ಮಂಗಳವಾರ, ಮಾರ್ಚ್ 24, 2009

ಅರ್ಧ ಶತಕದ ಹಾದಿಯಲ್ಲಿ,

ಇದು ನನ್ನ ಬ್ಳಾಗ್ ತಾಣದ ೫೦ ನೇ ಅಂಕಣ. ನಾನು ೨೦೦೬ ರಲ್ಲಿ ಬ್ಳಾಗ್ ಲೋಕಕ್ಕೆ ಕಾಲಿಟ್ಟಾಗ ಈ ಬ್ಳಾಗಿಂಗ್ ಬಗ್ಗೆ ಆಶ್ಚರ್ಯ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ನಂತರ ಬರೆದದ್ದು ಒಂದೊಷ್ಟು ಜಳ್ಳು, ಒಂದಷ್ಟು ಗಟ್ಟಿ.

ಮೊದಲಿಗೆ ಕನ್ನಡದಲ್ಲೇ ಪ್ರಾರಂಭಿಸಿದರೂ, (ಕನ್ನಡ ಉಚ್ಚಾರಣೆಯನ್ನು ಆಂಗ್ಲದಲ್ಲಿ ಬರೆದು) ಲಿಪ್ಯಂತರ ಮಾಡಲಿಲ್ಲ. (ದಾಂಡೇಲಿಗೆ ಚಾರಣ - ಇದನ್ನು ಸಂಪೂರ್ಣವಾಗಿ ಬರೆದು ಮುಗಿಸಲೂ ಇಲ್ಲ!). ನಂತರ ಶೇಷಾದ್ರಿ ವಾಸುರವರ ಮಾಂತ್ರಿಕ ತಂತ್ರಙ್ನಾನ ’ಬರಹ’ (Barahapad) ಉಪಯೋಗಿಸಿ ಕನ್ನಡದಲ್ಲೇ ಬರೆಯುತ್ತಾ ಬಂದಿದ್ದೇನೆ. ಆಗಾಗ ಆಂಗ್ಲ ಬಾಷೆಯಲ್ಲೂ ಬರೆದದ್ದುಂಟು.(kurumgad island, The White Tiger Review, The Guru Film Review). ಆದರೆ ಓದುಗರು ಇದ್ದುದರಲ್ಲಿ ಮೆಚ್ಚಿದ್ದು ನಾನು ಕನ್ನಡದಲ್ಲಿ ಬರೆದಿದ್ದನ್ನೆ. ಆದುದರಿಂದ ಈ ಬ್ಳಾಗ್ ತಾಣದಲ್ಲಿ ಸಂಪೂರ್ಣ ಕನ್ನಡದಲ್ಲೆ ಬರೆಯಲು ನಿರ್ಧರಿಸಿದೆ. ಜೂನ್ ೨೦೦೬ ರಿಂದ ಸೆಪ್ಟಂಬರ್ ೨೦೦೮ ರವರೆಗೆ ಬರೆದದ್ದು ಬಹಳ ಕಡಿಮೆ. ಕಾರಣಗಳು ಬಹಳಷ್ಟು, ಅದರ ಚರ್ಚೆಯ ಅಗತ್ಯ ಇಲ್ಲಿಲ್ಲ. ಬರೆದದ್ದು ಬರೀ ೧೪ ಲೇಖನಗಳು! ನಂತರ ಅಕ್ಟೋಬರ್ ೨೦೦೮ ರಿಂದ ಇಲ್ಲಿಯವರೆಗೆ ನಿರಂತರವಾಗಿ, (ನಿರಂತರ ಅಂದರೆ, ಅಂಕಣಗಳ ಮಧ್ಯೆ ಹೆಚ್ಚು ಸಮಯದ ಅಂತರವಿಲ್ಲದೆ ಬರೆಯುತ್ತಾ ಬಂದಿದ್ದೇನೆ.

