ಗುರುವಾರ, ಡಿಸೆಂಬರ್ 18, 2008

ಚೂರು ಚಿಂದಿ,

"ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿದೆ ವಿಶ್ವವೆಲ್ಲಾ"
೧)
ಭಾರತಕ್ಕೆ ಸಂಬಂಧವಿಲ್ಲದ ಯಾವುದೋ ರಾಷ್ಟ್ರದ ಪತ್ರಕರ್ತ (ಮುಸ್ಲಿಂ ರಾಷ್ಟ್ರ ಎನ್ನಲೇಬೇಕಾಗುತ್ತದೆ), ಇನ್ಯಾವುದೋ ರಾಷ್ಟ್ರದ ಅಧ್ಯಕ್ಷನಿಗೆ ಪತ್ರಿಕಾ ಘೋಷ್ಠಿಯಲ್ಲಿ ಚಪ್ಪಲಿಯಿಂದ ಹೊಡೆದು, ನಂತರ ಜೈಲಿನಲ್ಲಿ ಒದೆಸಿಕೊಳ್ಳುತ್ತಾನೆ. ಬೆಂಗಳೂರಿನ ಒಂದು ಪ್ರತಿಷ್ಟಿತ ಸಂಸ್ಥೆಯ ನೌಕರನಿಗೆ ಆ ಸ್ವಧರ್ಮೀಯ ಮುಸ್ಲಿಮ್ ಪತ್ರಕರ್ತ ನಾಯಕನಾಗಿಬಿಡ್ತಾನೆ. ತನ್ನ ಸಹೋದ್ಯೋಗಿಗಳ ಜೊತೆ ಈ ಕೃತ್ಯವನ್ನು ಒಂದು ಐತಿಹಾಸಿಕ ಮರೆಯಲಾಗದ ಘಟನೆ ಎಂಬಂತೆ ಸಮರ್ಥಿಸಿಕೊಳ್ಳುವುದಲ್ಲದೆ, ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ. ಮೊದಲೇ ೨೬/೧೧ ನಂದು ಮುಂಬೈ ನಲ್ಲಿ ನಡೆದ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕ ಕೃತ್ಯದಿಂದ ನಲುಗಿರುವ ಕೆವವು ನೌಕರರಿಗೆ ಈ ಆಸಾಮಿಯ ಬಗ್ಗೆ ಸಂಶಯ ಬಂದು ಪೋಲೀಸರಿಗೆ ವಿಷಯವನ್ನು ತಿಳಿಸುತ್ತಾರೆ.ಪೋಲೀಸರು ಆ ಮನುಷ್ಯನ ಮನೆಯನ್ನು ಹುಡುಕಿದಾಗ ಭಯೋತ್ಪಾದನೆಯನ್ನು ಸಮರ್ಥಿಸುವ ಕೆಲವು ಲೇಖನಗಳು, ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವೆ ಅಪ್ಜಲ್ ಗುರುವಿಗೆ ಕ್ಷಮಾಪಣೆ ಕರುಣಿಸಬೇಕೆಂದು ರಾಷ್ಟ್ರಪತಿಯವರನ್ನು ಕೋರಿ ಬರೆದ ಪತ್ರದ ನಕಲು,ಭಾರತದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳ ಸುದ್ದಿ ಲೇಖನಗಳು ಇತ್ಯಾದಿ ಸಿಗುತ್ತವೆ!!

ಇವೊತ್ತು ಮತ್ತು ನೆನ್ನೆಯ ದಿನಪತ್ರಿಕೆ ಓದಿದರಲ್ಲವೆ? ಜಮೀಲ್ ಎಂಬ ವ್ಯಕ್ತಿಯ ಮೇಲೆ ಮೈಕೋ ಬಾಷ್ (ಕನ್ನಡ ಬಳಗ) ನೌಕರರಿಗೆ ಅನುಮಾನ ಬಂದು ಪೋಲೀಸರಿಗೆ ಹಿಡಿದು ಕೊಟ್ಟಿದ್ದಾರೆ! ಪೋಲೀಸರು, ಭಯೋತ್ಪಾದನ ನಿಗ್ರಹ ಸಮಿತಿ ವಿಚಾರಣೆ ನಡೆಸುತ್ತಿದ್ದಾರೆ!

