ಸೋಮವಾರ, ಜನವರಿ 04, 2010

ಎರಡು ಚಿತ್ರ ವಿಮರ್ಶೆಗಳು

ಪೋಲೀಸ್ ಕ್ವಾರ್ಟರ್ಸ್ — ಭಾವಾತಿರೇಕದ ಮೂಟೆ

ಹೋದ ವಾರ ತೆರೆ ಕಂಡ, ಸೈನೈಡ್ ನಿರ್ಮಿಸಿದ ತಂಡದಿಂದ ನಿರ್ಮಿತವಾಗಿರುವ ಚಲನಚಿತ್ರ ಎಂಬ ನಿರೀಕ್ಷೆಯಿಂದ ನೋಡಿದ ಈ ಚಿತ್ರ ಭಾರಿ ನಿರಾಸೆಯನ್ನು ತಂದಿತು. ೧೯೯೨ ರ ಭಾಬ್ರಿ ಮಸೀದಿ ಧ್ವಂಸ ಗಲಭೆಯಲ್ಲಿ ಅರಳಿದ ಒಂದು ಸತ್ಯ ಪ್ರೇಮ ಕಥೆ ಅಧಾರಿತ ಚಿತ್ರ ಎಂಬ ಜಾಹೀರಾತಿನೊಂದಿಗೆ ಬಿಡುಗಡೆಯಾಗಿರುವ ಈ ಚಲನಚಿತ್ರದ ಕಥೆ ಅತೀ ಸಾಧಾರಣವಾದದ್ದು.

police-quarters

ಇಬ್ಬರು (ವಿಶ್ವಣ್ಣ ಮತ್ತು ವೆಂಕಟೇಶ್ ಗೌಡ -- ಚಲನಚಿತ್ರದ ಹೆಸರುಗಳು) ಪೋಲೀಸ್ ಪೇದೆಗಳು. ಬೇರೆ ಬೇರೆ ಜಾತಿಯವರು, ಆದರೆ ಪ್ರಾಣ ಸ್ನೇಹಿತರು. ವೆಂಕಟೇಶ್ ತನ್ನ ಕುಟುಂಬವನ್ನು ಧಿಕ್ಕರಿಸಿ ಕೆಳಜಾತಿ ಎನ್ನಿಸಿಕೊಳ್ಳುವ ವರ್ಗದಿಂದ ಬಂದಿರುವ ಅನಾಥೆಯನ್ನು ಮದುವೆಯಾಗುತ್ತಾನೆ. ಆದರೆ ಅಕಾಲ ಮರಣ ಹೊಂದುತ್ತಾನೆ. ಆಗ ವಿಶ್ವಣ್ಣ ತನ್ನ ಗೆಳೆಯ ವೆಂಕಟೇಶ್‌ನ ಹೆಂಡತಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾನೆ. ಅನಿತಾ (ಸೋನು) ವಿಶ್ವಣ್ಣನ ಮಗಳು. ಜಾಣ ಹುಡುಗಿ, ಸಂಭಾವಿತೆ. ಅಶ್ವಿನ್ (ಅನೀಶ್ ತೇಜೇಶ್ವರ್) ವೆಂಕಟೇಶ್ ನ ಮಗ. ಪೊರ್ಕಿ, ತರಲೆ, ಹೊರಟ. ಆದರೂ ವಿಶ್ವಣ್ಣನೆಂದರೆ ಭಯ ಭಕ್ತಿ, ಗೌರವ.


ಮುಂದೆ ಓದಿ

ರಾಮ್ : ಅಪ್ಪು ಮತ್ತೆ ಹಾದಿಗೆ!

ಭರ್ಜರಿ ನೃತ್ಯ, ಹಾಸ್ಯಭರಿತ ಸಂಭಾಷಣೆ, ಮಚ್ಚು ಬಿಟ್ಟು ಹಾದಿಗೆ ಬಂದಿರುವ ಪುನೀತ್, ಮೊದಲ ಬಾರಿಗೇ ಕನ್ನಡ ಚಿತ್ರದಲ್ಲಿ ಮಿಂಚಿರುವ ಸುಂದರಿ ಪ್ರಿಯಾಮಣಿ - ಒಟ್ಟಿನಲ್ಲಿ ಹೇಳುವುದಾದರೆ "ರಾಮ್" ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ರಸದೌತಣ ಬಡಿಸುವ ಚಿತ್ರ.

