ಬುಧವಾರ, ಡಿಸೆಂಬರ್ 03, 2008

ನುಡಿ ಶ್ರದ್ಧಾಂಜಲಿ, ಟೀಕೆ-ಟಿಪ್ಪಣಿ,

ಇಲ್ಲಿಯವರೆಗೆ ೧೮೩ ಜನರ ಸಾವು, ೩೦೦ ಕ್ಕೂ ಹೆಚ್ಚು ಗಾಯ. ಇದರಲ್ಲಿ ಇಬ್ಬರು ರಾಷ್ಟ್ರೀಯ ಭದ್ರತಾ ಪಡೆಯ ಕಮ್ಯಾಂಡೋಗಳು ಸಂದೀಪ್ ಉನ್ನಿಕೃಶ್ಣನ್ ಮತ್ತು ಗಜೇಂದ್ರ ಸಿಂಗ್, ಮುಂಬೈ ನ ಉಗ್ರಗಾಮಿ ನಿಗ್ರಹ ಪಡೆ ಅಧ್ಯಕ್ಷ ಹೇಮಂತ್ ಕರ್ಕರೆ, ಎನ್ ಕೌಂಟರ್ ತಙ ವಿಜಯ್ ಸಾಲಸ್ಕರ್ ಮತ್ತು ಹೆಚ್ಚುವರಿ ಪೋಲೀಸ್ ನಿರ್ದೇಶಕ ಅಶೋಕ್ ಕಾಮ್ಟೆ ಮತ್ತು ಇನ್ನೂ ಹಲವು ಪೋಲೀಸ್ ಅಧಿಕಾರಿಗಳು ಉಗ್ರರೊಡನೆ ಹೋರಾಡಿ ಮಡಿದಿದ್ದಾರೆ.

ಸಾಮಾನ್ಯನಿಂದ ಹಿಡಿದು, ಮುಸ್ಲಿಮ್ ಸಮುದಾಯ, ಅಂತರಾಷ್ಟ್ರೀಯ ಸಮುದಾಯ ಕೂಡ ಖಂಡಿಸುತ್ತಿರುವ ಮುಂಬೈ ನಲ್ಲಿ ನಡೆದ ಈ ಬರ್ಬರ ಉಗ್ರರ ದಾಳಿ ಎಲ್ಲರಲ್ಲೂ ಒಂದು ಕ್ಷಣ ನಡುಕ ಹುಟ್ಟಿಸಿರದೆ ಇರಲಾರದು!

ಇಂತಹ ದಾಳಿಯಲ್ಲಿ ಹೋರಾಡಿ ಮಡಿದ, ಗಾಯಗೊಂಡ ಸೈನಿಕರೂ, ಆರಕ್ಷಕರೂ ಮತ್ತು ಸಾಮಾನ್ಯರಿಗೆ ಅರ್ಪಣೆ!

ನಾನು ಇವರಿಗೆ ನುಡಿ ಶ್ರದ್ಧಾಂಜಲಿ ಅರ್ಪಿಸುವುದಕ್ಕಿಂತ ಬೇರೇನು ಮಾಡಲು ಸಾಧ್ಯ?

ಆದರೆ ಈ ವಿಪತ್ತಿನಿಂದ ತಿಳಿದುಕೊಳ್ಳುವುದು, ಕಲಿತುಕೊಳ್ಳುವುದು ಬೇಕಾದಷ್ಟಿದೆ.
೧) ಸಾಮಾನ್ಯ ಜನರಾಗಿ ನಾವು ಸ್ವಲ್ಪ ಎಚ್ಚರಿಕೆಯಿಂದಿರೋಣ. ವಿಪತ್ತುಗಳನ್ನು ಹೆದರಿಸಲು ಮಾನಸಿಕ ಸ್ಥೈರ್ಯ ಮತ್ತು ದೈಹಿಕ ಸಾಮರ್ಥ್ಯ ಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಉಗ್ರಗಾಮಿಗಳ ಜೊತೆ ಹೋರಾಡಲು ಸಾಧ್ಯವಿಲ್ಲದೇ ಇದ್ದರು, ಕನಿಷ್ಟ ಅವಕಾಶ ಸಿಕ್ಕರೆ ತಪ್ಪಿಸಿಕೊಂಡು ಬರುವ ಹಾಗಾದರೂ ಆಗಬೇಕು. ಸಂದರ್ಭ ತಿಳಿಯಾದಾಗ ನಾಲ್ಕು ಜನರನ್ನು (ಮಕ್ಕಳು, ಮುದುಕರು) ರಕ್ಷಿಸುವಂತಾಗಬೇಕು.