ಮೊದಲಿಗೆ ಈ ಬ್ಳಾಗ್ ನ ಹೆಸರನ್ನು "ನನ್ನ ಬ್ಳಾಗು" ಎಂದಿದ್ದೆ, ನಂತರ ಬರೆಯುವುದು ಕಡಿಮೆಯಾದಾಗ, ೧೫ ದಿನಗಳಿಗೊಮ್ಮೆ ಬರೆಯೋಣವೆಂದು "ಅಮಾವಾಸ್ಯೆಗೊಂದು ಸಾರ್ತಿ, ಪೊರ್ಣಾಮಿಗೊಂದು ಸಾರ್ತಿ - A Fortnightly Blog" ಎಂದು ಹೆಸರು ಬದಲಾಯಿಸಿದೆ. ಆದರೂ ಹೆಸರಿಗೆ ವ್ಯತಿರಿಕ್ತವಾಗಿ, (ಹೊಂದಿಕೆಯಿಲ್ಲದೆ) ಇತ್ತೇಚೆಗೆ ಹೆಚ್ಚಾಗಿಯೇ ಬರೆಯುತ್ತಿದ್ದೇನೆ.

ಬಹಳಷ್ಟು ಬ್ಳಾಗ್ ತಾಣಗಳು ಒಂದು ವಿಷಯಕ್ಕೆ ಸೀಮಿತಗೊಳ್ಳುತ್ತವೆ! ನನ್ನದು ಅದೇಕೋ ಹಾಗಾಗಲಿಲ್ಲ.ಬಹಳಷ್ಟು ವಿಷಯಗಳ ಚರ್ಚೆಗಳು ಇಲ್ಲಿ ನಡೆದವು. ಓದುಗರು ಇದನ್ನು ವೈವಿಧ್ಯಮಯ ಅನ್ನಬಹುದು ಅಥವಾ ಚಿತ್ರಾನ್ನ ಅಂತಲೂ ಕರೆಯಬಹುದು. ಅವುಗಳ ಒಂದು ಸಣ್ಣ ಅವಲೋಕನ.

ಅಮೇರಿಕೆಯಲ್ಲಿ ಅಕ್ಕ ಸಮ್ಮೇಳನ ನಡೆದಾಗ, ನನ್ನ ಅನಿಸಿಕೆಯನ್ನು ಬರೆದೆ. ಸ್ವಲ್ಪ ದಿನಗಳ ನಂತರ ಅದನ್ನು ಓದಿದಾಗ, ಬರೆದ ವಿಷಯ ಮತ್ತು ಬರೆದ ರೀತಿ ನನಗೇ ಇಷ್ಟವಾಗಲಿಲ್ಲ. ಇದನ್ನು ವಿಕ್ರಾಂತ ಕರ್ನಾಟಕ ಮತ್ತು ದಟ್ಸ್ ಕನ್ನಡ ಅಂತರ್ಜಾಲ ತಾಣಗಳಿಗೆ ಕಳಿಸಿಕೊಟ್ಟಾಗ, ಇದು ವಿಕ್ರಾಂತ ಕರ್ನಾಟಕ ಅಂತರ್ಜಾಲದಲ್ಲಿ ಪ್ರಕಟವಾಯಿತಾದರೂ, ವ್ಯಯಕ್ತಿಕಾವಾಗಿ ಮತ್ತೊಮ್ಮೆ ಓದಿದಾಗ ಇದನ್ನು ಬರೆಯಬಾರದಿತ್ತೆನ್ನಿಸಿತು. ಅದರಲ್ಲಿದ್ದ ಋಣಾತ್ಮಕ ಅಂಶಗಳು ನನಗೇ ಹಿಡಿಸದೆ ಹೋದವು!

ನಂತರ ನಾನು ಬಹಳ ಆಸಕ್ತಿಯಿಂದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದು, ಸಾಹಿತಿಗಳು ಮತ್ತು ಕೆಲವು ಮಾಹಾತ್ಮರ ಬಗೆಗಿನ ವಿಷಯಗಳನ್ನ. ಕೆಲವನ್ನು ಅವರುಗಳ ಜನ್ಮೋತ್ಸವದಂದು ನುಡಿನಮನವಾಗಿ ಬರೆದೆ. ಅವುಗಳು ಈ ರೀತಿಯಲ್ಲಿವೆ,

