naanu nanna iDee 22 varshada itihaasadalli ivotte bLog maaDtaa irodu.. ee bLog annodu naama padaano kriyaapadaano gottillaa.... aadre ee "blogging" (kriyaapada) , "blog" (naamapada) annodu onderDu varshada hinde yaargoo gottirlillaa.. idu ond taraa atee kaDme samayadalli bahu vikhyaata aagbiTTide... idanna biTTi prakaTane(publish) maaDtaare annodu ateeva aananda tandkoDo vishya.... naav en bLoggdru (bogaLdru) adna vimarshe ge oLapaDisde... kanisTa adara satyaastyagaLannu kooDa pareekshisade prakaTistaare... entaa adbhuta maaya loka idu blogspot!!!!!!!!
idnaa yaar odtaarro biDtaaro adu nange sambhanda paTTiddalla... idu baritaa irodrinda nange enoo nasTa illaa.. aadrinda nammalli doDDa doDDa saahitigaLu en dinaa korugtaare... yaaroo kannaDa saahitya Odode illa... naavu pustka bardu adna prakaTaNe maaDi lakshaantara rupaayi kaLkotivi, kai suTkotivi anta yaavaaglu dukkhisod biTTu avru yaake bLogbaardu???? enaadru swalpa geechi tamm makLugo sambhandikrugoo ( yaaraadu software engineers aaagidre oLLedu) koTTu ee bLog emba maayaalokakke baredbiDokke heLi.. avara aaptarige v -anche moolka kaLisbiDokke heLdre esTella upayoga..
1) barde antaa saahitigoo kushi..
2) idna yaaraadru software engineer type maaDi haakdre avnge enoo kelsa illa anno novvu kooDa irollaa..
3) idna haakidavnge swalpa saahityada gandha kooDa tiLiyutte...
4) prakaTaNeya/maaraaTda karchoo kooDa uLiyutte..
5) esTond janakke biTTi mail kaLsbodu... mail baro janakke saamaanyavaagi kelsa irollaa... avrella kanisTa, kaalaharaNegaadru odtaare.. idrinda saahitiyoo kooDa janapriya aago saadhyate ide... athvaa ellaa baritaare naanu yaak baribaardu antaa kootre saahitigaLa sankhyelli kooDa vruddhi aagutte... (saaahiti anta karyok aagde idru... baryor , odor sakhyenaadru jaasti aagutte..)
oTnalli kelsa illaa anta korgod aadru kaDme aagutte.... eega naan maaDtaa iddinellaa haaage.. :-)....
nanna talelli innond yochne mooDtaa ide... ee blog emba pada hege huTtu anta... bLogu anno padada aksharagaLna swalpa adalu badalu maaDi noDidre bogLu anta aagutte.. ee padave ee bLog ge kaaraNave???? illi yaar en bekaadru bogoLbodu antaane???
naanantoo eno bogLiddini.. andre bLogiddini.... innu ododu biDodu tamma anukoolakke biTTa vishaya... nanna melina prashnegaLige uttra kanDa takshaNa matte bogaLtini... eega hogi baruve.. namaskaara....
naanu ondu kahi satyaana heLle bekaagide.. idna baribekaadre nange bahaLa kheda aaytu... kannaDa padgaLu saraagavaagi baayig bartaane irlillaa.. :-(.. entaa kaala bantu kannaDakke...
JAI KARNAATAKA MAATE.... JAI BHUVANESHWARI....
ಹಿಂದೆ ನಾನು ಕಾರಣಾಂತರಗಳಿಂದ ಲಿಪ್ಯಂತರ ಮಾಡದೆ ಹಾಕಿದ್ದ ಈ ಪೋಷ್ಟನ್ನು, ಲಿಪ್ಯಂತರಿಸಿ ಕನ್ನಡದಲ್ಲಿ ಪ್ರಕಟಿಸುತ್ತಿದ್ದೇನೆ!
ಬ್ಳಾಗೋ??? ಬೊಗೊಳೋ??
