ಮಂಗಳವಾರ, ಅಕ್ಟೋಬರ್ 27, 2009
ದ ಡಿಫಿಕಲ್ಟಿ ಆಫ್ ಬಿಯಿಂಗ್ ಗುಡ್ -- ಪುಸ್ತಕ ಪರಿಚಯ
ಟೈಮ್ಸ್ ಆಫ್ ಇಂಡಿಯಾ ಆಂಗ್ಲ ನಿಯತಕಾಲಿಕೆಯಲ್ಲಿ ಅಂಕಣಕಾರರಾಗಿ ಪ್ರಖ್ಯಾತರಾಗಿರುವ, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ’ಗುರುಚರಣ ದಾಸ್’ ರವರ ಹೊಸ ಪುಸ್ತಕ "The Diffuculty Of Being Good" ಭಾರತದ ಪ್ರಾಚೀನ ಗ್ರಂಥ ’ಮಹಾಭಾರತ’ದ ಆಳವಾದ ಅಧ್ಯಯನದದಿಂದ ಕೂಡಿದ ವಿಮರ್ಶಾತ್ಮಕ ಶೈಲಿಯಲ್ಲಿ ಹೊರಹೊಮ್ಮಿರುವ ಪುಸ್ತಕ ಎನ್ನಬಹುದು. ಮಹಾಭಾರತದ ಪ್ರಮುಖ ಪಾತ್ರಗಳು ವಿವಿಧ ಸನ್ನಿವೇಶಗಳಲ್ಲಿ ತೋರುವ ಮನೋಭಾವದ, ನಡತೆಯ ಸುತ್ತ ಪುಸ್ತಕವನ್ನು ಹೆಣೆದಿದ್ದು ಇಂದಿನ ದಿನಕ್ಕೆ ಆ ಸನ್ನಿವೇಶಗಳು, ಆ ಪಾತ್ರಗಳಲ್ಲಿದ್ದ ಸಂದಿಗ್ಧತೆ, ಹೇಗೆ ಅನ್ವಯವಾಗುತ್ತವೆ? ಈ ದಿನಗಳಲ್ಲಿನ ಪ್ರಪಂಚದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾಗಿರುವ ತಲ್ಲಣಗಳಿಗೂ, ಮಹಾಭಾರತಕ್ಕೂ ತಳುಕು ಹಾಕಿ ನೋಡುತ್ತಾರೆ. ನಮ್ಮ ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮಹಾಭಾರತದ ಪ್ರಸಂಗಗಳು, ಪಾತ್ರಗಳು ಯಾವ ರೀತಿಯಲ್ಲಾದರೂ ಸಹಾಯ ಮಾಡುತ್ತವೆಯೇ ಎಂಬುದರ ಅಧ್ಯಯನವಿದೆ ಈ ಪುಸ್ತಕದಲ್ಲಿ.
ಮುಂದೆ ಓದಿ
ಬುಧವಾರ, ಅಕ್ಟೋಬರ್ 21, 2009
ಒಗಟು ಬಿಡಿಸೋ ಜಾಣ,
ನನ್ನ ಹತ್ತಿರ ೧೦೦ ಅಂತಸ್ತಿನ ಮನೆಯಿದೆ (ದಯವಿಟ್ಟು ಸಂತೋಷ್ ಹೆಗಡೆಯವರಿಗೆ ಹೇಳಬೇಡಿ!), ಒಂದು ಅಂತಸ್ತಿನ ಮಹಡಿ, ತನ್ನ ಮೇಲಿನ ಅಥವಾ ಕೆಳಗಿನ ಮಹಡಿಯಿಂದ ಸಮ ದೂರದಲ್ಲಿರುತ್ತದೆ. (ಇದು ಒಗಟು ಬಿಡಿಸಲು ಬೇಕಾದ ಪೂರ್ವ ಮಾಹಿತಿ ಅಷ್ಟೆ! ಇದಕ್ಕೂ ಬಿಡಿಎ ನಿಯಮಗಳಿಗೂ ಸಂಬಂಧವೇನಿಲ್ಲ!). ನಿಮಗೆ ಯಾವುದೇ ಅಂತಸ್ತಿಗೆ ತೆರಳಲು ಸ್ವಾತಂತ್ರವಿದೆ. ಮೆಟ್ಟಿಲು ಹತ್ತಬೇಕಷ್ಟೆ.
