ಬುಧವಾರ, ಡಿಸೆಂಬರ್ 30, 2009

ಇನ್ನು ಕನ್ನಡ ಕಾವ್ಯಗಳನ್ನು ಜನ ಸಾಮಾನ್ಯರಿಗೆ ಹತ್ತಿರ ತರುವವರು ಯಾರು?

ಕನ್ನಡ ಕಾವ್ಯವನ್ನು ಸುಗಮ ಸಂಗೀತ, ಭಾವಗೀತೆ ಎಂಬಿತ್ಯಾದಿ ಹೆಸರುಗಳಿಂದ ಹಾಡಿ ಸಾಮಾನ್ಯರ ಸಮೀಪಕ್ಕೆ ತಂದು ತನು ಮನಗಳನ್ನು ತುಂಬಿದ್ದ ಸಿ ಅಶ್ವಥ್ ಇಂದು ದೂರವಾಗಿದ್ದಾರೆ. ಬರೀ ಸುಗಮ ಸಂಗೀತ ಲೋಕಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ, ಕಾವ್ಯ, ಸಂಗೀತ ಒಟ್ಟಿನಲ್ಲಿ ಕರ್ನಾಟಕಕ್ಕೇ ಇದು ತುಂಬಲಾರದ ನಷ್ಟ ಹೌದು.

[caption id="attachment_702" align="aligncenter" width="544" caption="ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್"]ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್[/caption]


ಶಿಶುನಾಳ ಶರೀಫರ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿ ಕನ್ನಡಿಗರ ಮನಸೂರೆಗೊಂಡಿದ್ದ ಸಂಗೀತಗಾರ ಕಣ್ಮರೆಯಾದ ಮೇಲೆ, ಶರೀಫರ ಉಳಿದ ಹಾಡುಗಳಿಗೆ ಸ್ವರ ಹಾಕುವವರು ಯಾರು? ಜೆ ಎಸ್ ಶಿವರುದ್ರಪ್ಪನವರ ರವರ "ಎಲ್ಲೋ ಹುಡುಕಿದೆ ಇಲ್ಲದ ದೇವರ", ಯಾವುದೀ ಪ್ರವಾಹವೂ, ಆಕಾಶದ ನೀಲಿಯಲ್ಲಿ, ಬೇಂದ್ರೆಯವರ ’ಶ್ರಾವಣ, ಕುರುಡು ಕಾಂಚಾಣ, ನೀ ಹಿಂಗ ನೋಡಬ್ಯಾಡ ನನ್ನ, ಕೆ ಎಸ್ ನರಸಿಂಹಸ್ವಾಮಿಯವರ "ಮೊದಲ ದಿನ ಮೌನ", ಅಡಿಗರ "ಮೌನ ತಬ್ಬಿತು ನೆಲವ ಜುಮ್ಮನೆ" ಕುವೆಂಪುರವರ ಬಾ ಇಲ್ಲಿ ಸಂಭವಿಸು, ನೂರು ದೇವರನೆಲ್ಲಾ ನೂಕಾಚೆ ದೂರ, ಚನ್ನವೀರ ಕಣವಿಯವರ ಬಾ ಮಲ್ಲಿಗೆ, ಮುಂಜಾವಿನಲಿ ತುಂತುರಿನ ಸೋನೆ ಮಳೆ, ಬಿ ಆರ್ ಲಕ್ಷ್ಮಣ್ ರಾವ್ ರವರ ಜಾಲಿ ಬಾರಿನಲ್ಲಿ, ಸುಬ್ಬಭಟ್ಟರ ಮಗಳೆ ಹಾಡುಗಳನ್ನೆಲ್ಲಾ ಇನ್ಮುಂದೆ ಧ್ವನಿ ಸುರಳಿಯಲ್ಲಿ ಮಾತ್ರ ಕೇಳಬೇಕೆ? ಅಶ್ವಥ್ಥರ ಕಂಚಿನ ಕಂಠದಿಂದ ನೇರವಾಗಿ ಕೇಳುವ ಅವಕಾಶ ಮುಗಿದು ಹೋಯಿತೇ?


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