೨) ಪೋಲೀಸರು ಇನ್ನೂ ಜಾಗರೂಕರಾಗಿರಬೇಕು. ಉಗ್ರಗಾಮಿಗಳ ಜೊತೆ ಹೋರಾಡಬೇಕು, ಅದಕ್ಕೂ ಮುಂಚೆ ತಮ್ಮನ್ನು ರಕ್ಷಿಸಿಕೊಳ್ಳುವಂತಹ ಸಾಧನಗಳಿದ್ದರೆ, ಅವುಗಳನ್ನು ಬಳಸಿ ಹೋರಾಡುವುದು ಸೂಕ್ತ. ಉಗ್ರಗಾಮಿಗಳನ್ನು underestimate(ಸೂಕ್ತ ಕನ್ನಡ ಪದವನ್ನು ಸೂಚಿಸಿ) ಮಾಡುವುದು ಬೇಡ.ಸರ್ಕಾರ ಪೋಲೀಸರಿಗೆ ಅತ್ಯಾಧುನಿಕ, ಸುಸಜ್ಜಿತವಾದ, ಉತ್ತಮ ತಂತ್ರಙ್ಣಾನವುಳ್ಳ ಸಲಕರಣೆಗಳನ್ನು ನೀಡಬೇಕಾದ ಅವಶ್ಯಕತೆ ಇದೆ.

೩) ಸರ್ಕಾರ,ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕು. ಮತ, ಜಾತಿ, ಚುನಾವಣೆಗಳಾಚೆ ಯೋಚನೆ ಮಾಡುವದನ್ನು ಕಲಿಯಬೇಕಾಗಿದೆ. ಇಂತಹ ಕೃತ್ಯಗಳು ದಿನಾಲು ನಡೆಯುತ್ತವೆ (ಮಹಾರಾಷ್ಟ್ರ ಗೃಹ ಸಚಿವರ ಹೇಳಿಕೆ), ಚಿತ್ರರಂಗದವರ ಜೊತೆ ಈ ಘೋರ ಕೃತ್ಯ ನಡೆದೆಡೆಗೆ ಪ್ರವಾಸ ಹೋಗಿ ಬಂದು ಏನೂ ಆಗಿಲ್ಲವೆಂಬಂತೆ ಮಾಧ್ಯಮಗಳನ್ನು ದೂರುವುದು (ಮಹಾರಾಷ್ಟ್ರ ಮುಖ್ಯಮತ್ರಿಗಳು ತಮ್ಮ ಮಗನ, ನಟ ಕೂಡ ಮತ್ತು ಖ್ಯಾತ ಬಾಲಿವುಡ್ ನಿರ್ದೇಶಕರೊಂದಿಗೆ ತಾಜ್ ಹೋಟೆಲ್ ಗೆ ಹೋದದ್ದು), ಬೇಜವಬ್ದಾರಿ ಹೇಳಿಕೆಗಳನ್ನು ನೀಡುವುದು (ನಮಗೆ ಗುಪ್ತಚರ ವರದಿ ಇತ್ತು, ಆದರೆ ಎಲ್ಲಿ ಮತ್ತು ಯಾವಾಗ ಬಾಂಬ್ ಸಿಡಿಯುತ್ತದೆ ಎಂಬ ನಿಖರ ಮಾಹಿತಿ ಇರಲಿಲ್ಲ - ೩ ದಿನಗಳ ಹಿಂದೆ ಮಾಜಿಯಾದ ಕೇಂದ್ರ ಗೃಹ ಮಂತ್ರಿ ಶಿವರಾಜ್ ಪಾಟೀಲ್ ಇತ್ತೀಚೆಗೆ ದೆಹಲಿ ಸ್ಫೋಟದ ನಂತರ ಹೇಳಿದ್ದು), ಇಂತಹುವುಗಳನ್ನು ಬಿಟ್ಟು ಗಂಭೀರತೆಯಿಂದ ಜವಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕಾಗಿದೆ.ಸಾವಿನ ನೋವನ್ನು ರಾಜಕಾರಣಿಗಳು ಅರಿತಂತೆ ಕಾಣುತ್ತಿಲ್ಲ! (ಸಾವಿನ ನೋವನ್ನು ಅರಿಯಲು ತಮ್ಮ ಆಪ್ತ ಬಳಗದವರೇ ಸಾಯಬೇಕಾಗಿಲ್ಲಾ!!)

