ಪ್ರಸಿದ್ಧ ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ, ಪತ್ರಕರ್ತ, ಕವಿ, ವಿಜ್ಞಾನ ಬರಹಗಾರ, ನಾಟಕಕಾರ, ರಾಜಕಾರಣಿ, ಸಂಗೀತಕಾರ, ಚಿತ್ರಕಾರ, ವ್ಯಂಗ್ಯಚಿತ್ರಕಾರ, ಶಿಶು ಸಾಹಿತಿ, ಪ್ರವಾಸ ಸಾಹಿತಿ, ಪುಸ್ತಕ ಪ್ರಕಾಶಕ, ಚಲನಚಿತ್ರಗಾರ, ನೇರ ದಿಟ್ಟ ಸತ್ಯವಂತ ವಿಚಾರವಂತ ಹೀಗೆ ಬಹುಮುಖ ಪ್ರತಿಭೆ. "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಗಾದೆಗೆ ಸಮಾನವಾಗಿ "ಕಾರಂತ ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ" ಎಂಬ ಗಾದೆ ಇಂದು ಕರ್ನಾಟಕದಲ್ಲಿ ಮನೆಮಾತಾಗಿದೆ. ಹೀಗಿದ್ದೂ ತನ್ನ ಸಾಧನೆಯನ್ನೆಲ್ಲಾ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎಂಬ ಅರ್ಧ ಆತ್ಮಕಥೆಯಲ್ಲಿ ಬಿಡಿ ಬಿಡಿಯಾಗಿ ದಾಖಲಿಸಿದ ವಿನಯವಂತ, ಧೀಮಂತ ವ್ಯಕ್ತಿತ್ವದ ಡಾ| ಶಿವರಾಮ ಕಾರಂತ ಕೋಟ ರವರ ಜನ್ಮ ದಿನ ಇಂದು. ಡಾ| ಶಿವರಾಮ ಕಾರಂತ .ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ ೧೯೦೨ ರ ಅಕ್ಟೋಬರ್ ೧೦ ರಂದು ಜನಿಸಿದ್ದು.
ಕಾರಂತರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸಾಯ ಮಾಡಿದ್ದರೂ ಹೆಚ್ಚು ಪ್ರಸಿದ್ಧಿಯಾದದ್ದು ತಮ್ಮ ವೈಚಾರಿಕ ಕಾದಂಬರಿಗಳಿಂದಲೇ ಎನ್ನಬಹುದು. ಅವರ ಕೆಲವು ಕಾದಂಬರಿಗಳನ್ನು ಹೆಸರಿಸಿದರೆ, ಅಳಿದ ಮೇಲೆ, ಆಳ ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಒಡ ಹುಟ್ಟಿದವರು, ಒಂಟಿ ದನಿ, ಔದಾರ್ಯದ ಉರುಳಲ್ಲಿ, ಕನ್ಯಾಬಲಿ ಅಥವಾ ಸೂಳೆಯ ಸಂಸಾರ, ಕರುಳಿನ ಕರೆ, ಕುಡಿಯರ ಕೂಸು, ಗೊಂಡಾರಣ್ಯ, ಚಿಗುರಿದ ಕನಸು, ಚೋಮನ ದುಡಿ, ಜಗದೋದ್ಧಾರ-ನಾ, ಜಾರುವ ದಾರಿಯಲ್ಲಿ, ದೇವದೂತರು, ನಂಬಿದವರ ನಾಕ ನರಕ, ನಿರ್ಭಾಗ್ಯ ಜನ್ಮ, ಭತ್ತದ ತೊರೆ, ಬೆಟ್ಟದ ಜೀವ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಕಜ್ಜಿಯ ಕನಸುಗಳು, ಮೊಗಪಡೆದ ಮನ, ವಿಚಿತ್ರಕೂಟ, ಶನೀಶ್ವರನ ನೆರಳಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ, ಮೈಮನಗಳ ಸುಳಿಯಲ್ಲಿ, ಗೆದ್ದ ದೊಡ್ಡಸ್ತಿಕೆ ಇತ್ಯಾದಿ. ಮುಂದೆ ಓದಿ
ಶುಕ್ರವಾರ, ಅಕ್ಟೋಬರ್ 09, 2009
ವೈಚಾರಿಕ ಮನಸ್ಸಿನ ಹತ್ತು ಹಲವು ಮುಖಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಗುರು,
ಪ್ರತ್ಯುತ್ತರಅಳಿಸಿಕಾರಂತರ ಜನ್ಮದಿನದಂದೂ ಅವರ ಬಗ್ಗೆ ಅನೇಕ ಮಾಹಿತಿಯನ್ನು ಒದಗಿಸಿದ್ದೀರಿ...
ಧನ್ಯವಾದಗಳು.