ಶುಕ್ರವಾರ, ಜನವರಿ 30, 2009

ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

ರಾಷ್ಟ್ರಪತಿಯೇ ಆಗಲಿ ಅಥವಾ ಯಾವ ಒಬ್ಬ ಸಾಮಾನ್ಯನೇ ಆಗಿರಲಿ, ಹುಟ್ಟಿದ ಮೇಲೆ ಸಾಯುವುದು ಸಹಜ ಧರ್ಮ. ಅಂದರೆ ಎಲ್ಲಾ ಸಜೀವ ವಸ್ತುಗಳಿಗೂ ಸಾವು ನಿಶ್ಚಿತ. ಸಾವು ಕೆಲವೊಮ್ಮೆ ಸಹಜ ಮತ್ತು ಕೆಲವೊಮ್ಮೆ ಅಸಹಜ. ಹಲವಾರು ಸಂಶೋಧನೆಗಳು ಈ ತಲೆಮಾರಿನಲ್ಲಿ ಮನುಷ್ಯನ ಸರಾಸರಿ ಆಯುಷ್ಯ ೭೫-೮೦ ಎನ್ನುತ್ತವೆ. ಅಂದರೆ ಮನುಷ್ಯ ಸುಮಾರು ೭೫ ರ ನಂತರ ಕಾಲವಾದರೆ (ಅನಾರೋಗ್ಯದಿಂದಾರೂ ಕೂಡ) ಅದನ್ನು ಸಹಜ ಸಾವೆಂದೇ ಪರಿಗಣಿಸಬಹುದು. ಕಾಲವಾದ ಮನುಷ್ಯನ ಪರಮ ಆಪ್ತರಿಗೆ (ಹತ್ತಿರದ ಕುಟುಂಬ ಸದಸ್ಯರು, ಗೆಳೆಯರು) ಸಾವಿನಿಂದಾಗುವ ನೋವೂ ಕೂಡ ಸಹಜ. ಆದರೆ ಪ್ರಕೃತಿ ನಿಯಮಕ್ಕೆ ಸವಾಲೆಸೆಯುವುದು ಸಾಧ್ಯವಿಲ್ಲ! ಪ್ರಕೃತಿ ನಿಯಮಕ್ಕೆ ವ್ಯತಿರಿಕ್ತವಾಗಿ ಸತ್ತಾಗ ಸಾವು ಅಸಹಜವಾಗುತ್ತದೆ. (ಉದಾ., ಕೊಲೆ, ವಾಹನ ಅಪಘಾತ ಮುಂತಾದ ದುರ್ಘಠನೆಗಳಿಂದೊದಗುವ ಸಾವು). ಇಂತಹ ಸಂದರ್ಭಗಳಲ್ಲಿ ನೋವಿನ ತೀವ್ರತೆ ಹೆಚ್ಚಾಗಿರುತ್ತದೆ. ಇಂತಹ ಅಕಾಲ ಮರಣಗಳಿಂದ, ಮರಣ ಹೊಂದಿದ ವ್ಯಕ್ತಿಯ ಜೀವನದ ಆಸೆಗಳು ಮಣ್ಣಾಗಿರುತ್ತವೆ. ಇಂತಹ ಸಂದರ್ಭದಲ್ಲಿ ನೋವಿನ ತೀವ್ರತೆ ಹೆಚ್ಚಾಗುವುದು ಕೂಡ ಸಹಜವೆ. ಈ ಎರಡೂ ಸನ್ನಿವೇಶಗಳಲ್ಲಿ, ಮರಣಹೊಂದದ ವ್ಯಕ್ತಿಗೆ, ವ್ಯಕ್ತಿಗತವಾಗಿ ತೀರ ಹತ್ತಿರವಲ್ಲದ ಮನುಷ್ಯರಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಅನುಕಂಪದ ಭಾವನೆ ಮೂಡುತ್ತದೆ. ಕೆಲವೊಮ್ಮೆ ಮರಣ ಹೊಂದಿದ ವ್ಯಕ್ತಿ ದೇಶಕ್ಕೋಸ್ಕರ ತನ್ನನ್ನು ಸಮರ್ಪಿಸಿದ್ದರೆ ದೇಶದ ಜನತೆ, ಸತ್ತ ವ್ಯಕ್ತಿಯನ್ನು ನೆನೆಯುವುದು ವಾಡಿಕೆ. ಇದನ್ನೇ ಶೋಕಾಚರಣೆಯೆಂದು ಕರೆದಿರಬಹುದು. ಆದರೆ ಶೋಕಾಚರಣೆ ಹೆಸರಿನಲ್ಲಿ ರಜೆ ಘೋಶಿಸುವುದು, ನಡೆಯಬೇಕಾದ ಮಂಗಳ ಕಾರ್ಯಗಳನ್ನು ಮುಂದೂಡುವುದು ಅಸಹಜ ಅತಿರೇಕದ ಮೂರ್ಖತನದ ಆಚರಣೆಗಳು.