ಕುವೆಂಪು ೧, ಕುವೆಂಪು ೨
ರಾಜರತ್ನಂ ೧, ರಾಜರತ್ನಂ ೨
ಬೇಂದ್ರೆ ೧, ಬೇಂದ್ರೆ ೨
ಜಿ ಎಸ್ ಶಿವರುದ್ರಪ್ಪ
ಭೀಮ್ ಸೇನ್ ಜೋಷಿ
ಕನಕದಾಸರು
ಡಿ ಎಸ್ ಕರ್ಕಿ
ತೀ ನಂ ಶ್ರೀ
ಡಿ ವಿ ಜಿ

ನಮ್ಮ ಕನ್ನಡ ಮತ್ತು ಆಂಗ್ಲ ಚಲನ ಚಿತ್ರಗಳ ಬಗ್ಗೆ ಚಕಾರವೆತ್ತಿ, ವಿಮರ್ಶೆಗಳನ್ನು ಬರೆದೆ. ಕೆಲವೊಮ್ಮೆ ಈ ವಿಮರ್ಶೆಗಳು ವ್ಯಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಕೂಡ ಹೋದದ್ದುಂಟು, ಅವುಗಳು

ಐಶ್ವರ್ಯ
The Guru
ಗಾಳಿಪಟ
ಪಯಣ
ವಂಶಿ
ಬುದ್ಧಿವಂತ
ಸ್ಲಂಬಾಲ
ಜಂಗ್ಲಿ
ಗುಲಾಬಿ ಟಾಕೀಸ್

ನಾನು ಕನ್ನಡ ಮತ್ತು ಆಂಗ್ಲ ಪುಸ್ತಗಳನ್ನು ಹೆಚ್ಚು ಹೆಚ್ಚಾಗಿ ಓದುವೆನಾದರೂ, ಪುಸ್ತಗಳ ಬಗ್ಗೆ ಬರೆದದ್ದು ಯಾಕೋ ಕಡಿಮೆಯೆ.

The White Tiger
ನಾನು ಓದಿದ ಪುಸ್ತಕಗಳು
ಹಂಪಿ ಎಕ್ಸ್ ಪ್ರೆಸ್

ಕೆಲವು ಪ್ರವಾಸ / ಚಾರಣ ಕಥೆಗಳನ್ನು ಬರೆದೆ,

ದಾಂಡೇಲಿ (ಇದನ್ನು ಪೂರ್ಣಗೊಳಿಸಲಿಲ್ಲ!, ಇದು ಮತ್ತೊಮ್ಮೆ, ನನಗೆ ಮತ್ತೊಮ್ಮೆ ಓದಲು ಹಿಡಿಸದ ಲೇಖನವಾಯಿತು)
Kurumgad Island
ರಂಗನತಿಟ್ಟು ಮತ್ತು ಅತ್ತಿವೇರಿ ಪಕ್ಷಿಧಾಮಗಳು
ಕುಮಾರಪರ್ವತ
ಚಿತ್ರದುರ್ಗ(ಕೊನೆಯ ನಾಲ್ಕು ಪ್ರವಾಸ/ಚಾರಣ ಕಥೆಗಳಲ್ಲಿ ಹೇರಳ ಛಾಯಚಿತ್ರಗಳನ್ನು ಲಗತ್ತಿಸಿದ್ದೇನೆ)

ರಾಜಕೀಯ ಮತ್ತು ಪತ್ರಿಕಾ ಸುದ್ದಿಗಳನ್ನು ವಿಶ್ಲೇಷಿಸಿದ್ದುಂಟು.

ಬೆಳಗಾವಿ ಸಮಸ್ಯೆ
ಕುಮಾರಸ್ವಾಮಿ ೧
ಕುಮಾರಸ್ವಾಮಿ ೨
ಟೀಕೆ ಟಿಪ್ಪಣಿ
ಹವಾ ನಿಯಂತ್ರಿತ ತಂಗುದಾಣ
ಚೂರು ಚಿಂದಿ
ಕನ್ನಡ ಸಾಹಿತ್ಯ ಸಮ್ಮೇಳನ
ಪ್ರತಾಪ್ ಸಿಂಹ ೧
ಪ್ರತಾಪ್ ಸಿಂಹ ೨
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಪಬ್ಬು (ಇದು ಒಬ್ಬ ಕವಿಯ ಕವನವನ್ನು ಅನುಸರಿಸಿ, ವಿಡಂಬನಾ ಶೈಲಿಯಲ್ಲಿ ಬರೆದದ್ದು)
೪ ನೇ ಪೀಳಿಗೆ (ಇದಕ್ಕೆ ತಂತ್ರಙ್ನಾನದ ಹಣೆಪಟ್ಟಿಯನ್ನೂ ಹಚ್ಚಬಹುದು)

