’Y'
ಕಳೆದ ಶುಕ್ರವಾರ, ನನ್ನ ಸೋದರಳಿಯ ಶ್ರೇಷ್ಠ L K G ತರಗತಿಯಿಂದ ತೇರ್ಗಡೆಗೊಂಡ ಫಲಿತಾಂಶವನ್ನು ಶಾಲೆಯಲ್ಲಿ ಪ್ರಕಟಿಸಿದ್ದರು. ಅಂಕಪಟ್ಟಿ ತರಲು ನಾವು ಶಾಲೆಗೆ ಹೋದೆವು. ಗಣಕೀಕೃತ ಅಂಕಪಟ್ಟಿಯ ಜೊತೆ, A4 ಉದ್ದಗಲದ ಒಂದು ತೇರ್ಗಡೆ ಪ್ರಮಾಣ ಪತ್ರವನ್ನೂ ಕೊಟ್ಟರು. ಆ ಪ್ರಮಾಣ ಪತ್ರದಲ್ಲಿ, ಶ್ರೇಷ್ಠನ ಬಗ್ಗೆ ಅವರ ’ಟೀಚರ್’ ಫೀಡ್ ಬ್ಯಾಕ್ ಕೊಟ್ಟಿದ್ದರು. ಅದರ ಸಾರಾಂಶ ಹೀಗಿತ್ತು. ಮಗು ಎಲ್ಲಾ ವಿಭಾಗದಲ್ಲೂ ಚುರುಕಾಗಿದ್ದಾನೆ, ಆದರೆ ಇಂಗ್ಳಿಷ್ ನಲ್ಲಿ ಮಾತನಾಡಲು ಹಿಂಜರಿಯುತ್ತಾನೆ. ಮನೆಯವರು ಆಂಗ್ಲ ಭಾಷೆಯನ್ನು ಮಾತನಾಡಲು ಪ್ರೋತ್ಸಾಹಿಸಬೇಕೆಂದಿತ್ತು. ಇಕ್ಕಟ್ಟಿಗೆ ಸಿಲುಕಿಕೊಂಡೆವು. ಇಂಗ್ಳಿಷ್ ಕಲಿಯಲಿ ಎಂದು ಶಾಲೆಗೆ ಕಳುಹಿಸದರೆ, ಶಾಲೆಯವರು ನಮಗೇ ಕಲಿಸಿ ಎನ್ನುವುದೇ?
ಸರಿ ಅವೊತ್ತಿನಿಂದಲೇ ನಾನು ಕಲಿತ ಇಂಗ್ಳಿಷನ್ನು ಧಾರೆಯೆರದು ಕೊಡಲು ಮುಂದಾದೆ.
"What is your Name?"
"My name is Shreshta."
ಇವುಗಳನ್ನೆಲ್ಲಾ, ಶಾಲೆಗೆ ಸೇರಿಸುವ ಮುನ್ನವೇ ಶಾಲೆಯಲ್ಲಿ ನಡೆಸುವ ಸಂದರ್ಶನಕ್ಕಾಗಿ ಹೇಳಿಕೊಟ್ಟಿದ್ದೆ. ಅವುಗಳನ್ನೆಲ್ಲಾ ಒಂದು ಬಾರಿ ಪುನರಾವರ್ತನೆ ಮಾಡಿಸಿ, ಅವರ ಶಾಲೆಯಲ್ಲೂ ಒಂದು ಪ್ರಯೋಗ ನಡೆಸಿಯೇ ತೀರಬೇಕೆಂದು ಯೋಚಿಸಿದೆ.