ಮೊನ್ನೆ ಆದದ್ದೂ ಇದೆ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ತಮ್ಮ ೯೮ ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ರಾಷ್ಟ್ರಪತಿ ಹುದ್ದೆಗಿರುವ (ಅ)ಗೌರವ ಎಲ್ಲರಿಗೂ ತಿಳಿದದ್ದೆ. ಅದೇನೆ ಇರಲಿ ಸತ್ತ ವ್ಯಕ್ತಿಗೆ ಸಂತಾಪ ಸೂಚಿಸಲು ಸರ್ಕಾರದ ಹಲವಾರು ವಿಧಿ ವಿಧಾನಗಳಿವೆ. ಉದಾಹರಣೆಗೆ ಧ್ವಜವನ್ನು ಅರ್ಧ ಕೆಳಗಿಳಿಸುವುದು.(ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಾರಿ ರಜೆ ಘೋಷಿಸದೆ ಇದ್ದದ್ದು ಶ್ಲಾಘನೀಯ. ದೇಶದ ಪ್ರಗತಿಗೆ ಪೂರಕವಲ್ಲದ ಶೋಕ ಸಂತಾಪ ವಿಧಿ ವಿಧಾನ ಇದು). ನಮ್ಮ ರಾಜ್ಯ ಸರ್ಕಾರ ೭ ದಿನಗಳ ಶೋಕಾಚರಣೆಯೆಂದಿತು.

ಶೋಕಾಚರಣೆಯಯೆಂದರೇನು? ಶಾಲೆಗಳಲ್ಲಿ, ಕಚೇರಿಗಳಲ್ಲಿ, ಸಮಾರಂಭಗಳಲ್ಲಿ ವೆಂಕಟರಾಮನ್ ರವರ ಭಾವಚಿತ್ರವಿಟ್ಟು, ಅವರ ಸಾಧನೆಗಳನ್ನು ನೆನೆಯಬಹುದು. ಬೇಕಾದರೆ ಅವರ ಒಳ್ಳೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬಹುದು. ಚಿತ್ರದುರ್ಗದಲ್ಲಿ ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೊ ಇದನ್ನೆ ಮಾಡಬಹುದಿತ್ತು! ಅದನ್ನು ಬಿಟ್ಟು ಸಮ್ಮೇಳನವನ್ನು ಮುಂದೂಡಿದ್ದು ಉಚಿತವಲ್ಲ. ಏಷ್ಟೋ ಜನ ತಮ್ಮ ವ್ಯಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಸಾಹಿತ್ಯ ಸಮ್ಮೇಳನಕ್ಕೆ ಹೊರಟು ಸಿದ್ದತೆಗಳನ್ನು ಮಾಡಿಕೊಂಡವರಿಗೆ ನಿರಾಶೆ, ನಷ್ಟ! ಕೆಲವರ ಮನೆಯ ಮಟ್ಟಿಗಿದ್ದ ಈ ಸೂತಕದ ಮೂಢನಂಬಿಕೆಗಳು, ರಾಜ್ಯ ಮಟ್ಟಕ್ಕೆ ಬೆಳೆದು ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಮುಂದೂಡಲ್ಪಡುತ್ತಿರುವುದು ವಿಷಾದಕರ/ದುರುದೃಷ್ಟಕರ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತಿನವರು ಇನ್ನು ಮುಂದೆಯಾದರೂ ಇಂತಹ ಮೂರ್ಖ ಆಚರಣೆಗಳಿಗೆ ಮೊರೆ ಹೋಗದೆ ಅರ್ಥಪೂರ್ಣ ನಿರ್ಣಯಗಳನ್ನು ತೆಗೆದುಕೊಳ್ಳಲಿ.

ಜೈ ಕರ್ನಾಟಕ ಮಾತೆ!