ಕೆಲವು ಲಲಿತ ಪ್ರಬಂಧಗಳನ್ನು ಬರೆಯಲು ಪ್ರಯತ್ನಿಸಿದೆ,

ಏಳೆನ್ನ ಮನದನ್ನೆ
ನೃತ್ಯ
ಹೊಟ್ಟೆ (ಜಾಗೃತ ಲೇಖನ!)
ಮಿದ್ದಿಟ್ಟು (ಪಾಕ ಶಾಸ್ತ್ರ!)

ಕಾರ್ಯಕ್ರಮಗಳ ವಿಮರ್ಶೆ, ಟಿಪ್ಪಣಿಗಳನ್ನು ಬರೆದೆ,

ಎದೆ ತುಂಬಿ ಹಾಡಿದೆನು
ವಸುಧೇಂದ್ರ ಸಂವಾದ (ಟಿಪ್ಪಣಿ)

ಇತ್ತೇಚೆಗೆ ಕಾರ್ಯಕ್ರಮಗಳ ವಿವರವನ್ನು ಒದಗಿಸುವ ಪ್ರಯತ್ನ ಮಾಡಿದೆ,

ಪುಸ್ತಕ ಪ್ರದರ್ಶನ
ಪೌರಾಣಿಕ ನಾಟಕಗಳುಡಿ ವಿ ಜಿ ಜಯಂತಿ

ಬಹಳಷ್ಟು ಲೇಖನಗಳನ್ನು ಹಾಸ್ಯಮಯವಾಗಿ ಬರೆಯಲು ಪ್ರಯತ್ನಿಸಿದ್ದುಂಟು, ಮತ್ತು ಹಾಸ್ಯವೇ ಪ್ರಧಾನವಾಗಿಟ್ಟುಕೊಂಡು ಎರಡು ಲೇಖನ ಬರೆದದ್ದುಂಟು, ಅವುಗಳು ಓದುಗರಿಗೆ ಹಾಸ್ಯದ ಕಚಗುಳಿಯಿಟ್ಟವೋ ಅಥವ ಹಾಸ್ಯಾಸ್ಪದವೆನಿಸಿ ಸಮಯ ವ್ಯರ್ಥವೆನಿಸಿದವೋ!

ಬಸ್ಸಿನ ಬೆನ್ನೇರಿ
ನನ್ನ ಪ್ರಬಂಧಕ!

ಎಲ್ ಕೆ ಜಿ ಯಲ್ಲಿ ಓದುತ್ತಿರುವ ನನ್ನ ಸೋದರಳಿಯ ಹನುಮಂತನ ವೇಷ ತೊಟ್ಟ ಪ್ರಸಂಗವನ್ನು ಕೂಡ ಓದುಗರ ಜೊತೆ ಹಂಚಿಕೊಂಡೆ

ಶ್ರೇಷ್ಠ ಹನುಮಂತನಾದದ್ದು

ಹೀಗೆ ಮನಸ್ಸಿಗೆ ತೋಚಿದ್ದೆಲ್ಲಾ ಬರೆಯುತ್ತಾ ಬಂದಿದ್ದೇನೆ. ಮೊದಲೇ ಹೇಳಿದಂತೆ ಒಂದಷ್ಟು ಜಳ್ಳು, ಕೆಲವು ಓದಲು ಯೋಗ್ಯ ಲೇಖನಗಳು. ಈ ವಿಷಯದಲ್ಲಿ "ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬುದು ನನಗೆ ಹೊಂದುವುದಿಲ್ಲ. ನೀವೆಲ್ಲಾ ಓದುತ್ತಾ ಪ್ರೋತ್ಸಾಹ ಪೂರ್ವಕ ಪ್ರತಿಕ್ರೆಯೆಗಳನ್ನು ಕೊಡುತ್ತಾ, ಬೆನ್ನು ತಟ್ಟಿದ್ದೀರಿ. ಧನ್ಯವಾದಗಳು. ಹೀಗೆ ಓದುತ್ತಾ ಇರಿ. ನನ್ನ ಮಿತಿಯಲ್ಲಿ ಆದೊಷ್ಟು ಚೆನ್ನಾಗಿ ಬರೆಯಲು ಮುಂದೆ ಪ್ರಯತ್ನಿಸುತ್ತೇನೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆದರೆ ತಪ್ಪುಗಳನ್ನು ಕೂಡ, ನಿಷ್ಟುರವಾಗಿ ಪ್ರತಿಕ್ರಿಯಿಸುವುದನ್ನು ಮಾತ್ರ ಮರೆಯಬೇಡಿ.