ನಾನು ನನ್ನ ಇಡೀ ೨೨ ವರ್ಷದ ಇತಿಹಾಸದಲ್ಲಿ ಇವೊತ್ತೇ ಬ್ಳಾಗ್ ಮಾಡ್ತಾ ಇರೊದು.. ಈ ಬ್ಳಾಗ್ ಅನ್ನೊದು ನಾಮಪದಾನೊ ಕ್ರಿಯಾಪದಾನೊ ಗೊತ್ತಿಲ್ಲಾ.... ಆದ್ರೆ ಈ "ಬ್ಲಾಗ್ಗಿಂಗ್" (ಕ್ರಿಯಾಪದ) , "ಬ್ಲಾಗ್" (ನಾಮಪದ) ಅನ್ನೋದು ಒಂದೆರಡು ವರ್ಷದ ಹಿಂದೆ ಯಾರ್ಗೂ ಗೊತ್ತಿರ್ಲಿಲ್ಲಾ.. ಇದು ಒಂದ್ ತರಾ ಅತೀ ಕಡ್ಮೆ ಸಮಯದಲ್ಲಿ ಬಹು ವಿಖ್ಯಾತಿ ಆಗ್ಬಿಟ್ಟಿದೆ... ಇದನ್ನ ಬಿಟ್ಟಿ ಪ್ರಕಟನೆ ಮಾಡ್ತಾರೆ ಅನ್ನೋದು ಅತೀವ ಆನಂದ ತಂದ್ಕೊಡೋ ವಿಷ್ಯ.... ನಾವ್ ಏನ್ ಬ್ಳಾಗ್ಗಿದ್ರು (ಬೊಗಳಿದ್ರು) ಅದ್ನ ವಿಮರ್ಶೆ ಗೆ ಒಳಪಡಿಸ್ದೆ... ಕನಿಷ್ಟ ಅದರ ಸತ್ಯಾಸತ್ಯಗಳನ್ನು ಕೂಡ ಪರೀಕ್ಷಿಸದೆ ಪ್ರಕಟಿಸ್ತಾರೆ... ಎಂತಾ ಅದ್ಭುತ ಮಾಯ ಲೋಕ ಇದು ಬ್ಲಾಗ್ ಸ್ಪಾಟ್!!!!!!!!
ಇದ್ನ ಯಾರ್ ಒದ್ತಾರ್ರೊ ಬಿಡ್ತಾರೊ ಅದು ನಂಗೆ ಸಂಭಂಧ ಪಟ್ಟಿದ್ದಲ್ಲ... ಇದು ಬರಿತಾ ಇರೊದ್ರಿಂದ ನಂಗೆ ಎನೂ ನಷ್ಟ ಇಲ್ಲಾ.. ಆದ್ರಿಂದ ನಮ್ಮಲ್ಲಿ ದೊಡ್ಡ ದೊಡ್ಡ ಸಾಹಿತಿಗಳು ಎನ್ ದಿನಾ ಕೊರಗ್ತಾರೆ... ಯಾರೂ ಕನ್ನಡ ಸಾಹಿತ್ಯ ಓದೋದೆ ಇಲ್ಲಾ... ನಾವು ಪುಸ್ತಕ ಬರ್ದು ಅದ್ನ ಪ್ರಕಟಣೆ ಮಾಡಿ ಲಕ್ಷಾಂತರ ರುಪಾಯಿ ಕಳ್ಕೋತಿವಿ, ಕೈ ಸುಟ್ಕೋತೀವಿ ಅಂತ ಯಾವಾಗ್ಲು ದು:ಖಿಸೋದ್ ಬಿಟ್ಟು ಅವ್ರು ಯಾಕೆ ಬ್ಳಾಗ್ಬಾರ್ದು???? ಎನಾದ್ರು ಸ್ವಲ್ಪ ಗೀಚಿ ತಮ್ಮ ಮಕ್ಳುಗೋ ಸಂಬಂಧಿಕರಿಗೂ ( ಯಾರಾದ್ರು ಸಾಫ್ಟ್ ವೇರ್ ಎಂಜಿಇನೀಯರ್ಸ್ ಆಗಿದ್ರೆ ಒಳ್ಳೇದು) ಕೊಟ್ಟು ಈ ಬ್ಳಾಗ್ ಎಂಬ ಮಾಯಾಲೋಕಕ್ಕೆ ಬರೆದ್ಬಿಡೋಕ್ಕೆ ಹೇಳಿ.. ಅವರ ಆಪ್ತರಿಗೆ ವಿ -ಅಂಚೆ ಮೂಲ್ಕ ಕಳಿಸಿಬಿಡೋಕ್ಕೆ ಹೇಳಿದ್ರೆ ಎಷ್ಟೆಲ್ಲ ಉಪಯೋಗ..
೧) ಬರ್ದೆ ಅಂತಾ ಸಾಹಿತಿಗೂ ಖುಷಿ..
೨) ಇದ್ನ ಯಾರಾದ್ರು ಸಾಫ್ಟ್ ವೇರ್ ಎಂಜಿಇನೀಯರ್ ಟೈಪ್ ಮಾಡಿ ಹಾಕಿದ್ರೆ ಅವನ್ಗೆ ಎನೂ ಕೆಲ್ಸ ಇಲ್ಲ ಅನ್ನೊ ನೋವು ಕೂಡ ಇರೊಲ್ಲಾ..
೩) ಇದ್ನ ಹಾಕಿದವ್ನಿಗೆ ಸ್ವಲ್ಪ ಸಾಹಿತ್ಯದ ಗಂಧ ಕೂಡ ತಿಳಿಯುತ್ತೆ...
