ಬುಧವಾರ, ಜುಲೈ 28, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….

ಸಮರಸದಲ್ಲಿ ಗೋಪಾಲರು ಬರೆದಿರುವ ಈ ಹಾಸ್ಯ ಲೇಖನ ಓದಿ...
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ “ಕಟ್… ಕಟ್…. ” ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. “ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ”. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ. ಮುಂದೆ ಓದಿ

ಮಂಗಳವಾರ, ಜುಲೈ 27, 2010

ಇಂದಿನ ರಾಜಕೀಯ ಪಕ್ಷಗಳ ದೊಂಬರಾಟ, ಮತ್ತು ಅವಕ್ಕೆ ಕೆಲವು ಸಲಹೆಗಳು

ಸಮರಸ ಸಂಪಾದಕೀಯಕ್ಕೆ ವಿವೇಕ್ ಬರೆದ ಈ ಲೇಖನ ಓದಿ!

ಪ್ರಸ್ಥುತ ಕರ್ನಾಟಕದ ರಾಜಕೀಯ ಪುನ: ರಂಗೇರಿದೆ. ಕಾಂಗ್ರೇಸ್, ಬಿಜೆಪಿ, ಜನತಾದಳಗಳು ತಮ್ಮದೇ ಆದ ನಡವಳಿಕೆಯಿಂದ ಜನರಲ್ಲಿ ಚರ್ಚೆಗೊಳಪಡುತ್ತಿರುವುದು. ಈ ಸಂದರ್ಭದಲ್ಲಿ ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ತಾತ್ಸಾರ ಉಂಟಾಗಿ ಎಲ್ಲರೂ ಕೊನೆಯಲ್ಲಿ ರಾಜಕೀಯವನ್ನು ಒಂದು ಮನರಂಜನೆಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಮೌಲ್ಯಯುತ ರಾಜಕೀಯದ ಕೊಡುಗೆಯನ್ನು ನೀಡಿದ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೇ ನಮ್ಮ ಸಮಾಜದ ಅಧ:ಪತನದ ಕುರುಹುಗಳು ಅಲ್ಲಿಂದಲ್ಲೇ ಕಂಡು ಬರುತ್ತಿವೆ. ಹಿಂದೆ ಬೇರೆ ರಾಜ್ಯದ ರಾಜಕೀಯದ ಸುದ್ದಿಯನ್ನು ಕಥೆಯಂತೆ ಕೇಳುತ್ತಿದ್ದ ಕರ್ನಾಟಕದ ಜನತೆ ಇಂದು ನಮ್ಮ ಎದುರಿಗೆ ರಾಜಕೀಯ ದೊಂಬರಾಟವನ್ನು ನೋಡುವ ಸ್ಥಿತಿ ಬಂದಿರುವುದು. ಈ ಸಂದರ್ಭದಲ್ಲಿ ಯಾರು ನಮ್ಮ ರಾಜ್ಯದಲ್ಲಿ ಹಿತವರು? ಎಂಬ ಪ್ರಶ್ನೇ ನಾವೇ ಹಾಕಿಕೊಂಡರೆ ಉತ್ತರ ಮತಹಾಕಿದ ನಾವೇ ಮೂರ್ಖರು ಎಂಬಂತೆ ಆಗಿರುವುದು. ಈ ಹಿನ್ನಲೆಯಲ್ಲಿ ಪ್ರಸ್ಥುತ ರಾಜಕೀಯ ಪಕ್ಷದ ಸ್ಥಿತಿಯನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಮುಂದೆ ಓದಿ

ಶನಿವಾರ, ಜುಲೈ 24, 2010

ಪುಸ್ತಕ ಪರಿಚಯ : ತುಂಗಾ

ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.


ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.

ಮುಂದೆ ಓದಿ

ಮಂಗಳವಾರ, ಜುಲೈ 13, 2010

ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ



ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!

