ದರೆ, ಐ ಟಿ ಮಂದಿಗೂ ಕಷ್ಟ ಗೊತ್ತಾಗಲಿ ಎಂಬ ಉಡಾಫೆ, ದುರಹಂಕಾರದ ಮಾತುಗಳನ್ನು ಆಡಬಹುದು, ಆದರೆ ವಿಧಿ, ಇಲ್ಲಿ ಐ ಟಿ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಎಲ್ಲ ರೀತಿಯ ಸಿಬ್ಬಂದಿ ವರ್ಗದವರೂ ರಸ್ತೆ ದಾಟುತ್ತಾರೆ!)

೩) ಹೆಚ್ಚಿನ ಶೌಚಾಲಯನ್ನು ನಿರ್ಮಿಸಿ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಸ್ವಚ್ಚತೆ ಕಾಪಾಡಿ.

ಈಗ ಬೃಹತ್ ಮರದ ಕೆಳಗೆ ನಿರ್ಮಿಸಿರುವ ಈ ಐಶಾರಾಮಿ ಹವಾನಿಯಂತ್ರಿತ ಬಸ್ ತಂಗುದಾಣನ ಹಿಂದೆ ಒಂದು ದುರ್ವಾಸನೆ ಬೀರುವ ಒಂದು ಶೌಚಾಲಯ ಇತ್ತು. (ರಿಯಲ್ ಎಸ್ಟೇಟ್ ಭರಾಟೆಯಲ್ಲಿ ಈಗ ಕಾಣೆಯಾಗಿರಲೂಬಹುದು). ಈ ಶೌಚಾಲಯದ ನಿರ್ವಹಣೆ ಎಷ್ಟು ಕೆಟ್ಟದಾಗಿತ್ತೆಂದರೆ ಎಷ್ಟೋ ಸೂಕ್ಷ್ಮಮತಿಗಳು ಅಲ್ಲಿ ಮೂತ್ರಕ್ಕೆಂದು ಹೋಗಿ ವಾಂತಿ ಮಾಡಿ ಬರುತ್ತಿದ್ದರು. ಇಂತಹ ಮೂಲಭೂತ ಸೌಕರ್ಯಗಳ ಕಡೆ ಬೄ ಬೆಂ ಮ ಪಾ ಗಮನ ಹರಿಸಬೇಕು.

ಹೆಚ್ಚಿನ ಸಾಮಾನ್ಯ ಛಾವಣಿ ಇರುವ ಬಸ್ ತಂಗುದಾಣಗಳನ್ನು ನಿರ್ಮಿಸಿ, ಹೆಚ್ಚಿನ ಬಸ್ ಗಳನ್ನು ಓಡಿಸಿ, ಮರಗಳನ್ನು ಕಡಿಯದೆ ರಸ್ತೆ ಅಗಲೀಕರಣ, ಉತ್ತಮ ರಸ್ತೆಗಳ ನಿರ್ಮಾಣ ಮಾಡಿ.

ಇಂತಹ ತೊಂದರೆಗಳು ಇನೂ ಬಹಳಷ್ಟಿವೆ. ಉದಾಹರಣೆಗಳಂತೂ ಅಸಂಖ್ಯಾತ!

ಸ್ಪರ್ಧಾತ್ಮಕವಲ್ಲದ ಅಧಿಕಾರಿಗಳು, ತಲೆಕೆಟ್ಟ ಜನ ನಾಯಕರನ್ನು ಕಟ್ಟಿಕೊಂದು ಇವುಗಳನ್ನೆಲ್ಲಾ ಅಪೇಕ್ಷಿಸುವುದು ನನ್ನದೂ ಸ್ವಲ್ಪ ಮೂರ್ಖತನವೇ?

ಏನಂತೀರಾ?

6 ಕಾಮೆಂಟ್‌ಗಳು:

 1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ಗುರು - ಇಂತಹ ಬರವಣಿಗೆಯನ್ನು ಯಾವುದಾದರು ದಿನಪತ್ರಿಕೆ ಯಲ್ಲಿ ಪ್ರಕಟಿಸಿ ಸಮಸ್ತ ನಾಗರಿಕರಿಗೂ ಮನದಟ್ಟು ಮಾಡಬೇಕೆಂಬ ಬಯಕೆ. ನಮ್ಮ ಭಾರತ ಮೂಢರ ಕೈಯಲ್ಲಿ ಸಿಲುಕಿ ಸೊರಗುತ್ತಿದೆ.

