ಗುರುವಾರ, ಮಾರ್ಚ್ 04, 2010

ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ?

ವಿವೇಕ್ ಸಮರಸದಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.. ತಿಳಿ ಹಾಸ್ಯದಿಂದ ಕೂಡಿರುವ ಈ ಲೇಖನವನ್ನು ಓದಿ..

ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಯಾರಿಗೂ ಕೆಲಸವೂ ಇಲ್ಲ ಪುರಸತ್ತು ಇಲ್ಲದಂತ ಪರಿಸ್ಥಿತಿ. ಎಪ್ರಿಲ್ ಮೇ ತಿಂಗಳು ಬಂತು ಬಂದರೆ ಮುಗಿಯಿತು ಶಾಲಾ ಕಾಲೇಜಿಗೆ ರಜೆ, ಜೋರಾಗಿ ಮದುವೆ, ಮುಂಜಿ, ಗೃಹಪ್ರವೇಶದ ಭರಾಟೆ ಪ್ರತಿಯೊಂದು ಮನೆಯಲ್ಲಿಯೂ ಹತ್ತಾರು ಆಮಂತ್ರಣ ಪತ್ರಿಕೆಗಳು. ಒಂದು ಕಡೆ ಬಿಸಿಲಿನ ಝಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ. ಕಾರಣ ಆಮಂತ್ರಣ ಕೊಟ್ಟವರು ಬೇಸರ ಮಾಡಿಕೊಳ್ಳುವರು, ಅವರು ನಮ್ಮ ಮನೆಯಲ್ಲಿ ಕಾರ್ಯವಾದಾಗ ಬರುವುದಿಲ್ಲ ಎಂಬ ಭಯ ಇರುವುದು. ಮುಖ್ಯವಾಗಿ ಅಲ್ಲಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಹುದುಗಿರುವ ಆಶೆ.
ಈ ಸಭೆ ಸಮಾರಂಭವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಯಾಕಾಗಿ ಈ ರೀತಿ ವರ್ತಿಸುತ್ತಿರುವರು ಎಂದು ಅನಿಸುವುದು. ಆದರೂ ಅದು ಹಿಂದಿನಿಂದ ನಡೆದುಕೊಂಡ ಬಂದ ರೀತಿಯಾಗಿದೆ. ವಿವಿಧ ರೀತಿಯ ಜನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಸ್ವತಂತ್ರರು : ಚಿಕ್ಕಮಕ್ಕಳಿವರು ಇವರಿಗೆ ಪಾಪ ಯಾರ ಮದುವೆ ಅಥವಾ ಮುಂಜಿ ಎಂಬುದು ತಿಳಿದಿಲ್ಲ. ಒಟ್ಟಾರೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೋಗಿರುವರು. ಸಮಾರಂಭದಲ್ಲಿ ನೀಡುವ ಶರಬತ್ತು ಕುಡಿದು, ಅದರ ಪೈಪನ್ನು ಕೂಡಿಸುವುದು ಯಾರು ಹೆಚ್ಚು ಸೇರಿಸಿರುವರು ಎಂದು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುವುದು ಇವರ ಕಾರ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ತಮ್ಮ ಬಾಲ್ಯವೇ ಮರೆತು ಹೋಗುತ್ತಿರುವಾಗ ಚಿಕ್ಕ ಮಕ್ಕಳಿಗೆ ಸ್ವತಂತ್ರ್ಯ ಸಿಗುವುದೇ ಈ ರೀತಿಯ ಸಮಾರಂಭಗಳಿಗೆ ಹೋದಾಗ. ಆ ಮಕ್ಕಳಿಗೆ ಈ ಬೇಸಿಗೆ ಧಗೆಯಲ್ಲಿ ಬಟ್ಟೆಯೇ ಬೇಕು ಏನಿಸುವುದಿಲ್ಲ ಆದರೇನು ಮಾಡುವುದು ಅಮ್ಮನ ಒತ್ತಾಯದಿಂದ ಧರಿಸಲೇಬೇಕಾದ ಅನಿವಾರ್ಯತೆ ಇರುವುದು.
ಸೂಚಕಗಳು :
* ಕುಡಿದು ಒಗೆದಿರುವ ಶರಬತ್ತು ಪೈಪ್ ಅಥವಾ ಬಟ್ಟೆಯ ಪ್ಲಾಸ್ಟಿಕ್ ಕವರ್‌ನ್ನು ಆರಿಸುತ್ತಾ ಇರುವರು.
* ಇನ್ನೊಂದು ಶರಬತ್ತು ಬೇಕು, ಬೊಂದಿ ಪ್ಯಾಕೇಟ್ ಬೇಕು ಎಂದು ಅಳುತ್ತಾ ಇರುವರು.
* ಮಹೂರ್ತದ ಕಲ್ಪನೆ ಇರುವುದಿಲ್ಲ.
* ತಮ್ಮದೇ ಗುಂಪಿನೊಂದಿಗೆ ಆಟವಾಡುತ್ತಾ ಇರುವರು. ವಾದ್ಯ ಬಾರಿಸಿದಾಗ ಒಬ್ಬರೇ ಇದ್ದರೇ ಡ್ಯಾನ್ಸ ಮಾಡುತ್ತಾ ಇರುವರು. ಮುಂದೆ ಒದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