ಮತ್ತು ನನ್ನಲ್ಲಿ ೨ ಮೊಟ್ಟೆಗಳಿವೆ (ಇತ್ತೀಚಿನ ದಿನಗಳಲ್ಲಿ ಮೊಟ್ಟೆ ಸಸ್ಯಾಹಾರವಂತೆ!) ಮುಂದೆ ನೋಡಿ
ಶುಕ್ರವಾರ, ಅಕ್ಟೋಬರ್ 09, 2009
ವೈಚಾರಿಕ ಮನಸ್ಸಿನ ಹತ್ತು ಹಲವು ಮುಖಗಳು
ಪ್ರಸಿದ್ಧ ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ, ಪತ್ರಕರ್ತ, ಕವಿ, ವಿಜ್ಞಾನ ಬರಹಗಾರ, ನಾಟಕಕಾರ, ರಾಜಕಾರಣಿ, ಸಂಗೀತಕಾರ, ಚಿತ್ರಕಾರ, ವ್ಯಂಗ್ಯಚಿತ್ರಕಾರ, ಶಿಶು ಸಾಹಿತಿ, ಪ್ರವಾಸ ಸಾಹಿತಿ, ಪುಸ್ತಕ ಪ್ರಕಾಶಕ, ಚಲನಚಿತ್ರಗಾರ, ನೇರ ದಿಟ್ಟ ಸತ್ಯವಂತ ವಿಚಾರವಂತ ಹೀಗೆ ಬಹುಮುಖ ಪ್ರತಿಭೆ. "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಗಾದೆಗೆ ಸಮಾನವಾಗಿ "ಕಾರಂತ ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ" ಎಂಬ ಗಾದೆ ಇಂದು ಕರ್ನಾಟಕದಲ್ಲಿ ಮನೆಮಾತಾಗಿದೆ. ಹೀಗಿದ್ದೂ ತನ್ನ ಸಾಧನೆಯನ್ನೆಲ್ಲಾ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎಂಬ ಅರ್ಧ ಆತ್ಮಕಥೆಯಲ್ಲಿ ಬಿಡಿ ಬಿಡಿಯಾಗಿ ದಾಖಲಿಸಿದ ವಿನಯವಂತ, ಧೀಮಂತ ವ್ಯಕ್ತಿತ್ವದ ಡಾ| ಶಿವರಾಮ ಕಾರಂತ ಕೋಟ ರವರ ಜನ್ಮ ದಿನ ಇಂದು. ಡಾ| ಶಿವರಾಮ ಕಾರಂತ .ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ ೧೯೦೨ ರ ಅಕ್ಟೋಬರ್ ೧೦ ರಂದು ಜನಿಸಿದ್ದು.
ಕಾರಂತರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸಾಯ ಮಾಡಿದ್ದರೂ ಹೆಚ್ಚು ಪ್ರಸಿದ್ಧಿಯಾದದ್ದು ತಮ್ಮ ವೈಚಾರಿಕ ಕಾದಂಬರಿಗಳಿಂದಲೇ ಎನ್ನಬಹುದು. ಅವರ ಕೆಲವು ಕಾದಂಬರಿಗಳನ್ನು ಹೆಸರಿಸಿದರೆ, ಅಳಿದ ಮೇಲೆ, ಆಳ ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಒಡ ಹುಟ್ಟಿದವರು, ಒಂಟಿ ದನಿ, ಔದಾರ್ಯದ ಉರುಳಲ್ಲಿ, ಕನ್ಯಾಬಲಿ ಅಥವಾ ಸೂಳೆಯ ಸಂಸಾರ, ಕರುಳಿನ ಕರೆ, ಕುಡಿಯರ ಕೂಸು, ಗೊಂಡಾರಣ್ಯ, ಚಿಗುರಿದ ಕನಸು, ಚೋಮನ ದುಡಿ, ಜಗದೋದ್ಧಾರ-ನಾ, ಜಾರುವ ದಾರಿಯಲ್ಲಿ, ದೇವದೂತರು, ನಂಬಿದವರ ನಾಕ ನರಕ, ನಿರ್ಭಾಗ್ಯ ಜನ್ಮ, ಭತ್ತದ ತೊರೆ, ಬೆಟ್ಟದ ಜೀವ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಕಜ್ಜಿಯ ಕನಸುಗಳು, ಮೊಗಪಡೆದ ಮನ, ವಿಚಿತ್ರಕೂಟ, ಶನೀಶ್ವರನ ನೆರಳಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ, ಮೈಮನಗಳ ಸುಳಿಯಲ್ಲಿ, ಗೆದ್ದ ದೊಡ್ಡಸ್ತಿಕೆ ಇತ್ಯಾದಿ. ಮುಂದೆ ಓದಿ
ಮಂಗಳವಾರ, ಅಕ್ಟೋಬರ್ 06, 2009
ಹುಯಿಲಗೋಳ ನಾರಾಯಣರಾಯರ ಬಗೆಗೆ ಇನ್ನೊಂದಿಷ್ಟು ಮಾಹಿತಿಗಳು
ಮಹಾತ್ಮ ಗಾಂಧಿಯವರು ೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯೆಂದು ಸ್ವೀಕರಿಸಲಾದ "ಉದಯವಾಗಲಿ" ಗೀತೆಯ ಭಾವಾರ್ಥ ಕೇಳಿ ತಿಳಿದು ನಾರಾಯಣರಾಯರನ್ನು ಮೆಚ್ಚಿಕೊಂಡು ಹೂವಿನ ಹಾರ ಹಾಕಿ ಗೌರವಿಸಿದ್ದರಂತೆ.
ಅಪರಿಮಿತ ದೇಶಭಕ್ತರಾಗಿದ್ದ ಹುಯಿಲಗೋಳ ನಾರಯಣರಾಯರು, ಕರ್ನಾಟಕ ಏಕೀಕರಣಕ್ಕೇ ಅಲ್ಲದೇ ಸ್ವಂತತ್ರ ಹೋರಾಟಕ್ಕೂ ಶ್ರಮಿಸಿದ್ದರು. ಇವರು ಕನ್ನಡ ನಾಡಿನ ಬಗೆಗಿನ ಪದ್ಯಗಳನ್ನು ರಚಿಸಿದುದ್ದಲ್ಲದೆ ದೇಶಭಕ್ತಿಯನ್ನು ಹೊಮ್ಮಿಸುವ ಪದ್ಯಗಳನ್ನೂ ರಚಿಸಿದ್ದಾರೆ. ಓದುಗರ ಪರಿಚಯಕ್ಕಾಗಿ "ಧ್ವಜಗೀತೆ"ಎಂಬ ಈ ಅತ್ಯುತ್ತಮ ದೇಶಭಕ್ತಿಗೀತೆ!
ಧ್ವಜಗೀತೆ
ಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ|
ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ ||ಪ||
ಹಾಸಿ ಮನೆಯಲಿ ನೇಯ್ದ ಖದ್ದರದ ಬಟ್ಟೆಯಲಿ|
ಕೇಸರಿ ಬಿಳಿ ಹಸಿರು ಬಣ್ಣಗಳ ಪಟ್ಟಿಯಲಿ|
ಸೂಸಿ ನೀಲಿಯಿಟ್ಟು, ಚಕ್ರ ನಡುವೆ ಮೆಟ್ಟಿನಲಿ|
ಬೀಸುತಿಹ ಗಾಳಿಯಲಿ ಭಾರತದ ನಿಟ್ಟೆಯಲಿ||
ಸತ್ಯ, ದಮೆ, ದಯೆ, ಶಾಂತಿ, ಪ್ರೇಮಗಳ ಗುರುತೆಂಬ|
ಸ್ತುತ್ಯ ಬಣ್ಣದ ನಡುವೆ ಧರ್ಮಚಕ್ರದ ಬಿಂಬ|
ನಿತ್ಯ ಅಭಯ ಅಹಿಂಸೆಗಳ ತೋರ್ಪಧ್ವಜ ಕಂಬ|
ಪ್ರತ್ಯಕ್ಷದಲಿ ನೋಡಿ ವಂದಿಸಿರಿ ಮನದುಂಬ||
ಖಡಖಡನೆ ಗಾಳಿಯಲಿ ಬೀಸಿ ಶಬ್ದವ ಮಾಡಿ|
ಛಡಛಡನೆ ಹಗೆಗಳೆಡೆ ಬಿರಿವಂತೆ ಹಾರಾಡಿ|
ಒಡೆಯ ಗದುಗಿನ ವೀರ ನಾರಾಯಣನ ಪಾಡಿ|
ಗುಡಿ ತನ್ನ ಮೊಗವೆತ್ತಿ ನಿಲುವಂತೆ ಮೇಲ್ಮಾಡಿ||
ಹುಯಿಲಗೋಳ ನಾರಾಯಣರಾಯರು ಏಕೀಕರಣದ ನಂತರ ರಚಿಸಿದ ಈ ಒಂದು ಸುಂದರ ಕವನವನ್ನೋದಿ ಆನಂದಿಸಿ.