ಅವನಿಗೆ ಅವರ ’ಟೀಚರ್’ ಹೆಸರನ್ನು ’ಇಂಗ್ಳಿಷ್’ ನಲ್ಲಿ ಕೇಳಿಕೊಂಡು ಬರಲು ಪುಸಲಾಯಿಸಿದೆ. (ಈಗ ಬೇಸಿಗೆ ಶಿಬಿರದ ವಿಶೇಷ ಶಾಲೆ, ಚಿತ್ರ ಬರೆಯುವುದು ಮತ್ತು ಬಣ್ಣ ಹಚ್ಚುವುದನ್ನು ಕಲೆಯಲು ಹೋಗುತ್ತಿದ್ದಾನೆ). ಮೊದಲ ದಿನ ಸಂಕೋಚದಿಂದ ಕೇಳದೆ ಹಾಗೆಯೇ ಬಂದು ಬಿಟ್ಟ. ನನಗೆ ಸ್ವಲ್ಪ ಕೋಪ ಬಂದು, ಮುಂದಿನ ದಿನ ಅವನ ಮೇಲೆ ತುಸು ಜೋರು ಮಾಡಿ, ಹೆಸರು ಕೇಳದೆ ಹಾಗೆಯೇ ಬಂದರೆ, ’ಕಂಪ್ಯೂಟರ್ ಗೇಮ್ಸ್’ ರದ್ದು ಎಂದು ಬ್ಳಾಕ್ ಮೈಲ್ ಮಾಡಿದ್ದು ಉಪಯೋಗಕ್ಕೆ ಬಂತು.
ಅಂದು ನಾವು ಕಛೇರಿಯಿಂದ ಮನೆಗೆ ಹಿಂತಿರುಗಿದಾಗ, ಖುಷಿಯಿಂದ ಬಂದು "ನಾನಿವೊತ್ತು ಮಿಸ್ ಹೆಸ್ರು ಕೇಳ್ಕೊಂಡ್ ಬಂದೆ" ಎಂದು ಘೋಷಿಸಿದ.
ನನ್ನ ಬ್ಳಾಕ್ ಮೈಲ್ ತಂತ್ರ ಕೆಲಸ ಮಾಡಿದೆ ಎಂದು ನನಗೆ ಅತೀವ ಸಂತೋಷವಾಯಿತು.
ಏನು ಪುಟ್ಟ ನಿಮ್ಮ ಮಿಸ್ ಹೆಸರು? ಕೇಳಿದೆ.
ಅದಕ್ಕೆ ಶ್ರೇಷ್ಠ,
'Y' ಎಂದ!
ನನಗೆ ತಕ್ಷಣ ನಗು ಬಂದಿತು, ಇದೆಂತಾ ಹೆಸರಪ್ಪ ಅಂತ.
ವಿಚಾರಣೆಗೆ ತೊಡಗಿದೆ, ಏನಂತ ಕೇಳ್ದೆ ಶ್ರೇಷ್ಠ?
ಕಥೆ ಶುರು ಹಚ್ಚಿಕೊಂಡ, ಮಧ್ಯಾಹ್ನ ’ಸ್ನ್ಯಾಕ್ಸ್’ ತಿಂದ ಮೇಲೆ, ಮಿಸ್ ಬಂದ್ರು. ನಾನು
’What is your name Miss?' ಅಂತ ಕೇಳ್ದೆ,
ಅದಕ್ಕೆ ಮಿಸ್ಸು
’My Name? Why?' ಅಂದ್ರಂತೆ,
ಅದಕ್ಕೆ ಇವ O K ಅಂದನಂತೆ!
ಹೀಗೆ ಅವರ ಚಿತ್ರಕಲೆಯ ಗುರುಗಳ ಹೆಸರು ವಿಚಿತ್ರವಾದ ’Y' ಆಗಿ ಹೋಗಿತ್ತು.
ನನಗೆ ಈ "Why" ಪದದ ಅರ್ಥ ವಿವರಸಲು ಸಾಕು ಬೇಕಾಗಿ ಹೋಯಿತು.