ಹಿರಿಯರೊಬ್ಬರ ’ಅಥಿತಿ ಮತ್ತು ಸಂಸ್ಕೃತಿ’ ಪ್ರಬಂಧವನ್ನು ಓದಲು ಕೇಳಿಕೊಂಡಾಗ, ಅದರಲ್ಲಿರುವ ಕೆಲವು ಸಾಲುಗಳನ್ನು ಎಲ್ಲರ ಮುಂದೆ ಓದುವುದು ಸರಿ ಬರುವುದಿಲ್ಲ ಎಂದುಕೊಂಡು, ಈಗಾಗಲೇ ’ಸಮ್ಮೇಳನ’ದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದರಿಂದ, ’ರಕ್ಷಕ ಅನಾಥ’ ಪ್ರಬಂಧವನ್ನೇ ಓದಿದರು. ರಕ್ಷಕ ಅನಾಥದ ಕಥೆಯನ್ನು ಶ್ರೋತೃಗಳು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಹಂಚಿಕೊಂಡರು. ಕೊನೆಗೆ ವಸುಧೇಂದ್ರರ ಮನೆಯಲ್ಲಿದ್ದ ಆ ಫೋಟೋಗಳ ಗತಿ ಏನಾಯಿತು ಎಂಬ ಪ್ರಶ್ನೆಗೆ, ವಸುಧೇಂದ್ರರ ನಗುವೇ ಉತ್ತರ! ವಸುಧೇಂದ್ರರು ಬರೆಯುವುದು ಹೆಚ್ಚು ಐ.ಟಿ ಕ್ಷೇತ್ರದ ಬಗೆಗೇ ಅಲ್ಲವೇ ಅಂಬುದಕ್ಕೆ, ಹಾಗೇನಿಲ್ಲ, ನನ್ನ ಬಾಲ್ಯದ ದಿನಗಳ ಬಗ್ಗೆ ಬರೆದಿರುವುದೆಲ್ಲಾ ಐ ಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಇನ್ನುಳಿದದ್ದರಲ್ಲಿ ಅದೇ ಹೆಚ್ಚಿರಬಹುದು, ಏಕೆಂದರೆ ನನ್ನ ಅನುಭವಕ್ಕೆ ಬಂದಿರುವುದು ಅವುಗಳೇ ಎಂದರು! ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ರೂಪಿಸುವುದಕ್ಕೆ ಗಂಭೀರ ಚಿಂತನೆ ನಡೆಸುವುದಾಗಿ ಭರವಸೆಯಿತ್ತರು. ಮಕ್ಕಳಿಗೆ ಏನೇ ಮಾಡಿದರೂ ಬಣ್ಣ ಬಣ್ಣವಾಗಿರುತ್ತದೆ. ಕಪ್ಪು ಬಿಳುಪಿನಲ್ಲಿ ಮಾಡಿ ಅವರ ಆಸಕ್ತಿಯನ್ನು ಕುಂದಿಸುವುದಿಲ್ಲವೆಂದರು. ಯಾರೋ ವಸುಧೇಂದ್ರ ರವರನ್ನು ನಿಮ್ಮ ಪುಸ್ತಕಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂದಿದ್ದರಂತೆ. ಅದಕ್ಕೆ ವಸುಧೇಂದ್ರ ಆಯ್ಯೋ, ಮಾಡಲಿ ಬಿಡಿ. ನನ್ನ ಪುಸ್ತಕವನ್ನು ಹಾಗಾದರೂ ಓದಿದರೆ ನನಗೆ ಬಹಳ ಸಂತೋಷ ಎಂದರಂತೆ. ನಾವೇ ಪುಸ್ತಕದ ಬೆಲೆಯನ್ನು ಅಷ್ಟು ಕಡಿಮೆ ಇಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಲು ಪೈರೆಸಿ ಮಾಡುವವರಿಗೆ ಅಷ್ಟು ಸುಲಭವಲ್ಲ ಎಂಬುದು ವಸುಧೇಂದ್ರ ರವರ ನಂಬಿಕೆ. ಟಿ ವಿ ಯಲ್ಲಿ ಪುಸ್ತಕಗಳನ್ನು ಪರಿಚಯಿಸುವಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಬೇಕೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಟಿ ವಿ ಮಾಧ್ಯಮ ಲಗ್ಗೆಯಿಟ್ಟು ಪುಸ್ತಕಗಳನ್ನು ಓದುವರ ಸಂಖ್ಯೆ ಕುಸಿದು, ಅದು ಮತ್ತೆ ಚೇತರಿಸಿಕೊಂಡಿರುವುದನ್ನು ತಿಳಿಸಿ, ನಮ್ಮಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲ. ನಮ್ಮಲ್ಲೂ ಪುಸ್ತಕ ಓದುವ ಅರಿವು ಹೆಚ್ಚುತ್ತದೆ. ಎಲ್ಲದ್ದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು!

ವಸುಧೇಂದ್ರರ ಪರಿಚಯವೇ ಇಲ್ಲದಿದ್ದ ಮಂದಿಗೆ ವಸುಧೇಂದ್ರರ ಪರಿಚಯವಾದ ಖುಷಿ. ವಸುಧೇಂದ್ರರ ಪರಿಚಯವಿದ್ದವರಿಗೆ ಅವರ ಮಾತುಗಳನ್ನು ಕೇಳುವ, ಅವರ ಕಂಠದಲ್ಲೇ ಅವರ ಪ್ರಬಂಧವನ್ನು ಕೇಳುವ ಖುಷಿ. ಶಿವಮೊಗ್ಗದಿಂದ ತಮ್ಮ ನೆಚ್ಚಿನ ಲೇಖಕ ವಸುಧೇಂದ್ರರನ್ನು ಕಾಣಲು ಬಂದಿದ್ದ ಬೋರಣ್ಣನಿಗೆ, ಇವೆಲ್ಲದರ ಜೊತೆಗೆ ಪುಸ್ತಕಗಳಿಗೆ ವಸುಧೇಂದ್ರರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಅವರ ಜೊತೆ ಹರಟಿದ ಸಂತೋಷ!

ಶುಕ್ರವಾರ, ಜುಲೈ 02, 2010

ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!!



ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!



ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಫೋಟೋ ಕೃಪೆ: http://kadalateera.blogspot.com/2009/02/blog-post_15.html

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010


ದಿನಾಂಕ : 11 ಜುಲೈ 2010 ಭಾನುವಾರ

ಸಮಯ: ಬೆಳಗ್ಗೆ 11 ಘಂಟೆಗೆ

ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

ರಕ್ಷಕ ಅನಾಥನ ಬಗ್ಗೆ ಅಕ್ಷರ ವಿಹಾರದಲ್ಲಿ ಹೀಗಿದೆ ಓದಿ..

ರಕ್ಷಕ ಅನಾಥದ ಯಾವ ಪ್ರಬಂಧ ವಸುಧೇಂದ್ರ ಓದಬೇಕೆಂದು ನಿಮಗನ್ನಿಸುತ್ತದೆ? ಕೆಳಗೆ ಪ್ರತಿಕ್ರಿಯಿಸಿ..

ಆಕೃತಿ ಪುಸ್ತಕದ ವತಿಯಿಂದ ರಾಜಾಜಿನಗರದಲ್ಲೊಂದು ಸುಸಜ್ಜಿತ ಪುಸ್ತಕ ಮಳಿಗೆ





ಆಕೃತಿ ಪುಸ್ತಕದ ವತಿಯಿಂದ ರಾಜಾಜಿನಗರದಲ್ಲೊಂದು ಸುಸಜ್ಜಿತ ಪುಸ್ತಕ ಮಳಿಗೆ
ಕಥೆ, ಕಾದಂಬರಿ, ನಾಟಕ, ಆಧ್ಯಾತ್ಮಿಕ, ಸಂಗೀತ, ವ್ಯಕ್ತಿವಿಕಸನ ಇತ್ಯಾದಿ ಎಲ್ಲಾ ಪ್ರಾಕಾರಗಳ ನಿಮ್ಮ ನೆಚ್ಚಿನ ಪುಸ್ತಕಗಳು ಲಭ್ಯ

ಅತ್ಯಾಕರ್ಷಕ ರಿಯಾಯಿತಿಯೊಂದಿಗೆ.