  ಪ್ರತ್ಯುತ್ತರಅಳಿಸಿ
 3. ಕೃಪ, ಪತ್ರಿಕೆಗಳಲ್ಲೂ ಬಹಳಷ್ಟು ಜನ ಬರೀತಾರೆ! ತಿಳಿದುಕೊಳ್ಳಬೇಕಾದವರು, ತಿದ್ದುಕೊಳ್ಳಬೇಕಾದವರು ಅವುಗಳನ್ನ ಮಾಡ್ತಾ ಇಲ್ಲಾ ಅಷ್ಟೆ.

  ಪ್ರತ್ಯುತ್ತರಅಳಿಸಿ
 4. bhaaratadalliruva vaipareethya, viparyaasagaLige koneyilla!

  ಪ್ರತ್ಯುತ್ತರಅಳಿಸಿ
 5. ee lekhanada sheershike "Hottege Hittilla" endaagabekittallave..?(adara badalu "Hottege Itilla" endaagide.)

  ಪ್ರತ್ಯುತ್ತರಅಳಿಸಿ
 6. ಹೌದು ರವೀಶ! ನಮ್ಮ ದೇಶದಲ್ಲಿನ ವೈಪರೀತ್ಯಗಳಗೆ ಕಡಿಮೆ ಇಲ್ಲ, ಇವುಗಳನ್ನು ಕಂಡು ಎಷ್ಟೋ ಜನರಲ್ಲಿ ದೇಶಪ್ರೇಮ ಕರಗುತ್ತಿದೆ/ಮಾಯವಾಗುತ್ತಿದೆಯೇನೋ ಅನ್ನಿಸುತ್ತದೆ.
  ಲೇಖನ ಶೀರ್ಷಿಕೆಯ ಗಾದೆ ಮಾತಿನಲ್ಲಿ ’ಇಟ್ಟು’ ಎನ್ನುವುದೇ ಸರಿ ಎನ್ನುವುದು ನನ್ನ ಅಭಿಮತ! ನನಗೆ ಕೂಡ ಸಂದೇಹ ಇತ್ತು, ಹಿಟ್ಟು - ಧಾನ್ಯಗಳನ್ನು ರುಬ್ಬಿ ಮಾಡುವ ನುಣ್ಣನೆಯ ಪುಡಿ/ಪದಾರ್ಥ, ನಮ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಆಡು ಭಾಷೆಯಲ್ಲಿ ರಾಗಿ ಮುದ್ದೆಗೆ ’ಇಟ್ಟು’ ಎಂಬ ಪದವನ್ನು ಪರ್ಯಾಯವಾಗಿ ಬಳಸುವುದುಂಟು!(ಅಥವಾ ಈ ರಾಗಿ ಮುದ್ದೆಗೆ ಬಳಸುವ ಪರ್ಯಾಯ ಪದ ಕೂಡ ಹಿಟ್ಟೇ? ಇಲ್ಲೂ ಕೂಡ ನನಗೆ ಸಂದೇಹ ಇದೆ). ನನ್ನ ಊಹೆಯ ಪ್ರಕಾರ ಈ ಗಾದೆ ಮಾತು ಈ ’ಇಟ್ಟಿ’ನಿಂದಲೇ ಪ್ರಚುರವಾಗಿರಬಹುದೇನೋ ಎಂದು! ನಮ್ಮ ಭಾಷಾತಙ್ನ ವೆಂಕಟಸುಬ್ಬಯ್ಯನವರ ಪ್ರಕಾರ ರಾಗಿ ಮುದ್ದೆಗೆ ಪರ್ಯಾಯವಾಗಿ ಕರೆಯುವುದು ’ಹಿಟ್ಟು’ ಅಂತೆ! ಇನ್ನೂ ಕೆಲವು ಕಡೆ ಅನ್ವೇಷಣೆ ಮಾಡಿ ಸಂದೇಹ ಪರಿಹರಿಸಿಕೊಂಡು ತಪ್ಪಾಗಿದ್ದರೆ ತಿದ್ದಿಕೊಳ್ಳುವೆ!

  ಪ್ರತ್ಯುತ್ತರಅಳಿಸಿ