೪)ಭಯೋತ್ಪಾದದನೆ ನಿಗ್ರಹಕ್ಕೆ ಇನ್ನೂ ಕಠಿಣ ಕ್ರಮಗಳ, ಕಾನೂನುಗಳ ಅವಶ್ಯಕತೆಯಿದೆ. ಉಗ್ರಗಾಮಿಗಳಿಗೆ ದಾಕ್ಷಿಣ್ಯ ತೋರದೆ ಇರುವ ಕಠಿಣ ರಾಜಕೀಯ ಇಛ್ಛಾಶಕ್ತಿಯನ್ನು ರೂಢಿಸಿಕೊಳ್ಳುವ,ಪ್ರದರ್ಶಿಸುವ ಅವಶ್ಯಕತೆಯಿದೆ. ಅಫ್ಜಲ್ ಗುರುವಿಗೆ ಗಲ್ಲಿಗೆ ಏರಿಸಿ, ಉಗ್ರಗಾಮಿಗಳನ್ನು ಬೆಂಬಲಿಸುವವರಿಗೆ ಕಠಿಣ ಮಾಹಿತಿಯನ್ನು ರವಾನಿಸುವ ಅವಶ್ಯಕತೆಯಿದೆ. ಈಗ ಹಿಡಿದಿರುವ ಉಗ್ರನಿಗೆ ಚಿತ್ರ ಹಿಂಸೆ ಕೊಟ್ಟು ಕೊಲ್ಲಬೇಕಾಗಿದೆ. ಜೀವದ ಬೆಲೆ ಗೊತ್ತಿಲ್ಲದವರಿಗೆ ಇಂತಹ ಶಿಕ್ಷೆಯೇ ಸರಿಯಾದದ್ದು.ಮಾನವ ಹಕ್ಕುಗಳ ವಾರಸ್ದಾರರು ಸ್ವಲ್ಪ ಮೌನವಾಗಿರಬೇಕಾದ ಪರಿಸ್ಥಿತಿ ಒದಗಿದೆ.

೫)ಮಾಧ್ಯಮಗಳು ಜವಬ್ದಾರಿಯುತ ಕಾರ್ಯ ನಿರ್ವಹಿಸಬೇಕಾಗಿದೆ. ಕೇರಳದ ಮುಖ್ಯಮಂತ್ರಿ ಯನ್ನು ಉನ್ನಿಕೃಷ್ಣನ್ ರವರು ಬೈದು ಕಳಿಸಿದರು, ನರೇಂದ್ರ ಮೋದಿಯವರ ಪರಿಹಾರವನ್ನು ಕರ್ಕರೆ ಯವರ ಪತ್ನಿಯವರು ನಿರಾಕರಿಸಿದರು. ತಮ್ಮ ಆಪ್ತರನ್ನು ಕಳೆದುಕೊಂಡ ಸಂದರ್ಭದಲ್ಲಿ ಸ್ವಲ್ಪ ಕಟುವಾಗಬಹುದು.ರಾಜಕಾರಣಿಗಳ ಕಾಳಜಿ ಅಸಲಿಯೂ ಅಥವಾ ನಕಲಿಯೂ ಆಗಿರಬಹುದು. ಈ ರಾಜಕಾರಣಿಗಳು ಕಾಳಜಿ ತೋರದಿದ್ದಲ್ಲಿ ಕೂಡ ಮಾಧ್ಯಮಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಿದ್ದು ನಿಜ.ಕಾಳಜಿ ತೋರಿಸಿದರೂ ನಕಲಿ ಎಂಬ ಬೈಗುಳ. ಇಂತಹ ಸೂಕ್ಶ್ಮ ಸನ್ನಿವೇಶಗಳಲ್ಲಿ ಈ ತರಹದ ಸುದ್ದಿಗಳನ್ನು ವೈಭವೀಕರಿಸುವ ಅವಶ್ಯಕತೆಯಿಲ್ಲೆಂದೆನಿಸುತ್ತದೆ.ಜನರಿಗೆ ಉಪಯುಕ್ತವಾದುದನ್ನು ತೋರಿಸಲು, ಬರೆಯಲು ಬಹಳಷ್ಟಿದೆ. ಇಂತಹ ದುಶ್ಕೃತ್ಯಗಳು ನಡೆಯದಂತೆ ಸರ್ಕಾರ, ಅಧಿಕಾರಿಗಳು, ಸಾಮಾನ್ಯರು ಏನು ಮಾಡಬೇಕು, ಬೇರೆ ರಾಷ್ಟ್ರಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಮುಂತಾದುವುಗಳನ್ನು ಕಲೆ ಹಾಕಿ ತೋರಿಸಲಿ, ಬರೆಯಲಿ. ವಿಪತ್ತು ನಿರ್ವಹಣೆ ಬಗ್ಗೆ ಸಾಕ್ಶ್ಯಚಿತ್ರ ಮಾಡಿ ಪದೇ ಪದೇ ಬಿತ್ತರಿಸಲಿ!