ಆಕೃತಿ ಬುಕ್ಸ್ - ಓದಿ ಓದಿ ಬೆರಗಾಗಿ

ವಿಳಾಸ: ಆಕೃತಿ ಬುಕ್ಸ್
ನಂ. 28 (ಹಳೆ ನಂ: 733), ಎರಡನೇ ಮಹಡಿ, 12ನೇ ಮುಖ್ಯರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ಗುರುತು: ಇ.ಎಸ್.ಐ ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆ ಮೇಲೆ

ಗುರುವಾರ, ಜುಲೈ 01, 2010

ಕನ್ನಡ ಲಿಪಿಯನ್ನು ವಿರೂಪಗೊಳಿಸುತ್ತಿರುವವರ ಗಮನಕ್ಕೆ!

ಇದನ್ನು ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇನ್ನು ಮುಂದಾದರೂ ಪುಸ್ತಕಗಳನ್ನು ಹೊರತರುವಾಗ ಸ್ವಲ್ಪ ಎಚ್ಚರಿಕೆಯಿಂದ ಟೈಪ್ ಮಾಡಲಿ ಎಂಬ ಉದ್ದೇಶದಿಂದಲೇ ಹೊರತು ಯಾರೋ ಒಬ್ಬ ಪ್ರಕಾಶಕನ ತಪ್ಪುಗಳನ್ನು ಎತ್ತಿ ಹಿಡಿದು ತೊರಿಸುವುದಕ್ಕಲ್ಲ!




ಕನ್ನಡವನ್ನು ಗಣಕಯಂತ್ರದಲ್ಲಿ ಟೈಪ್ ಮಾಡಲು ಅಂದವಾದ ಫಾಂಟ್‌ಗಳಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ! ಈ ಕೊರತೆ ಯೂನಿಕೋಡ್ ನಲ್ಲಿ ಟೈಪ್ ಮಾಡಲು ಸಹಾಯ ಮಾಡುವಂತಹ ತಂತ್ರಾಂಶಗಳಲ್ಲಿ ಸ್ವಲ್ಪ ಹೆಚ್ಚು, ಅಂದರೆ ಯೂನಿಕೋಡ್ ಕನ್ನಡ ಫಾಂಟ್ ಗಳು ಅತಿ ವಿರಳ.


ಈ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದ್ದ ತಂತ್ರಾಂಶ "ನುಡಿ". ಆದರೆ ಇದು ಬಳಸುವುದು ANSI ಕೋಡ್‌ಗಳನ್ನ. ಯೋನಿಕೋಡಗಳ, ಆನ್ಸಿ ಕೋಡಗಳ ಚರ್ಚೆ ಸದ್ಯಕ್ಕೆ ಬೇಡ. ಆದರೆ ಈ ನುಡಿ ತಂತ್ರಾಂಶವನ್ನು ಬಳಸುತ್ತಿರುವ ಕನ್ನಡ ಪುಸ್ತಕೋದ್ಯಮದ ಪ್ರಕಾಶಕರು, ’ಪು’, ಪೂ, ಪೊ, ಪೋ ಸಂಯುಕ್ತಾಕ್ಷರಗಳನ್ನು ವಿರೂಪಗೊಳಿಸಿರುವುದು ಬಹಳ ಖೇದಕರವಾದ ಸಂಗತಿ. ನಮಗೆಲ್ಲರಿಗೂ ತಿಳಿದಿರುವಂತೆ ಪ ಅಕ್ಷರಕ್ಕೆ ಉ/ಒ/ಓ/ಒ ಕಾರವನ್ನು ಸೇರಿಸಿದಾಗ,”ಪ’ ಅಕ್ಷರದ ಕೆಳಮಧ್ಯಭಾಗದಿಂದ ಆ ಕೊಂಬುಗಳು/ಓತ್ವಗಳು ಶುರುವಾಗಬೇಕು ಆದರೆ ಈ ’ನುಡ” ತಂತ್ರಾಂಶ ಉಪಯೋಗಿಸಿ ಬರೆದಾಗ ಆ ಕೊಂಬುಗಳು ಪ ಅಕ್ಷರದ ಪಕ್ಕಕ್ಕೆ ಜೋಡಿಸಲಾಗುತ್ತವೆ.ನುಡಿ ತಂತ್ರಾಂಶದ ಫಾಂಟ್ ರೆಂಡರಿಂಗ್ ನಲ್ಲಿರುವ ಈ ತಪ್ಪನ್ನು ಇತ್ತೀಚಿನ ನುಡಿ ತಂತ್ರಾಂಶದಲ್ಲೇನಾದರೂ ಸರಿ ಮಾಡಿದ್ದಾರೇನೋ ಗೊತ್ತಿಲ್ಲ!


