ಬುಧವಾರ, ಮಾರ್ಚ್ 24, 2010

ವಸಂತ ಬಂದ ಋತುಗಳ ರಾಜ

ಬೇಸಿಗೆ ಬಂತೆಂದರೆ ಯುಗಾದಿ ಹಬ್ಬದ ಸಡಗರ, ಮಕ್ಕಳಿಗೆ, ಹೆತ್ತವರಿಗೆ ಪರೇಕ್ಷೇಯ ಒತ್ತಡ, ಪರೀಕ್ಷೆಯ ನಂತರ ರಜಾದಿನಗಳ ಸುಗ್ಗಿ, ಹವಾನಿಯಂತ್ರಣ ಇಲ್ಲದ ಕಡೆ ಕೆಲಸ ಮಾಡುವವರಿಗೆ ಬೇಸಿಗೆಯ ಸೆಖೆ, ಧಗೆ, ಮರಗಳಿಗೆ ಹಳೆ ಎಲೆಗಳನ್ನುದುರಿಸಿ ಚಿಗುರೊಡೆಯುವ ಹೊಸತನ ಹೀಗೆ ಈ ವಸಂತ ಋತು ಒಂದು ರೀತಿಯ ಯಾತನೆ - ಉಲ್ಲಾಸ ಒಟ್ಟೊಟ್ಟಿಗೆ. ಪರಿಸರ ಪ್ರೇಮಿಗಳು ಕವಿಗಳಿಗಂತೂ ಈ ಋತು ಒಂದು ಅದ್ಭುತವೇ ಸರಿ. ಈ ವಸಂತ ಋತುವನ್ನು ಕೆಲವು ಛಾಯಾಚಿತ್ರಗಳೊಂದಿಗೆ, ಕೆಲವು ಖ್ಯಾತ ಕವಿಗಳ ಕವಿತೆಗಳ ತುಣುಕುಗಳನ್ನು ಆಹ್ವಾದಿಸುವುದರೊಂದಿಗೆ ಅನುಭವಿಸೋಣ.


nerale-bannada-hoovu


ವಸಂತ ಎಂದೊಡನೆ ಮೊದಲು ನೆನಪಿಗೆ ಬರುವುದು ಕನ್ನಡದ ಆಚಾರ್ಯ "ಬಿ ಎಂ ಶ್ರೀ" ಯವರ ಅನುವಾದಿತ ಕವಿತೆ


homge-eleya-chiguru


ಮುಂದೆ ಓದಿ

ಗುರುವಾರ, ಮಾರ್ಚ್ 04, 2010

ಇಟ್ಟಿಗೆ ಹೊರುವ ಕತ್ತೆಗಳೂ ಮತ್ತು ನಮ್ಮ ವೃತ್ತಿ ಬದ್ಧತೆಯೂ..

ವಿವೇಕ್ ಸಮರಸದಲ್ಲಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಹ ಪ್ರಶ್ನೆ ಎತ್ತಿದ್ದಾರೆ.. ಓದಿ ಪ್ರತಿಕ್ರಿಯಿಸಿ...
[caption id="attachment_797" align="alignnone" width="522" caption="ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ ಕತ್ತೆಗಳು"]ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ  ಕತ್ತೆಗಳು[/caption]
ಅಧಿಕಾರ ಮತ್ತು ಅಂತಸ್ತಿನ ಬೆನ್ನು ಹತ್ತಿ ಕರ್ತವ್ಯ ಮರೆತಿರುವ ಜನಪ್ರತಿಗಳು, ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳು, ಕಛೇರಿ ಮುಂದೆ ಒದಿವೇಳೆ ಮಲಗಿರುವ, ರೇಸ ಕೋರ್ಸಗೆ, ಬಾರಿಗೆ, ಮತ್ತು ಮ್ಯಾಚ್ ನೋಡಲು ಹೋಗಿರುವ ಸಿಬ್ಬಂದಿಗಳು, ಶಾಲೆಗೆ ಗೈರು ಹಾಜರಾದ ಶಿಕ್ಷಕರು, ವಾರಗಟ್ಟಲೆ ಅಂಗನವಾಡಿಗೆ ಬರದ ಶಿಕ್ಷಕಿ ಈ ಎಲ್ಲ ವಿಷಯಗಳು ಸುದ್ದಿಯ ರೂಪದಲ್ಲಿ ವಿವಿಧ ಮಾದ್ಯಮದಲ್ಲಿ ಬರುವುದನ್ನು ಎಲ್ಲರೂ ನೋಡಿರುವೆವು. ಇಂದಿನ ಜನಪ್ರತಿನಿಧಿಗಳು, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹೆಚ್ಚಿನ ಖಾಸಗಿ ಸಂಸ್ಥೆಗಳಲ್ಲಿ ಅಂದರೆ ಮನುಷ್ಯ ಕಾರ್ಯನಿರ್ವಹಿಸುವ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ವ್ಥತ್ತಿಯ ಬಗ್ಗೆ ಪ್ರಾಮಾಣಿಕತೆಯಿಂದ ಬದ್ದತೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತಿಚೀನ ದಿನದಲ್ಲಿ ಬಂದಿರುವುದು. ಉತ್ತಮ ಕಾರ್ಯನಿರ್ವಹಣೆಗಾಗಿ ಸಿಗಬೇಕಾದ ಪ್ರಶಸ್ತಿಗಳು, ಸನ್ಮಾನಗಳು ಇತ್ತೀಚೀನ ದಿನದಲ್ಲಿ ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಸಿಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ರೀತಿಯಾಗಿ ಮಾನವನ ಕಾರ್ಯನಿರ್ವಹಣೆಯ ಎಲ್ಲಾ ಕೇತ್ರದಲ್ಲಿಯೂ ವೃತ್ತಿ ಬದ್ದತೆಯ ಕೊರತೆಯೂ ಕಂಡು ಬರುವುದು. ಈ ಸಂದರ್ಭದಲ್ಲಿ ನಾವು ನಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಮುಂದೆ ಒದಿ

ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ?