ತಪ್ಪಾಗಿದೆ. ನೌಕಾಪಡೆಯ ಮುಖ್ಯಸ್ಥರು ಕೂಡ ಗುಪ್ತಚರ ಮಾಹಿತಿ ಇದ್ಯಾಗ್ಯೂ ಕೂಡ ಇದನ್ನು ತಡೆಯಲಾಗದೆ ವಿಫಲವಾದದ್ದನ್ನು ಒಪ್ಪಿಕೊಂಡಿದ್ದಾರೆ. ತಾಜ್ ಒಡೆಯ ರತನ್ ಟಾಟ ಕೂಡ ಇಂತಹುದೆ ಮಾತುಗಳನ್ನಾಡಿದ್ದಾರೆ! ಒತ್ತಡದಿಂದಾದರೂ ಕ್ರಮವಾಗಿ ಕೇಂದ್ರ ಮತ್ತು ಮಹಾರಾಷ್ಟ್ರ ಗೃಹಮಂತ್ರಿಗಳಾದ ಶಿವರಾಜ್ ಪಾಟೀಲ್ ಮತ್ತು ಆರ್ ಆರ್ ಪಾಟೀಲರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ! ಚಿದಂಬರಂ ರವರು ಆರ್ಥಿಕ ಬಿಕ್ಕಟ್ಟಿನ ಲೋಕದಿಂದ, ಭದ್ರತಾ ಬಿಕ್ಕಟ್ಟಿನ ಲೋಕಕ್ಕೆ ಪಾದಾರ್ಪಣೆ ಮಾಡೀದ್ದಾರೆ. ಇನ್ನಾದರೂ ಉಗ್ರಗಾಮಿಗಳ. ಉಗ್ರಗಾಮಿಗಳನ್ನು ಬೆಂಬಲಿಸುವವರ ಮೇಲೆ (ಬೆಂಬಲಿಸುವ ಸಾಮಾನ್ಯ ಮನುಷ್ಯನೆ ಆಗಿರಲಿ, ಕಿರಾತಕ ದೇಶವೇ ಆಗಿರಲಿ)ಕಠಿಣ ಕ್ರಮ ಕೈಗೊಂಡು ದೇಶವನ್ನು ರಕ್ಷಿಸಲಿ ಎಂದಿ ಹಾರೈಸೋಣ.ಇನ್ನಾದರೂ ತಪ್ಪನ್ನು ತಿದ್ದಿಕೊಳ್ಳೋಣ.

ಜೈ ಹಿಂದ್!

ಭಯೋತ್ಪಾದನೆ ತಡೆಗಟ್ಟಲು ಸಾಮಾನ್ಯರಾದ ನಾವು ಇನ್ನೇನು ಮಾಡಬಹುದು? ಭಯೋತ್ಪಾದನೆ ಬಗ್ಗೆ ನೀವೆನ್ನೆನ್ನುತ್ತೀರಿ, ಕೆಳಗೆ ಪ್ರತಿಕ್ರಿಯಿಸಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