ಇತ್ತೀಚೆಗೆ ಬಿಡುಗದೆಯಾದ, ದೇಶಕಾಲದ ವಿಶೇಷ ಸಂಚಿಕೆ, ಭೈರಪ್ಪನವರ ಕವಲು ಪುಸ್ತಕಗಳ ಮೇಲೆ ಕಣ್ಣಾಡಿಸಿದರೆ ಈ ತಪ್ಪುಗಳು ಹೇರಳವಾಗಿ ಕಾಣಿಸಿ ಅಭಾಸವಾಗುತ್ತದೆ.


ನಾವೇನಾದರೂ ನಮ್ಮ ಶಾಲೆಗಳಲ್ಲಿ ಈ ರೀತಿ ಬರೆದದ್ದಾದರೆ ನಮ್ಮ ಮೇಷ್ಟ್ರುಗಳ ಬೆತ್ತದಿಂದ ಒದೆ ಬೇಳುತ್ತಿತ್ತು!


ಪರಿಹಾರ?


ಮುಂದೆ ಓದಿ

ಕನ್ನಡ ಸಾಹಿತ್ಯಕ್ಕೆ ಕುಂದಣವಿಟ್ಟವರ ಹೆಸರಿಗೆ ಅಪಚಾರವೇಕೆ?

ಅ.ನ.ಕೃಷ್ಣರಾಯರು, ’ಕನ್ನಡ ಕುಲ ರಸಿಕರು’ ಎಂಬ ತಮ್ಮ ಪುಸ್ತಕದಲ್ಲಿ ಹೀಗೆನ್ನುತ್ತಾರೆ “ಕನ್ನಡ ಸಾಹಿತ್ಯ ಪ್ರಪಂಚದಲ್ಲೇನಾದರೂ ಸಹೃದಯತೆ, ಸಹನೆ, ಪರರ ಗುಣಗ್ರಹಣ ಶಕ್ತಿಯಿದ್ದರೆ ಅದನ್ನು ತಂದುಕೊಟ್ಟ ಸಿ.ಕೆ. ವೆಂಕಟರಾಮಯ್ಯನವರ ಉಪಕಾರ ನಾವು ಮರೆಯಬಾರದು”. ಕರ್ನಾಟಕದ ಕೆಲ ರಾಜಕಾರಣಿಗಳಿಗೆ ಇಷ್ಟೊಂದುದು ಸೂಚ್ಯವಾದ ಹೇಳಿಕೆ ಅರ್ಥವಾಗದೆ ಹೋಗಬಹುದಾದದ್ದರಿಂದ, ಇದನ್ನೇ ಸ್ವಲ್ಪ ವಿಸ್ತರಿಸಿ, ಕನ್ನಡ, ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಗೌರವ,ಕಾಳಜಿ ಇದ್ದರೆ ಸಿ ಕೆ ವೆಂಕಟರಾಮಯ್ಯನವರ ಹೆಸರನ್ನು ನೀವು ಬೆಳಗದೇ ಹೋದರೂ ಕನಿಷ್ಠ ಪಕ್ಷ ಅಗೌರವ ತರುವಂತಹ ಕೆಲಸವನ್ನು ಮಾಡಬಾರದು.

ಆಗಿರುವ ಅಪಚಾರವೇನು?