ಜೈ ಕರ್ನಾಟಕ ಮಾತೆ!

14 ಕಾಮೆಂಟ್‌ಗಳು:

  1. ಬ್ಯಾಟ್ ಎತ್ತಿ ಪ್ರೇಕ್ಷಕರಿಗೆಲ್ಲಾ ಒಮ್ಮೆ ತೋರಿಸಿ ಬಿಡು.
    ಶತಕಾರ್ಧಕ್ಕೆ ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  2. ಹ ಹ, ಧನ್ಯವಾದಗಳು ರವೀಶ.

    ಪ್ರತ್ಯುತ್ತರಅಳಿಸಿ
  3. ಗುರು,

    ನಿಮ್ಮ ಐವತ್ತನೇ ಲೇಖನಕ್ಕೆ ಅಭಿನಂದನೆಗಳು....ಮುಂದೆ ನೂರಾಗಲಿ...ಇನ್ನೂರು.....ಸಾವಿರವಾಗಿಲಿ....

    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಶಿವು,

    ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ಗುರುಪ್ರಸಾದ್...

    ನಾನು ಇತ್ತೀಚೆಗೆ ನಿಮ್ಮ ಬ್ಲಾಗಿನ ಓದುಗನಾಗಿ ಸೇರಿದ್ದೇನೆ..

    ಇಷ್ಟವಾಗುತ್ತಿವೆ ನಿಮ್ಮ ಬರಹಗಳು..


    ಇನ್ನಷ್ಟು ಬರೆಯಿರಿ...

    ಇದು ನೂರಾಗಿ ಸಾವಿರವಾಗಲಿ..

    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  6. ಪ್ರಕಾಶ್,

    ನಿಮ್ಮ ಮೆಚ್ಚುಗೆಗೆ, ಶುಭ ಹಾರೈಕೆಗೆ ಅನಂತ ಧನ್ಯವಾದಗಳು.
    ಓದುತ್ತಾ ಇರಿ.

    ಪ್ರತ್ಯುತ್ತರಅಳಿಸಿ
  7. ಗುರುಪ್ರಸಾದ್ ಅವರೆ,
    ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ. ಲೇಖನಗಳು ಚನ್ನಾಗಿವೆ. ಬರೆಯುತ್ತಿರಿ. ಯುಗಾದಿ ಹಬ್ಬದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  8. ಗುರು ಅವರೆ,
    Half Century ಸಣ್ಣ ಮಾತಲ್ಲ. ನಿಮಗೆ ಅಭಿನಂದನೆಗಳು. ಎಲ್ಲಾ ವಿಷಯಗಳ ಬಗ್ಗೆ ಬರೆದಿದ್ದೀರ. ನಿಮ್ಮಂತೆ ಈ ರೀತಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ನೀವು ಮುಂದೆ ಸೆಂಚುರಿಗಳನ್ನು ಹೊಡೆಯಿರಿ ಎಂಬ ಸವಿ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  9. ಉದಯ ಇಟಗಿಯವರೆ,

    ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು.
    ಹೀಗೆ ಬರುತ್ತಾ ಇರಿ,

    ನಿಮ್ಮ ಬ್ಳಾಗ್ ತಾಣವನ್ನು ಇಣುಕಿ ನೋಡಿದೆ, ನಿಮ್ಮ ಬ್ಳಾಗ್ ತಾಣದ ಹೆಸರಿನ "ಬಿಸಿಲ ಹನಿ" ವಿವರಣೆಯೇ ಬಹಳ ಚೆನ್ನಾಗಿದೆ. ಒಳ ಹೊಕ್ಕಿ ಓದಲು ಪ್ರಾರಂಭಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  10. ಮಲ್ಲಿಕಾರ್ಜುನ ರವರೆ,

    ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

    ನಾವು ಹೇಳಿದ ಹಾಗೆ, ಸಿಂಹಾವಲೋಕನವನ್ನು ಮಾಡಿಕೊಂಡಾಗ, ನಾವು ಬರೆದಿದ್ದರಲ್ಲಿ ಏನು ಚೆನ್ನ, ಏನು ಸರಿ ಇಲ್ಲ ಎಂಬುದು ಸ್ವಲ್ಪ ಮಟ್ಟಿಗೆ ತಿಳಿಯುತ್ತದೆ.

    ಪ್ರತ್ಯುತ್ತರಅಳಿಸಿ
  11. ಐವತ್ತನೇ ಲೇಖನ ತಲುಪಿದ್ದು ಹೆಮ್ಮೆಯ ವಿಷಯ, ಹೀಗೆ ನೂರು ತಲುಪಿ ಎಂದು ನನ್ನ ಹಾರೈಕೆ, ಬ್ಲಾಗ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ...
    ಒಂದು ಚಿಕ್ಕ ರೆಕ್ವೆಸ್ಟ ಕಾಮೆಂಟ ಬಾಕ್ಸು ಲೇಖನದ ಕೆಳಗೇ ಬರುವಂತೆ ಮಾಡಿ, ಹಿಂದೆ ಒಂದು ಸಾರಿ ಬಂದಾಗ ಕಾಮೇಂಟ್ ಪಾಪ್ ಅಪ್ ಪೇಜ ಬರಲೇ ಇಲ್ಲ, ಹಾಗಾಗಿ ಕಾಮೇಂಟ ಬರೆಯಲು ಆಗಿರಲಿಲ್ಲ.

    ಪ್ರತ್ಯುತ್ತರಅಳಿಸಿ
  12. ಪ್ರಭು,

    ನಿಮ್ಮ ಮೆಚ್ಚಿಗೆಗೆ, ಹಾರೈಕೆಗೆ ಧನ್ಯವಾದಗಳು. ಹೀಗೆ ಓದುತಾ ಇರಿ.

    ನೀವು ಹೇಳಿದ್ದು ಸರಿ, ಎಷ್ಟೋ ಜನ ಪಾಪ್ ಅಪ್ ಬ್ಳಾಕ್ ಮಾಡಿದ್ದರೆ, ಕಮೆಂಟ್ ಮಾಡಲು ಕಷ್ಟ. ನಾನಿದರ ಬಗೆ ಗಮನ ಹರಿಸಿರಲಿಲ್ಲ.
    ತಿಳಿಸಿದ್ದಕ್ಕೆ ಧನ್ಯವಾದಗಳು. ಬದಲಾಯಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  13. ಅರ್ಧ ಶತಕ ಪೂರೈಸಿದ್ದಕ್ಕೆ ಅಭಿನಂದನೆ. ಕನ್ನಡದಲ್ಲಿ ಬರಿಯೋಕೆ ಪ್ರಯತ್ನಿಸಿ ಒಳ್ಳೆಯ ಕೆಲ್ಸಾನೇ ಮಾಡಿದೀರ. ವಿವಿಧತೆ ನನಗೆ ಇಷ್ಟ, ಬೇರೆಯವ್ರಿಗೆ ಹೇಗೋ ಗೊತ್ತಿಲ್ಲ. "ಅಮವಾಸ್ಯೆ.." ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯತೆಯಿಂದ ಕಂಗೊಳಿಸಲಿ

    ಪ್ರತ್ಯುತ್ತರಅಳಿಸಿ
  14. ಪಾಲ,

    ನನ್ನ ಬ್ಳಾಗ್ ನ ವೈವಿಧ್ಯತೆಯನ್ನು ಮೆಚ್ಚಿದ್ದಕ್ಕೆ ಮತ್ತು ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