ಎಲ್ಲಾ ವಿವರಿಸಿದ ಮೇಲೆ ಅವನು ಹೇಳಿದ್ದಿಷ್ಟು, ನಿನಗೆ ಗೊತ್ತಿಲ್ಲ, ನಮ್ಮ ಮಿಸ್ ಹೆಸ್ರು 'Y' ಅಂತಾನೆ. ಇನ್ಮೇಲೆ ನಾನು ಅವರನ್ನ ’Y' ಮಿಸ್ ಅಂತಾನೆ ಕರ್ಯೋದು ಅಂತ ಕೊನೆಯ ತೀರ್ಪು ಕೊಟ್ಟ.
ನನಗೆ ನಗುವುದನ್ನು ಬಿಟ್ಟು ಬೇರೇನು ಹೊಳೆಯಲಿಲ್ಲ! ಹೀಗೆ ಇವನಿಗೆ ಇಂಗ್ಳಿಷ್ ಕಲಿಸಿಕೊಡುವ ಮೊದಲ ಪ್ರಯತ್ನದಲ್ಲೆ ಸೋಲುಂಡ ಪ್ರಸಂಗವನ್ನು ನೆನೆದು ನಗುತ್ತಲೇ ಇದನ್ನು ಬರೆಯುತ್ತಿದ್ದೇನೆ.
ಆದರೆ ನನಗೆ ಅರ್ಥವಾಗದೆ ಉಳಿದು ಹೋದ ಸಂಶಯವೆಂದರೆ, ವಿದ್ಯಾರ್ಥಿಗಳು, ಶಿಕ್ಷಕಿಯ ಹೆಸರನ್ನು ಕೇಳಿದರೆ? ನನ್ನ ಹೆಸರು ನಿನಗೇಕೆ ಎಂದು ಯಾಕೆ ಕೇಳುತ್ತಾರೆ? ಹೆಸರು ಕೇಳಲು ಕಾರಣ ಬೇಕೆ? ಅಥವಾ ಆ ಶಿಕ್ಷಕಿಯ ಹೆಸರು ನಿಜವಾಗಿಯೂ 'Y' ಅಂತಲೇ? ಇನ್ನೊಮ್ಮೆ ಅವರ ಹೆಸರನ್ನು ಕೇಳಿ ಬರಲು ಇಂದು ಮತ್ತೆ ಪುಸಲಾಯಿಸಿ ಕಳಿಸಿದ್ದೇನೆ, ಕಾದು ನೋಡಬೇಕು!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಗುರುಪ್ರಸಾದ್....
ಪ್ರತ್ಯುತ್ತರಅಳಿಸಿಸಿಕ್ಕಾಪಟ್ಟೆ ನಗು ಬಂತು....
ಮಗುವಿನ ಮುಗ್ಧತೆ ಬಹಳ ಇಷ್ಟವಯಿತು....
ನಿಮ್ಮ ಸೋದರಳಿಯನ ಹೆಸರು ತುಂಬಾ ಚೆನ್ನಾಗಿದೆ...
ಮುದ್ದಾಗಿದೆ...
"ಶ್ರೇಷ್ಠ"ನ ಫೋಟೊ ಹಾಕಿಬಿಡಿ....
ಚಂದದ ಲೇಖನಕ್ಕೆ
ಅಭಿನಂದನೆಗಳು...
