ಮಂಗಳವಾರ, ಜೂನ್ 16, 2009

ಬ್ಳಾಗ್ ಮೌನ, ಸಮರಸ ಜನನ!



ಇಷ್ಟು ದಿನ ಎಲ್ಲಿ ಹಾಳಾಗ್ ಹೋಗಿದ್ನಪ್ಪಾ ಅಂತೀರಾ? ಅಥವಾ RSS ಫೀಡ್ ನಲ್ಲಿ ಯಾವುದೇ ಅಪ್ಡೇಟ್ಸ್ ಕಾಣಿಸಲಿಲ್ಲ ಅಂತ ಈ ಕಡೆ ಬರಲೇ ಇಲ್ಲವ? ಏನಿಲ್ಲ ರೀ, ಜಾಗತಿಕ ಹಿಂಜರಿತ, ನಮ್ಮ ಸಂಸ್ಥೆಯ ಗ್ರಾಹಕರೆಲ್ಲಾ ಓಡಿ ಹೋಗಿಬಿಟ್ಟಿದಾರೆ. ಮಾಡೋಕ್ಕೆ ಕಛೇರಿಲ್ಲಿ ಕೆಲ್ಸ ಇಲ್ಲ.
ಕೆಲ್ಸ ಇಲ್ಲ ಅಂದ್ರೆ ಬ್ಳಾಗ್ ನಲ್ಲಿ ಏನಾದ್ರು ಗೀಚೋಕ್ಕೂ ಸೋಮಾರಿತನನಾ? ಹಾಳಾಗ್ ಹೋಗ್ಲಿ, ನಾವು ಬರೆದಿರೋದನ್ನ ಓದಿ, ಒಂದೆರಡು ಪ್ರತಿಕ್ರಿಯೆ ಬರಿಯೋದಕ್ಕೂ ಮೈಗಳ್ಳತನನಾ? ಇಲ್ಲ ಸ್ವಾಮಿ, ಇಂತಹ ಬಿಡುವಿನ ಸಮಯವನ್ನ ಸದುಪಯೋಗ ಮಾಡ್ಕೊಳ್ಳೋಣ ಅಂತ ಒಂದು ಕೆಲ್ಸ ಮಾಡ್ದೆ, ಹೇಳ್ಕೋಳ್ಳೋಕೆ ಜಾಸ್ತಿ ಏನಿಲ್ಲ..

http://samarasa.net/ ನೋಡಿ, ಹೇಗಿದೆ ಹೇಳಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ. ವಿನ್ಯಾಸ ಮತ್ತು ವಿಷಯದ ವಸ್ತುಗಳನ್ನು ಇನ್ನೂ ಅಭಿವೃದ್ಧಿಪಡಿಸಲು ನಿಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನಿತ್ತು ಸಮರಸವನ್ನು ಸಲಹಿ.

ದಯವಿಟ್ಟು ನೀವೆಲ್ಲರೂ ಹೇರಳವಾಗಿ ನಿಮ್ಮ ಬರವಣಿಗೆಗಳನ್ನು ಸಮರಸಕ್ಕೆ ಕಳುಹಿಸಿ. ಸದ್ಯಕ್ಕೆ ಓದುಗರೇ ನೊಂದಾಯಿಸಿಕೊಳ್ಳುವ ಸೌಲಭ್ಯ ಕೊಟ್ಟಿಲ್ಲ. ಮುಂದೆ ಅದನ್ನು ಒದಗಿಸುವ ಯೋಚನೆಯಿದೆ.

ಕೆಲವು ವಿಭಾಗಗಳಲ್ಲಿ ಲೇಖನಗಳಿಲ್ಲ, ಏನಪ್ಪಾ ಖಾಲಿ ಖಾಲಿ ಅಂತ ಬೈಬೇಡಿ, ಎಲ್ಲಾ ವಿಭಾಗಕ್ಕೂ ಗುಣಮಟ್ಟದ ಲೇಖನಗಳನ್ನು ಸೇರಿಸೋಣ.

ಗೆಳೆಯ ರವೀಶ್ ಮತ್ತು ಮಧುರ್ ಈ ಕಾರ್ಯಕ್ಕೆ ನನ್ನ ಜೊತೆ ಕೈ ಜೋಡಿಸಿದ್ದಾರೆ. ಅವರಿಗೂ ಧನ್ಯವಾದಗಳು.

Internet Explorer ನಲ್ಲಿ ಸಮರಸವನ್ನು ಓದುವಾಗ ಕೆಲವು ನ್ಯೂನ್ಯತೆಗಳು ಕಾಣ್ತಾ ಇವೆ. ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. Mozillaa ದಲ್ಲಿ ಓದುವುದು ಸುಲಭ.

ಇವಲ್ಲದೆ ಇನ್ನೂ ಹಲವು ನ್ಯೂನ್ಯತೆಗಳು ಉಳಿದೆವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಸಹಕಾರವಿರಲಿ.
ವೆಬ್ ಸೈಟ್ ವಿನ್ಯಾಸಕ್ಕೆ Wordpress ಮತ್ತು Mimbo ಗಳನ್ನು ಬಳಸಿದ್ದೇನೆ. ಅವರಿಗೂ ಧನ್ಯವಾದಗಳು.

ಇನ್ನು ಮುಂದೆಯೂ ಇಲ್ಲಿ ಬರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ.

