ಗುರುವಾರ, ಫೆಬ್ರವರಿ 04, 2010

ಜೈಪುರ ಸಾಹಿತ್ಯೋತ್ಸವದ ಒಂದು ಸಣ್ಣ ವರದಿ

ಜನವರಿ ೨೧ರಿಂದ ೨೫ ರ ವರೆಗೆ ಜರುಗಿದ ಜೈಪುರ ಸಾಹಿತ್ಯೋತ್ಸವ ಒಂದು ಅದ್ಭುತ ಅನುಭವ. ಹವಾಮಾನ ವೈಪರೀತ್ಯದಿಂದ ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ಥವ್ಯಸ್ಥವಿದ್ದರೂ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮ ಶ್ಲಾಘನೀಯ.


ಐದು ದಿನ ನಡೆದ ಈ ಉತ್ಸವದಲ್ಲಿ, ನಾಲ್ಕು ವೇದಿಕೆಗಳಲ್ಲಿ ಸಮಾನಾಂತರವಾಗಿ ೪ ಘೋಷ್ಟಿಗಳು ನಡೆದವು. ಪ್ರತಿಯೊಂದು ಘೋಷ್ಟಿಗೂ ೧ ಘಂಟೆಯ ಸಮಯ ನಿಗದಿಯಾಗಿತ್ತು. ಸುಮಾರು ೪೫ ನಿಮಿಷಗಳ ಚರ್ಚೆ ನಂತರ ೧೫ ನಿಮಿಷಗಳು ಶ್ರೋತೃಗಳ ಜೊತೆ ಸಂವಾದ. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದದ್ದು ಮತ್ತು ನಿಗದಿತ ಸಮಯಕ್ಕೆ ಮುಕ್ತಾಯವಾದದ್ದು ಪ್ರಶಂಸನೀಯ. ಎಲ್ಲಾ ಘೋಷ್ಟಿಗಳಿಗೂ ಎಲ್ಲರಿಗೂ ಮುಕ್ತ ಆಹ್ವಾನ. ಯಾವ ಆಸನವೂ ಗಣ್ಯರಿಗೆ ಕಾಯ್ದಿರಿಸಲಾಗಿರಲಿಲ್ಲ. ಅಲ್ಲಿ ಎಲ್ಲರೂ ಗಣ್ಯರು ಎಲ್ಲರೂ ನಗಣ್ಯರು.


ಕಾರ್ಯಕ್ರಮದ ಉದ್ಘಾಟನೆಯಲ್ಲಿ, ’Nine Lives' ಖ್ಯಾತಿಯ ಸಾಹಿತಿ ವಿಲ್ಲಿಯಮ್ ಡ್ಯಾಲಿಂಪರ್ಲ್ ಹೇಳಿದಂತೆ, ವಿಕ್ರಮ ಚಂದ್ರ ರಂತಹ ಬರಹಗಾರರನ್ನು ನಾವು ಸಿಡ್ನಿ ಸಾಹಿತ್ಯೋತ್ಸವ ಮತ್ತು ಮುಂತಾದ ಅಂತರಾಷ್ಟ್ರೀಯ ಸಾಹಿತ್ಯೋತ್ಸವಗಳಲ್ಲಿ ಕಾಣುತ್ತೇವೆ. ಆದರೆ ಭಾರತದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಕಡಿಮೆ. ಅಂತಹವರನ್ನು ಇಲ್ಲಿಗೆ ಕರೆತರುವ ಉದ್ದೇಶವೇ ಈ ಕಾರ್ಯಕ್ರಮದ್ದು ಎಂದರು.

[caption id="attachment_747" align="aligncenter" width="300" caption="ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ"]ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ[/caption]


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