ಗುರು ಪ್ರಸಾದ್ ಮನೆಯಲ್ಲೇ ಇಂಗ್ಲಿಷ್ ಕಲಿಯಲು ಪ್ರೋತ್ಸಾಹಿಸುವ ಸಮಸ್ಯೆಯನ್ನು ನಾನೂ ಎದುರಿಸಿದ್ದೇನೆ. ನನ್ನ ಮಗಳೂ ಈ ವರ್ಷ LKG ಯಿಂದ UKG ಗೆ ತೇರ್ಗಡೆಯಾಗಿದ್ದಾಳೆ. ಈ ಎರಡೂ ಭಾಷೆಗಳ ಕಾಟ ಮಕ್ಕಳಿಗೆ ಏನೇನು ತೊಂದರೆ ಕೊಡುತ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ನೋಡಿ. ನಾವು ಸ್ಸಿನಲ್ಲಿ ಹೋಗುವಾಗ ಕೆಲವೊಮ್ಮೆ ಅವಳ ಚಪ್ಪಲಿಗಳನ್ನು ಮುಂದಿನ ಸೀಟಿನ ಕಂಬಿಗೆ ನೇತು ಹಾಕುತ್ತಿರುತ್ತೇನೆ, ಅವು ಗಾಡಿಯ ಕುಲುಕಾಟದಲ್ಲಿ ಎಲ್ಲೇಲ್ಲೋ ದೂರ ಸಾಗುವ ಅಪಾಯ ತಪ್ಪಿಸಲು. ಮೊನ್ನೆ ಯುಗಾದಿಗೆ ಊರಿಗೆ ಹೋಗುವಾಗಲೂ ಹಾಗೇ ಮಾಡಿದ್ದೆ. ಅದನ್ನು ನೋಡಿದ ನನ್ನ ಮಗಳು 'ಬ್ಯೂಟಿಫುಲ್ ನೇತ್' ಎಂದಳು! ನನಗೆ ಏನೂ ತೋಚದೆ 'ಏನು' ಎಂದು ಕೇಳಿದೆ. ಅವಳು ಚಪ್ಪಲಿ ತೋರಿಸಿ ಚೆನ್ನಾಗಿ ನೇತುಹಾಕಿದೆ ಎಂದು ಹೇಳುವುದಕ್ಕೆ ಇಂಗ್ಲಿಷ್ ನಲ್ಲಿ ಬ್ಯೂಟಿಫುಲ್ ನೇತ್ ಎಂದಿದ್ದಳೂ!
ಪ್ರತ್ಯುತ್ತರಅಳಿಸಿಪ್ರಕಾಶ್,
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ, ಹೆಸರು, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ನೀವು ಹೇಳಿದ ಹಾಗೆ ಮಕ್ಕಳ ಮುಗ್ಧತೆ ಕೊಡುವ ಖುಶಿ, ಬೇರೆ ಯಾವುದು ಕೊಡಲಾಗದು..
ಅದಕ್ಕೇ ಹೇಳುವುದು ಅಲ್ಲವೆ, ಮಕ್ಕಳಿರಬೇಕು ಮನೆ ತುಂಬ ಅಂತ..
ಸತ್ಯನಾರಾಯಣರವರೆ,
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ, ಮತ್ತು ನಿಮ್ಮ ಮಗಳ ಪ್ರಸಂಗ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
"ಬ್ಯೂಟಿಫುಲ್ ನೇತ್" ಬಹಳ ಚೆನ್ನಾಗಿದೆ... :))
ಗುರುಪ್ರಸಾದ್,