ವಿವೇಕ್ ಸಮರಸದಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.. ತಿಳಿ ಹಾಸ್ಯದಿಂದ ಕೂಡಿರುವ ಈ ಲೇಖನವನ್ನು ಓದಿ..

ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಯಾರಿಗೂ ಕೆಲಸವೂ ಇಲ್ಲ ಪುರಸತ್ತು ಇಲ್ಲದಂತ ಪರಿಸ್ಥಿತಿ. ಎಪ್ರಿಲ್ ಮೇ ತಿಂಗಳು ಬಂತು ಬಂದರೆ ಮುಗಿಯಿತು ಶಾಲಾ ಕಾಲೇಜಿಗೆ ರಜೆ, ಜೋರಾಗಿ ಮದುವೆ, ಮುಂಜಿ, ಗೃಹಪ್ರವೇಶದ ಭರಾಟೆ ಪ್ರತಿಯೊಂದು ಮನೆಯಲ್ಲಿಯೂ ಹತ್ತಾರು ಆಮಂತ್ರಣ ಪತ್ರಿಕೆಗಳು. ಒಂದು ಕಡೆ ಬಿಸಿಲಿನ ಝಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ. ಕಾರಣ ಆಮಂತ್ರಣ ಕೊಟ್ಟವರು ಬೇಸರ ಮಾಡಿಕೊಳ್ಳುವರು, ಅವರು ನಮ್ಮ ಮನೆಯಲ್ಲಿ ಕಾರ್ಯವಾದಾಗ ಬರುವುದಿಲ್ಲ ಎಂಬ ಭಯ ಇರುವುದು. ಮುಖ್ಯವಾಗಿ ಅಲ್ಲಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಹುದುಗಿರುವ ಆಶೆ.
ಈ ಸಭೆ ಸಮಾರಂಭವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಯಾಕಾಗಿ ಈ ರೀತಿ ವರ್ತಿಸುತ್ತಿರುವರು ಎಂದು ಅನಿಸುವುದು. ಆದರೂ ಅದು ಹಿಂದಿನಿಂದ ನಡೆದುಕೊಂಡ ಬಂದ ರೀತಿಯಾಗಿದೆ. ವಿವಿಧ ರೀತಿಯ ಜನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಸ್ವತಂತ್ರರು : ಚಿಕ್ಕಮಕ್ಕಳಿವರು ಇವರಿಗೆ ಪಾಪ ಯಾರ ಮದುವೆ ಅಥವಾ ಮುಂಜಿ ಎಂಬುದು ತಿಳಿದಿಲ್ಲ. ಒಟ್ಟಾರೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೋಗಿರುವರು. ಸಮಾರಂಭದಲ್ಲಿ ನೀಡುವ ಶರಬತ್ತು ಕುಡಿದು, ಅದರ ಪೈಪನ್ನು ಕೂಡಿಸುವುದು ಯಾರು ಹೆಚ್ಚು ಸೇರಿಸಿರುವರು ಎಂದು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುವುದು ಇವರ ಕಾರ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ತಮ್ಮ ಬಾಲ್ಯವೇ ಮರೆತು ಹೋಗುತ್ತಿರುವಾಗ ಚಿಕ್ಕ ಮಕ್ಕಳಿಗೆ ಸ್ವತಂತ್ರ್ಯ ಸಿಗುವುದೇ ಈ ರೀತಿಯ ಸಮಾರಂಭಗಳಿಗೆ ಹೋದಾಗ. ಆ ಮಕ್ಕಳಿಗೆ ಈ ಬೇಸಿಗೆ ಧಗೆಯಲ್ಲಿ ಬಟ್ಟೆಯೇ ಬೇಕು ಏನಿಸುವುದಿಲ್ಲ ಆದರೇನು ಮಾಡುವುದು ಅಮ್ಮನ ಒತ್ತಾಯದಿಂದ ಧರಿಸಲೇಬೇಕಾದ ಅನಿವಾರ್ಯತೆ ಇರುವುದು.
ಸೂಚಕಗಳು :
* ಕುಡಿದು ಒಗೆದಿರುವ ಶರಬತ್ತು ಪೈಪ್ ಅಥವಾ ಬಟ್ಟೆಯ ಪ್ಲಾಸ್ಟಿಕ್ ಕವರ್‌ನ್ನು ಆರಿಸುತ್ತಾ ಇರುವರು.
* ಇನ್ನೊಂದು ಶರಬತ್ತು ಬೇಕು, ಬೊಂದಿ ಪ್ಯಾಕೇಟ್ ಬೇಕು ಎಂದು ಅಳುತ್ತಾ ಇರುವರು.
* ಮಹೂರ್ತದ ಕಲ್ಪನೆ ಇರುವುದಿಲ್ಲ.
* ತಮ್ಮದೇ ಗುಂಪಿನೊಂದಿಗೆ ಆಟವಾಡುತ್ತಾ ಇರುವರು. ವಾದ್ಯ ಬಾರಿಸಿದಾಗ ಒಬ್ಬರೇ ಇದ್ದರೇ ಡ್ಯಾನ್ಸ ಮಾಡುತ್ತಾ ಇರುವರು. ಮುಂದೆ ಒದಿ