ಮೂಡಿದುದು ಮೂಡಿದುದು ಕನ್ನಡದ ರವಿಬಿಂಬ
ಮುಂದೆ ಓದಿ
ಮುಖ್ಯಮಂತ್ರಿ ಹಾಲಲ್ಲಿ.. ಜನ ಜಾನುವಾರುಗಳು ನೀರಲ್ಲಿ!
ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ತತ್ತರಿಸಿ, ಅನ್ನ ನೀರಿಲ್ಲದೆ(ರಾಜಕಾರಣಿಗಳಿಗಾಗಿ ಸ್ಪಷ್ಟಣೆ, ನೀರಿಲ್ಲದೆ ಎಂದರೆ ಕುಡಿಯುವ ನೀರಿಲ್ಲದೆ ಎಂದು ತಿಳಿಯಬೇಕು) ಪ್ರಾಣ ಬಿಡುತ್ತಿದ್ದಾಗ ಯಡಿಯೂರಪ್ಪನವರು ಕರ್ನಾಟಕ ಹಾಲು ಒಕ್ಕೂಟದ ವತಿಯಿಂದ "ಕ್ಷೀರಬಂಧು" ಬಿರುದನ್ನು ಸೋಮಶೇಖರ ರೆಡ್ಡಿಯವರಿಂದ ಸನ್ಮಾನಿಸಿಕೊಳ್ಳುವುದರಲ್ಲಿ ಕಾರ್ಯನಿರತರಾಗಿದ್ದರು. ಅ ದಿನಕ್ಕೂ ಮುಂಚೆ ನಾಡಿಗೆ ಏನೇ ಆದರೂ ತಲೆ ಬಿಸಿಯಿಂದ ಮುಕ್ತನಾಗಿರಬೇಕು ಎಂದು ಸುತ್ತೂರು ಮಠದಲ್ಲಿ "ಯೋಗ" ಮತ್ತಿನ್ಯಾವುದೋ ವಿಷಯಗಳ ಮೇಲಿನ ಕಾರ್ಯಾಗಾರದಲ್ಲಿ ಕಾರ್ಯನಿರತರಾಗಿದ್ದರು!
ನಾವೇನು ನೆರೆ ಪೀಡಿತರಿಗೆ ಮುಖ್ಯಮಂತ್ರಿ ಸಹಾಯ ಮಾಡಬೇಕು ಎಂದಾಗ, ಅವರು ನೆರೆ ಹಾಳಿ ಪ್ರದೇಶಕ್ಕೆ ಭೇಟಿಯಿತ್ತು ತಮ್ಮ ತಲೆಯ ಮೇಲೆ ಎಲ್ಲರನ್ನೂ ಹೊತ್ತುಕೊಂಡು ಬರಬೇಕೆಂದು ನಿರೀಕ್ಷಿಸುತ್ತಿಲ್ಲ. ಕನಿಷ್ಟ ಪಕ್ಷ ಯೋಗ ತರಬೇತಿಗಳು, ಸನ್ಮಾನ ಕಾರ್ಯಕ್ರಮಗಳನ್ನು ಬದಿಗಿಟ್ಟು ಅತಿವೄಷ್ಟಿಯಿಂದ ಹಾನಿಗೊಳಗಾದವರನ್ನು ರಕ್ಷಿಸಲು ಯೋಜನೆಗಳನ್ನಾದರೂ ರೂಪಿಸಬಹುದಿತ್ತು. ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲೇ ಕೂತು ನಿರ್ವಹಿಸಬಹುದಿತ್ತು. ಅಧಿಕಾರಿಗಳು ಮಾಡುವುದಿಲ್ಲವೇ? ಎಂದರೆ ಅದರ ಮೇಲ್ವಿಚಾರಣೆಯನ್ನಾದರೂ ಮಾಡಬೇಕಲ್ಲವೇ? ಇಷ್ಟು ವರ್ಷ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಂಡಿಲ್ಲವೇ? ಹಾಗೆಂದು ರಾಜಕಾರಣಿಗಳು ಅಧಿಕಾರಿಗಳಿಗಿಂತ ಉತ್ತಮರೆಂದಲ್ಲ. ಸಾಮಾನ್ಯರ, ರೈತರ ನಾಯಕ ಎಂದು ಹೇಳಿಕೊಳ್ಳುವ ಯಡ್ಡಿಯೂರಪ್ಪನವರು