ಪ್ರತ್ಯುತ್ತರಅಳಿಸಿಚೆನ್ನಾಗಿದೆ 'y' ನಾಮಧೇಯ ಪ್ರಮೇಯ. ಹಾಗೆಯೇ ಸತ್ಯನಾರಾಯಣ್ ಹೇಳಿರುವ 'ಬ್ಯೂಟಿಫುಲ್ ನೇತ್' ಕೂಡ. ಒಮೊಮ್ಮೆ ನನ್ನ ತ೦ಗಿಯೂ ಇ೦ತಹುದೊ೦ದು ಹಾಸ್ಯ ಪ್ರಸ೦ಗ ಸೃಷ್ಟಿಸಿ ಬಿಡುತ್ತಿದ್ದಳು, ಕ೦ಗ್ಲಿಶ ಮೂಲಕ. ಒಮ್ಮೆ ನಾನು ಕಾಲು ಮುರಿದುಕೊ೦ಡಿದ್ದಾಗ, ಅವಳು ಅಕ್ಕನ 'ಬೋಳೆ' ಫ್ರಾಕ್ಚರ್ ಅಂತ ಹೇಳ್ತಾ ಇದ್ಲು. ( ಬೋಳೆ = ಬೋನ್ + ಮೂಳೆ , ಲೋಪ ಸ೦ಧಿ ಆಗಬಹುದು )
ಹ್ಹಾ ಹ್ಹಾ ಹ್ಹಾ
ಪ್ರತ್ಯುತ್ತರಅಳಿಸಿವಿನುತ,
ಪ್ರತ್ಯುತ್ತರಅಳಿಸಿಖುಷಿ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಹ ಹ, ನಿಮ್ಮ ತಂಗಿ ಬಹಳ ಚುರುಕು ಎಂದೆನಿಸುತ್ತದೆ, ಒಂದು ಭಾಷಾ ಸಂಧಿಯನ್ನೇ ಸೃಷ್ಟಿಸಿಬಿಟ್ಟಿದ್ದಾಳೆ. :)
ಶಿವಪ್ರಕಾಶ್,
ಪ್ರತ್ಯುತ್ತರಅಳಿಸಿಬ್ಳಾಗ್ ತಾಣಕ್ಕೆ ಸ್ವಾಗತ,
ನಕ್ಕಿ ಖುಷಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಗುರುಗಳು(ಗುರುಪ್ರಸಾದ ಅಲ್ವೇ) ನೀವು, ಮಿಸ್ ಅವರನ್ನು ಚೆನ್ನಾಗಿ ಗೊಳಾಡಿಸುತ್ತಿದ್ದೀರಿ.. ಮತ್ತೆ ಕೇಳಲು ಹೋದ ನಿಮ್ಮ ಅಳಿಯನಿಗೆ ಮಿಸ್ ಏನೆಂದರೆಂದು ಕುತೂಹಲ.. ಬಹಳ ಚೆನಾಗಿತ್ತು ಪ್ರಸಂಗ...
ಪ್ರತ್ಯುತ್ತರಅಳಿಸಿಹ ಹ ಹ ಚೆನ್ನಾಗಿದೆ ಗುರುಗಳೇ? ಮು೦ದೇನಾಯಿತು?
ಪ್ರತ್ಯುತ್ತರಅಳಿಸಿಪ್ರಭು,
ಪ್ರತ್ಯುತ್ತರಅಳಿಸಿಪ್ರತಿಕ್ರಿತ್ಯಿಸಿದ್ದಕ್ಕೆ ಧನ್ಯವಾದಗಳು. ಹೌದು ನನ್ನ ನಾಮಧೇಯ ಗುರುಪ್ರಸಾದ್,
ಅಯ್ಯೋ, ಆ ಮಿಸ್ ಹೆಸರು ಹೇಳದೆ, ಕುತೂಹಲ ಹೆಚ್ಚಿಸಿ ನನಗೆ ತೊಂದರೆ ಕೊಡ್ತಾ ಇದಾರೆ.. :)
ರವೀಶ,
ಪ್ರತಿಕ್ರಿಸಿದ್ದಕ್ಕೆ ವಂದನೆಗಳು.
ನನಗೂ ಕುತೂಹಲ ಅವರ ಹೆಸರು ತಿಳಿದುಕೊಳ್ಳಲು, ನೆನ್ನೆ ಮತ್ತೆ ಅವ ಕೇಳದೆ ಬಂದುಬಿಟ್ಟ. :( .. ಬೇಕಾದ್ರೆ ನೀನೆ ಕೇಳು ಅಂತ ನನ್ನ ಮೇಲೆ ರೋಪ್ ಹೊಡಿತಾನೆ! ಇಂದು ಮತ್ತೆ ಚಾಕೋಲೇತೆ ಆಸೆ ತೋರಿಸಿ ಕಳಿಸಿದ್ದೀನಿ.. ಮತ್ತೆ ಕಾದು ನೋಡಬೇಕು.. ಮತ್ತೆ why? ಎಂದು ಕೇಳಿದರೆ, because my uncle told me to ask .. ಅಂತ ಹೇಳು ಅಂತ ಉರು ಹೊಡೆಸಿ ಕಳಿಸಿದ್ದೀನಿ.. :)) ಅಲ್ಲಿ ಏನೇನು ಹೇಳ್ತಾನೊ!
