ಸೋಮವಾರ, ಡಿಸೆಂಬರ್ 15, 2008

೪ ನೇ ಪೀಳಿಗೆ ಭಾರತಕ್ಕೆ ಬರುವುದೆಂದು?

೩ ನೇ ಪೀಳಿಗೆಗೇ ಕಿತ್ತಾಟಗಳು ನಡೆಯುತ್ತಲೇ ಇವೆ. ಹಣಕಾಸು ಸಚಿವಾಲಯ ಏರಿಗೆಳೇದರೆ, ದೂರ ಸಂಪರ್ಕ ಸಚಿವಾಲಯ ನೀರಿಗೆಳೆಯುತ್ತದೆ! (ಯಾರ ಯಾರ ಸಚಿವರ, ಇವರ ಮಕ್ಕಳ, ದುಡ್ಡು ಯಾವ ಯಾವ ಸಂಸ್ಥೆಗಳಲ್ಲಿ ಹೂಡಿಕೆಯಾಗಿದೆಯೋ?).ಇನ್ನು TRAI, DOT ಇವುಗಳ ಮಾತುಗಳಿಗೆ ಕವಡೆ ಕಿಮ್ಮತ್ತಿಲ್ಲ. ಈ ಸಂಸ್ಥೆಗಳು ಕೊಡುವ ವರದಿಗಳು ಕೂಡ ಒಂದೊಕ್ಕೊಂದು ಸಾಮ್ಯವಿಲ್ಲದವು. ಒಂದೊಂದು ವರದಿಗಳೂ ಒಂದೊಂದು ಸಂಸ್ಥೆಗೆ ಉಪಕಾರಿಯಾಗಿರುವಂತವು. ನೀವು ಊಹಿಸಿರಬೇಕು ಇಂದಿನ ಚರ್ಚೆ ೩ ನೇ ಮತ್ತು ೪ ನೇ ಪೀಳಿಗೆಯ ದೂರಸಂಪರ್ಕ ತಂತ್ರಙ್ನಾನ.(3G and 4G Communication technologies)

೧೨/೧೨/೦೮ ರ ದಿನಪತ್ರಿಕೆಗಳ ಮೇಲೆ ನೀವು ಕಣ್ಣಾಡಿಸಿದ್ದರೆ, ೩ ನೇ ಪೀಳಿಗೆಯ ದೂರಸಂಪರ್ಕ ಸೇವೆಯಲ್ಲಿ ಒಂದಾದ UMTS ತಂತ್ರಙ್ನಾನ ಭಾರತಕ್ಕೆ ಅಂಬೆಗಾಲಿಟ್ಟಿರುವ ಸುದ್ದಿಯನ್ನು ನೀವು ಓದಿರಬಹುದು. ಸದ್ಯಕ್ಕೆ ದೆಹಲಿಯಲ್ಲಿ ಟಾಟಾ ಮತ್ತು ಕೇಂದ್ರ ಸರ್ಕಾರ ಒಡೆತನದ ಎಂ ಟಿ ಎನ್ ಎಲ್ ಗ್ರಾಹಕರಿಗೆ ಈ ಸೇವೆ ಲಭ್ಯವಿದೆಯಂತೆ. ವಿವಿಧ ಸೇವಗಳ ದರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ! (ಹಿಂದೊಮ್ಮೆ ಬಿ ಎಸ್ ಎನ್ ಎಲ್, ಮತ್ತೊಂದು ೩ ಪೀ ತಂತ್ರಙ್ನಾನವಾದ E V D O ಆಧಾರಿತ ಸೇವೆಯನ್ನು ಒದಗಿಸುವುದಾಗಿ ಹೇಳಿಕೊಂಡು, ಕೆಲವು ಕಡೆ ಪ್ರಯೋಗ ಕೂಡ ಮಾಡಿತ್ತು ಎಂಬುದನ್ನು ಇಲ್ಲಿ ನೆನೆಸಿಕೊಳ್ಳಬೇಕು)

