ಕೆಲವು ದಿನಗಳಿಂದ ಯಾವುದೇ ಹೊಸ ಪ್ರಕಟನೆಯಿಲ್ಲದೆ ಸೊರಗಿರುವ ನನ್ನ ಬ್ಳಾಗ್ ತಾಣಕ್ಕೆ ಚೇತನ ನೀಡಲು ಈ ಛಾಯಾಚಿತ್ರ ಹಾಕ್ತಾ ಇದ್ದೀನಿ.
ಪಕ್ಕದ ಮನೆಯ ಯಾವುದೋ ಗಿಡದಲ್ಲಿ ಈ ಹೂ ಅರಳಿತ್ತು. ರಾಮೋತ್ಸವ ಸಂಗೀತ ಕಛೇರಿಗಳ ಫೋಟೋಗಳನ್ನು ಸೆರೆ ಹಿಡಿಯಲು, ಎರವಲು ಪಡೆದಿದ್ದ ಗೆಳೆಯ ಕೃಪಾ ಶಂಕರನ ಕ್ಯಾಮರಾ ಮನೆಯಲ್ಲಿತ್ತು. ಬೇರೆ ಯಾವುದೋ ಸಂದರ್ಭದಲ್ಲಿ ಮತ್ತೊಬ್ಬ ಗೆಳೆಯ (ಕುಂಟ) ಕ್ಯಾಮರಾದ ಸೆಟ್ಟಿಂಗ್ಸ್ (ಮ್ಯಾನುಯಲ್ ಮೋಡ್ ದು) ಬದಲಿಸಿ ಕೊಟ್ಟಿದ್ದ. ಹೀಗೆ ಸುಮ್ಮನೆ ಜೂಮ್ ಮಾಡೀ ಫೋಟೋ ಕ್ಳಿಕ್ಕಿಸಿದೆ. ಸೂರ್ಯನ ಪ್ರಖರವಾದ ಬೆಳಕಿನಲ್ಲಿ ತೆಗೆದರೂ, ಬ್ಯಾಕ್ ಗ್ರೌಂಡ್ ಕಪ್ಪಾಗಿ, ಹೂವಿನ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ನನಗೇ ಆಶ್ಚರ್ಯ! ಇನ್ನು ಆರ್ ಎನ್ ಜಯಗೋಪಾಲ್ ರವರಿಂದ ವಿರಚಿತಚಾದ ಈ ಅದ್ಭುತ ಗೀತೆಯ ಮೊದಲನೆ ಸಾಲನ್ನು ಶೀರ್ಷಿಕೆ ಮಾಡಿ, ಪ್ರಕಟಿಸಿಬಿಟ್ಟೆ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕೇಪಳ ಹೂವು (Ixora coccinea). ದುರ್ಗಾ ಪೂಜೆಗೆ ತು೦ಬಾ ಶ್ರೇಷ್ಠ ಅ೦ತ ನ೦ಬಿಕೆ. ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಗುರುಪ್ರಸಾದ್,
ಪ್ರತ್ಯುತ್ತರಅಳಿಸಿಫೋಟೋವನ್ನು ಚೆನ್ನಾಗೇ ತೆಗೆದಿದ್ದೀರಲ್ರಿ...ಗುಡ್...
ಇನ್ನಷ್ಟು ಕ್ಲಿಕ್ಕಿಸಿರಿ...
ತುಂಬಾ ಚೆನ್ನಾಗಿ 'ಕ್ಲಿಕ್ಕ್ಸಿದೀರ'....
ಪ್ರತ್ಯುತ್ತರಅಳಿಸಿ'ಕ್ಳಿಕ್ಕಿಸಿದೆ'... ಈ ಪದ ಇನ್ನೂ ಚೆನ್ನಾಗಿದೆ..
ಫೋಟೋ ತುಂಬಾ ಚನ್ನಾಗಿ ಬಂದಿದೆ.
ಪ್ರತ್ಯುತ್ತರಅಳಿಸಿಕೇಪಳಕ್ಕೆ ಇನ್ನೊಂದು ಹೆಸರು, ಕಿಸ್ಕಾರ :)
ಪ್ರತ್ಯುತ್ತರಅಳಿಸಿವಿನುತಾ,
ಪ್ರತ್ಯುತ್ತರಅಳಿಸಿಹೂವಿನ ಸಾಮಾನ್ಯ, ವೈಙ್ನಾನಿಕ ಹೆಸರು, ಅದರ ಮಹತ್ವ ತಿಳಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶಿವು,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ, ಪ್ರೋತ್ಸಾಹಕ್ಕೆ ಧನ್ಯವಾದಗಳು.
ಶ್ರೀವತ್ಸ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಕ್ಳಿಕ್ಕಿಸಿದೆ ಪದ ನಾನೂ ಹೀಗೆ ಎಲ್ಲೋ ಓದಿ ತಿಳಿದದ್ದು. ಮೂಲ ಸೃಷ್ಟಿಕರ್ತನಿಗೆ ನನ್ನ ನಮನ.
ಉದಯ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪಾಲ,
ಕೇಪಳ ಹೂವಿನ ಪರ್ಯಾಯ ಹೆಸರನ್ನು ತಿಳಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಅಡ್ ಏಟಿಗೆ ಒಂದು good ಏಟು!
ಪ್ರತ್ಯುತ್ತರಅಳಿಸಿಮಲ್ಲಿಕಾರ್ಜುನ್,
ಪ್ರತ್ಯುತ್ತರಅಳಿಸಿಧನ್ಯವಾದಗಳು...
good picture
ಪ್ರತ್ಯುತ್ತರಅಳಿಸಿ