ಬುಧವಾರ, ಫೆಬ್ರವರಿ 04, 2009

ಬೀರು ಹೇಳಿದ ಪಬ್ಬಿನ ಕಥೆ!

ಇದ್ದ ಐವರಲ್ಲಿ ಉತ್ತಮನು ಯಾರು?
ನಾನೇ ಎಂದಿತು ಪಬ್ಬಿನ ಬೀರು!
ಪಬ್ಬಿನ ಹೈಕಳಿಗೆ ಮ(ಮು)ತ್ತನು ಕೊಟ್ಟೆ!
ಧೀರ-ಶೂರ ಸೇನೆಯನ್ನು ಜೈಲಿಗೆ ಅಟ್ಟೆ!
ಮಾಧ್ಯಮಕ್ಕೆ ಬಿಸಿ ಬಿಸಿ ಸುದ್ದಿಯ ಹಾರಿಸಿ ಬಿಟ್ಟೆ!
ರೇಣುಕಾ ಅಮ್ಮನಿಗೆ ಯಾಕೊ ಕಾಣೆ, ಬರೀ ಸಿಟ್ಟೆ!

ಬೀರು ಉವಾಚ,
ತೋರುವರು ತಮ್ಮ ಬೆಟ್ಟುಗಳನ್ನು ನನ್ನೆಡೆಗೆ(ಇನ್ನೊಬ್ಬನೆಡೆಗೆ), ನರರು
ಮುಚ್ಚಿಕೊಳ್ಳಲು ತಮ್ಮ ದೌರ್ಬಲ್ಯಗಳನು,

ಪಬ್ಬಿನ ಹೈಕಳಿಗೆ ಅಮಲಿನ,
ಸೇನೆಗೆ ಕ್ಷಣದಲಿ ಸರ್ವನಾಯಕರಾಗುವ ದುರಾಸೆಯ,
ಮಾಧ್ಯಮಕ್ಕೆ ಹಸಿ ಬಿಸಿ ಸುದ್ದಿಯನು ತೋರುವ ತೆವಲಿನ,
ರೇಣುಕಮ್ಮನಿಗೆ ರಾಜಕೀಯದಲ್ಲಿ ಚಾಲ್ತಿಯಲ್ಲಿರಬೇಕಾದ,
ಇವುಗಳನ್ನೋದುವವರಿಗೆ ಕೆಲಸದೊತ್ತಡದ ಮಧ್ಯೆ ಬೇಕಾದ ಮನರಂಜನೆಯ ದೌರ್ಬಲ್ಯ......

3 ಕಾಮೆಂಟ್‌ಗಳು:

  1. Guruvinalliruva Kavi horabarutthiddaane... hmm... Mundavariyali... kavanagaLa saraNi

    ಪ್ರತ್ಯುತ್ತರಅಳಿಸಿ
  2. ರವೀಶ, ಪ್ರೋತ್ಸಾಹಕ್ಕೆ ಧನ್ಯವಾದಗಳು. "ಇದ್ದ ಮೂವರಲ್ಲಿ ಕದ್ದವರು ಯಾರು .. ತಾನೇ ಎಂದಿತು ಮರದ ಬೇರು" ಎಂದು ಯಾವಾಗಲೋ ನಿತಿನ್ ಹೇಳಿದ ಪದ್ಯ ನೆನಪಿಗೆ ಬಂದು, ಅದೇ ಜಾಡಿನಲ್ಲಿ ಬರೆದ ವಿಡಂಬನೆ.. ಅಷ್ಟೇನು ಸ್ವಂತಿಕ ಇಲ್ಲ.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