ಸೋಮವಾರ, ಆಗಸ್ಟ್ 03, 2009

ಸೂರ್ಯನ ವರ್ಣನೆ

ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?

ನೋಡಿ, ಸೂರ್ಯೋದಯದ ಈ ಛಾಯಾಚಿತ್ರಕ್ಕೆ ಪಂಜೆಮಂಗೇಶ ರಾಯರ “ಉದಯರಾಗ” ಕವನ ಎಷ್ಟು ಅದ್ಭುತವಾಗಿದೆಯಲ್ಲವೇ? “ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು ’ಏರಿದವನು ಚಿಕ್ಕವನಿರಬೇಕಲೆ’ ಎಂಬಾ ಮಾತನು ಸಾರುವನು” ಎಂಬ ಸಾಲುಗಳು ಆಹಾ ರಮಣೀಯತೆಯ ಜೊತೆಗೆ ಎಷ್ಟು ಅರ್ಥಪೂರ್ಣವಲ್ಲವೇ? ಇನ್ನು ಸೂರ್ಯಾಸ್ತವನ್ನು ಕಂಡ ಜಿ ಪಿ ರಾಜರತ್ಮಂ ರವರ ಮನಸ್ಸು, ಸೂರ್ಯನೂ ಕುಡುಕನೆಂದು “ಸಮಾದಾನ” ಪಟ್ಟುಕೊಳ್ಳುವ ಈ ಕವಿತೆಯನ್ನೋದಿ, ಎಂತಹ ಹೋಲಿಕೆ, ಎಂತಹ ರೂಪಕ! ಅಯ್ಯೋ ಛಂದಸ್ಸನ್ನು ಮೀರಿ ಖುಷಿ ಕೊಡುವ ಪದ್ಯಗಳಿವು. ಛಾಯಾಚಿತ್ರದ ಜೊತೆ ಪದ್ಯಗಳನ್ನೋದಿ ಆನಂದಿಸಿ. ಮೊದಲನೆ ಪದ್ಯದಲ್ಲಿ ಸೂರ್ಯ ಹುಟ್ಟಿ ಸುತ್ತಲೂ ನೆತ್ತರು ಮಾಡಿ ಕುಣಿದರೆ, ಎರಡನೆಯದರಲ್ಲಿ ಸೂರ್ಯ ಕುಡಿದು ಸಂಜೆ ಕಣ್ಣು ಕೆಂಪಾಗಿಸಿಕೊಂಡು ತೂರಾಡ್ತಾ ಇದ್ದಾನೆ!

ಮುಂದೆ ಓದಿ/ನೋಡಿ..

2 ಕಾಮೆಂಟ್‌ಗಳು:

  1. ಗುರು,

    ನಿಜಕ್ಕೂ ಎರಡು ಚಿತ್ರಗಳಲ್ಲೂ ಸೂರ್ಯ ಕುಡಿದು ತೂರಾಡುತ್ತಿದ್ದಾನೇನೊ ಅನ್ನಿಸುತ್ತೆ ಫೋಟೊಗಳು ಚೆನ್ನಾಗಿವೆ. ಮತ್ತೆ ಅದಕ್ಕೆ ಸರಿಯಾಗಿ ಪಂಜೆ ಮಂಗೇಶ್ ರಾಯರು ಮತ್ತು ಜಿ.ಪಿ.ರಾಜರತ್ನಂ ಪದ್ಯಗಳನ್ನು ಓದಿಸಿದ್ದೀರಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಶಿವು,

    ಫೋಟೋಗಳನ್ನು ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