೪) ಪ್ರಕಟಣೆಯ/ಮಾರಾಟದ ಖರ್ಚೂ ಕೂಡ ಉಳಿಯುತ್ತೆ..
೫) ಎಷ್ಟೋಂದ್ ಜನಕ್ಕೆ ಬಿಟ್ಟಿ ಮೈಲ್ ಕಳಿಸ್ಬೋದು... ಮೈಲ್ ಬರೊ ಜನಕ್ಕೆ ಸಾಮಾನ್ಯವಾಗಿ ಕೆಲ್ಸ ಇರೊಲ್ಲಾ... ಅವ್ರೆಲ್ಲ ಕನಿಷ್ಟ, ಕಾಲಹರಣೆಗಾದ್ರು ಒದ್ತಾರೆ.. ಇದ್ರಿಂದ ಸಾಹಿತಿಯೂ ಕೂಡ ಜನಪ್ರಿಯ ಆಗೊ ಸಾಧ್ಯತೆ ಇದೆ... ಅಥ್ವಾ ಎಲ್ಲಾ ಬರಿತಾರೆ ನಾನು ಯಾಕ್ ಬರಿಬಾರ್ದು ಅಂತಾ ಕೂತ್ರೆ ಸಾಹಿತಿಗಳ ಸಂಖೆಯಲ್ಲಿ ಕೂಡ ವೃದ್ಧಿ ಆಗುತ್ತೆ... (ಸಾಹಿತಿ ಅಂತ ಕರ್ಯೋಕ್ ಆಗ್ದೆ ಇದ್ರು... ಬರ್ಯೋರ್ , ಓದೋರ್ ಸಂಖ್ಯೆನಾದ್ರು ಜಾಸ್ತಿ ಆಗುತ್ತೆ..)
ಒಟ್ನಲ್ಲಿ ಕೆಲ್ಸ ಇಲ್ಲಾ ಅಂತ ಕೊರ್ಗೊದ್ ಆದ್ರು ಕಡ್ಮೆ ಆಗುತ್ತೆ.... ಈಗ ನಾನ್ ಮಾಡ್ತಾ ಇದ್ದಿನೆಲ್ಲಾ ಹಾಗೆ.. :-)....
ನನ್ನ ತಲೇಲ್ಲಿ ಇನ್ನೊಂದ್ ಯೋಚ್ನೆ ಮೂಡ್ತಾ ಇದೆ... ಈ ಬ್ಲಾಗ್ ಎಂಬ ಪದ ಹೇಗೆ ಹುಟ್ತು ಅಂತ... ಬ್ಳೊಗು ಅನ್ನೊ ಪದದ ಅಕ್ಷರಗಳ್ನ ಸ್ವಲ್ಪ ಅದಲು ಬದಲು ಮಾಡಿ ನೋಡಿದ್ರೆ ಬೊಗ್ಳು ಅಂತ ಆಗುತ್ತೆ.. ಈ ಪದವೆ ಈ ಬ್ಳಾಗ್ ಗೆ ಕಾರಣವೆ???? ಇಲ್ಲಿ ಯಾರ್ ಏನ್ ಬೆಕಾದ್ರು ಬೊಗೊಳ್ಬೋದು ಅಂತಾನೆ???
ನಾನಂತೂ ಎನೊ ಬೊಗ್ಳಿದ್ದಿನಿ.. ಅಂದ್ರೆ ಬ್ಳಾಗಿದ್ದೀನಿ.... ಇನ್ನು ಓದೋದು ಬಿಡೋದು ತಮ್ಮ ಅನುಕೂಲಕ್ಕೆ ಬಿಟ್ಟ ವಿಷಯ... ನನ್ನ ಮೇಲಿನ ಪ್ರಷ್ನೆಗಳಿಗೆ ಉತ್ರ ಕಂಡ ತಕ್ಷಣ ಮತ್ತೆ ಬೊಗಳ್ತೀನಿ... ಈಗ ಹೋಗಿ ಬರುವೆ.. ನಮಸ್ಕಾರ....
ನಾನು ಒಂದು ಕಹಿ ಸತ್ಯಾನ ಹೇಳ್ಲೆ ಬೆಕಾಗಿದೆ.. ಇದ್ನ ಬರಿಬೆಕಾದ್ರೆ ನನ್ಗೆ ಬಹಳ ಖೇದ ಆಯ್ತು... ಕನ್ನಡ ಪದ್ಗಳು ಸರಾಗವಾಗಿ ಬಾಯಿಗ್ ಬರ್ತಾನೆ ಇರ್ಲಿಲ್ಲಾ.. :-(.. ಎಂತಾ ಕಾಲ ಬಂತು ನನ್ನ ಕನ್ನಡಕ್ಕೆ...
ಜೈ ಕರ್ನಾಟಕ ಮಾತೆ... ಜೈ ಭುವನೇಶ್ವರಿ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