[ ಸ್ಪಷ್ಟನೆ: ಇಂದಿನ (೧೯/೧೨ ರ) ಸುದ್ದಿಯಂತೆ ಪೋಲೀಸರು ಜಮೀಲ್ ನನ್ನು ಬಿಡುಗಡೆ ಮಾಡಿದ್ದಾರಂತೆ! ಆದರೂ ಉಗ್ರಗಾಮಿಯ ಕ್ಷಮಾಪಣೆ ಕೋರಿ ಪತ್ರ ಬರೆಯುವುದು ದೇಶದ್ರೋಹವಲ್ಲವೆ? ]

೨)
ನಮ್ಮಲ್ಲಿ ಬುದ್ಧಿಜೀವಿ, ಮಾನವ ಹಕ್ಕುಗಳ ರಕ್ಷಕಿ/ಹೋರಾಟಗಾರ್ತಿ , ಬರಹಗಾರ್ತಿ ಇನ್ನೂ ಮುಂತಾದವುಗಳಿಂದ ಕರೆದುಕೊಳ್ಳುವ ಈ ಜೀವಿಯನ್ನು ಇನ್ನೊಂದು ತಲೆಕೆಟ್ಟ ೨೪/೭ ಸುದ್ದಿ ವಾಹಿನಿ (CNN-IBN) ನಡೆಸಿದ ಸಂದರ್ಶನ ತುಣುಕು ನೋಡಿ!
Q : Is Pakistan is responsible? (For 26/11 attack on CST, Taj, Oberai, Nariman Hous)

A: Having closely looked at the Batla house encounter and Parliament attacks, I am not ready to believe what anyone says. I have to see and think for myself. I am not prepared to believe anything. On the other hand, I am prepared to believe anything.

ಇಡೀ ವಿಶ್ವವೇ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವೇ ಈ ಕೃತ್ಯಕ್ಕೆ ಕಾರಣ ಎಂದು ಕ್ಯಾಕರಿಸಿ ಉಗಿಯುತ್ತಿರುವ ಈ ಸಂದರ್ಭದಲ್ಲಿ ಈ ಮಹಿಳೆ ಕೊಟ್ಟಿರುವ ಅರ್ಥಹೀನ ಉತ್ತರ ನೋಡಿ. ಬುದ್ಧಿಜೀವಿ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ನ ಬುದ್ಧಿಗೇಡಿತನದ ಪರಮಾವಧಿಯೇ?

೩)
ಹೇಮಂತ್ ಕರ್ಕರೆ ಯನ್ನು ಆ ಪಾಕಿಸ್ತಾನಿ ಮುಸ್ಲಿಮ್ ಉಗ್ರಗಾಮಿಯೇ ಸಾಯಿಸಿದ್ದೆ? ನನಗೆ ಸಂದೇಹ ಇದೆ, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು! ಎಂದು ಈ ಮಾನವ ಉರುಹುತ್ತಾನೆ, ನಂತರ ಎಲ್ಲರೂ ಛೀ ಥೂ (ತನ್ನ ಪಕ್ಷದವರೂ ಕೂಡ) ಎಂದು ಉಗಿಯಲು ಶುರು ಮಾಡಿದಾಗೆ ತನ್ನ ಹೇಳಿಕೆಗೆ ತ್ಯಾಪೆ ಹಾಕಿ, ನಾನು ಅಂದದ್ದು ಹಾಗಲ್ಲ, ಕರ್ಕರೆಯವರನ್ನು ಯಾರೋ ದಾರಿ ತಪ್ಪಿಸಿ ತಾಜ್ ಹೋಟೆಲ್ ಕಡೆ ಕಳಿಸುವ ಬದಲು ಆಸ್ಪತ್ರೆ ಬಳಿಗೆ ಕಳಿಸಿದ್ದಾರೆ ಎಂಬ ಮತ್ತೊಂದು ಬೇಜವಬ್ದಾರಿ ಹೇಳಿಕೆ ಕೊಟ್ಟು ತಾನೆಂತ ನಾಚಿಕೆಗೆಟ್ಟವನು ಎಂಬುದು ಸಾಬೀತುಪಡಿಸಿಕೊಳ್ಳುತ್ತಾನೆ!

ಇದು ಅಲ್ಪಸಂಖ್ಯಾತ ವ್ಯವಹಾರ ಕೇಂದ್ರ ಸಚಿವ ಆಂತುಲೆಯ ಅಲ್ಪ ವರ್ತನೆ!

ಹೀಗೆ ಈ ಪ್ರಸಂಗಗಳ ಬಗ್ಗೆ ಬರೆಯುವಾಗ, ಹಿಂದೊಮ್ಮೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿಂದ ಒಂದು ಹಾಡಿನ ಸಾಲು ನೆನಪಿಗೆ ಬಂತು! "ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲಾ!" ಈ ಸಾಲು ಇಂದಿನ ದಿನಕ್ಕೆ ಎಷ್ಟು ಉಚಿತ ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