7 ಕಾಮೆಂಟ್‌ಗಳು:

  1. ಗುರುಪ್ರಸಾದ್‍ವರೆ,
    Congratulations! ಸಮರಸ ನೋಡಿದೆ. ಚನ್ನಾಗಿ ಬಂದಿದೆ. ಒಳ್ಳೆಯ ಪ್ರಯತ್ನ. ನಾನು ಸಹ ಅಲ್ಲಿಗೆ ಲೇಖನ ಕಳಿಸುತ್ತೆನೆ. ನಿಮ್ಮ ಕೆಲಸ ಮೆಚ್ಚುವಂಥದ್ದು. ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ. Go ahead! ನಾವೆಲ್ಲ ನಿಮ್ಮೊಟ್ಟಿಗೆ ಇರುತ್ತೇವೆ. All the best!

    ಪ್ರತ್ಯುತ್ತರಅಳಿಸಿ
  2. ಗುರುಪ್ರಸಾದ್,

    ಅಭಿನಂದನೆಗಳು. ಸಮರಸದ ವಿನ್ಯಾಸ ಚೆನ್ನಾಗಿದೆ. ವಿಚಾರಗಳ ಆಯ್ಕೆಯು ಇಷ್ಟವಾಯಿತು. ನಿಮ್ಮ ಸಮರಸ ಎಲ್ಲಾ ರಸಗಳನ್ನು ತುಂಬಿಕೊಂಡು ಸರಾಗವಾಗಿ ಸಾಗಲಿ...all the best.!

    ಪ್ರತ್ಯುತ್ತರಅಳಿಸಿ
  3. ಒಳ್ಳೆಯ ಕೆಲಸ ಆರಂಭಿಸಿದ್ದೀರಿ. ಬರುವ ದಿನಗಳಲ್ಲಿ ಒಳ್ಳೆಯ ಪುಟ ವಿನ್ಯಾಸ, ಒಳ್ಳೆಯ ಲೇಖನಗಳು ಬರಬಹುದು ಎಂದು ಕಾತರದಿಂದ ಕಾಯುತ್ತೇನೆ.

    ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  4. nimma samarasa uthama wagi moodi barali ...harike galondigee..shyla

    ಪ್ರತ್ಯುತ್ತರಅಳಿಸಿ
  5. ಸಮರಸ ಬಹಳ ಚೆನ್ನಾಗಿದೆ ಸರ್... ಹೀಗೆ ಮುಂದುವರೆಸಿ ..

    ಪ್ರತ್ಯುತ್ತರಅಳಿಸಿ
  6. ಉದಯ ರವರೆ,
    ಅನಂತ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ಶ್ರೀರಕ್ಷೆ. ದಯವಿಟ್ಟು ನಿಮ್ಮ ಲೇಖನಗಳನ್ನು/ ಕವನಗಳನ್ನು ಧಾರಾಳವಾಗಿ ಸಮರಸಕ್ಕೆ ಕಳುಹಿಸಿ.

    ಶಿವು ರವರೆ,
    ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹ ಪೂರ್ವಕ ಮಾತುಗಳಿಗೆ ಅನಂತ ಧನ್ಯವಾದಗಳು.

    ಶಿವಾನಂದ ರವರೆ,
    ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹ ಪೂರ್ವಕ ಮಾತುಗಳಿಗೆ ಅನಂತ ಧನ್ಯವಾದಗಳು.

    ಶೈಲಾರವರೆ,
    ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹ ಪೂರ್ವಕ ಮಾತುಗಳಿಗೆ ಅನಂತ ಧನ್ಯವಾದಗಳು.

    ಪ್ರಭುರವರೆ,
    ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹ ಪೂರ್ವಕ ಮಾತುಗಳಿಗೆ ಅನಂತ ಧನ್ಯವಾದಗಳು.

    ಎಲ್ಲರೂ ದಯವಿಟ್ಟು ಸಮರಸವನ್ನು ಓದಿ, ಸಲಹೆಗಳನ್ನು ನೀಡುತ್ತಿರಿ. ಸಾಧ್ಯವಾದಾಗ ನಿಮ್ಮ ಲೇಖನಗಳನ್ನು ಕೂಡ ಕಳುಹಿಸಿ.

    ಪ್ರತ್ಯುತ್ತರಅಳಿಸಿ
  7. ಶಿವಶಂಕರ್ ರವರೆ..
    ನಿಮ್ಮ ಮೆಚ್ಚುಗೆಗೆ ಮತ್ತು ಅಭಿಪ್ರಾಯಕ್ಕೆ ಬಹಳ ಧನ್ಯವಾದಗಳಿ..
    ಹೌದು ನೀವು ಹೇಳುವಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಅಗತ್ಯ.. ನೋಡಲು ವಿನ್ಯಾಸ ಇನ್ನೂ ಚಂದಾಗಬೇಕು.. ಎಲ್ಲಾ ವಿಭಾಗದಲ್ಲೂ ಹೆಚ್ಚಿನ ಲೇಖನಗಳು ಬರಬೇಕು.. ಇನ್ನು ಲೇಖನಗಳ ಗುಣಮಟ್ಟಕ್ಕಂತೂ ಎಲ್ಲೆ ಇಲ್ಲ!

    ಪ್ರತ್ಯುತ್ತರಅಳಿಸಿ