ಗುರುವಾರ, ನವೆಂಬರ್ 05, 2009

ದಾಸದಾಸರ ಮನೆಯ ದಾಸಿಯರ ಮಗ ನಾನು

ದಾಸದಾಸರ ಮನೆಯ ದಾಸಿಯರ ಮಗ ನಾನು

ಸಾಸಿರ ನಾಮದೊಡೆಯ ರಂಗಯ್ಯನ ಮನೆಯ


ಶಂಕುದಾಸರ ಮನೆಯ ಮಂಕುದಾಸನು ನಾನು

ಮಂಕುದಾಸನು ನಾನು ಮರಳುದಾಸ|

ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ

ಬಿಂಕದಿ ಬಾಗಿಲ ಕಾಯ್ವ ಬಡದಾಸ ನಾನಯ್ಯ


ಕಾಳಿದಾಸರ ಮನೆಯ ಕೀಳುದಾಸನು ನಾನು

ಆಳು ದಾಸನು ನಾನು ಮೂಳ ದಾಸ|

ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ

ಆಳಿನಾಳಿನ ದಾಸನಡಿದಾಸ ನಾನಯ್ಯ


ಹಲವು ದಾಸರ ಮನೆಯ ಹೊಲೆಯ ದಾಸನು ನಾನು

ಕುಲವಿಲ್ಲದ ದಾಸ ಕುರುಬದಾಸ|

ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗ ದಾಸ

ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ


ಹೀಗೆ ತಾವು ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದಿದ್ದರೂ, ತಾನು ಇನ್ನೂ ಸಣ್ಣವರೆಂದು ಹಾಡಿಕೊಂಡ, "ಎನಗಿಂತ ಕಿರಿಯರಿಲ್ಲ" ಎಂಬ ವಚನವಾಣಿಯನ್ನು ನೆನಪಿಗೆ ತರುವ ಈ ಪದ್ಯದ ರಚನಕಾರ ಕನಕದಾಸರ ಜಯಂತಿ ಇಂದು.

kanakadasa

ಇನ್ನು, ಕರ್ನಾಟಕ ಸಂಗೀತ ಪಿತಾಮಹರೆನಿಸಿಕೊಂಡ ಪುರಂದರದಾಸರು, ಕನಕದಾಸರನ್ನು ಹಾಡಿ ಹೊಗಳಿದ ಈ ದೇವರನಾಮವನ್ನೋದಿ.


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