ಬುಧವಾರ, ನವೆಂಬರ್ 04, 2009

ನಡವಳಾತ್ಮಕ ಜಾಹೀರಾತು -- ಒಂದು ನೋಟ

ಇಂದಿನ ಅಂತರ್ಜಾಲ ಯುಗದಲ್ಲಿ, ಅಂತರ್ಜಾಲ ಮುದ್ರಣ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಜಾಹೀರಾತುಗಳು ಕಾಗದ ಮುದ್ರಣದಿಂದ ಅಂತರ್ಜಾಲ ಮುದ್ರಣಕ್ಕೆ ರೂಪಾಂತರಗೊಳ್ಳುತ್ತಿರುವುದು ಇಂದಿಗೆ ಸ್ವಲ್ಪ ಹಳೆಯ ಮಾತೇ ಎನ್ನಬಹುದು. ನಾವು ಕೆಲವು ಅಂತರ್ಜಾಲ ತಾಣಗಳನ್ನು ಜಾಲಾಡುವಾಗ, ಬೇಕಾದ ಮಾಹಿತಿಗಿಂದ ಬೇಡವಾದ ಜಾಹೀರಾತುಗಳನ್ನು ಬೇಕಾಬಿಟ್ಟಿ ಪ್ರಕಟವಾಗಿರುವುದನ್ನು ಕಾಣುತ್ತೇವೆ. ಆ ಅಂತರ್ಜಾಲದ ತಾಣದ ಕದವನ್ನು ದಿನಕ್ಕೆ ಎಷ್ಟು ಜನ ತಟ್ಟುತ್ತಾರೆ ಎಂಬ ವೀಕ್ಷಕ ದಟ್ಟಣೆಯ ಆಧಾರದ ಮೇಲೆ ಆ ತಾಣದ ಜನಪ್ರಿಯತೆ, ಮತ್ತು ಆ ತಾಣ ಗಳಿಸುವ ಜಾಹೀರಾತುಗಳ ಸಂಖ್ಯೆಗಳು ಅವಲಂಬಿಸಿರುತ್ತದೆ. ಈ ಜಾಹೀರಾತುಗಳನ್ನು ಸಾಮಾನ್ಯವಾಗಿ, ಭೌಗೋಳಿಕ ಗುಣಲಕ್ಷಣಗಳ ಅಧ್ಯಯನ (Geographical) ಅಥವಾ ಜನಸಂಖ್ಯೆಯ ಲಕ್ಷಣಗಳ ಅಧ್ಯಯನದ (Demographical) ಅಧಾರಿತವಾಗಿ ಪ್ರಕಟಿಸಿರುತ್ತಾರೆ. ಈ ಮಾದರಿಯ ಜಾಹೀರಾತಿನ ಅತಿ ದೊಡ್ಡ ಹಿನ್ನಡೆಯೆಂದರೆ, ಬಹಳಷ್ಟು ಸಮಯದಲ್ಲಿ ಜನರ ರುಚಿಯನ್ನು ಅರಿತು ಜಾಹೀರಾತು ಪ್ರಕಟಿಸುವುದು ಕಷ್ಟವಾಗುತ್ತದೆ. ಆಗ ಆ ಜಾಹೀರಾತಿನ ಕೊಂಡಿಯನ್ನು ಒತ್ತಿ ಬಳಸಿ ಮುನ್ನಡೆಯುವವರೂ ಕಡಿಮೆ!

advertising

ಈ ಹಿನ್ನಡೆಯನ್ನು ಮೆಟ್ಟಲು, ಕೆಲ ವರ್ಷಗಳಿಂದ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಆಧಾರಿತ ಮಾದರಿಯೇ ನಡವಳಾತ್ಮಕ ಜಾಹೀರಾತು (Bihavioural Advertising). ಒಬ್ಬ ಅಂತರ್ಜಾಲ ವೀಕ್ಷಕನ ನಡತೆಯ (ಅಂತರ್ಜಾಲವನ್ನು ಜಾಲಾಡುವ ರೀತಿ/ನಡತೆ ಎಂದು ಓದಿಕೊಳ್ಳಬೇಕು) ಅಧ್ಯಯನದಿಂದ ಅದೇ ಕ್ಷಣದಲ್ಲಿ, ಅವನ ರುಚಿಗೆ ತಕ್ಕಂತೆ ಜಾಹೀರಾತನ್ನು ಪ್ರಕಟಿಸುವುದೇ ಈ ಮಾದರಿ ತಂತ್ರಜ್ಞಾನದ ಸವಾಲು ಮತ್ತು ಹಿರಿಮೆ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