ಮಂಗಳವಾರ, ನವೆಂಬರ್ 03, 2009

ಕಂಟಿನ್ಯೂಯಸ್ ಕಂಪ್ಯೂಟಿಂಗ್ ಸಂಸ್ಥೆಯಿಂದ ನೇರ ನೆರೆ ಪರಿಹಾರ

ನಮ್ಮ ಸಂಸ್ಥೆಯ (ಕಂಟಿನ್ಯೂಯಸ್ ಕಂಪ್ಯೂಟಿಂಗ್) ನೌಕರರ ಪರವಾಗಿ ಸಂಗ್ರಹಿಸಲಾಗಿದ್ದ ಪ್ರವಾಹ ಪರಿಹಾರ ನಿಧಿಯ ಪ್ರತಿ ಪೈಸೆಯೂ ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ, ನವೆಂಬರ್ ೧ ಕನ್ನಡ ರಾಜ್ಯೋತ್ಸವ ದಿನದಂದು, ಪ್ರವಾಹ ಪೀಡಿತ ಒಂದು ಹಳ್ಳಿಯಾದ ಬಗ್ಗೂರಿಗೆ ಭೇಟಿಯಿತ್ತು ಪರಿಹಾರ ನಿಧಿಯಿಂದ ಕೊಂಡ ಆಹಾರ ಸಾಮಗ್ರಿಗಳನ್ನು ಬಗ್ಗೂರಿನ (ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ) ೭೫ ಕುಟುಂಬಗಳಿಗೆ ಹಂಚಿದೆವು. ಈ ನಿಟ್ಟಿನಲ್ಲಿ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುವುದಲ್ಲದೇ, ಈ ಅಳಿಲು ಸೇವೆಯ ಹಾದಿಯಲ್ಲಿ ನಮಗೆ ದೊರೆತ ಪ್ರೋತ್ಸಾಹ ಮತ್ತು ನಿರುತ್ಸಾಹದ ಬಗ್ಗೆ ಒಂದೆರಡು ಮಾತುಗಳನ್ನು ಬರೆದರೆ ಮುಂದೆ ಪರಿಹಾರವನ್ನು ನೇರವಾಗಿ ಜನರಿಗೆ ತಲುಪಿಸಲು ಇಚ್ಛಿಸುವವರಿಗೆ ನೆರವಾಗಬಲ್ಲದೇನೋ!

[caption id="attachment_604" align="aligncenter" width="448" caption="ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು"]ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು[/caption]

* ನಾವು ನೆರೆ ಪರಿಹಾರಕ್ಕೆ ಹಣ ಸಂಗ್ರಹವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸಿದರೂ, ನಮ್ಮ ಸಂಸ್ಥೆಯಲ್ಲಿನ ನೌಕರರು ಸ್ವಇಚ್ಛೆಯಿಂದ ಉದಾರವಾಗಿ ದೇಣಿಗೆ ನೀಡಿ ಮಾನವೀಯತೆಯನ್ನು ಮೆರೆದರು. ಇದಕ್ಕೆ ಅಮೇರಿಕಾದಲ್ಲಿ ಓದುತ್ತಿರುವ ನಮ್ಮ ಗೆಳೆಯನೊಬ್ಬ ಕೂಡ ಕೈಜೋಡಿಸಿದ್ದ.


* ಸಂಸ್ಥೆಯ ಗಾತ್ರ ಚಿಕ್ಕದಾದದ್ದರಿಂದ ಸಂಗ್ರಹಗೊಂಡ ಮೊತ್ತ, ಬೆಂಗಳೂರಿನ ಬೇರೆ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಹೋಲಿಸಿದರೆ, ಅಷ್ಟೇನು ಹೆಚ್ಚಿರಲಿಲ್ಲ. ಆದುದರಿಂದ ಅದನ್ನು ಸರ್ಕಾರಕ್ಕೋ ಅಥವಾ ಬೇರೆ ಯಾವುದೋ ಸಂಸ್ಥೆಗೋ ದೇಣಿಗೆ ನೀಡುವುದೇ ಸರಿ ಎಂಬ ಒತ್ತಡ ಹೆಚ್ಚಿತ್ತು.


* ಪರಿಹಾರ ನಿಧಿ ಸರ್ಕಾರದ ಮೂಲಕ ಹೋದರೆ ಅದು ಅಲ್ಲಿ ಇಲ್ಲಿ ಸೋರಿ ಹೋಗುವುದೆಂಬ ಆತಂಕದಿಂದ, ನಾನು ಮತ್ತು ಸಹೋದ್ಯೋಗಿಗಳಾದ ಪ್ರತಾಪ್, ಶ್ರೀನಿವಾಸ್, ರಾಮ್ ಬಾಬು ಒಂದು ವಾರಾಂತ್ಯ, ಪ್ರವಾಹ ಪೀಡಿತ ಹಳ್ಳಿಗೆ ಪ್ರಯಾಣ ಮಾಡಿ ಪರಿಹಾರವನ್ನು ಜನರಿಗೆ ನೇರವಾಗಿ ತಲುಪಿಸಬೇಕೆಂದು ನಿಶ್ಚಯಿಸಿಕೊಂಡೆವು. ನೆರೆ ಹಾವಳಿಯಿಂದ ಉಂಟಾಗಿರುವ ದುಸ್ಥಿತಿಯನ್ನು ನಮ್ಮ ಕಣ್ಣಾರೆ ನೋಡಿ, ನಮ್ಮ ಕೈಲಾದ ಸಣ್ಣ ಸಹಾಯವನ್ನು ಮಾಡಬೇಕೆಂಬುದು ಎಲ್ಲರ ಮನಸಿನಲ್ಲೂ ಇತ್ತು.

ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