ಆ ಟೀಚರ್ ಮನಶ್ಶಾಸ್ತ್ರಾನೂ ಅಧ್ಯಯನ ಮಾಡಬೇಕೇನೋ! ಅವ್ರು ಯಾವ್ಯಾವ ಪ್ರಶ್ನೆಗೆ ಯಾವ್ಯಾವ ಉತ್ತರ ಕೊಡಬಹುದು ಅಂತ ಮೊದ್ಲೇ ಊಹಿಸಿ, ಅದಕ್ಕೆ ಉತ್ತರ ಹೇಳ್ಕೊಡೋದು ಕಷ್ಟ!
ಪ್ರತ್ಯುತ್ತರಅಳಿಸಿಸಕ್ಕತ್ತಾಗಿದೆ y
ಹ ಹ, ಪಾಲ ನೀವು ಹೇಳುವುದು ಸರಿ, ಆ ಶಿಕ್ಷಕಿಯ ಮನಸ್ಸಿನ ಅಧ್ಯಯನ ಮಾಡಿದರಷ್ಟೇ, ನಾನು ನನ್ನ ಅಳಿಯನಿಗೆ ಉತ್ತರ ಕಲಿಸಿ ಕೊಡಲು ಸಾಧ್ಯ!
ಪ್ರತ್ಯುತ್ತರಅಳಿಸಿಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
he..he..super Guru !!!
ಪ್ರತ್ಯುತ್ತರಅಳಿಸಿNinna hatra English kalatre hinge aagodu :-D
ha ha ..ChennagiDe :) avru madam'o athva miss'o annoDru mele avra answer depend aaguthe ansuthe .. :D
ಪ್ರತ್ಯುತ್ತರಅಳಿಸಿಕಬ್ಬೂರ್,
ಪ್ರತ್ಯುತ್ತರಅಳಿಸಿನಕ್ಕಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
ಹ ಹ.. ಏನ್ ಮಾರಾಯ ಹೀಗಂದ್ಬಿಟ್ಟೆ!, ನಾನು ಬಹಳಷ್ಟು ಸಂದರ್ಶನಗಳನ್ನು ಕೊಟ್ಟು, ಇಂಗ್ಳಿಷ್ ಸಾಕಷ್ಟು ಕಲ್ತಿದ್ದೀನಿ.. :D ..
ನಿತಿನಾ,
ನಕ್ಕಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
ಹ ಹ.. ಸ್ವಲ್ಪ ಜಾಸ್ತಿನೇ ಯೋಚ್ನೆ ಮಾಡ್ತ್ಯಾ! :)
coool....... nice article... nice humer u have used in this.....
ಪ್ರತ್ಯುತ್ತರಅಳಿಸಿthanks,
-giri
ಗಿರಿ ಯವರೆ,
ಪ್ರತ್ಯುತ್ತರಅಳಿಸಿಬ್ಳಾಗ್ ತಾಣಕ್ಕೆ ಸ್ವಾಗತ.
ಹಾಸ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇದು ನನ್ನ ಸೃಷ್ಟಿಯಲ್ಲಿ. ನನ್ನ ಅಳಿಯನ ಮಾತುಗಳಷ್ಟೆ.
Guru,
ಪ್ರತ್ಯುತ್ತರಅಳಿಸಿ"because my uncle told me to ask ..... "
Hushaaru saar, Haagella helikodabedi... Avara teacher swalpa chikkavaraagidare ( Miss aagidre)... nimmanna tappu tilkontaare!!
-Srivatsava
ಶ್ರೀವತ್ಸ,
ಪ್ರತ್ಯುತ್ತರಅಳಿಸಿಹ ಹ,
ಬಹುಷಃ ನೀನು ಹೆಳಿರುವ ಹಾಗೆಯೇ ಆಗಿದೆ ಅಂತ ನನಗೂ ಸಂದೇಹ!