8 ಕಾಮೆಂಟ್‌ಗಳು:

  1. Guru, ninna abhipraaya kke nanna bembala ide. Kannada Saahithya Sammelanavannu mundooDuva agatya iralilla.

    ಪ್ರತ್ಯುತ್ತರಅಳಿಸಿ
  2. raveesha, ittechege Odida prakaara.. nalloooru prasad ravarige sammELana mundooDuvudu iShTaviralillavante.. aadare chitradurgada jillaadhikaari shOkaacharaNe sandarbhadalli merevaNige niShiddha eMdu hELi mundooDisidarante.. aadre saahitya parishattinavaru hOraaDi.. sammELana mattu meravaNige eraDoo avotte maaDbEkittu...

    ಪ್ರತ್ಯುತ್ತರಅಳಿಸಿ
  3. We follow things which are followed. Those followed adhere to predefined rules. As time passes by rules get obsolete, but not the followed and followers. The followed and followers are lazy enough to go through set of rules. Even Indian Constitution is still governed by set of rules which arn't applicable for the current existence. Though still exist and neither of us are bothered to change it but just to abide by and put crap here and there like this!!!

    ಪ್ರತ್ಯುತ್ತರಅಳಿಸಿ
  4. ಗುರು, ನನ್ನ ಅಭಿಪ್ರಾಯವೇನೆಂದರೆ - ಇಲ್ಲಿ ಸತ್ತವರು ಯಾವ ವಯಸ್ಕರಾಗಿದ್ದರು ಎಂದು ತಿಳಿದೋ ಅಥವಾ ಸೂತಕದ ಛಾಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೋ ಅಥವಾ ಸಾಹಿತ್ಯ ಪರಿಷತ್ಗೆ ಹೊರಟು ನಿಂತಿರುವ ಮನಸ್ಸುಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ತೆಗೆದುಕೊಂಡಿರುವ ತೀರ್ಮಾನವಲ್ಲ ವೆಂದೆನಿಸುತ್ತದೆ.
    ಶೋಕಾಚರಣೆ ಅಂದರೆ ಯಾವುದೇ ಆಚರಣೆಯಲ್ಲಿ ಶೋಕ ಹೆಚ್ಚಾಗಿ ಕಾಣಸಿಗುವುದು, ಸಂಭ್ರಮ ಇಲ್ಲದಿರುವುದು (ಉ: ಬೆಳೆಕು ಇಲ್ಲವಾದುದಕ್ಕೆ ಕತ್ತಲೆನ್ನುವರು). ಆದ್ದರಿಂದ ದೇಶದ ಮೊದಲನೇ ಪ್ರಜೆ ಎಂದೆನಿಸಿಕೊಂಡಿದ್ದ "ವೆಂಕಟರಾಮನ್" ರವರು ಹಸುನೀಗಿರುವಾಗ, ನಾವೆಲ್ಲರೂ ಸಂಬ್ರಮಿಸುವುದು (ಸಾಹಿತ್ಯ ಪರಿಷತ್, ಕನ್ನಡ ನಾಡಿನ ಒಂದು ಬೃಹತ್ ಸಂಭ್ರಮವೆಂದು ತಿಳಿದ್ದಿದ್ದೇನೆ) ಉಚಿತವೇ ??

    ಪ್ರತ್ಯುತ್ತರಅಳಿಸಿ
  5. ಮಧು, ನೀವು ಹೇಳುವುದು ಸರಿ, ನಮ್ಮನ್ನಾಳುವವರಿಗೆ ವಿವೇಕ ಸ್ವಲ್ಪ ಕಡಿಮೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವ ಸಮಯ. ಸಂಯಮ ಅವರಿಗಿಲ್ಲ. ಆದರೆ ನಾವು ಈ ರೀತಿಯ ವೇದಿಕೆಗಳಲ್ಲಿ ಇಂತಹ ವಿಷಯಗಳನ್ನು ಚರ್ಚೆ ಮಾಡುವುದರಿಂದ ನಾವುಗಳಾದರೂ, ನಾವು ಮಾಡುವ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆಂಬುದು ನನ್ನ ನಂಬಿಕೆ. ಆ ಕಾರ್ಯ ಸಾಹಿತ್ಯ ಸಮ್ಮೇಳನವಾಗದೆ ಇದ್ದು ಸಣ್ಣ ವ್ಯಯಕ್ತಿಕ ಕಾರ್ಯವಾಗಿರಬಹುದು!

    ಪ್ರತ್ಯುತ್ತರಅಳಿಸಿ
  6. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  7. ಕೃಪಾ, ನೀವು ಎರಡು ಪ್ರಮುಖ ವಿಷಯಗಳನ್ನು ಎಳೆದು ತಂದಿದ್ದೀರ! ಎರಡನ್ನೂ ಪ್ರತ್ಯೇಕವಾಗಿ ಅವಲೋಕಿಸೋಣ.