ಈಗಾಗಲೇ ಯೂರೋಪ್ ಮತ್ತು ಇತರ ಖಂಡಗಳಲ್ಲಿ ಬಳಸಲ್ಪಡುತ್ತಿರುವ ಈ ೩ಪೀ (UMTS, EVDO /CDMA REV-A/B- ಇದು ಹೆಚ್ಚಾಗಿ ಉತ್ತರ ಅಮೇರಿಕ ದಲ್ಲಿ ಬಳಕೆಯಲ್ಲಿರುವ) ಯಿಂದ ೩.೫ ಪೀ (HSDAP/HSUPA) ಸೇವೆಗಳು ಇನ್ನೂ ಈಗ ಭಾರತಕ್ಕೆ ಅಂಬೆಗಾಲಿಡುತ್ತಿರುವುದು ಖೇದಕರ ಸಂಗತಿ. ನೀವು ಇತಿಹಾಸ ಗಮನಿಸಿದರೆ ಈ ೩ ಪೀಳಿಗೆಯ UMTS ಸೇವೆ ಯೂರೋಪಿನಲ್ಲಿ (ಇಂಗ್ಲೇಂಡ್ ಮತ್ತು ಇಟಲಿ ದೇಶಗಳಲ್ಲಿ) ಮಾರ್ಚ್ ೨೦೦೩ ರಲ್ಲಿ ಮೊದಲ ಬಾರಿಗೆ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾದದ್ದು, ಊಹಿಸಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂದು?

ಏನಿದು ನಾಲ್ಕನೆ ಪೀಳಿಗೆ ದೂರಸಂಪರ್ಕ ತಂತ್ರಙ್ನಾನ? ನಮಗೇಕೆ ಬೇಕು?
ಯಾವುದೇ ದೇಶದ ಆರ್ಥಿಕ ಬಲವರ್ಧನೆಗೆ ದೂರಸಂಪರ್ಕ ತಂತ್ರಙ್ನಾನ/ಸಾಧನಗಳ ಕೊಡುಗೆ ಅಪಾರ. ಇಂದು ಭಾರತ ದೇಶದಿಂದ ಸಾಫ್ಟ್ ವೇರ್ ರಫ್ತಾಗುತ್ತಿರುವುದು ದೂರ ಸಂಪರ್ಕ ಸೇವೆಗಳಿಂದ! ಆದರೆ ಇಂದಿನ ಅವಶ್ಯಕತೆ ಇನ್ನೂ ಉತ್ತಮ ವೇಗವನ್ನು ಒದಗಿಸಬಲ್ಲ ತಂತಿ ರಹಿತ ದೂರಸಂಪರ್ಕ ಸೇವೆಗಳು. ನಮ್ಮಲ್ಲಿ ಇಂದು "Broadband" ಎಂದು ಕರೆಸಿಕೊಳ್ಳುವ ತಂತಿ ಸಹಿತ ಸೇವೆಯ ವೇಗ ಕನಿಷ್ಟ ೨೫೬ kB/s. ಗರಿಷ್ಟ ೨ mB/s.ಆದರೆ ಗಮನಿಸಿ ಅಮೇರಿಕಾದಲ್ಲಿ ಯಾವುದೇ ದೂರಸಂಪರ್ಕ ಸೇವೆ "Broadband" ಎಂದು ಕರೆಸಿಕೊಳ್ಳಬೇಕಾದರೆ ಅದು ಕನಿಷ್ಟ ೧ mB/s ವೇಗವನ್ನು ಒದಗಿಸಬೇಕು!ಇನ್ನು ತಂತಿರಹಿತ ಸೇವೆಯಲ್ಲಿರುವುದು ೨ ಪೀ ಮತ್ತು ೨.೫ ಪೀ ತಂತ್ರಙ್ನಾನ ಎನಿಸಿಕೊಳ್ಳುವ GSM ಮತ್ತು GPRS ಸೇವೆಗಳು ಒದಗಿಸುವ ವೇಗ ೧೪೪ kB/s ಮೀರಿಲ್ಲ. ಅಂದರೆ ಈ ಸೇವೆಗಳಲ್ಲಿ ಕರೆಗಳು ಮಾತ್ರ ಲಭ್ಯ. IPTV (ಅಂತರ್ಜಾಲ ಆಧಾರಿತ ದೂರದರ್ಶನ ಸೇವೆ) ,real time video streaming (ತತ್ ಕ್ಷಣದ ದೃಶ್ಯಾವಳಿ ಬಿತ್ತರ/ಪ್ರಸಾರ ಎನ್ನಬಹುದೆ?), online gaming (ಅಂತರ್ಜಾಲದ ಆಟ) ಸೇವೆಗಳಿಗೆ ಬೇಕಾದ data ವರ್ಗಾವಣೆ ಅಸಾಧ್ಯ! ಸಾಧ್ಯವಾದರೂ ಆಮೆ ವೇಗದಲ್ಲಿ. ಆದ್ದರಿಂದ ಸೇವೆಯ ಗುಣಮಟ್ಟ (QOS - Quality of Service) ಕಳಪೆ. ಈಗ ಬೇರೆ ದೇಶಗಳಲ್ಲಿ ಲಭ್ಯವಿರುವ ೩.೫ ಪೀ HSDPA/HSUPA ತಂತಿರಹಿತ ತಂತ್ರಙ್ನಾನ ಸೇವೆಗಳು ಕ್ರಮವಾಗಿ downlink ಮತ್ತು uplink ಗಲಲ್ಲಿ (ಇಳಿಕಾ ವರ್ಗಾವಣಾ ವೇಗ ಮತ್ತು ಏರಿಕೆ ವರ್ಗಾವಣೆ ವೇಗ) ೧೪ mB/s ಮತ್ತು ೫mB/s ಒದಗಿಸುತ್ತವೆ.(ಇದು ಸೇವೆಯನ್ನು, ಒಂದು cell ವ್ಯಾಪ್ತಿಯಲ್ಲಿ ಒಬ್ಬನು ಮಾತ್ರ ಉಪಯೋಗಿಸಿತಿದ್ದು, ಉತ್ತಮ ಸನ್ನಿವೇಶದ theoritical ಸಂಖ್ಯೆ). ಅಲ್ಲದೆ ಇದು ತಡೆರಹಿತ ಸಂಚಾರ ಸೇವೆಯನ್ನೂ (Seamless mobility) ಕೂಡ ಒದಗಿಸುತ್ತದೆ.