ತಮ್ಮ ವ್ಯಕ್ತಿ ವಿಕಸನ ಕಾರ್ಯಕ್ರಮಗಳನ್ನು ಮತ್ತು ಬಿರುದು ಬಿಮ್ಮಾನಗಳ ವಿಕಸನ ಕಾರ್ಯಕ್ರಮಗಳನ್ನು ಮೊಟುಕುಗೊಳಿಸಿ, ಹಾನಿಗೊಳಗಾದ, ನಿರಾಶ್ರಿತರಾದ ಜನಗಳಿಗೆ ಸಹಾಯ ತಲುಪುತ್ತಿದೆಯೇ ಎಂಬುದರ ಮೇಲ್ವಿಚಾರಣೆ ಮಾಡಿದ್ದರೆ ಅವರು ಜನಸಮಾನ್ಯರಿಗೆ ಇನ್ನೂ ಹತ್ತಿರವಾಗುತ್ತಿದ್ದುದರಲ್ಲಿ ಸಂಶಯವಿರಲಿಲ್ಲ! ಆದರೆ ಪ್ರತಿಪಕ್ಷಗಳ ಬೇರೆ ಸಂದರ್ಭಗಳಲ್ಲಿ ಮಾಡಿದ್ದ ಅರ್ಥವಿಲ್ಲದ ಟೀಕೆಗಳಿಗೆ ಹೆದರುವುದಿಲ್ಲ ಎಂಬಂತೆ ಪ್ರತಿಪಕ್ಷಗಳ ಜೊತೆಗೆ ಜಿದ್ದಿಗೆ ಬಿದ್ದಿರುವಂತೆ ಕಾಣುತ್ತಿರುವ ಯಡ್ಡಿಯೂರಪನವರಿಗೆ ನಿಯತ್ತಿನ ಟೀಕೆಗಳಿಗೂ ಕಿವುಡರಾಗಿಬಿಟ್ಟಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ನಾನ್ನುಡಿಯಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಜಿದ್ದಿನಲ್ಲಿ ಜನಸಾಮಾನ್ಯರು ನರಳುತ್ತಿದ್ದಾರೆ ಅಷ್ಟೆ!
ಮುಂದೆ ಓದಿ
ಭಾನುವಾರ, ಅಕ್ಟೋಬರ್ 04, 2009
ಚೆಲುವ ಕನ್ನಡ ನಾಡಿನ ಕವಿಯ ೧೨೫ನೇ ಜಯಂತೋತ್ಸವ
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ||ಪ||
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು*
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.
(*ವಿದ್ಯಾರಣ್ಯ)
ಹುಯಿಲುಗೋಳ ನಾರಾಯಣರಾವ್ (೧೮೮೪-೧೯೭೧)
ಮುಂದೆ ಓದಿಶನಿವಾರ, ಅಕ್ಟೋಬರ್ 03, 2009
ಮಹಾತ್ಮ ಗಾಂಧಿ - ಕೈಲಾಸಂ ಕವನ
The Recipe
ಮುಂದೆ ಓದಿ
ಶುಕ್ರವಾರ, ಅಕ್ಟೋಬರ್ 02, 2009
ಕನ್ನಡದ ಧೀಮಂತ ಸಾಹಿತಿಯ ಜನ್ಮೋತ್ಸವ
ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು..
ಶಬರಿ ಪದ್ಯ, ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪಿದೆಯೇ?
ಮುಂದೆ ಓದಿ