[caption id="attachment_709" align="aligncenter" width="600" caption="ಚಿತ್ರ ಕೃಪೆ : http://www.123musiq.com/Ram.html"]ಚಿತ್ರ ಕೃಪೆ : http://www.123musiq.com/Ram.html[/caption]

ಎರಡು ವಾರದಿಂದ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಹು ನಿರೀಕ್ಷಿತ ಚಿತ್ರ "ರಾಮ್" ಚಿತ್ರವನ್ನು ವೀಕ್ಷಿಸಿದ ಮೇಲೆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ವಂಶಿ, ರಾಜ್ ಮುಂತಾವ ಮಚ್ಚು-ಕೊಚ್ಚು ಚಿತ್ರಗಳನ್ನು ಕೊಟ್ಟು ಅಭಿಮಾನಿಗಳಿಗೆ ಬೇಸರ ತರಿಸಿದ್ದ ಪುನೀತ್ ಈ ಬಾರಿ ಉತ್ತಮ ಪಾತ್ರವನ್ನು/ಚಿತ್ರವನ್ನು ಆಯ್ದುಕೊಂಡು ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಒಲ್ಲದ ಮದುವೆಯನ್ನು ತಪ್ಪಿಸಿ ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾಗುವ ರಾಮ್, ತಪ್ಪು ಕಲ್ಯಾಣ ಮಂಟಪಕ್ಕೆ ಹೋಗಿ ಬೇರೆ ಯಾವುದೋ ಹುಡುಗಿಯನ್ನು (ಪ್ರಿಯಾಮಣಿ) ಅಲ್ಲಿಂದ ಹೊತ್ತು ತರುತ್ತಾನೆ. ಆ ಹುಡುಗಿಗೆ ಇಬ್ಬರು ಮಾವಂದಿರು. ಇಬ್ಬರೂ ಪ್ರತ್ಯೇಕವಾಗಿ ಅವಳನ್ನು ಹುಡುಕುತ್ತಿರುತ್ತಾರೆ. ರಾಮ್ ಗೆ ನಾಯಕಿಯನ್ನು ರಕ್ಷಿಸುವ ಹೊಣೆ. ಕೊನೆಗೆ ಒಬ್ಬ ಮಾವ ಆ ಹುಡುಗಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಫಲವಾಗುತ್ತಾನೆ. ನಂತರ ನಾಯಕ, ನಾಯಕಿಯ ಇಬ್ಬರ ಮಾವಂದಿರ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಲೆಕ್ಕಿಗನ (ರಂಗಾಯಣ ರಘು) ಸಹಾಯಕನಾಗಿ ಅವರುಗಳ ಮನೆ ಹೊಕ್ಕಿ, ತಂತ್ರವನ್ನು ಹೂಡಿ ನಾಯಕಿಯನ್ನು ವರಿಸಿಕೊಳ್ಳುತ್ತಾನೆ.


ನೀವಿಲ್ಲಿಗೆ ಊಹಿಸಿರುವಂತೆ ಕಥೆಯಲ್ಲಿ ಏನೂ ಹೊಸತನವಿಲ್ಲ, ರೋಚಕವೂ ಇಲ್ಲ. ಆದರೂ ಚಿತ್ರವನ್ನು ಗೆಲ್ಲಿಸಬಲ್ಲ ಅಂಶಗಳು ಸಾಕಷ್ಟಿವೆ.


ಮುಂದೆ ಓದಿ

1 ಕಾಮೆಂಟ್‌:

  1. ಗುರು,

    ಒಂದು ಶುದ್ಧ ಮನರಂಜನೆ ಚಿತ್ರ, ಮತ್ತೊಂದು ಪ್ರಯೋಗಾತ್ಮಕ ಚಿತ್ರ. ಇವೆರಡನ್ನು ನೋಡಲೇಬೇಕೆನಿಸಿದೆ. ಬಿಡುವು ಮಾಡಿಕೊಂಡು ನೋಡುತ್ತೇನೆ.

    ಪ್ರತ್ಯುತ್ತರಅಳಿಸಿ