ಇದೇ ರೀತಿ ೪ ಪೀ ಎಂದು ಕರೆಸಿಕೊಳ್ಳುವ L T E (Long term Evolution) ಉತ್ತಮ ಸನ್ನಿವೇಶದಲ್ಲಿ ೧೦೦ mB/s ವೇಗವನ್ನು ಒದಗಿಸುವ ಭರವಸೆ ನೀಡುತ್ತವೆ. (ಪೂರ್ತಿ ೨೦ MHz ಆವರ್ತನ ಶ್ರೇಣಿಯಲ್ಲಿ - Bandwidth). ೪ ಪೀ ಎಂದು ಕರೆಸಿಕೊಳ್ಳುವ ಇತರ ತಂತ್ರಙ್ನಾನಗಳೆಂದರೆ WIMAX ಮತ್ತು UMB (CDMA ಆಧಾರಿತ) ಸೇವೆಗಳು. ಆದರೆ ಈಗಾಗಲೆ UMB ಯನ್ನು ಸೃಷ್ಟಿಸುತ್ತಿದ್ದ qualcomm ಸಂಸ್ಥೆ, ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಆದ್ದರಿಂದ ೪ ಪೀಳಿಗೆಗೆ LTE ಮತ್ತು WIMAX ಗಳು ಪ್ರತಿಸ್ಪರ್ಧಿಗಳು. ಯಾರು ಗೆಲ್ಲುತ್ತಾರೆ ಯಾರು ಬೀಳುತ್ತಾರೆ ನಿರ್ಧರಿಸಲು ಬಹಳ ಸಮಯ ಬೇಕಾಗುತ್ತದೆ. ಆದರೆ ಈ ಎರದೂ ಸೇವಗಳು ೨೦೧೦ ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ! ದೊಡ್ಡ ಪ್ರಶ್ನೆ ಈ ೪ ನೇ ಪೀ ತಂತ್ರಙ್ನಾನ ಭಾರತಕ್ಕೆ ಬರುವುದೆಂದು? ಆದರೆ ಈ ತಂತ್ರಙ್ನಾನದ ಒಂದು ವಿಶೇಷತೆಯೆಂದರೆ ಈ ಸೇವೆಗಳು ೧.೨೫MHz ಯಿಂದ ೨೦ MHz ಆವರ್ತನ ಶ್ರೇಣಿಯಲ್ಲಿ ಕೆಲಸ ಮಾಡುವವವಾಗಿವೆ! (ವೇಗಗಳಲ್ಲಿ ಹೆಚ್ಚು ಕಡಿಮೆ ಇರುತ್ತದೆ). ಅಂದರೆ ೩ನೇ ಪೀ ತಂತ್ರಙ್ನಾನಕ್ಕೆ ಈ ಜನವರಿ ಯಲ್ಲಿ ಹರಾಜಾಗುವ ೫ MHz ತರಂಗಾಂತರ ಶ್ರೇಣಿಯಲ್ಲಿ, UMTS ಸೇವೆ ಒದಗಿಸುವವರು (Service providers) ಮುಂದೆ LTE ಸೇವೆ ಕೂಡ ಒದಗಿಸಬಹುದಾಗಿದೆ. ಇಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ! ಇದಕ್ಕೆ ಮತ್ತೆ ಸರ್ಕಾರಕ್ಕೆ ಹೆಚ್ಚಳ ಶುಲ್ಕ ಕಟ್ಟಬೇಕಾಗುತ್ತದೆಯೆ? ಅಥವಾ ಸರ್ಕಾದವರು LTE ಸೇವೆಗೆ ಕಡ್ಡಾಯ ತರಂಗಾಂತರ ಶ್ರೇಣಿಯ ಹರಾಜು ನೀತಿಯನ್ನು ತಯಾರು ಮಾಡುತ್ತಾರೆಯೆ? ಇದಕ್ಕೆ ಹಿಡಿಯುವ ಕಾಲವೆಷ್ಟು?