    ಮೊದಲನೆಯದು: ದೇಶದ ಪ್ರಥಮ ಪ್ರಜೆ ಎಂದಿರಿ ನೀವು. ನನಗೆ ದೇಶದ ಪ್ರಥಮ ಪ್ರಜೆಯೂ, ನಾನು ಕ್ಷೌರ ಮಾಡಿಸಿಕೊಳ್ಳುವ ಕ್ಷೌರಿಕನು ಮತ್ತೂ ನಾನೂ ಎಲ್ಲರೂ ಒಂದೆ (ಸಮಾನರು). ಎಲ್ಲರೂ ಮನುಷ್ಯರು, ಇನ್ನೂ ವಿಭಜಿಸಿದರೆ ಸಜೀವ ವಸ್ತುಗಳು, ಹುದ್ದೆ ಮಾತ್ರ ಬೇರೆ ಅಷ್ಟೆ. ಅವರವರ ಹುದ್ದೆಗೆ ಅದರದ್ದೇ ಪ್ರಾಮುಖ್ಯತೆ ಇರುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನೀವು ದೇವರನ್ನು ನಂಬುವವರಾಗಿದ್ದರೆ, ದೇವರ ಮುಂದೆ ಎಲ್ಲ ಜೀವಿಗಳು ಸಮಾನರು! ಎಲ್ಲರೂ ಸಮಾನರು ಎಂದಾದರೆ ನಾವು ಯಾವುದೊಂದು ಜೀವ ಅಸು ನೀಗಿದಾಗಲು ಶೋಕಾಚರಣೆ ಆಚರಿಸಿದ್ದಾದರೆ ನಮ್ಮ ಜೀವನವೆಲ್ಲಾ ಶೋಕದಲ್ಲೇ ಮುಳುಗಿರುತ್ತದೆ. ಅದಕ್ಕೆ ನಾನೆಂದಿದ್ದು, ಸತ್ತ ಮನುಷ್ಯನಿಗೆ ವ್ಯಯಕ್ತಿಕವಾಗಿ ಹತ್ತಿರವಾದವರಿಗೆ ಮಾತ್ರ ಈ ತೀವ್ರ ಶೋಕ ಸಹಜವಾದದ್ದೆಂದು.

    ಎರಡನೆಯದು: ಸಾಹಿತ್ಯ ಸಮ್ಮೇಳನವನ್ನು ಸಂಭ್ರಮಾಚರಣೆ ಎಂದು ನೋಡುವ ಅಗತ್ಯವಿಲ್ಲ. ಇದು ಙ್ನಾನ ವಿಙ್ನಾನಗಳ (ಸರಸ್ವತಿಯ) ಸೇವೆ ಎಂದು ಭಾವಿಸುವುದು ಒಳಿತು. ಹಾಗೆಂದು ಸಮ್ಮೇಳನ ಶೋಕ, ದು:ಖ, ಗಂಭೀರ, ಬಿಗು ವಾತಾವರಣದಲ್ಲಿರಬೇಕೆಂದೇನಿಲ್ಲ. ಇಲ್ಲಿ ಸಾಹಿತ್ಯದ ಗಂಭೀರ ಚರ್ಚೆಯಾಗಬಹುದು, ಹಾಸ್ಯ ಘೋಷ್ಠಿ ಗಳಾಗಬಹುದು, ಅಲ್ಲಿ ಸಂಭ್ರಮ ಎನ್ನಿಸಬಹುದು ಆದರೆ ಅವೆಲ್ಲಾ ಸರಸ್ವತಿ ಸೇವೆಯೇ ಎಂದು ಮರೆಯಬಾರದು. ದೇವರ ಸೇವೆಯನ್ನು (ದೇವರು ಎಂದರೆ ಕಲ್ಲು ವಿಗ್ರಹವೇ ಆಗಬೇಕಾಗಿಲ್ಲ, ಙ್ನಾನ ವಿಙ್ನಾನಗಳೂ ದೇವರೆ) ಸಂಭ್ರಮದಿಂದ ಮಾಡುವುದಕ್ಕೆ, ದೇಶದ ಒಬ್ಬ ವ್ಯಕ್ತಿಯ ಸಾವು ಅಡ್ಡಿಯಾಗಬಾರದು!

    ನೀವು ಈ ಚರ್ಚೆಯನ್ನು ಇಲ್ಲಿ ಎಳೆದು ತಂದದ್ದು ಬಹಳ ಸಂತಸದ ವಿಷಯ.

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