ಭಾನುವಾರ, ಡಿಸೆಂಬರ್ 06, 2009

ರತ್ನನ ಪದಗಳ ಭಾಷಾ ಶೈಲಿ

raajaratnam-padya

ಯೇಳ್ಕೊಳ್ಳಾಕ್ ಒಂದ್ ಊರು

ತಲೇಮೇಗ್ ಒಂದ್ ಸೂರು

ಮಲಗಾಕೆ ಭೂಮ್ತಾಯಿ ಮಂಚ

ಕೈ ಯಿಡದೋಳ್ ಪುಟ್ನಂಜಿ

ನೆಗನೆಗತ ಉಪ್ಗಂಜಿ

ಕೊಟ್ರಾಯ್ತು ರತ್ನನ್ ಪರ್ಪಂಚ


ರತ್ನನ ಪದಗಳು ಮೈಸೂರು ಪ್ರಾಂತ್ಯದ ಗ್ರಾಮೀಣ ಆಡುಭಾಷೆಯಲ್ಲಿ ರಚಿತವಾಗಿವೆ ಎಂದು ಬಲ್ಲ ತಜ್ಞರು ಹೇಳುವುದುಂಟು. ಈ ಪದಗಳ ವಿಶೇಷತೆಯೆಂದರೆ, ಹಾಡಿಕೊಳ್ಳಲು ಅಷ್ಟು ಸರಳವಾಗಿರುವುದು ಮತ್ತು ಆ ಸರಳ ಪದಗಳಲ್ಲಿ ಅಷ್ಟೋಂದು ತತ್ವವನ್ನು ಅಷ್ಟೇ ಸರಳವಾಗಿ ಸೇರಿಸಿರುವುದು. ಹೆಚ್ಚಿನ ಪದಗಳಲ್ಲಿ ಒಬ್ಬ ವ್ಯಕ್ತಿ ಕುಡಿದಾಗ ಹೇಗೆ ಹಿಂದನ ಘಟನೆಗಳು ಮತ್ತು ಮುಂದೆ ನಡೆಯುವುದನ್ನು ಮರೆತು ವರ್ತಮಾನವನ್ನು ಸಂತೋಷವಾಗಿ ಕಳೆಯುವನೋ ಅದೇ ತತ್ವವಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ತತ್ವದ ಮಾತನ್ನು ಬದಿಗಿಟ್ಟರೆ ಆ ಪದಗಳ ಗ್ರಾಮ್ಯ ಭಾಷೆ ಹಾಡಿಕೊಂಡಾಗ ಮನಸ್ಸಿಗೆ ಬೇಗ ನಾಟುತ್ತವೆ. ಕೆಲವೆಡೆ ಹಿಂದಿ ಪದಗಳ ಮಿಶ್ರಣವಿದ್ದರೂ ಅವು ಆ ಪದಕ್ಕೆ ಒದಗಿಸಬಹುದಾದ ಪ್ರಾಸಕ್ಕಾಗಿ, ಮತ್ತು ಆ ಪದದ ಅಂದವನ್ನು ಹೆಚ್ಚಿಸಲು.


ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!

ಎಲ್ಲಾ ಕೊಚ್ಕೊಂಡ್ ಓಗ್ಲಿ!

ಪರ್ಪಂಚ್ ಇರೋ ತನಕ ಮುಂದೆ

ಕನ್ನದ್ ಪದಗೊಳ್ ನುಗ್ಲಿ!


ಹೀಗೆ ಅಪಾರ ಖ್ಯಾತಿಯನ್ನು ಗಳಿಸಿದ ರತ್ನನ ಪದಗಳನ್ನು ಹಲವು ಜನರ ಅದರ ಭಾಷಾ ಶೈಲಿಗೆ ಟೀಕಿಸಿದ್ದುಂಟಂತೆ. ಆ ಪದ್ಯಗಳಿದ್ದ ವಸ್ತುವನ್ನು ಒಪ್ಪಿಕೊಂಡ ಎಷ್ಟೋ ಮಹಾನುಭಾವರುಗಳು, ಭಾಷೆಯ ಬಗ್ಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರಂತೆ. ಕನ್ನಡ ಭಾಷೆಯನ್ನು ಹಾಳು ಮಾಡುತ್ತಿರುವ ಈ ಪದಗಳನ್ನು ಸಾಂಪ್ರದಾಯಿಕ ಭಾಷೆಯಲ್ಲಿ ಬರೆಯಬಾರದೇ ಎಂದದ್ದೂ ಉಂಟಂತೆ. ಇದಕ್ಕೆ ಉತ್ತರಿಸಲು ರಾಜರತ್ನಂರವರೇ ಸ್ವತಃ ತಮ್ಮ ಒಂದೆರಡು ರತ್ನನ ಪದಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬರೆದು ಪ್ರಕಟಿಸಿದ್ದರಂತೆ. ಅದನ್ನು ಒದಿದ ಮೇಲೆ ಗ್ರಾಮೀಣ ಶೈಲಿಯ ಪದ್ಯಗಳೇ ಉತ್ತಮವಾಗಿವೆ ಎಂದರಂತೆ.


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