ಇನ್ನು ಕೊನೆಗೆ ಮೂಡುವ ಪ್ರಶ್ನೆಗಳು!
ಭಾರತದಲ್ಲಿ ತಂತ್ರಙ್ನಾನದ ಉನ್ನತಿಗೆ ಸರ್ಕಾರದ ಇಛ್ಛಾಶಕ್ತಿ ಸಾಲದೆ?
ತರಂಗಾಂತರ ಶ್ರೇಣಿ (frequency spectrum) ಹರಾಜಿನ ನೀತಿಯನ್ನು ರೂಪಿಸಲು ಇಷ್ಟು ಸಮಯ ಬೇಕೆ?
ಭಯೋತ್ಪಾದನೆ ಯಿಂದ ಹಿಡಿದು ಅಭಿವೃದ್ಧಿ, ತಂತ್ರಙ್ನಾನಕ್ಕೂ ರಾಜಕೀಯ ಬೆರೆಸಬೇಕೆ?

ನೀವೆನ್ನೆನ್ನುತ್ತೀರಿ?

2 ಕಾಮೆಂಟ್‌ಗಳು:

  1. jaddu hidida aaDaLitha vyayasthe, bhrasta raajakaaraNigaLu, swahitha kaapaaDi koLLuva samsthegaLiruvaaga 4G nireekshe bahaLa dooraddu antha anisuththe.

    ಪ್ರತ್ಯುತ್ತರಅಳಿಸಿ
  2. ರವೀಶ, ಅಷ್ಟೆ ಅಷ್ಟೆ! ಆಡಳಿತ ವ್ಯವಸ್ಥೆ ಎನ್ನುವುದಕ್ಕಿಂತ ಆಡಳಿತ ದುರಾವಸ್ಥೆ/ಅವ್ಯವಸ್ಥೆ ಎನ್ನುವುದು ಲೇಸು!

    ಪ್ರತ್ಯುತ್ತರಅಳಿಸಿ