ಪದ್ಮಶ್ರೀ ವಿಜೇತ ಪ್ರಥಮ ಕನ್ನಡಿಗ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸ್ಥಾಪಕ-ನಿರ್ದೇಶಕ, ಮೇರು ಸಾಹಿತಿ, ಶ್ರೇಷ್ಠ ವಾಗ್ಮಿ ಸಿ ಕೆ ವೆಂಕಟರಾಮಯ್ಯನವರ ಹೆಸರಿಗೆ ಅಪಚಾರ ತರುವಂತಹ ಒಂದು ಕೆಲಸ ಸದ್ದಿಲ್ಲದೆ ಸಾಗಿರುವುದರಿಂದ ಮೇಲಿನ ಸಾಲುಗಳ ಅನಿವಾರ್ಯತೆ ಕಂಡುಬರುತ್ತಿದೆ. ಕೆಲವು ತಿಂಗಳ ಹಿಂದೆ ಬಿ. ಬಿ. ಎಂ. ಪಿ, ಮಲ್ಲೇಶ್ವರದ ೮ ನೇ ಮುಖ್ಯರಸ್ತೆಯನ್ನು “ಪದ್ಮಶ್ರೀ ಸಿ.ಕೆ ವೆಂಕಟರಾಮಯ್ಯ ರಸ್ತೆ” ಎಂದು ನಾಮಕರಣ ಮಾಡುವ ನಿರ್ಧಾರವನ್ನು ತಳೆದು, ಇದರ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಿತ್ತು. ಈ ನಿರ್ಣಯಕ್ಕೆ ಸಾರ್ವಜನಿಕರು ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಆಲ್ಲದೆ ಈ ನಿರ್ಣಯಕ್ಕೆ ಮಾನ್ಯ ಮುಖ್ಯಮಂತ್ರಿಗಳ ಅನುಮತಿಯೂ ದೊರೆತು, ಈ ವಿಷಯವಾಗಿ ಸರ್ಕಾರದ ಆಜ್ಞೆಯಾಗುವುದರಲ್ಲಿತ್ತೆಂದು ತಿಳಿದು ಬಂದಿದೆ. ಇನ್ನೇನು ರಸ್ತೆಗೆ ಸಿ. ಕೆ. ವೆಂಕಟರಾಮಯ್ಯನವರ ನಾಮಕರಣವಾಗುತ್ತದೆನ್ನುವುದರಲ್ಲಿ, ಒಬ್ಬ ರಾಜಕಾರಣಿ ಮಧ್ಯ ಪ್ರವೇಶಿಸಿ, ಅದೇ ರಸ್ತೆಗೆ ಒಂದು ಸಮುದಾಯವನ್ನು ಪ್ರತಿನಿಧಿಸುವ ಖಾಸಗಿ ಸಂಸ್ಥೆಯ ಹೆಸರಿಡಲು ಸನ್ನದ್ಧರಾಗಿದ್ದಾರೆ! ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರಲ್ಲಿ ಸಿ.ಕೆ. ವೆಂಕಟರಾಮಯ್ಯನವರಿಗೆ ಯಾವುದೇ ವಿಧದಲ್ಲೂ ಸರಿಸಾಟಿಯಾಗಿ ನಿಲ್ಲದ ಆ ಖಾಸಗಿ ಸಂಸ್ಥೆಯ ಹೆಸರನ್ನು ಒಂದು ಪ್ರಮುಖ ರಸ್ತೆಗೆ ಇಡುವ ಔಚಿತ್ಯ ಕಂಡು ಬರುತ್ತಿಲ್ಲವಾದ್ದರಿಂದ ಇದು ಕನ್ನಡ ನಾಡು ನುಡಿಗೆ ಹೋರಾಟ ನಡೆಸಿದ ಅಪ್ರತಿಮ ಕನ್ನಡಿಗನಿಗೆ ತೋರುವ ಅಪಮಾನವಲ್ಲದೆ ಬೇರೇನಿಲ್ಲ. ಮುಂದೆ ಓದಿ